ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಗಮಿಸಿತು ಝೆನ್

ತುಂಬಾ ಅಚಾನಕ್ಕಾಗಿ ಝೆನ್ ಟೀಂ ಆರಂಭಿಸಿದೆ. ನಾನು ತುಮಕೂರಿಗೆ ಬಂದ ಹೊಸದರಲ್ಲಿ ಹೆಗ್ಗೋಡಿನ ನೀನಾಸಂ ನವರು  ಈ ಬಾರಿ ತುಮಕೂರಿನಲ್ಲಿ ನಾಟಕ ಆಡಿಸಿ. ನಾಟಕ್ಕೆ ದುಡ್ದು ಕೊಡುವುದು ಬೇಡ.  ನಾಟಕ ಅಕಾಡೆಮಿ  ನಾಟಕ  ಪ್ರಾಯೋಜಕತ್ವ ಮಾಡುತ್ತೆ. ನಿಮ್ಮದೇನಿದ್ದರೂ ಕಲಾವಿದರ ಊಟ, ವಸತಿ ನೋಡಿಕೊಂಡರೆ ಸಾಕು ಎಂದರು. ನಾನು ಆಗಲಿ ಎಂದು ಸಂಘಟನೆ ಮಾಡಿದೆ. ಆದರೆ ನೀರಿಕ್ಷೆ ಮೀರಿ ನಾಟಕ ಯಶಸ್ಸು ಕಂಡಿತು. ಸರ್ಕಾರದ ಅನುದಾನ ಜೊತೆಗೆ ನನ್ನದೊಂದಿಷ್ಟು ಹಣದಲ್ಲಿ ನಾಟಕ ಮಾಡಿಸುತ್ತ ಹೋದೆ. ಕಳೆದ ಮೂರೂವರೆ ವರ್ಷದಲ್ಲಿ ೩೦ ಕ್ಕೂ ಹೆಚ್ಚು ನಾಟಕಗಳನ್ನು ಆಡಿಸಿದ ಹೆಮ್ಮೆ ನಮ್ಮ ಝೆನ್ ಟೀಂದು. ಸದ್ಯ ಲಂಕೇಶರ ‘ಸಹಪಾಠಿ’  ಕಥೆಯನ್ನ ನಾಟಕ್ಕೆ ಅಳವಡಿಸಿ, ನಾವು ಗೆಳೆಯರು ಅಭಿನಯಿಸುವ ತೀರ್ಮಾನ ತೆಗೆದುಕೊಂಡಿದ್ದೇವೆ.

-ಉಗಮ ಶ್ರೀನಿವಾಸ್
zen team invitation 11 sheets

‍ಲೇಖಕರು avadhi

26 October, 2009

2 Comments

  1. vasanth

    We have a plan to invite Neenasam thirugatta to our college (Govt First Grade College, Periyapatna ). I have sent an e-mail to K V Akshara sir in this regard. But I have not get any reply so far. Is it possible to Avadhi viewers to leave a phone number or the means of contact neenasam thirugata play troop.

  2. ugamasrinivas

    ninasam manager contact number 9449553360 and 9845924550

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading