ಉದಯ ಗಾಂವಕಾರ ಕವಿತೆ – ಯಥಾಪ್ರಕಾರ ನಡೆಯಲಿಲ್ಲ…

ಉದಯ ಗಾಂವಕಾರ

ಆನಂತರ ಎಲ್ಲವೂ
ಯಥಾಪ್ರಕಾರ ನಡೆಯಲಿಲ್ಲ.
ಏನೂ ನಡದೇ ಇಲ್ಲವೆಂಬಂತೆ
ಅಲ್ಲಿದ್ದವರೆಲ್ಲ ತಮ್ಮ ತಮ್ಮ
ಕೆಲಸಗಳಲ್ಲಿ ನಿರತರಾದದ್ದು ಹೌದು;
ಅಲ್ಲವೆನ್ನುವುದಿಲ್ಲ.
ಅವರು ಗಮನಿಸಿದರೋ ಇಲ್ಲವೋ?
ನುಜ್ಜು ಗುಜ್ಜಾದ ಹಣ್ಣಿನ
ಚೂರಲ್ಲಿ ಸಿಹಿ ಹುಡುಕಿ
ಸಾಲಾಗಿ ಬಂದ ಇರುವೆಗಳು
ಇದೇ ಮೊದಲ ಸಲ
ಹಸಿದು ಮರಳಿದವು..

ಆಸೆಯಿಂದ ಬಾಯಿಟ್ಟ
ಸರತಿಯ ಮೊದಲ ಇರುವೆಯ ಸಂದೇಶ
ಇಡಿಯ ಸಂಕುಲಕ್ಕೇ ರವಾನೆಯಾಯ್ತು.
ಹೌದು, ಹಣ್ಣು ಉಪ್ಪಾಗಿತ್ತು.
*
ಆತನ ಕಣ್ಣೀರಿನಲ್ಲಿ
ಕರಗದೇ ಇರುವುದು ಎರಡೇ-
ದ್ವೇಷ ಮತ್ತು ಹಿಂಸೆ.

‍ಲೇಖಕರು Admin

April 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. prathibha nandakumar

    ತುಂಬಾ ಚೆನ್ನಾಗಿದೆ. ನನಗೆ ನಿಮ್ಮ ಕವನಗಳು ಇಷ್ಟ. ಅದರ ಶೈಲಿ ಬಂಧ ಪದ ಬಳಕೆ ವಸ್ತು ಎಲ್ಲವೂ ಶುದ್ಧ ಕಾವ್ಯ. ಹಿಂತಿರುಗಿ ಬಂದಳು… (“ಮುಟ್ಟಿರದ ಯೋನಿಯಿಂದ ಹುಟ್ಟಿರುವವನನ್ನುಹುಡುಕಿಕೊಡು ಎಂದಳು”) ಒಂದು ಕಾಡುವ ಉದ್ಯಾನ…(ಹೂ-ಗಿಡಗಳ ಅಂಗಡಿಯಲ್ಲಿ
    ಕತ್ತರಿಯೂ ಮಾರಾಟಕ್ಕಿರುತ್ತದೆ; ತೊಟ್ಟಿಲಂಗಡಿಯಲ್ಲಿ ಬೊಂಬು ಸಿಗುವಂತೆ!) ಯಥಾಪ್ರಕಾರ ನಡೆಯಲಿಲ್ಲ, ಕರೋನಾ ಚೂರ್ಗತೆಗಳು… ಎಲ್ಲಾ ಚೆನ್ನಾಗಿವೆ. ಥ್ಯಾಂಕ್ಸ್.
    ಪ್ರತಿಭಾ ನಂದಕುಮಾರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: