ನಾವು ಕಾಲದ ಸೂಪರ್ಫಾಸ್ಟ್ ಜೆಟ್ ವಿಮಾನದ ಪ್ರಯಾಣಿಕರು. ದಿನ, ವಾರ, ತಿಂಗಳು, ವರ್ಷಗಳನ್ನು ಅತಿ ವೇಗದಲ್ಲಿ ಹಿಂದೆ ಹಾಕುತ್ತಾ ಮುಂದೆ ಸಾಗುತ್ತಿದ್ದೇವೆ. ಈ ಕಾಲ ನಮ್ಮ ಜೀವನ ಕ್ರಮ, ಬದುಕಿನ ಮೌಲ್ಯಗಳನ್ನು ನಿರಂತರವಾಗಿ ಬದಲಿಸುತ್ತಲೇ ಇದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿದಿದೆ.
ಒಮ್ಮೆ ಸಸ್ಯ ಸಮೃದ್ಧವಾದ ನಮ್ಮ ನಾಡಿನಲ್ಲಿ ವ್ಯವಸಾಯ, ಪ್ರಧಾನ ಉದ್ಯೋಗವಾಗಿತ್ತು. ತಳಿರು ತೋರಣ, ಹಸಿರು ಚಪ್ಪರ ಆ ಕಾಲದ ಎಲ್ಲ ಶುಭ ಕಾರ್ಯಗಳಲ್ಲಿ ಸಹಜವಾಗಿರುತ್ತಿತ್ತು. ಕಂಗಳಿಗೆ ಹಸಿರುಣಿಸಿ, ದೇಹಕ್ಕೆ ತಂಪುಣಿಸಿ, ಉಸಿರಿಗೆ ಯತೇಚ್ಛ ಆಮ್ಲಜನಕವನ್ನು ನೀಡುತ್ತಿದ್ದ ಗಿಡ, ಮರಗಳಿಂದ ಕೂಡಿದ ತೋಪುಗಳು, ತೋಟಗಳು, ಕಾಡುಗಳು ಅಂದು ಅಕ್ಷಯವಾಗಿದ್ದವು. ಆದರೆ ಮನುಷ್ಯರ ಮಿತಿ ಮೀರಿದ ಸ್ವಾರ್ಥದಿಂದ ಇಂದು ಕಾಡು ಬೋಡಾಗಿದೆ. ಹಸಿರು ಕಾಡುಗಳ ಜಾಗದಲ್ಲಿ ಕಾಂಕ್ರೀಟು ಕಾಡುಗಳು ತಲೆಯೆತ್ತಿವೆ.
ಹಿಂದಿನಂತೆ ಈಗ ಹಸಿರು ಇಲ್ಲ. ಮರಗಿಡಗಳ ಸಂಖ್ಯೆ ಕ್ಷೀಣಿಸಿವೆ. ಈಗಲೂ ನಾವು ನಮ್ಮ ಹಬ್ಬ, ಹರಿದಿನಗಳಲ್ಲಿ, ಶುಭ ಕಾರ್ಯಗಳಲ್ಲಿ ತಳಿರು ತೋರಣ ಉಪಯೋಗಿಸುತ್ತಿದ್ದೇವೆ. ಏಕೆಂದರೆ ಅದು ನಮ್ಮ ಆಚಾರವಾಗಿದೆ, ಸಂಪ್ರದಾಯವಾಗಿದೆ. ಹಬ್ಬ ಹರಿದಿನಗಳಿಗೆ ಮುನ್ನಾದಿನ ನಗರಗಳಲ್ಲಿ ಮಾರಾಟಕ್ಕೆ ಮಾವಿನ ಎಲೆ, ಬೇವಿನ ಎಲೆ, ಬೇಳೆಯ ಕಂದು, ಬಾಳೆಯ ಎಲೆ-ಎಲ್ಲವೂ ಸಿಗುತ್ತವೆ. ಹಳ್ಳಿಗರು ತಮ್ಮ ಊರುಗಳ ಮರಗಳನ್ನು ತರಿದು ನಗರಗಳಲ್ಲಿ ಮಾರುತ್ತಾರೆ. ಈಗಾಗಲೇ ಕೃಶವಾಗಿರುವ ವೃಕ್ಷಗಳನ್ನು ತರಿದು ಸಂಪ್ರದಾಯವನ್ನು ಉಳಿಸಿಕೊಳ್ಳುವುದು ಎಷ್ಟು ಸೂಕ್ತ ? ಆದರೆ ವಿಚಾರ ಮಾಡಬೇಕಾದ ಸಂಗತಿಯೆಂದರೆ ಚಪ್ಪರದ ವಿಷಯದಲ್ಲಿ ನಮ್ಮ ಸಂಪ್ರದಾಯವನ್ನು ನಾವೀಗಾಗಲೇ ಮಾಪರ್ಾಡು ಮಾಡಿಕೊಂಡಿದ್ದೇವೆ. ಕಾರಣ ಚಪ್ಪರ ಕಟ್ಟುವಷ್ಟು ತೆಂಗಿನ ಗರಿಗಳು ಸಿಕ್ಕುತ್ತಿಲ್ಲ. ಈ ಕಾರಣದಿಂದ ನಾವು ಬಟ್ಟೆಯಲ್ಲಿ ಹೊಲೆದ ಷಾಮಿಯಾನಗಳಿಗೆ ಮೊರೆ ಹೋಗಿದ್ದೇವೆ. ಜೊತೆಗೆ ಅದು ಇಂದಿನ ನಾಗರೀಕತೆಯ ಲಕ್ಷಣವಾಗಿದೆ!
ಮೊನ್ನೆ ಯುಗಾದಿಯ ಹಿಂದಿನ ದಿನ ಮಾರುಕಟ್ಟೆಯಲ್ಲಿ ರಾಶಿ ರಾಶಿ ಮಾವು ಮತ್ತು ಬೇವಿನ ಎಲೆಗಳನ್ನು ಕಂಡು ಸಂಕಟವಾಯಿತು. ಒಂದೇ ದಿನದಲ್ಲಿ ಅದೆಷ್ಟು ಮಾವು ಮತ್ತು ಬೇವಿನ ಮರಗಳು ಬೋಳಾಗಿರಬಹುದು ? ಹೀಗೆ ತರಿದ ಎಲೆಗಳು, ಮುರಿದ ರೆಂಬೆ, ಕೊಂಬೆಗಳು ಮತ್ತೆ ಬೆಳೆಯಲು ಅದೆಷ್ಟು ಸಮಯ ಬೇಕಾಗಬಹುದು..? ಸಸ್ಯಗಳಿದ್ದರೆ ಜೀವಿಗಳಿಗೆ ಉಸಿರು; ಇಲ್ಲವಾದಲ್ಲಿ ಬರೀ ಕಸರು! ನಾವು ವಿಸಜರ್ಿಸುವ ಇಂಗಾಲವನ್ನು ತಾನು ಸೇವಿಸಿ, ನಮಗೆ ಬೇಕಾದ ಆಮ್ಲಜನಕವನ್ನು ನೀಡುವ ಮರಗಿಡಗಳ ಮೇಲೆ ನಾವು ಮಾಡುವ ದೌರ್ಜನ್ಯ ಸಮಂಜಸವೆ? ಕೃಶವಾಗುತ್ತಿರುವ ಹಸಿರಿನಿಂದ ಜೀವಿಗಳು ತಾವು ವಿಸಜರ್ಿಸುವ ಇಂಗಾಲವನ್ನು ತಾವೇ ಸೇವಿಸಿ ಕಂಗಾಲಾಗುವ ಪರಿಸ್ಥಿತಿ ಬರುವುದು! ಉಸಿರು, ಫಲ, ನೆರಳು ನೀಡುವ, ಒಣಗಿದರೆ ಉರವಲಾಗುವ ಮರಗಿಡಗಳನ್ನು ನಾವು ನಿಧಿಯಂತೆ ಕಾಪಾಡುವ ಪರಿಸ್ಥಿತಿ ಈಗ ಒದಗಿ ಬಂದಿದೆ.
ಕಾಡಿದ್ದರೆ ನಾಡು. ಕಾಡು ದಟ್ಟವಾಗಿದ್ದರೆ ಕಾಲ ಕಾಲಕ್ಕೆ ಮಳೆ, ಬೆಳೆಗಳನ್ನು ಕಾಣಬಹುದು. ಎಂದಿಗೂ ಬತ್ತದ ಅಂತರ್ಜಲವನ್ನು ಉಪಯೋಗಿಸಬಹುದು. ಹಾಗಾದರೆ ನಮ್ಮ ಸಂಪ್ರದಾಯದಂತೆ ಶುಭ ಕಾರ್ಯಗಳಲ್ಲಿ ತಳಿರು ತೋರಣಗಳಿಗಾಗಿ ನಾವು ಹಸಿರು ಬಳಸಬಾರದೆ ಎಂಬ ಪ್ರಶ್ನೆ ಏಳುತ್ತದೆ. ಬಳಸದಿದ್ದರೆ ಅದು ಜಾಣತನವಾಗುತ್ತದೆ. ಇಲ್ಲವಾದಲ್ಲಿ ನಮ್ಮ ಕಾಲಿನ ಮೇಲೆ ನಾವೇ ಕಲ್ಲು ಚಪ್ಪಡಿ ಎಳೆದುಕೊಂಡಂತಾಗುತ್ತದೆ. ಸಂಪ್ರದಾಯ ಎನ್ನುವುದು ನಾವೇ ಕಾಲಕ್ಕೆ ತಕ್ಕಂತೆ ರೂಪಿಸಿಕೊಂಡ ವಿಧಿ ವಿಧಾನಗಳು. ಮೌಲ್ಯ ಇರುವುದು ನಮ್ಮ ಭಾವನೆಗಳಲ್ಲೇ ಹೊರತು ವಸ್ತುಗಳಲ್ಲಿ ಅಲ್ಲ! ಇಂದಿನ ಅಗತ್ಯಗಳನ್ನು ಅರಿತುಕೊಂಡು ಸಸ್ಯರಾಶಿಯನ್ನು ಉಳಿಸುವುದು ಮತ್ತು ಬೆಳಸುವುದು ನಮ್ಮ ಜವಾಬ್ದಾರಿಯಾಗಿದೆ.
ಉತ್ತರ ಭಾರತದ ಜನರು ಶುಭ ಕಾರ್ಯಗಳಲ್ಲಿ ತಳಿರು ತೋರಣ ಕಟ್ಟುವುದಿಲ್ಲ. ಬದಲಾಗಿ ಹಸಿರು ಬಟ್ಟೆಯನ್ನು ತೋರಣದ ಜಾಗದಲ್ಲಿ ಬಳಸುತ್ತಾರೆ. ಇದನ್ನು ದಕ್ಷಿಣದ ಬಹಳ ಜನ ಗಮನಿಸಿರಲಾರರು. ಹಸಿರು ಸಮೃದ್ಧಿಯ ಸಂಕೇತ ಅಷ್ಟೆ. ಅದು ಮಾವಿನೆಲೆಯ ತೋರಣವಾದರೂ ಅದೇ ಭಾವನೆ ಹಸಿರು ಬಟ್ಟೆಯಾದರೂ ಅದೇ ಭಾವನೆ. ಇಂತಹ ಪದ್ಧತಿ ನಮ್ಮಲ್ಲೂ ಏಕೆ ಬಳಕೆಗೆ ಬರಬಾರದು..? ಯುಗಾದಿಯಲ್ಲಿ ಬೇವುಬೆಲ್ಲ ತಿನ್ನುವ, ಸಂಕ್ರಾತಿಯಲ್ಲಿ ಎಳ್ಳುಬೆಲ್ಲ ತಿನ್ನುವ ಆಚರಣೆಗಳು ಕೇವಲ ಸಾಂಕೇತಿಕ ಅಷ್ಟೆ. ನಮ್ಮ ಆಚರಣೆಗಳು ಅರಿವಿಗೆ ದಾರಿ ಮಾಡಿಕೊಡಬೇಕಲ್ಲದೆ, ಬರಕ್ಕೆ ದಾರಿ ಮಾಡಬಾರದು. ಎಲ್ಲ ಹಬ್ಬಗಳ ಉದ್ದೇಶಗಳನ್ನು ಅರಿತುಕೊಂಡು ಕಾಲಕ್ಕೆ ತಕ್ಕಂತಹ ಆಚರಣೆಗಳನ್ನು ಮಾಡುವುದು ಜಾಣತನವಷ್ಟೇ ಅಲ್ಲ, ಜೊತೆಗೆ ಪರಿಸರದ ಅಳಿವು ಉಳಿವಿನ ಪ್ರಶ್ನೆ ಕೂಡ!







ಅಲ್ಲಮನೋ ಬೇರೆ ಶರಣರೋ ಮರೆತೆ, ಕೇಳುತ್ತಾರೆ: ಮುಂಜಾನೆ ಎದ್ದು ಪತ್ರ ಪುಷ್ಪಂಗಳಿಗೆ ಹೋಗುವ ನೀವು ಗಿಡದ ದಾಯಾದಿಗಳೇ ಎಂದು. ಉತ್ಥಾನ ದ್ವಾದಶಿಯ ದಿನ ಇಪ್ಪತ್ತೈದು ರೂಪಾಯಿಗೆ ಒಂದು ಸಣ್ಣ ಕೊಂಬೆ ಬೆಟ್ಟದ ನೆಲ್ಲಿಕಾಯಿ, ಹೀಚು, ಎಲೆ ಎಲ್ಲ. ಎಲ್ಲ ಕಳಿತು ಜನರೊಂದೊಂದು ತಿಂದಿದ್ದರೆ? ಎಷ್ಟೊಂದು ಜೀವಸತ್ವ waste?
ಆರ್. ವಿಜಯರಾಘವನ್
kruura vaastavakke hidida kannadi.
Habbagalalli nadeyuva hasiru vyabhichaa
rakke kadivaana beelalee beeku.
All of us should start talking loudly, teach, preach to conserve our greenery at least for our selfishness.
It is also time we need to reengineer our life style to save this planet for the future generation
shivashankar sg
liked the thought “at least for our selfishness.” makes a lot of sense. deserved to be included somewhere in the article.
at the same time, the irony is that it has become almost impossible to sell a good cause without giving it a touch of ‘selfishness.’ (bad ones will invariably have selfishness as their cornerstone and therefore, redundant to be mentioned here) for instance, the PETA activists have to bare (almost!) and cage themselves in order to attract public attention towards their ‘ethical treatment of animals’ campaign; and the vegans have to use ‘lettuce ladies’ to endorse their ‘encouraging vegetarianism’ cause. well, anyone asking me what is the ‘selfish’ motive here?? then its just not for your age, don’t bother! 😉
p.s. though i’m a hardcore non-veggie, i’d still vouch for those pretty (of course!) good (you bet!) causes 😉
regs
-R