ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಈ ಬದುಕು ಬಲು ಭಾರ’ – ಸುಜಾತಾ ವಿಶ್ವನಾಥ್

ಸುಜಾತಾ ವಿಶ್ವನಾಥ್

ಸೈಟಿನ ಬೆಲೆ ವಿಪರೀತ ಏರಿಕೆ ಯಾಗುತ್ತಿರುವುದರಿಂದ ಮಧ್ಯಮ ವರ್ಗದ ಜನಕ್ಕೆ ಮನೆ, ಸೈಟು ಮಾಡೋದೋ ಕನಸಿನ ಮಾತೇ ಸರಿ. ಹೀಗಾಗಿ ಬಾಡಿಗೆ ಮನೆ ಹುಡುಕಾಟ, ಕಡಿಮೆ ಬಾಡಿಗೆ ಮನೆ ಎಲ್ಲಿ ಸಿಗುವುದೆಂದು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ ಬಾಡಿಗೆದಾರರು. ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ, ಕಡಿಮೆ ಬಾಡಿಗೆಯ ವಸತಿಯನ್ನು ವ್ಯವಸ್ಥೆ ಮಾಡಬೇಕಿದ್ದ, ನಮ್ಮರಾಜಕೀಯ ನಾಯಕರುಗಳು ಅವರವರ ಒಳ ಜಗಳ, ಹಣ ಮಾಡುವಲ್ಲಿ ಮುಂದಾಗಿದ್ದಾರೆಯೇ ವಿನಃ ಈ ವಿಭಾಗದಲ್ಲಿ ಅಭಿವೃದ್ಧಿಪಡಿಸುವ ಮಾರ್ಗವನ್ನೇ ಯೋಚಿಸುತ್ತಿಲ್ಲ. ಈಗ ಚುನಾವಣೆ ಬಂದಿದೆ ಪ್ರಜೆಗಳ ಹಣವನ್ನು ನೀರಿನಂತೆ ಖರ್ಚು ಮಾಡಿ ಗದ್ದುಗೆ ಏರಿಬಿಡುತ್ತಾರೆ. ಎಲ್ಲಿಯ ಪ್ರಜೆಗಳು? ಎಲ್ಲಿಯ ಪ್ರಜಾಪ್ರಭುತ್ವ? ಎಲ್ಲಿಯ ಅಭಿವೃದ್ಧಿಯ ಕೆಲಸ ?. ಎಲ್ಲಾ ಪಕ್ಷಗಳಿಗೂ ಅವರದೆ ಆದ ಸಿದ್ಧಾಂತಗಳಿವೆ. ಆದರೂ ಎಲ್ಲಾ ಪಕ್ಷಗಳೂ ಸಹ ಒಂದಿಲ್ಲೊಂದು ಭ್ರಷ್ಠ ಪ್ರಕರಣಗಳನ್ನು ಎದುರಿಸುತ್ತಲೇ ಇವೆ. ಜನಸಾಮಾನ್ಯನ ಅಳಲು ಕಾಣುತ್ತಿಲ್ಲ. ಮತದಾರರೇ ಈಗಲಾದರೂ ಎಚ್ಚೆತ್ತುಕೊಳ್ಳಿ, ನಿಮ್ಮ ಮತಗಳನ್ನು ಇಲ್ಲದ ಆಮಿಷಗಳಿಗೆ ಬಲಿಕೊಡಬೇಡಿ ಉತ್ತಮ ನಾಯಕನ ಆಯ್ಕೆ ಮಾಡಿ, ಉತ್ತಮ ಸಮಾಜ ಹಾಗೂ ನಿಮ್ಮ ಬದಕನ್ನು ಅಸನು ಮಾಡಿಕೊಳ್ಳಿ. ಇಲ್ಲಿ ಹೆಚ್ಚಿನ ಗಮನ ಹರಿಸಬೇಕಾದವರು ನಮ್ಮ 18ರ ಹರೆಯದ ಯುವ ಪೀಳಿಗೆ, ನಿಮ್ಮಿಂದ ಸಾಧಿಸಲಾರದ್ದೇನೂ ಇಲ್ಲ. ನೀವು ನಿಮ್ಮ ಜವಾಬ್ದಾರಿಯನ್ನು ಅರಿತು ಉತ್ತಮ ರಾಜಕಾರಣಿಯನ್ನು ಆಯ್ಕೆ ಮಾಡಿ. ಉತ್ತಮ ಸಮಾಜದ ನಿಮಾರ್ಣ ಮಾಡಿ.

ಹೊಸದಾಗಿ ಯಾವುದೋ ಒಂದು ವಾಹನ ನಿಲ್ದಾಣ ಮಾಡುವುದೇ ಒಂದು ಅಭಿವೃದ್ಧಿಯೇ? ಇಲ್ಲ ಒಂದು ರಸ್ತೆ ಮಾಡುವುದೇ ಒಂದು ಸಾಧನೆಯೇ? ಹಳ್ಳಿ ಜನ ನೀರಿಗಾಗಿ ಹಾಹಕಾರ ಶುರುವಿಟ್ಟಿದ್ದಾರೆ, ಇವರ ಕಣ್ಣಿಗೆ ಬೀಳುತ್ತಿಲ್ಲವೆ? ಐದು ವರ್ಷದಲ್ಲಿ ನಾಲ್ಕು ಮುಖ್ಯಮಂತ್ರಿಗಳ ಬದಲಾವಣೆ, ಇದೇ ಈ ಪಕ್ಷದ ಸಾಧನೆಯೇ? ಯಾವ ಪಕ್ಷಗಳು ಇಲ್ಲಿ ಹೊರತಲ್ಲ ರೈತರ ಮಕ್ಕಳು, ಮಣ್ಣಿನ ಮಕ್ಕಳು, ಮತ್ತು ರೈತ ಸಮುದಾಯದಿಂದ ಬೆಳೆದು ಬಂದವರೂ ಕೂಡ ಒಂದು ಹಂತಕ್ಕೆ ಬಂದ ಮೇಲೆ ತಿರುಗಿಯು, ನೋಡುವುದೇ ಇಲ್ಲ ತಾವು ಬೆಳೆದು ಬಂದ ಹಾದಿಯನ್ನ. ಆದರೆ ರೈತಾಪಿ ವರ್ಗಗಳು ಎಷ್ಟೋ ಕಷ್ಟದಲ್ಲಿವೆ ಯಾರು ಕೇಳುತ್ತಿದ್ದಾರೆ ಅವರ ಗೋಳನ್ನ. ಎಲ್ಲ ಗುಳೆ ಎದ್ದು ಪಟ್ಟಣಕ್ಕೆ ಬರುತ್ತಿದ್ದಾರೆ ಜನ. ಹೀಗಲಾದರೂ ನಮ್ಮ ಜನಸಾಮಾನ್ಯ ಎಚ್ಚೆತ್ತುಕೊಂಡು, ಸರಿಯಾದ ನಾಯಕರ ಆಯ್ಕೆ ಮಾಡುವರೆ? ಯಾವ ಆಮಿಷಗಳಿಗೂ ಬಲಿಯಾಗದೆ, ತಮ್ಮ ತಮ್ಮ ಮತದ ಹಕ್ಕನ್ನು ಅರಿತು ಚಲಾಯಿಸಿ ಒಳ್ಳೆಯ ನಾಯಕರ ಆಯ್ಕೆ ಮಾಡುವರೇ?.ಇನ್ನೂ ಪಟ್ಟಣದ ಮಧ್ಯಮ ವರ್ಗದ ಬದುಕು ಬಹಳ ದುಬಾರಿಯಾಗುತ್ತಿದೆ! ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನೇ ದಿನೆ ಗಗನಕ್ಕೇರುತ್ತಿವೆ. ವಿದ್ಯುತ್, ಗ್ಯಾಸ್, ಪೆಟ್ರೋಲ್, ಡೀಸೆಲ್ ಹೀಗೆ ಎಲ್ಲವೂ ಗಗನಮುಖಿಯಾಗಿ ನಿಂತಿವೆ. ಹೀಗಿರುವಾಗ ಜನಸಾಮಾನ್ಯನಾದವನು ಬದುಕುವುದಾದರೂ ಹೇಗೆ? ಆ ಕಾರಣಕ್ಕಾಗಿಯೇ ಬದುಕು ಬಲು ಭಾರವಾಗುತ್ತಿದೆ.

ಇದು ಒಂದೆಡೆಯಾದರೆ ಮತ್ತೊಂದೆಡೆ ನಗರ ಪ್ರದೇಶಗಳಲ್ಲಿ ಬಾಳುವವರ ಬದುಕು ಇನ್ನೂ ಅಯೋಮಯವಾಗಿದೆ. ದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಳದ ಜತೆಗೆ ಮನೆಗಳ ಬಾಡಿಗೆ ಕೂಡ ವ್ಯಾಪಕವಾಗಿ ಆಕಾಶದೆತ್ತರಕ್ಕೆ ಏರುತ್ತಲೇ ಇದೆ. ಇಲ್ಲಿ ಇದಕ್ಕಿಂತ ಮುಖ್ಯವಾಗಿ ಈ ಬಾಡಿಗೆ ಹೆಚ್ಚಳಕ್ಕೂ ಮಿತಿ ಹೇರುವವರು ಇಲ್ಲವಾಗಿದೆ. ಹೀಗಾಗಿ ಸಿಲಿಕಾನ್ ಸಿಟಿಯಂಥ ನಗರಗಳಲ್ಲಿ ಮನೆ ಮಾಲೀಕರು ಮನ ಬಂದಂತೆ ಬಾಡಿಗೆ ಹೆಚ್ಚಳ ಮಾಡುತ್ತಿರುವುದರಿಂದ ಶ್ರೀಸಾಮಾನ್ಯರು ಬದುಕಲುಕೂಡ ಹರಸಾಹಸ ಪಡುವಂತಾಗಿದೆ. ಇದರ ನಡುವೆ ಅನ್ಯರಾಜ್ಯಗಳಿಂದ ಉನ್ನತ ಶಿಕ್ಷಣಕ್ಕೆ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಹೀಗೆ ಬರುವ ವಿಧ್ಯಾರ್ಥಿಗಳು ಹೆಚ್ಚಾಗಿ ಶ್ರೀಮಂತ ಕುಟುಂಬದ ಮಕ್ಕಳೇ ಆಗಿರುವುದರಿಂದ ಅವರಿಗೆ ಇಲ್ಲಿ ಹೆಚ್ಚು ಬಾಡಿಗೆ ನೀಡಲು ಅವರಿಗೇನು ತೊಂದರೆಯಾಗುವುದಿಲ್ಲ!(?). ಜತೆಗೆ ಹಲವಾರು ವಿದ್ಯಾರ್ಥಿಗಳು ಒಟ್ಟಿಗೆ ಒಂದೇ ಮನೆಯಲ್ಲಿ (ಇಲ್ಲಿ ಹುಡುಗ ಹುಡುಗಿಯರೂ ಒಟ್ಟಿಗೆ ಇರುತ್ತಾರೆ. ಇದನ್ನು ಲಿವಿಂಗ್ ರಿಲೇಷನ್ಶಿಪ್ ಎಂಥಲೂ ಕರೆಯುತ್ತ ಆ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಿದ್ದೇವೆ!) ನೆಲೆಸುವುದರಿಂದ ಬಾಡಿಗೆ ಅವರಿಗೆ ಹೆಚ್ಚು ಎಂದು ಅನ್ನಿಸುವುದೇ ಇಲ್ಲ. ವಿದ್ಯಾಭ್ಯಾಸದ ನಂತರ ಅವರು ಇಲ್ಲಿಯೇ ಉದ್ಯೋಗ ಹುಡುಕಿಕೊಳ್ಳುತ್ತಿದ್ದಾರೆ.

ಹೀಗಾಗಿ ಮನೆ ಮಾಲೀಕರಿಗೂ ಸಲೀಸಾಗಿ ಹೆಚ್ಚು ಬಾಡಿಗೆ ಬರುತ್ತದೆ. ಜತೆಗೆ ಇಂಥ ವಿದ್ಯಾರ್ಥಿಗಳಿಗೂ ಸ್ವೇಚ್ಛಾಚಾರದಿಂದ ಬದುಕಲು ಮನೆ ಮಾಲೀಕರೇ ಅನುವು ಮಾಡಿಕೊಡುತ್ತಿದ್ದಾರೆ! ಈ ಎಲ್ಲ ಕಾರಣಗಳಿಂದಾಗಿ ದಿನೇ ದಿನೆ ಎಗ್ಗಿಲ್ಲದೆ ಮನೆ ಬಾಡಿಗೆಯನ್ನು ಸಾಮೂಹಿಕವಾಗಿ ಮನಸೋ ಇಚ್ಛೆ ಹೆಚ್ಚಳ ಮಾಡಲಾಗುತ್ತಿದೆ. ಇದರಿಂದಾಗಿ ಸಾಮಾನ್ಯ ವರ್ಗದ ಕುಟುಂಬಗಳು ಬಾಡಿಗೆ ಮನೆಯಲ್ಲೂ ಬದುಕಲಾಗದೆ ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಮನೆ ಬಾಡಿಗೆಯನ್ನು 11 ತಿಂಗಳಿಗೆ ಒಂದು ಬಾರಿಯಂತೆ ಶೇ.3ರಿಂದ ಶೇ.5 ಹೆಚ್ಚಳ ಮಾಡಬೇಕಿರುವುದು ಕಾನೂನು. ಆದರೆ ಇತ್ತೀಚೆಗೆ ಕೆಲವು ಮನೆ ಮಾಲೀಕರು ಶೇ.10ರಿಂದ ಶೇ.15ರ ವರೆಗೆ ಬಾಡಿಗೆ ಹೆಚ್ಚಳ ಮಾಡುತ್ತಿದ್ದಾರೆ. ಬಾಡಿಗೆ ಹೆಚ್ಚಳಕ್ಕೆ ಒಪ್ಪಿಗೆ ನೀಡದಿದ್ದರೆ ವಿನಾಃಕಾರಣ ನೀಡಿ ಮನೆ ಖಾಲಿ ಮಾಡಿಸುತ್ತಿದ್ದಾರೆ! ಆದರೆ ಇಂಥ ವಿಚಾರಗಳ ಬಗ್ಗೆ ದೂರು ನೀಡಲು ಬಾಡಿಗೆ ದಾರರಿಗೆ ಯಾವುದೇ ವೇದಿಕೆಗಳಿಲ್ಲ. ಮನೆಗಳಿಗೆ ಬರುವ ಮುನ್ನ ಕನಿಷ್ಠ 70 ರಿಂದ 80ಸಾವಿರ ರೂ. ಮುಂಗಡ ಹಣ ಪಾವತಿ ಮಾಡಿರುವ ಕಾರಣ ಮನೆ ಮಾಲಿಕರ ಜತೆಗೆ ಅನಾವಶ್ಯಕವಾಗಿ ತಗಾದೆ ಸೃಷ್ಟಿ ಮಾಡಿಕೊಳ್ಳುವುದೇಕೆ ಎಂದು ಸುಮ್ಮನಾಗುತ್ತಿದ್ದಾರೆ! ಇದರಿಂದಾಗಿ ಈ ಬಾಡಿಗೆ ಹೆಚ್ಚಳದ ಮೇಲೆ ಹಿಡಿತವೇ ಇಲ್ಲದಾಗಿದೆ.

ಹಿಂದೆ ರೆಂಟ್ ಕಂಟ್ರೋಲ್ ಪದ್ಧತಿ ಇತ್ತು. 1941ರಲ್ಲಿ ಬಾಡಿಗೆ ನಿಯಂತ್ರಣ ಕಾಯಿದೆಯನ್ನು ರೂಪಿಸಿಲಾಯಿತು. ಆದರೆ ಇದನ್ನು ವರ್ಷ ವರ್ಷ ನವೀಕರಿಸದರಾದರೂ, ಬಹು ಕಾಲ ಇದು ರೂಪುಗೊಳ್ಳಲೇ ಇಲ್ಲ. ಆದರೆ ಪ್ರಮುಖ ನಗರಗಳಾದ ಮುಂಬೈ, ಕೋಲ್ಕತಾದಂತಹ ಮಹಾನಗರಗಳಲ್ಲಿ ಬಾಡಿಗೆದರ ವಿರೀತ ಏರಲಾರಂಭಿಸಿತು, ಇದಕ್ಕಾಗಿಯೇ 1960ರಲ್ಲಿ ಬಾಡಿಗೆ ನಿಯಂತ್ರಣ ಕಾಯಿದೆ ಜಾರಿಗೆ ಬಂತು. ಈ ಕಾಯಿದೆ ಇರುವ ವರೆಗೂ ಮದ್ಯಮ ವರ್ಗದವರ ಬದುಕು ಸ್ವಲ್ಪ ಸುದಾತಿಸಿತ್ತು. ಆದರೆ ಅದನ್ನು ತೆಗೆದು ಹಾಕಿದ ನಂತರ ಬಾಡಿಗೆ ಹೆಚ್ಚಳದ ಮೇಲಿನ ನಿಯಂತ್ರಣವೇ ಕೈತಪ್ಪಿ ಹೋಗಿದೆ. ಆಗ ಅದಕ್ಕೊಂದು ನೀತಿ ನಿಯಮಗಳಿತ್ತು. ಆದರೆ ಇದು ವಿಪಲವಾದ ಕಾರಣ ಮತ್ತೆ ಬಾಡಿಗೆದಾರ ಸಂಕಷ್ಟದಲ್ಲಿ ಸಿಲುಕಿದ. ಬಾಡಿಗೆ ದಾರರು ತಮ್ಮ ಈ ಖಾಸಗಿ ಅಳಲನ್ನು ಎಲ್ಲಿ ಹೋಗಿ ಹೇಳುವುದು ಎನ್ನುವುದೇ ತೋಚದೆ ಒಳಗೇ ನುಂಗಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.ಒಂದು ರೂಮು ಹೊಂದಿರುವ ಮನೆ ಬಾಡಿಗೆ 6000 ರೂ. ರಿಂದ 7000 ರೂ. ಸಾವಿರ ರೂಪಾಯಿಗಳು. ಎರಡು ರೂಮು ಇರುವ ಮನೆ 8500/- ರಿಂದ 10,000 ಸಾವಿರ ರೂಪಾಯಿಗಳಾಗಿವೆ.

ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿರುವಾಗ ದುಡಿಮೆಯಿಂದ ಬಂದ ಹಣವನ್ನು ಸಂಪೂರ್ಣವಾಗಿ ಮನೆ ಬಾಡಿಗೆಯನ್ನೇ ಕಟ್ಟಿದರೆ ಹೊಟ್ಟೆಗೆ ತಿನ್ನುವುದಾದರೂ ಏನನ್ನು? ಜತೆಗೆ ಮಕ್ಕಳ ವಿದ್ಯಾಭ್ಯಾಸಕೂಡ ಗಗನ ಕುಸುಮವಾಗಿದೆ. ಹೀಗಿರುವಾಗ ಮಕ್ಕಳಿಗೆ ವಿದ್ಯಾಭ್ಯಾಸ ಎಲ್ಲಿಂದ ಕೊಡಿಸುವುದು!?ಈ ಎಲ್ಲ ಕಾರಣಗಳಿಂದ ಪ್ರತಿಸಾಮಾನ್ಯ ವರ್ಗದ ಕುಟುಂಬಗಳೂ ಶ್ರೀಮಂತರಲ್ಲಿ, ಬ್ಯಾಂಕ್ಗಳಲ್ಲಿ, ಖಾಜಾನೆಗಳಲ್ಲಿ ಸಾಲದ ಮೊರೆ ಹೋಗುತ್ತಿವೆ. ಕೊನೆಗೆ ಆ ಸಾಲ ತೀರಿಸಲಾಗದೆ ಕ್ಷುಲ್ಲಕ ಕಾರಣಕ್ಕೆ ಕಲಹ ಶುರುವಿಟ್ಟುಕೊಂಡು ಇಡೀ ಕುಟ್ಟುಂಬಗಳು ಆತ್ಮಹತ್ಯೆಯ ಹಾದಿ ಹಿಡಿಯುತ್ತಿವೆ. ಮತ್ತೆ ಕೆಲವರು ವಂಚನೆಯ, ಕಳ್ಳತನದ ಹಾದಿ ಹಿಡಿಯುತ್ತಿದ್ದಾರೆ. ಆದ್ದರಿಂದ ಮೊದಲು ಸರ್ಕಾರ ಬಾಡಿಗೆ ಮನೆಗಳ ಮೇಲೆ ಮೊದಲಿನಂತೆ ರೆಂಟ್ಕಂಟ್ರೋಲ್ ನೀತಿಯನ್ನು ಜಾರಿಗೊಳಿಸಿ ಬಾಡಿಗೆದಾರರ ಹಿತಕಾಯಬೇಕಿದೆ. ಇಲ್ಲದಿದ್ದರೆ ನಗರದಲ್ಲಿ ಆತ್ಮಹತ್ಯೆ, ವಂಚನೆ, ಸುಲಿಗೆಯಂಥ ಅಪರಾದ ಕೃತ್ಯಗಳು ಹೆಚ್ಚುತ್ತಲೇ ಇರುತ್ತವೆ. ಚುನಾವಣೆಯ ಸಂದಂರ್ಭದಲ್ಲೂ ಯಾರು ಇದರ ಬಗ್ಗೆ ಮಾತನಾಡುವುದನ್ನು ನಾವು ಎಲ್ಲಿಯೂ ಕೇಳಿಲ್ಲ. ಈ ಮಾಯಾನಗರಿಯಲ್ಲಿ ಹೆಚ್ಚು ಜನ ಬಾಡಿಗೆ ಮನೆಯಲ್ಲಿಯೆ ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ.

ಈಗಲಾದರೂ ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳುವವೋ ನಮ್ಮ ರಣರಂಗದಲ್ಲಿರುವ ಪಕ್ಷಗಳು. ಇದು ಸಾಮಾನ್ಯ ವಿಷವೇನಲ್ಲ ಇದರ ಅವಶ್ಯಕತೆ ನಮ್ಮ ಮಧ್ಯಮ ವರ್ಗದ ಜನ ಸಾಮಾನ್ಯನಿಗೆ ಬಹಳ ಮುಖ್ಯವಾಗಿ ಬೇಕಾಗಿರುವ ಮೂಲ ಸೌಕರ್ಯಗಳಲ್ಲಿ ಮುಖ್ಯವಾದದ್ದು. ಈ ಅಂಶವನ್ನು ಮುಂದೆ ಗೆದ್ದು ಬರುವ ಪಕ್ಷ ಈ ರೆಂಟ್ ಕಂಟ್ರೋಲ್ ಪದ್ಧತಿಯನ್ನು ಜಾರಿಗೆ ತಂದು ಸಾಮಾನ್ಯನ ಜನಸಾಮಾನ್ಯನ ಕೈ ಹಿಡಿಯಬೇಕಿದೆ. ಒಮ್ಮೆ ಬಾಡಿಗೆ ಮನೆಗಳಿಗೆ ಬೇಟಿ ಕೊಟ್ಟು ನೋಡಿ ಆ ಮನೆಗಳಿಗೆ ಅಷ್ಟು ಬಾಡಿಗೆ ಕೊಡಬಹುದೇ ಎಂಬ ಅಂಶ ನಿಮ್ಮ ಅರಿವಿಗೆ ಬರುತ್ತದೆ. ಈಗ ಉಚಿತ ಕಡ್ಡಾಯ ಶಿಕ್ಷಣವನ್ನು ಜಾರಿ ಮಾಡಿದೆ. ಪಡಿತರದಲ್ಲಿ ಅಕ್ಕಿಯನ್ನು 1 ರೂಗೆ ಕೊಡುವಂತೆ ಜಾರಿ ಮಾಡಿದ್ದಾರೆ. ಹಾಗೆಯೇ ಇದನ್ನು ಸೂಕ್ತವಾಗಿ ಆಲೋಚಿಸಿ ರೆಂಟ್ ಕಂಟ್ರೋಲ್ ಪದ್ಧತಿ ಜಾರಿ ಮಾಡಿದರೆ ಸಾಮಾನ್ಯನ ಬದುಕು ಸುಗಮವಾಗುತ್ತದೆ. ಈ ಎಲ್ಲಾ ವರ್ಗದ ಜನರ ನೋವು ನಲಿವುಗಳಿಗೆ ಸ್ಪಂದಿಸಿದರೆ ಸಾಕು. ಸ್ವಾರ್ಥಬಿಟ್ಟು ಕೆಲಸ ಮಾಡುವರೇ? ಕಾದು ನೋಡಬೇಕಿದೆ.

‍ಲೇಖಕರು avadhi

5 April, 2014

2 Comments

  1. kannika sripathy

    edu yochane maduva vichara, chennagi barediddare.

  2. sujatha

    ಈ ಲೇಖನ ಪ್ರಕಟವಾದ ಒಂದು ತಿಂಗಳಲ್ಲಿಯೇ, ಈ ವಿಷಯವನ್ನು ಈಟಿವಿ ಕನ್ನಡ ನ್ಯೂಸ್ ನಲ್ಲಿ ಚಚೆ೵ಯಾಗಿದ್ದು, ಇನ್ನೂ ಒಂದು ವಾರದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಯವರಲ್ಲಿ ಮಾತಾಡಿ, ರೆಂಟ್ ಕಂಟ್ರೋಲ್ ಪದ್ಧತಿಯನ್ನು ಜಾರಿಗೆ ತರುತ್ತೇವೆ ಎಂಬ ಸುದ್ಧಿ ನನಗೆ ಖುಷಿ ಕೊಟ್ಟಿದೆ. ಈಟಿವಿ ನ್ಯೂಸ್ ಚಾನೆಲ್ ನಲ್ಲಿ ಈ ಕಾಯ೵ಕ್ರಮವನ್ನು ಆಯೋಜಿಸಿದ ಎಲ್ಲಾ ಸಿಬ್ಬಂದಿಯವರಿಗೂ ನನ್ನ ಧನ್ಯವಾದಗಳು. ಹಾಗೆ ಈ ಪತ್ರಿಕೆಯಲ್ಲಿ ನನ್ನ ಈ ಲೇಖನ ಪ್ರಕಟಗೊಳಿಸಿದ್ದಕ್ಕೂ ಪತ್ರಿಕೆಯವರಿಗೂ ನನ್ನ ಧನ್ಯವಾದಳು…ಾದಷ್ಟು ಬೇಗ ಕಾಯ್ದೆ ಜಾರಿಗೆ ಬಂದು ಮಧ್ಯಮ ವಗ೵ದ ಜನಕ್ಕೆ ಸಹಾಯವಾದರೆ ನಮಗಷ್ಟೆ ಸಾಕು….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading