ಯಾರು ಅ(ನ)ರ್ಹರು ಈ ಮೂವರೊಳಗೆ
ನಾ ದಿವಾಕರ
ಕಳೆದ ಮೂರು ವರ್ಷಗಳ ರಾಜ್ಯ ರಾಜಕಾರಣವನ್ನು ಮೇಲ್ನೋಟಕ್ಕೆ ಪರಾಮಶರ್ಿಸಿದರೂ ಸ್ಪಷ್ಟವಾಗಬಹುದಾದ ಒಂದು ಅಂಶವೆಂದರೆ, ಕನಿಷ್ಠ ಪಕ್ಷ ಕನರ್ಾಟಕದ ಮಟ್ಟಿಗೆ ರಾಜಕಾರಣ ತನ್ನೆಲ್ಲಾ ಮೌಲ್ಯಗಳನ್ನು ಕಳೆದುಕೊಂಡು ನಗ್ನವಾಗಿ ನಿಂತಿದೆ ಎಂಬ ವಾಸ್ತವ. ನಿಜ, ಇಡೀ ದೇಶವೇ ರಾಜಕೀಯ ಅಪಮೌಲ್ಯೀಕರಣದಿಂದ ಜರ್ಝರಿತಗೊಂಡಿದ್ದು, ಜಡಗಟ್ಟಿದ ಮನಸುಗಳು ದೇಶದ ಅಧಿಕಾರ ಗದ್ದುಗೆಯ ಮೇಲೆ ವಿರಾಜಮಾನವಾಗಿದೆ. ಆದರೆ ಕನರ್ಾಟಕದಷ್ಟು ಹದಗೆಟ್ಟ ವಾತಾವರಣ ಬಹುಶಃ ಯಾವುದೇ ರಾಜ್ಯದಲ್ಲಿ ಇರಲಿಕ್ಕಿಲ್ಲ. ಇಲ್ಲಿ ಎಲ್ಲವೂ ಸಾಧ್ಯ. ಸಂವಿಧಾನದ ಉಲ್ಲಂಘನೆ, ನ್ಯಾಯಾಂಗದ ಉಲ್ಲಂಘನೆ, ಜನಾದೇಶದ ಉಲ್ಲಂಘನೆ ಹೀಗೆ ಉಲ್ಲಂಘನೆಗಳ ಸಾಮ್ರಾಜ್ಯವಾಗಿಬಿಟ್ಟಿದೆ ಆರುಕೋಟಿ ಕನ್ನಡಿಗರ ನಾಡು. ಹೆಸರಾಯಿತು ಕನರ್ಾಟಕ ಉಸಿರಾಗಲಿ ಕನ್ನಡ ಎಂದು ಮಹನೀಯರೊಬ್ಬರು ಹೇಳಿದ್ದರು. ಆದರೆ ನಮ್ಮ ರಾಜಕಾರಣಿಗಳು ಕನರ್ಾಟಕದ ಹೆಸರನ್ನೂ ಕೆಡಿಸಿ ಉಸಿರನ್ನೂ ಕಟ್ಟಿಹಾಕಿಬಿಟ್ಟಿದ್ದಾರೆ. ತಪ್ಪು ಯಾರದು, ಅಪರಾಧಿಗಳು ಯಾರು, ಸಜ್ಜನರು (?) ಯಾರು, ಗೆಲುವು ಯಾರದು, ಸೋಲು ಯಾರದು ಈ ಎಲ್ಲ ಪ್ರಶ್ನೆಗಳು ಕೇವಲ ಕ್ಲೀಷೆ ಎನಿಸಿಬಿಡುವಷ್ಟು ಭ್ರಮನಿರಸನ ಸೃಷ್ಟಿಯಾಗಿದೆ.
11 ಜನ ಅನರ್ಹ ಶಾಸಕರು. ತಮ್ಮ ಮಾತೃ ಪಕ್ಷದಿಂದ ಬಂಡಾಯವೆದ್ದು, ಮುಖ್ಯಮಂತ್ರಿಗಳನ್ನು ಬದಲಾಯಿಸುವವರೆಗೂ ಹಿಂದಿರುಗುವುದಿಲ್ಲ ಎಂದು ಹಠ ಹಿಡಿದು, ವಿರೋಧ ಪಕ್ಷಗಳ ಆತಿಥ್ಯದಲ್ಲಿ ಪಂಚತಾರಾ ರೆಸಾಟರ್್ಗಳಲ್ಲಿ ಕಾಲ ವ್ಯಯ ಮಾಡಿ, ದೆಹಲಿ, ಚೆನ್ನೈ, ಗೋವಾ, ಹೈದರಾಬಾದ್ಗಳಲ್ಲಿ ವಿರಾಮ ಪಡೆದು, ತಮ್ಮ ಸಾಂವಿಧಾನಿಕ ಕರ್ತವ್ಯವನ್ನೂ ಮರೆತು, ಜನತೆಯನ್ನೂ ಕಡೆಗಣಿಸಿ, ಕೊನೆಗೆ ಸಕರ್ಾರದ ಪ್ರತಿಷ್ಠೆಯ ಪ್ರಶ್ನೆ ಎದುರಾದಾಗ ಭಿನ್ನಮತರೆಂದು ಗುರುತಿಸಿಕೊಂಡು, ವಿಧಾನಸಭಾಧ್ಯಕ್ಷರಿಂದ ಅನರ್ಹರೆಂದು ಪರಿಗಣಿಸಲ್ಪಟ್ಟ 11 ಶಾಸಕರು ಇಂದು ಏನಾಗಿದ್ದಾರೆ. ತಮ್ಮ ಬಂಡಾಯದ ಕಾವನ್ನು ರೆಸಾಟರ್್ಗಳ ಥಂಡಾ ಥಂಡಾ ಕೂಲ್ ವಿಸ್ಕಿ ಬಾಟಲಿಗಳಲ್ಲೇ ಮುಳುಗಿಸಿ ಪುನಃ ತಾವು ವಿರೋಧಿಸಿದ ಮುಖ್ಯಮಂತ್ರಿಗಳಿಗೇ ತಮ್ಮ ನಿಷ್ಠೆ ಪ್ರದಶರ್ಿಸಿದ್ದಾರೆ. ಈ ಪುರುಷಾರ್ಥಕ್ಕೆ ಈ ಶಾಸಕರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾದರೂ ಏಕೆ ? ನ್ಯಾಯಾಲಯಗಳಿಗೆ ಕೆಲಸ ಇಲ್ಲವೆಂದೇ ಅಥವಾ ವಕೀಲರು ನಿರುದ್ಯೋಗಿಗಳಾಗಿದ್ದಾರೆಂದೇ ? ಅನರ್ಹತೆಯ ಪಟ್ಟದಿಂದ ಜಾರಿ ಅರ್ಹರೆನಿಸಿಕೊಂಡ ಕೂಡಲೇ ಕಿಂಚಿತ್ತೂ ಎಗ್ಗಿಲ್ಲದೆ ತಮ್ಮ ಪೂವರ್ಾಶ್ರಮ ಸೇರಬಯಸಿದ ಈ ಶಾಸಕರಿಗೆ ಬಾಧ್ಯತೆಯೇ ಇಲ್ಲವೇ ? ಇವರ ಉತ್ತರದಾಯಿತ್ವ ಯಾರಿಗೆ ? ಸಂವಿಧಾನಕ್ಕೋ, ಜನತೆಗೋ, ಮತದಾರರಿಗೋ ? ಜನತೆ ತಾವು ಹೇಳಿದ್ದನ್ನೆಲ್ಲಾ ಆಲಿಸುತ್ತಾರೆ, ಮಾಡಿದ್ದನ್ನೆಲ್ಲಾ ಅರಗಿಸಿಕೊಳ್ಳುತ್ತಾರೆ ಎಂಬ ಅಹಂ ಇವರಲ್ಲಿರದಿದ್ದರೆ ಈ ಶಾಸಕರು ಈ ರೀತಿ ಮಾಡುತ್ತಿರಲಿಲ್ಲ. ಶಾಸಕರಾಗಿ ಮುಂದುವರೆಯಲು ಅರ್ಹತೆ ಪಡೆದಿರುವ ಈ ಜನನಾಯಕರು(!) ಪ್ರಜಾತಂತ್ರವನ್ನು ಪ್ರತಿನಿಧಿಸಲು ಅರ್ಹರೇ ಎಂಬುದೇ ಮೂರ್ತ ಪ್ರಶ್ನೆ.
ಇನ್ನು ವಿಧಾನಸಭಾಧ್ಯಕ್ಷ ಮಾನ್ಯ ಬೋಪಯ್ಯನವರು. ಸಾಮಾನ್ಯವಾಗಿ ಆಳುವ ಪಕ್ಷದವರೇ ಈ ಸ್ಥಾನವನ್ನು ಅಲಂಕರಿಸಿದರೂ ಈ ಪವಿತ್ರ ಸ್ಥಾನಕ್ಕೆ ಒಂದು ಘನತೆ, ಗೌರವ, ಸಾಂವಿಧಾನಿಕ ಮಾನ್ಯತೆ ಇದೆ ಎಂಬ ವಾಸ್ತವವನ್ನೇ ಅರಿಯದ ಒಬ್ಬ ವ್ಯಕ್ತಿ ಈ ಸ್ಥಾನವನ್ನು ಅಲಂಕರಿಸಿದರೆ ಏನಾಗಬಹುದು ಎಂಬುದಕ್ಕೆ ಬೋಪಯ್ಯ ನಿದರ್ಶನ. ಭಾರತದ ಸಂಸದೀಯ ಇತಿಹಾಸದಲ್ಲಿ ಲೋಕಸಭೆ-ವಿಧಾನಸಭೆಗಳಲ್ಲಿ ಈ ಸ್ಥಾನಕ್ಕೆ ಮೆರುಗು ನೀಡಿರುವ ಮಹನೀಯರು ಹೇರಳವಾಗಿದ್ದಾರೆ. ಆದರೆ ಬೋಪಯ್ಯ ಇತಿಹಾಸಕ್ಕೇ ಮಸಿ ಬಳಿಯುವಂತೆ ವತರ್ಿಸಿರುವುದು ಸವರ್ೋಚ್ಚ ನ್ಯಾಯಾಲಯದ ತೀಪರ್ಿನಲ್ಲಿ ವ್ಯಕ್ತವಾಗಿದೆ. ಸಂವಿಧಾನ ನಿಷ್ಠೆಗಿಂತಲೂ ಪಕ್ಷ-ಸ್ವಾಮಿ ನಿಷ್ಠೆಗೇ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಆ ಪದವಿಗೇ ಕಳಂಕ ತಂದ ಬೋಪಯ್ಯನವರು ನ್ಯಾಯಾಲಯದ ಛೀಮಾರಿಯ ನಂತರವೂ ತಮ್ಮ ಸ್ಥಾನದಲ್ಲಿ ಮುಂದುವರೆದಿರುವುದು ಅಪಚಾರವಷ್ಟೇ ಅಲ್ಲ ಅಪರಾಧವೂ ಹೌದು. 11 ಶಾಸಕರನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಅರ್ಹತೆಯನ್ನು ನಿರ್ಧರಿಸುವುದು ಯಾರು ? ಇದು ಮತ್ತೊಂದು ಪ್ರಶ್ನೆ.
ಇನ್ನು ವಿರೋಧ ಪಕ್ಷದಲ್ಲಿರುವವರನ್ನೆಲ್ಲಾ ಏನಾದರೂ ಮಾಡಿ ನಮ್ಮ ಪಕ್ಷಕ್ಕೆ ಕರೆತನ್ನಿ ಎಂದು ಮುಕ್ತವಾಗಿ ಘೋಷಿಸುವ ಮೂಲಕ ಆಪರೇಷನ್ ಕಮಲ ಪ್ರಕ್ರಿಯೆಯನ್ನು ಸಾರ್ವತ್ರೀಕರಣಗೊಳಿಸಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಕರ್ಾರ. ಸಾರ್ವಭೌಮ ಜನತೆ ಒಂದು ಪಕ್ಷಕ್ಕೆ ಆಳ್ವಿಕೆ ನಡೆಸುವ ಅವಕಾಶ ನೀಡುವುದು, ಚುನಾಯಿತ ಸಕರ್ಾರ ಸಂವಿಧಾನದ ತತ್ವಗಳಿಗೆ ಬದ್ಧವಾಗಿ ಜನತೆಯ ಆಶೋತ್ತರಗಳನ್ನು ಈಡೇರಿಸುತ್ತದೆ ಎಂಬ ಆಶಯದಿಂದ. ಆದರೆ ಈ ಆಶಯವನ್ನೇ ಅರಿಯದ ಪಕ್ಷವೊಂದು ಅಧಿಕಾರದ ಗದ್ದುಗೆ ಏರಿದಾಗ ಏನಾಗಬಹುದು ? ಯಡಿಯೂರಪ್ಪನವರ ಆಪರೇಷನ್ ಕಮಲಾಕ್ರಸಿ ಪ್ರೇರಿತ ಡೆಮಾಕ್ರಸಿ ಒಂದು ನಿದರ್ಶನ. ಒಂದು ವರ್ಷದ ಕಾಲ 11 ಶಾಸಕರ ಬೆಂಬಲವಿಲ್ಲದೆ ಅಕ್ರಮವಾಗಿ ಸಕರ್ಾರ ನಡೆಸಿದ್ದನ್ನೇ ಹಿರಿಮೆ ಎಂದು ಹೇಳಿಕೊಳ್ಳುವ ಮಟ್ಟಿಗೆ ತಮ್ಮ ನೈತಿಕತೆಯನ್ನು ಕಳೆದುಕೊಂಡಿರುವ ಹಾಲಿ ಭಾಜಪ ಸಕರ್ಾರ ಇನ್ನೂ ಅಧಿಕಾರದಲ್ಲಿ ಮುಂದುವರೆದಿದ್ದರೆ ಅದಕ್ಕೆ ಕಾರಣ ಅಧಿಕಾರ ದಾಹವಲ್ಲದೆ ಮತ್ತೇನು ? ರಾಷ್ಟ್ರಪತಿ ಆಳ್ವಿಕೆ ಹೇರುವುದು ಅಸಾಂವಿಧಾನಿಕವೇ. ನಿಜ. ಆದರೆ ಬಹುಮತವಿಲ್ಲದೆಯೇ ಅನರ್ಹ ಶಾಸಕರನ್ನು ಹೊರಗಿಟ್ಟು ಅಕ್ರಮ ಸಂತಾನದಿಂದ ಒಂದು ವರ್ಷ ಅಧಿಕಾರದ ಸವಿ ಅನುಭವಿಸಿದ್ದು ಸಾಂವಿಧಾನಿಕವಾಗಿ ಒಪ್ಪಿತವೇ ? ಇಲ್ಲ ಎಂದಾದಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡಬೇಕು. ನ್ಯಾಯಾಂಗದ ಕಾನೂನು ದೃಷ್ಟಿಯಲ್ಲಿ ಕನರ್ಾಟಕ ಸಕರ್ಾರ ಮುಂದುವರೆಯಲು ಯೋಗ್ಯವೇ ಇರಬಹುದು. ಆದರೆ ನೈತಿಕತೆಯ ದೃಷ್ಟಿಯಿಂದ, ಮೌಲ್ಯಗಳ (ಇದ್ದರೆ) ದೃಷ್ಟಿಯಿಂದ ಅಪೇಕ್ಷಿತವೇ ? ಇದು ಮೂರನೆಯ ಪ್ರಶ್ನೆ.
ಈ ಮೂರು ಪ್ರಶ್ನೆಗಳಿಗೂ ಸರಿಯಾದ ಉತ್ತರ ಹೇಳದೆ ಹೋದರೆ ,,,,,,,,,,, ಬೇತಾಳನ ಬೆದರಿಕೆ ಬೇಕಿಲ್ಲ.. ಈ ಮೂರು ವರ್ಗಗಳನ್ನು ನೋಡುತ್ತಿದ್ದರೆ ಕನ್ನಡಿಗರ ತಲೆ ತಂತಾನೇ ನುಚ್ಚು ನೂರಾಗುತ್ತದೆ.






0 Comments