ಈ ಮಣ್ಣಿನ ಲೇಖಕನಲ್ಲ.. 

‘ಧರ್ಮಶಾಸ್ತ್ರವೇ ನಮ್ಮ ಸಂವಿಧಾನ’ ಎಂದು ಎಸ್  ಎಲ್ ಭೈರಪ್ಪನವರು ಅಭಿಪ್ರಾಯಪಟ್ಟಿದ್ದಾರೆ. ಸುಮತೀಂದ್ರ ನಾಡಿಗರ ಕೃತಿ ಬಿಡುಗಡೆ ಮಾಡಿ ಅವರು ಈ ಮಾತುಗಳನ್ನಾಡಿದ್ದರು.

ಇದಕ್ಕೆ ವಿಮರ್ಶಕ ರೇಣುಕಾರಾಧ್ಯ ಎಚ್ ಎಸ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ

ಇವನಾರವ ! 
ರೇಣುಕಾರಾಧ್ಯ ಎಚ್ ಎಸ್

ಒಂದೂವರೆ ಸಾವಿರ ವರ್ಷಗಳಿಗಿಂಥ ಹೆಚ್ಚಿನ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಂಪರೆ ಯಾವುದೇ “ಧರ್ಮಶಾಸ್ತ್ರ ಪರಂಪರೆ” ಯನ್ನು ಅನುಸರಿಸಿಲ್ಲ, ಎಲ್ಲ ಧರ್ಮಶಾಸ್ತ್ರ ಪರಂಪರೆಗಳನ್ನು ಪ್ರಶ್ನಿಸುತ್ತಲೇ,ದಿಕ್ಕರಿಸುತ್ತಲೇ “ಮಾನವಧರ್ಮ”ದ ಘನತೆಯನ್ನು ಎತ್ತಿ ಹಿಡಿಯುತ್ತಲೇ ಬಂದಿದೆ.

ಕನ್ನಡದ ಮೊದಲ ಕಾವ್ಯವಾದ ” ಆದಿಪುರಾಣ”ದಲ್ಲಿ ಪಂಪ ಪ್ರಭುತ್ವ ಮತ್ತು ಕುಲವನ್ನು ಪ್ರಶ್ನಿಸುತ್ತಾನೆ, ದಿಕ್ಕರಿಸುತ್ತಾನೆ.

ಹೊಸಗನ್ನಡದ ಮೊದಲ ಕಾದಂಬರಿ  “ಇಂದಿರಾಬಾಯಿ/ ಸದ್ಧರ್ಮ ವಿಜಯ”ದ ಕಥಾವಸ್ತುವೇ ಹಿಂದೂಧರ್ಮಶಾಸ್ತ್ರ ಯಾವುದನ್ನು ದಿಕ್ಕರಿಸಿತ್ತೊ ಅಂತಹ “ವಿಧವಾವಿವಾಹ” ವನ್ನು ಒಪ್ಪಿಕೊಂಡು,ಹೆಣ್ಣಿನ ಘನತೆಯನ್ನು ಎತ್ತಿಹಿಡಿಯುವುದು ಆಗಿದೆ.

ಕನ್ನಡ ಸಂಸ್ಕೃತಿ ಪರಂಪರೆ ತನ್ನ ಆರಂಭದಿಂದಲೂ ಕೂಡ ಮನುಷ್ಯವಿರೋಧಿ ಧರ್ಮಶಾಸ್ತ್ರಗಳನ್ನು ದೂರ ಇಟ್ಟು, ಮಾನವೀಯಪರವಾದ ಸಂವಿಧಾನ ತತ್ವಗಳನ್ನು ತನ್ನೊಳಗೆ ಇಟ್ಟುಕೊಂಡು, ಸಂವಿಧಾನ ಬದ್ಧವಾಗಿ ನಡೆಯುತ್ತಿದೆ.

ಇಂಥ ಸಂಸ್ಕೃತಿಯನ್ನು ಒಪ್ಪದಿರುವ ಮತ್ತು ಅದನ್ನು ತನ್ನ ಬರಹದಲ್ಲಿ ತರದವನು ಆತ ಎಂತಹ ದೊಡ್ಡ ಲೇಖಕ ಅನ್ನಿಸಿಕೊಂಡಿದ್ದರೂ ಅವನು ಈ ಮಣ್ಣಿನ ಲೇಖಕ/ ಬರಹಗಾರನಲ್ಲ.

ಏಕೆಂದರೆ ಕನ್ನಡ ಸಾಹಿತ್ಯ / ಭಾಷೆ ಮಾನವೀಯ ಪರಂಪರೆಯನ್ನು, ಬಾಬಾ ಸಾಹೇಬರ ಸಂವಿಧಾನ ಬದ್ಧ ಧೋರಣೆಗಳನ್ನು ಎತ್ತಿಹಿಡಿಯುವ ಭಾಷೆಯೇ ಹೊರತು, ಯಾವುದೋ ಧರ್ಮಶಾಸ್ತ್ರ ಪರಂಪರೆಯನ್ನು ಎತ್ತಿ ಹಿಡಿಯುವ ಪರಂಪರೆಯಲ್ಲ…

‍ಲೇಖಕರು avadhi

April 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: