‘ಈ ಹೊತ್ತಿಗೆ’ ದಶಮಾನೋತ್ಸವ ಸಂಭ್ರಮದ ಫೋಟೋ ಆಲ್ಬಂ…

ಈ ಹೊತ್ತಿಗೆಯ 2023ನೇ ಸಾಲಿನ ಕಥಾ ಪ್ರಶಸ್ತಿಯನ್ನು ವಿನಾಯಕ ಅರಳಸುರಳಿ ಮತ್ತು ಕಾವ್ಯ ಪ್ರಶಸ್ತಿಯನ್ನು ಚಾಂದ್ ಪಾಷಾ ಎನ್ ಎಸ್ ಅವರಿಗೆ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ಜೆಪಿ ನಗರದ ಕಪ್ಪಣ್ಣ ಅಂಗಳದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ.ಹೆಚ್ ಎಸ್ ಶಿವಪ್ರಕಾಶ್ ಮತ್ತು ಡಾ.ಎಂ ಎಸ್ ಆಶಾದೇವಿ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಕೆ.ವಿ ತಿರುಮಲೇಶ ಅವರ ಸ್ಮರಣಾರ್ಥ ಯುವಕವಿ ಗೋಷ್ಠಿ ‘ಅಕ್ಷಯ ಕಾವ್ಯ’ವನ್ನು ಎಂ ಆರ್ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

‘ಕಥೆ ಕದವ ತಟ್ಟಿದಾಗ’ ಗೋಷ್ಠಿಯಲ್ಲಿ ಜಯಶ್ರೀ ಕಾಸರವಳ್ಳಿ, ಡಾ. ಚಿದಾನಂದ ಸಾಲಿ ಮತ್ತು ಮಧುಸೂದನ ವೈ ಎನ್ ಭಾಗವಹಿಸಿದ್ದರು.

ಅನ್ಯ ಭಾಷೆಗಳ ಸಾಹಿತ್ಯದ ವಾತಾವರಣವನ್ನು ತಿಳಿದುಕೊಳ್ಳುವ ಗೋಷ್ಠಿಗಳನ್ನು ನಡೆಸಲಾಯಿತು.‘ಭಾಷೆ ಬೇರೆ, ಭಾವವೊಂದೇ…?’ ಗೋಷ್ಠಿಗಳಲ್ಲಿ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಡಾ. ಅಜಯ್ ಕುಮಾರ್ ಸಿಂಗ್, ಸುಧಾಕರನ್ ರಾಮಂತಳಿ, ಮಲರವಿಳಿ ಕೆ ಮತ್ತು ಪೂರ್ಣಿಮ ತಮ್ಮಿರೆಡ್ಡಿ ಅವರು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ರಂಗಕರ್ಮಿ ಶ್ರೀನಿವಾಸ ಜಿ ಕಪ್ಪಣ್ಣನವರು ಮುಖ್ಯ ಅತಿಥಿಗಳಾಗಿದ್ದರು. ಈ ಹೊತ್ತಿಗೆ ಪ್ರಶಸ್ತಿಯನ್ನು ಪಡೆದಿರುವ ಕತೆಗಾರರು ಮತ್ತು ಕವಿಗಳೊಂದಿಗೆ ಸಂವಾದ ನಡೆಸಲಾಯಿತು.

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Admin

March 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: