
ಉಪೇಂದ್ರರಿಂದ ಹೊಸ ರಾಜಕೀಯ ಪಕ್ಷ ಸ್ಥಾಪನೆ: ಕೆಲವು ಪ್ರಶ್ನೆಗಳು!
ಕು.ಸ.ಮಧುಸೂದನ ನಾಯರ್ / ರಂಗೇನಹಳ್ಳಿ
ಉಪೇಂದ್ರ ರಾಜಕೀಯಕ್ಕೆ ಬಂದಿದ್ದರ ಬಗ್ಗೆ ಹಲವು ರೀತಿಯ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ನನಗನ್ನಿಸಿದ್ದನ್ನು ಬರೆಯುವುದು ಮತ್ತು ನನ್ನಂತಹ ಹಲವರಿಗೆ ಇರಬಹುದಾದ ಪ್ರಶ್ನೆಗಳನ್ನು ಈ ಮೂಲಕ ಅವರಿಗೆ ಕೇಳುವುದು ಒಬ್ಬ ಮತದಾರನಾಗಿ ನನ್ನ ಕರ್ತವ್ಯವೆಂದು ಬಾವಿಸಿ ಇದನ್ನು ಬರೆಯುತ್ತಿದ್ದೇನೆ
ಮೊದಲಿಗೆ, ಉಪೇಂದ್ರ ಒಬ್ಬರೇ ರಾಜಕೀಯಕ್ಕೆ ಬಂದಿದ್ದರೆ ಇಷ್ಟೊಂದೆಲ್ಲ ಸುದ್ದಿಯಾಗುತ್ತಿರಲಿಲ್ಲ. ಅದು ಅವರ ವೈಯುಕ್ತಿಕ ಆಯ್ಕೆಯಾಗಿರುತ್ತಿತ್ತು. ಅವರ ಬದ್ದತೆಯನ್ನು, ಸಿದ್ದಾಂತಗಳನ್ನು ಅವರು ಚುನಾವಣೆಗೆ ನಿಲ್ಲುವ ಕ್ಷೇತ್ರದ ಜನತೆ ಕೇಳಿಕೊಳ್ಳುತ್ತಿದ್ದರು, ಅದೂ ಅವರಿಗೆ ಕೇಳಬೇಕೆನಿಸಿದ್ದರೆ!
ಆದರೆ ಅವರೀಗ ಒಂದು ಪಕ್ಷ ಕಟ್ಟುವ ಹೇಳಿಕೆ ನೀಡಿದ್ದಾರೆ. ಆ ಪಕ್ಷ ರಾಜ್ಯವ್ಯಾಪಿಯಾಗಿದ್ದು ಈ ನೆಲದ ರಾಜಕಾರಣದಲ್ಲಿ ತನ್ನದೇ ಆದ ಪಾತ್ರ (ಅದರ ಪ್ರಮಾಣ ಎಷ್ಟೇ ಇರಲಿ) ವಹಿಸುವುದಂತು ಸತ್ಯ. ಈ ಹಿನ್ನೆಲೆಯಲ್ಲಿ ಕನ್ನಡ ನಾಡಿನ ಜನತೆಗೆ ಉಪೇಂದ್ರ ಕೆಲವು ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಲೇ ಬೇಕಾಗುತ್ತದೆ. ತಾನು ಕಟ್ಟಲಿರುವ ಪಕ್ಷದ ಸಿದ್ದಾಂತಗಳ ಬಗ್ಗೆ ಈಗಾಗಲೇ ನಮ್ಮನ್ನು ಕಾಡುತ್ತಿರುವ ಹಲವು ಜ್ವಲಂತ ವಿಚಾರಗಳ ಬಗ್ಗೆ ಅವರಿಗಿರುವ ನಿಲುವನ್ನು ಸಾರ್ವಜನಿಕರ ಮುಂದೆ ಹೇಳಲೇಬೇಕಾಗಿದೆ. ಹಾಗಾಗಿ ಅವರಿಗೆ ಕೆಲವು ಪ್ರಶ್ನೆಗಳಿವೆ.
ಪ್ರಶ್ನೆ ಒಂದು:
ಕನ್ನಡ ನಾಡನ್ನು ದಶಕಗಳಿಂದಲೂ ಕಾಡುತ್ತಿರುವ ಕಾವೇರಿ ನೀರು ಹಂಚಿಕೆಯ ಬಗ್ಗೆ ಕೃಷ್ಣಾ ನದಿ ನೀರಿನ ಹಂಚಿಕೆಯ ಬಗ್ಗೆ, ಕಳಸಾ ಬಂಡೂರಿ ಮಹದಾಯಿ ವಿಚಾರಗಳ ಬಗ್ಗೆ ತಮ್ಮ ಪಕ್ಷ ಯಾವ ನಿಲುವನ್ನು ತೆಗೆದುಕೊಳ್ಳುತ್ತದೆ? ಇತರ ಪಕ್ಷಗಳ ಹಾಗೆ ಅಡ್ಡಗೋಡೆಯ ಮೇಲಿನ ದೀಪದ ನಿಲುವು ನಮಗೆ ಬೇಕಾಗಿಲ್ಲ.
ಪ್ರಶ್ನೆ ಎರಡು:
ವರ್ತಮಾನದಲ್ಲಿ ನಮ್ಮನ್ನು ಚಿಂತೆಗೆ ಗುರಿಮಾಡಿರುವ ಮತೀಯ ರಾಜಕಾರಣದ ಬಗ್ಗೆ ತಮ್ಮ ಸ್ಪಷ್ಟ ನಿಲುವೇನು? ಬಲಪಂಥೀಯ ಕೋಮು ರಾಜಕಾರಣವನ್ನು (ಅದು ಯಾವುದೇ ಪಕ್ಷದ್ದಾಗಿರಲಿ) ನೀವು ಖಡಾಖಂಡಿತವಾಗಿ ಎದುರಿಸಿ ನಿಲ್ಲುತ್ತೀರಾ?
ಪ್ರಶ್ನೆ ಮೂರು:
ಇದೀಗ ಮೀಸಲಾತಿಯ ವಿಷಯ ಬಹಳ ಚರ್ಚೆಗೊಳಪಡುತ್ತಿದ್ದು ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯ ಬಗ್ಗೆ ನಿಮ್ಮ ನಿಲುವೇನು? ಮೀಸಲಾತಿಯನ್ನು ಇಲ್ಲವಾಗಿಸಲು ಮೇಲ್ಜಾತಿಗಳು ನಡೆಸುತ್ತಿರುವ ಪರೋಕ್ಷ ಹೋರಾಟಗಳನ್ನು ನೀವು ಹೇಗೆ ನೋಡುತ್ತೀರಿ.? ಅವನ್ನು ಎದುರಿಸಿ ನಿಲ್ಲುವ ಎದೆಗಾರಿಕೆಯನ್ನು ನಿಮ್ಮ ಪಕ್ಷ ತೋರುತ್ತದೆಯೇ?
ಪ್ರಶ್ನೆ ನಾಲ್ಕು:
ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುವ ನಮ್ಮ ಕೃಷಿಕ್ಷೇತ್ರವನ್ನು ಸರಿದಾರಿಗೆ ತರಲು ನಿಮ್ಮ ಬಳಿ ಕಾರ್ಯಕ್ರಮಗಳಿವೆಯೇ? ಇದ್ದರೆ ಅವು ಯಾವು?
ಪ್ರಶ್ನೆ ಐದು:
ಸದ್ಯ ನಮ್ಮ ಯುವಜನತೆ ನಿರುದ್ಯೋಗ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವರಿಗೆ ಉದ್ಯೋಗ ಸೃಷ್ಠಿಯ ಬಗ್ಗೆ ನಿಮ್ಮಲ್ಲೇನಾದರೂ ಯೋಜನೆಗಳಿವೆಯೇ? ಅವು ಏನು?
ಉಪೇಂದ್ರ ಅವರಿಗೆ ಈ ಪ್ರಶ್ನೆಗಳನ್ನು ಕೇಳಲು ಕಾರಣವಿದೆ: ನಾಳಿನ ಚುನಾವಣೆಯಲ್ಲಿ ಅವರ ಪಕ್ಷ ಶೇಕಡಾ ಐದರಷ್ಟು ಮತಗಳನ್ನು ಪಡೆದರೂ ಅದು ರಾಜ್ಯ ರಾಜಕೀಯದಲ್ಲಿ ಬಾರಿ ಬದಲಾವಣೆಗಂತೂ ಕಾರಣವಾಗಿಬಿಡುವ ಸಾಧ್ಯತೆ ಇದೆ
ಉಪೇಂದ್ರ ಅವರು ನಾಡಿನ ಜನತೆಯ ಈ ಪ್ರಶ್ನೆಗಳಿಗೆ ಉತ್ತರ ನೀಡಲೇಬೇಕಾಗಿದೆ. ಯಾಕೆಂದರೆ ಈ ವಿಷಯಗಳ ಬಗ್ಗೆ ಸ್ಪಷ್ಟತೆ ಇರದ ಒಂದು ಪಕ್ಷವನ್ನು ಬೆಂಬಲಿಸುವುದಿರಲಿ ಅದರ ಸ್ಥಾಪನೆಯ ಔಚಿತ್ಯವನ್ನೇ ಅನುಮಾನದಿಂದ ನೋಡಬೇಕಾಗುತ್ತದೆ.
ಇವೆಲ್ಲ ಪ್ರಶ್ನೆಗಳನ್ನು ಉಪೇಂದ್ರ ಉಪೇಕ್ಷಿಸಿದ್ದೇ ಆದರೆ ಅದು ನಮ್ಮ ರಾಜಕಾರಂದ ವಿಷಾದನೀಯ ಪುಟಗಳಲ್ಲಿ ಅವರ ಹೆಸರೂ ಸೇರ್ಪಡೆಯಾಗಬಹುದಷ್ಟೇ
ಅವರ ಸಾಧನೆ ಅಷ್ಟಕ್ಕೆ ಸೀಮಿತವಾಗುವ ಅಪಾಯವಿದೆ!
ನನ್ನ ಪ್ರಶ್ನೆಗಳೇನೆ ಇರಲಿ ನಿಮ್ಮ ಹೊಸ ಸಾಹಸಕ್ಕೆ ಶುಭ ಹಾರೈಕೆಗಳನ್ನು ಹೇಳಬಲ್ಲೆ!






The way questions are asked is not right. Firstly we don’t do anything other than asking questions and keep quite. If someone is taking lead to change the present scenario, suddenly people will wake up Star questioning.
Questioning is not wrong but when you ask in this tone that if he wants to enter party politics then he has to answer these questions.
Why are you thinking that only these 5 issues has to be dealt? He may address so many other issues.
My opinion is that we should wait for full announcement and then react.
If u have any suggestions then send them to Upendra
I agree with Padmaraj ji here…
– Prasad, Angola