ಉಡುಪಿಯಲ್ಲಿ ವಸಂತ ಬನ್ನಾಡಿಯವರ ಕೃತಿಗಳ ಬಿಡುಗಡೆ

ವಸಂತ ಬನ್ನಾಡಿಯವರ ‘ಬೆಳದಿಂಗಳ ಮರ’ ಮತ್ತು ‘ಊರು ಮನೆ ಉಪ್ಪು ಕಡಲು’ ಕವನ ಸಂಕಲನಗಳನ್ನು ನಿನ್ನೆ ಉಡುಪಿಯಲ್ಲಿ ಶಬ್ದಗುಣ, ಕುಂದಾಪುರ ಮತ್ತು ಭೂಮಿಗೀತ, ಪಟ್ಲ ಆಶ್ರಯದಲ್ಲಿ ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದವರು..

ಎಡದಿಂದ ಬಲಕ್ಕೆ- ಶಶಿಧರ ಹೆಮ್ಮಾಡಿ, ಪ್ರಕಾಶ್ ನರೋನ್ನ, ಲಕ್ಷ್ಮೀನಾರಾಯಣ ಕಾರಂತ, ಪ್ರಸನ್ನ ಪಿ.ಬಿ, ಉದ್ಯಾವರ ನಾಗೇಶ್ ಕುಮಾರ್, ಕೆ.ಫಣಿರಾಜ್, ವಸಂತ ಬನ್ನಾಡಿ, ಡಾ.ಮಹಾಬಲೇಶ್ವರ ಭಟ್, ಬಾಲಕೃಷ್ಣ ಶೆಟ್ಟಿ, ಹರಿಯಪ್ಪ ಪೇಜಾವರ, ವರದೇಶ ಹಿರೇಗಂಗೆ, ರಾಮಕೃಷ್ಣ ಹೇಳೆ೯, ಸೂರ್ಯಕುಮಾರ್ ಪಟ್ಲ, ಮತ್ತು ಸುಧಾಕರ್ .ಜಿ.ವಿಷ್ಣು ಬಳಿಕ ಬಂದು ಸೇರಿಕೊಂಡರು. ಕಾರ್ಯಕ್ರಮವನ್ನು ಸಂಘಟಿಸಿದವರು ಸಂತೋಷ್ ನಾಯಕ್ ಪಟ್ಲ.

‘ಸಾಮಾಜಿಕ ಹೊಣೆಗಾರಿಕೆ ಮತ್ತು ಕಾವ್ಯ’ ಎಂಬ ವಿಷಯದ ಕುರಿತು ಡಾ.ಮಹಾಬಲೇಶ್ವರ ಭಟ್ ಮತ್ತು ಕೆ.ಫಣಿರಾಜ್ ಮಾತನಾಡಿದರು. ಕವನ ಸಂಕಲನಗಳಿಂದ ಆಯ್ದ ಕೆಲವು ಕವಿತೆಗಳನ್ನು ಡಾ.ಮಹಾಬಲೇಶ್ವರ ಭಟ್, ಪ್ರಸನ್ನ ಪಿ.ಬಿ, ಶಶಿಧರ ಹೆಮ್ಮಾಡಿ ಮತ್ತು ಹರಿಯಪ್ಪ ಪೇಜಾವರ ಓದಿದರು.

ಡಾ.ಹೆಚ್. ಶಾಂತಾರಾಮ್ ಅವರಿಗೆ ಪ್ರೀತಿಯಿಂದ ಅರ್ಪಿಸಿದ್ದೇನೆ.

ಡಾ.ಹೆಚ್.ಶಾಂತಾರಾಮ್ ಅವರಿಗೆ ‘ಬೆಳದಿಂಗಳ ಮರ’ ಮತ್ತು ‘ಊರು ಮನೆ ಉಪ್ಪು ಕಡಲು’ಕವನ ಸಂಕಲನಗಳನ್ನು ನಿನ್ನೆ ಮಣಿಪಾಲದ ಅವರ ಮನೆಯಲ್ಲಿ ನಾನು ಮತ್ತು ಗೆಳೆಯ ನವೀನ್ ಎನ್ ಕುಮಾರ್ ನೀಡಿದೆವು.

ಡಾ. ಹೆಚ್. ಶಾಂತಾರಾಮ್ ನಮ್ಮ ನಡುವಿನ ಧೀಮಂತ ಚೈತನ್ಯ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಂಗ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದವರು. ಕರ್ನಾಟಕದಾತ್ಯಂತ ಬಂದ ವಿದ್ಯಾರ್ಥಿಗಳಿಗೆ ಒಂದು ವರ್ಷದ ನಾಟಕ ತರಬೇತಿ ಪಡೆಯಲು ಸ್ಥಳ ಮತ್ತು ಅವಕಾಶ ಒದಗಿಸಿದವರು. ಹೊಸ ಪೀಳಿಗೆಯ ರಂಗಾಸಕ್ತರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದವರು.

ಡಾ.ಹೆಚ್. ಶಾಂತಾರಾಮ್ ಅವರಿಗೆ ಈಗ 96 ವರ್ಷ.ತುಂಬ ಲವಲವಿಕೆಯಿಂದ ನಮ್ಮ ಜೊತೆ ಬಹಳ ಹೊತ್ತು ಮಾತನಾಡಿದರು. ಉಡುಪಿ ಮತ್ತು ಕುಂದಾಪುರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉತ್ತುಂಗಕ್ಕೆ ಕಾರಣರಾದ ಡಾ.ಹೆಚ್. ಶಾಂತಾರಾಮ್ ಇವತ್ತಿಗೂ ಯುವ ಕಲಾವಿದ ಮತ್ತು ಬರಹಗಾರರಿಗೆ ಆದರ್ಶಪ್ರಾಯರಾಗಿದ್ದಾರೆ. ಯಾವಾಗಲೂ ಮುಂದಿನದನ್ನು ಯೋಚಿಸಿ ಚಟುವಟಿಕೆಗಳನ್ನು ರೂಪಿಸಿದವರು ಅವರು.ಹೊಸ ಪೀಳಿಗೆಯ ಯುವಕ ಯುವತಿಯರು ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯದ ಕುರಿತು ನಿನ್ನೆ ನಮ್ಮ ಬಳಿ ಅವರು ಮಾತನಾಡಿದರು.

ಅವರ ಜೊತೆ ಒಂದಿಷ್ಟು ಹೊತ್ತು ಕಳೆದದ್ದು ನಮಗೆ ತುಂಬಾ ಸಂತೋಷ ನೀಡಿತು. ನನ್ನ ‘ಬೆಳದಿಂಗಳ ಮರ’ ಕವನ ಸಂಕಲನವನ್ನು ನಾನು ಡಾ.ಹೆಚ್. ಶಾಂತಾರಾಮ್ ಅವರಿಗೆ ಪ್ರೀತಿಯಿಂದ ಅರ್ಪಿಸಿದ್ದೇನೆ.

‍ಲೇಖಕರು avadhi

July 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: