ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಈ ಹೊತ್ತಿಗೆ’ಯಲ್ಲಿ ಸಾರಾ ಅಬೂಬಕ್ಕರ್ ಅವರ ಸಾಹಿತ್ಯ ಕುರಿತ ಚರ್ಚೆ..

ದಿನಾಂಕ 30 ಎಪ್ರಿಲ್ 2023ರಂದು, ಸಂಜೆ 5.00 ಗಂಟೆಗೆ ಜೆಪಿ ನಗರದ ೧ನೇ ಫೇಸಲ್ಲಿರುವ ಕಪ್ಪಣ್ಣ ಅಂಗಳದಲ್ಲಿ, ಈ ಹೊತ್ತಿಗೆಯು, ಸಾಹಿತ್ಯ ಅಕಾಡೆಮಿ, ಹೊಸ ದೆಹಲಿ ಇವರ ಸಹಯೋಗದೊಂದಿಗೆ ಇತ್ತೀಚಿಗೆ ನಮ್ಮನ್ನಗಲಿದ ನಾಡೋಜ ಸಾರಾ ಅಬೂಬಕ್ಕರ್ ಅವರ ಸಾಹಿತ್ಯದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಬಿ ಟಿ ಲಲಿತಾ ನಾಯಕ್ ಅವರ ಅಧ್ಯಕ್ಷತೆಯಲ್ಲಿ ವಿಮರ್ಶಕರಾದ ಡಾ. ಹೆಚ್ ಎಸ್ ಸತ್ಯನಾರಾಯಣ ಮತ್ತು ಸಾಹಿತಿ ಇಂದಿರಾ ಶರಣ್ ಅವರು ಸಾರಾ ಅಬೂಬಕ್ಕರ್ ಅವರ ಕಾದಂಬರಿಗಳ ಕುರಿತು ಹಾಗೂ ಕಾದಂಬರಿಗಾರ್ತಿ ಸಂಧ್ಯಾರಾಣಿ ಮತ್ತು ಕವಿ ಕತೆಗಾರ ಆನಂದ್ ಕುಂಚನೂರ್ ಅವರು ಕಥೆಗಳು ಮತ್ತು ಅನುವಾದಗಳ ಕುರಿತು ಮಾತನಾಡಲಿದ್ದಾರೆ.

‍ಲೇಖಕರು avadhi

29 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading