ಉದ್ದಂಡ ನಮಸ್ಕಾರ; ಸುಟ್ ಚಾಕ್ಕೆ..

ಗೀತಾ ಜಿ ಹೆಗಡೆ, ಕಲ್ಮನೆ

ಸಂಜೆ ನಾಕ್ಕಂಟೆ ಆಗೋತು
ಮನಸ್ಸೆಳಿತಾ ಇದ್ದು
ಆದ್ರೆ ಕುಡಿಯವ ಬ್ಯಾಡ್ದ ….
ಕುಡಿಯವ ಬ್ಯಾಡ್ದ.

ಅಲ್ದೆ…..
ಮೀನಾಮೇಷ ಎಂತಕ್ಕೆ ಮಾಡ್ತೆ?
ಕುಡಿ ಕುಡಿ ಪರವಾಗಿಲ್ಯೆ
ಇವತ್ತೊಂದಿನಾ….

ಅದೌದು..
ಆದ್ರೆ ಜಾಗರಣೆಗೆ ಎಂತಾ ಮಾಡವೆ?
ಕಪ್ಪಪ್ಪ ಹೊತ್ತಿಗೆ ಕುಡದ್ರೆ ನಿದ್ ಬತ್ತಿಲ್ಯಲೆ….

ಎಂತಾರು ಬರಿಯೆ, ಓದೆ
ಟೀವಿ ನೋಡೆ ಸಾಕು
ಬೆಳಿಗ್ಗೆ ಎಂತಾ ಲಗೂನೆ ಏಳವನೆ..
ಹ್ಯಾಂಗಿದ್ರೂ ವರ್ಕ್ ಫ್ರಮ್ ಹೋಮಪ..
ಸಾವಕಾಶವಾಗಿ ಕೆಲ್ಸ ಮಾಡ್ಕಂಡ್ರಾತು ಸೈ ತಗ..
ಜೀವನ್ದಲ್ಲಿ ಇನ್ನೆಂತದೆ?
ಇಶಿಶಿ.. ಎಲ್ಲದಕ್ಕೂ ತಲೆ ಎಂತಕ್ಕೆ ಕೆಡಿಸ್ಕತ್ತೆ?
ಸಣ್ಣ ಕಪ್ಪಲ್ಲಿ ಕುಡಿ ಸಾಕು
ಒಂದು ರಾತ್ರಿ ನಿದ್ದೆಗೆಟ್ಟರೆ
ಆಗದೆಂತದು ಇಲ್ಲೆ.

ಅಬ್ಬಾ! ಯಾನಮನಿ ಮಾತು
ಈ ಚಹಾದ್ದೂ…..
ಕೊರೋನಾ ಬಂದಿದ್ದು
ಮಗಳು ಆಫೀಸಿಗೆ ಕೆಲಸಕ್ಕೆ ಹೋಗ್ತಿಲ್ಲೆ
ಹೇಳದೆಲ್ಲ ಹ್ಯಾಂಗ್ ಗೊತ್ ಮಾಡ್ಕಂಡಿಗೀದೂ…!

ಈಗಿತ್ಲಾಗೆಂತೂ
ಬ್ಯಾಡ್ ಬ್ಯಾಡಾ ಅಂದ್ರೂ ಬೆನ್ನಟ್ಕಂಡ ಬತ್ತು
ಇದರ ಮಾತಿಗೆ ಮರುಳಾಗಿ
ಆವಾಗಾ ಆವಾಗಾ ಕುಡಿಯದು
ಕಡಿಗೆ ಹಾಸಿಗೆಯಲ್ಲಿ ಹೊರಳಾಡದು
ನಂಗಂತೂ ನಿದ್ದೆಗೆಟ್ಟಗೆಟ್ಟ್ ಸಾಕಾಗೋಜು
ಆದ್ರೂವಾ ಚಾ ಮಾತ್ರ ಬಿಡಲಾಗ್ತಿಲ್ಲೆ
ಎಂತಾಮಾಡವನ.. ಎಂತಾಮಾಡವನ..

ಸುಮ್ನೆ ಕುಂತಾಗಾ ಅಂದ್ಕತ್ತಿ
ಈ ಕಳ್ಳ ಮನಸ್ಸಿಗೆ ಉಡಿದಾರ ಹಾಕವು
ಮದ್ಲು ಚಾ ಕುಡಿಯವು ಅನ್ಸದಾಗಾ
ಕಣ್ಣಿಗೆ ಖಾಲಿ ಡಬ್ಬಾ ಕಾಣವು
ಇದಕ್ಕೆ ಬೇಕಾದ ಪರಿಕರ ಒಂದೂ
ಮನೆಯಲ್ಲಿ ಇಪ್ಪಲಾಗಾ
ಕುಡಿಯವು ಕುಡಿಯವು ಹೇಳಿ
ಮನಸ್ಸು ತಕಥೈ ಕುಣಿಯವು
ಪರಿತಪಿಸಿ ಪರಿತಪಿಸಿ ಸಾಯ್ಲಿ
ಭಯಂಕರ ಉದ್ದಂಡ ನಮಸ್ಕಾರ ಹಾಕಿಬಿಡವು
ಸುಟ್ ಚಾಕ್ಕೆ..

ಯಂಗೆ ಈ ಕೊರೋನಾ ಬಂದ್ಮೇಲಂತೂ
ಆರೋಗ್ಯದ ಬಗ್ಗೆ ಕಾಳಜಿ ಭರ್ತಿ ಹೆಚ್ಚಾಗಿ
ಭಯದ ವಾತಾವರಣ ತಟ್ಟಿ
ನಾಳೆಯಿಂದ ಹಿಂಗಿಂಗೇ
ಜೀವನ ಶೈಲಿ ರೂಢಿಸಿಕೊಳ್ಳವು
ತಿಂಡಿ, ಊಟ, ನಿದ್ದೆ, ಏಳದು, ಮಲಗದು,
ಬದುಕದು, ಅಕ್ಕಪಕ್ಕ ಹರಟೆ ಕೊಚ್ಚದು
ಅಲ್ಲಿ ಇಲ್ಲಿ ಹೋಗದು, ಚಾ ಕುಡಿಯದು
ಇತ್ಯಾದಿ ಇತ್ಯಾದಿ..

ಥೊsssss ನಿಯತ್ತಿನ ಸೂರ್ಯ
ಬೆಳಗ್ಗೆ ಕದ ತಟ್ಟಲಿಲ್ಲೆ
ಮತ್ತೆ ನಾಯಿಬಾಲ ಡೊಂಕೇ..
ತಲೆಯಲ್ಲಿ ಯಥಾಪ್ರಕಾರ ಅದೇ ಚಹಾದ ಕುಣಿತ.

ಬುದ್ಧಿಯ ನಿರ್ಧಾರವೆಲ್ಲ ಎಕ್ಕುಟ್ಟೋಗಿ
ಮನಸ್ಸು ಚಾದಿಂದೆ ಝಂಡಾ ಊರಿ
ನೀ ಕುಡಿಯೆ ನೀ ಕುಡಿಯೆ
ಬೆಳಿಗ್ಗೆ ಸಂಜೆ ಇದೇ ಹಣೆಬಾರಾಗೋತು..
ಅಡಿಗೆಮನೆಗೆ ದೌಡು!

‍ಲೇಖಕರು Avadhi

December 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: