‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಫಲಿತಾಂಶ ಘೋಷಣೆ: ಕೆ ಎಚ್ ಮುಸ್ತಾಫಾಗೆ ಪ್ರಶಸ್ತಿ

 

‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಫಲಿತಾಂಶವನ್ನು ಘೋಷಿಸಲಾಗಿದ್ದು ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ, ಕೊಡಗಿನ ಕೆ ಎಚ್ ಮುಸ್ತಾಫ ಅವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

‘ಹರಾಂನ ಕಥೆಗಳು’ ಪ್ರಶಸ್ತಿಗೆ ಪಾತ್ರವಾದ ಅವರ ಕಥಾ ಸಂಕಲನ.

ಪ್ರಶಸ್ತಿಯು  ೧೦ ಸಾವಿರ ರೂ ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ‘ಈ ಹೊತ್ತಿಗೆ’ಯ ಜಯಲಕ್ಷ್ಮಿ ಪಾಟೀಲ್ ಅವರು ತಿಳಿಸಿದ್ದಾರೆ.

ಖ್ಯಾತ ಕಥೆಗಾರ ಕೇಶವ ಮಳಗಿ ಹಾಗೂ ಹಿರಿಯ ಪತ್ರಕರ್ತರಾದ ಸಿ ಜಿ ಮಂಜುಳಾ ಅವರು ತೀರ್ಪುಗಾರರಾಗಿದ್ದರು.

ಇದೇ ಮಾರ್ಚ್ ೦೧ರಂದು ಜರುಗಲಿರುವ ಈ ಹೊತ್ತಿಗೆಯ ‘ಹೊನಲು’ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

‘ಈ ಹೊತ್ತಿಗೆ ಕಥಾ ಸ್ಪರ್ಧೆ’ಯ ಫಲಿತಾಂಶವನ್ನೂ ಇದೇ ಸಂದರ್ಭದಲ್ಲಿ ಘೋಷಿಸಲಾಗಿದ್ದು ಗೋವಿಂದರಾಜು ಎಂ. ಕಲ್ಲೂರು ಅವರ ಕಥೆ ಪ್ರಥಮ  ಪಾತ್ರವಾಗಿದೆ.

ಹಿರಿಯ ಸಾಹಿತಿ ಉಷಾ ಪಿ ರೈ ಹಾಗೂ ಚಲನಚಿತ್ರ ನಿರ್ದೇಶಕ ಎಸ್ ಎಂ. ಪಾಟೀಲ್ ಅವರುಗಳು ಕಥೆಗಳ ತೀರ್ಪುಗಾರರಾಗಿದ್ದರು.

ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿರುವ ಗೋವಿಂದರಾಜು ಎಂ. ಕಲ್ಲೂರು ಅವರು ಬರೆದ, ‘ಒಂಟಿ ನಕ್ಷತ್ರ ಗುಳೆ ಹೋದ ದಿವಸ’ ಕಥೆಗೆ ಪ್ರಥಮ ಬಹುಮಾನ (ರೂ. ೫೦೦೦ ನಗದು ಹಾಗು ಪ್ರಮಾಣ ಪತ್ರ)

ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಎಂ.ಎ – ಅರ್ಥಶಾಸ್ತ್ರ ಓದುತ್ತಿರುವ ಕಪಿಲ ಪಿ. ಹುಮನಾಬಾದೆ ಅವರ ‘ಬಿಸಿಲು’ ಕಥೆಗೆ ದ್ವಿತೀಯ ಬಹುಮಾನ (ರೂ. ೩೦೦೦ ನಗದು ಹಾಗು ಪ್ರಮಾಣ ಪತ್ರ),

ಬೆಂಗಳೂರಿನಲ್ಲಿ ಶಿಕ್ಷಕರಾಗಿರುವ ದಾದಾಪೀರ್ ಜೈಮನ್ ಅವರ ‘ಎಲ್ಲೋ ಯಲ್ಲೋ…’ ಕಥೆಗೆ  ತೃತೀಯ ಬಹುಮಾನ (ರೂ. ೨೦೦೦ ನಗದು ಹಾಗು ಪ್ರಮಾಣ ಪತ್ರ)

ಧಾರವಾಡದಲ್ಲಿ ಎರಡನೇ ವರ್ಷದ ಎಂ.ಎ – ಪತ್ರಿಕೋದ್ಯಮ ಓದುತ್ತಿರುವ ಯರಗುಪ್ಪಿಯ ಬಸನಗೌಡ ಪಾಟೀಲ್ ಅವರ ‘ಮೈಲಿಗೆ ಗುಡಿಸಲು’ ಮತ್ತು ಪುತ್ತೂರಿನ ಪಾಲಿಟೆಕ್ನಿಕ್ ಕಾಲೇಜಿನ ಕನ್ನಡ ಉಪನ್ಯಾಸಕರಾಗಿರುವ ವಿಶ್ವನಾಥ. ಎನ್ ಅವರ ‘ಋಣ’ ಮೆಚ್ಚುಗೆ ಪಡೆದ ಕಥೆಗಳಾಗಿವೆ.

‍ಲೇಖಕರು avadhi

January 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಸಂಗನಗೌಡ

    ಎಲ್ಲಾ ಗೆಳೆಯರಿಗೂ ಭಿನಂದನೆಗಳು

    ಪ್ರತಿಕ್ರಿಯೆ
  2. T S SHRAVANA KUMARI

    ಎಲ್ಲಾ ವಿಜೇತರಿಗೂ ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: