1936ರಲ್ಲಿ ಶಾಲೆ ಬಿಟ್ಟು ಅಗ್ರಾಳಕ್ಕೆ ಬಂದೆ. ನಮ್ಮ ಕುಟುಂಬದ ಪಾಲಿಗೆ ಸಿಕ್ಕಿದ ಭೂಮಿ ಬಹಳ ಕಡಮೆ. ದೊರೆತದ್ದು ಬಾನಬೆಟ್ಟುವಿನ ಒಣಭೂಮಿ. ‘ಬಾನಬೆಟ್ಟು’ ಎಂದರೆ ಬಾನಿನ – ಆಕಾಶದ – ಅಂದರೆ ಮಳೆಯ ನೀರಿನಿಂದ ಮಾತ್ರವೇ ಕೃಷಿ ಮಾಡಬಹುದಾದ ಬೆಟ್ಟುಗದ್ದೆ. ಇದರ ಹತ್ತಿರ ಕೆರೆಗಳನ್ನು ತೋಡಿಸಿ, ಸ್ವಲ್ಪ ಅಡಕೆ ತೋಟ ಮಾಡಿದೆ. ಬೆಟ್ಟುಗದ್ದೆಗಳಲ್ಲಿ ಒಂದು ಬೆಳೆಯ ಭತ್ತದ ಕೃಷಿ ಮಾಡಿದೆ. ಈ ಕೃಷಿಯ ಉತ್ಪನ್ನ ವರ್ಷದಲ್ಲಿ ಆರು ತಿಂಗಳ ಜೀವನೋಪಾಯಕ್ಕೇ ಸಾಕಾಗುತ್ತಿರಲಿಲ್ಲ. ಇದಕ್ಕಾಗಿ ಸಣ್ಣಪುಟ್ಟ ವ್ಯಾಪಾರಗಳನ್ನು ಮನೆಯಲ್ಲೇ ಮಾಡಿದೆ. ಕಾಲಕ್ಕೆ ಅನುಗುಣವಾಗಿ ಸಣ್ಣ ಸಣ್ಣ ಕಸುಬುಗಳಲ್ಲಿ ತೊಡಗಿಸಿಕೊಂಡೆ.
ಆದರೂ ಮಣ್ಣಿನ ಸಂಬಂಧ ನನಗೆ ಎಲ್ಲಕ್ಕಿಂತಲೂ ಪ್ರಿಯವಾದದ್ದು. ಅದು ಬರೇ ಹಣ ತರುವ ಮೂಲವಾಗಿ ಮಾತ್ರ ನನ್ನ ಪಾಲಿಗೆ ಇರಲಿಲ್ಲ. ಅಗ್ರಾಳದ ಮಣ್ಣಿನಲ್ಲಿ ಆ ಕಾಲಕ್ಕೆ ಆ ಊರಿಗೆ ಅಪೂರ್ವವಾದ ಹಣ್ಣಿನ ಬೆಳೆಗಳನ್ನು ಬೆಳೆಸಿದೆ. ಮಾವು, ಚಿಕ್ಕು, ಅನಾನಾಸು, ಪಪ್ಪಾಯಿ ಗಿಡಗಳನ್ನು ನೆಟ್ಟು ಹಣ್ಣುಗಳನ್ನು ಪಡೆದೆ. ಆದರೆ ಈ ಹಣ್ಣುಗಳನ್ನು ಮಾರಾಟ ಮಾಡಲಿಲ್ಲ, ಮನೆಯಲ್ಲಿ ಎಲ್ಲರಿಗೆ ಬಂದವರಿಗೆ ‘ಪಲಾಹಾರ’ದ ಸವಿಯನ್ನು ಉಣ್ಣಿಸಿದೆ. ನಾನೂ ಉಂಡೆ.
ಪೂರ್ಣ ಓದಿಗೆ ಭೇಟಿ ಕೊಡಿ : ಬಿ ಎ ವಿವೇಕ ರೈ
ಈ ಹಣ್ಣುಗಳನ್ನು ಮಾರಾಟ ಮಾಡಲಿಲ್ಲ
ನಿಮಗೆ ಇವೂ ಇಷ್ಟವಾಗಬಹುದು…





0 Comments