ಮನದಲ್ಲಿ ನಿಂತ ಕೃಷ್ಣೆಗೌಡ್ರು…

ನಾಗೇಂದ್ರ ಶಾನ್

ಪಂಚಮವೇದ ಸಿನೆಮ ಚಿತ್ರೀಕರಣದ ತಯಾರಿ. ಪಿ.ಎಚ್‌.ವಿಶ್ವನಾಥ್‌ ಮೊದಲ ನಿರ್ದೇಶನ. ನಾನು ಮತ್ತು ನೀರ್ನಳ್ಳಿ ರಾಜು ಆ ಚಿತ್ರಕ್ಕೆ ಸಹ ನಿರ್ದೇಶಕರು. ಸುಧಾರಾಣಿ, ರಮೇಶ್‌, ರಾಮಕೃಷ್ಣ ಹೊರತಾಗಿ ಇನ್ನೂ ಅನೇಕ ಮುಖ್ಯ ಪಾತ್ರಗಳ ಆಯ್ಕೆಗೆ ನಮಗೆ ಹೇಳಿದ್ದರು. ಆದ್ರೆ ಚಿತ್ರೀಕರಣದ ಅಷ್ಟೂ ದಿವಸ ಅವರು ನಮ್ಮೊಟ್ಟಿಗೆ ಇರಬೇಕು.

ಅಂದಾಜು 40 ದಿನ ಅಂಥವರನ್ನು ಹುಡುಕಿ ಅಂದಿದ್ರು. ಅವರಿಗೂ ಮೊದಲ ಸ್ವತಂತ್ರ ನಿರ್ದೇಶನದ ಚಿತ್ರವಾದ್ದರಿಂದ ಯಾವಾಗ ಯಾವ ದೃಶ್ಯಗಳನ್ನು ಚಿತ್ರೀಕರಸ್ತಿನೊ ಗೊತ್ತಿಲ್ಲ. ಆದ್ದರಿಂದ ಎಲ್ಲ ಮುಖ್ಯ ಕಲಾವಿದರೂ ಅಷ್ಟು ದಿವಸ ಜೊತೆಗಿರಲಿ ಅಂದಿದ್ರು. ನಾನು ನಾಯಕಿಯ ತಂದೆಯ ಪಾತ್ರಕ್ಕೆ ಕೃಷ್ಣೆಗೌಡ್ರನ್ನ ಸೂಚಿಸಿದ್ದೆ. ಪಾತ್ರಕ್ಕೆ ಸರಿಯಾದ ಆಯ್ಕೆ. ನಮ್ಮ ಕಂಡೀಷನ್‌ಗೆ ಅವರು ಒಪ್ತರಾ ಅಂತ ತಿಳ್ಕೊಳಿ ಅಂದ್ರು ನಿರ್ದೇಶಕರು. ಆಗಿನ್ನೂ ಉದ್ಯೋಗದಲ್ಲಿದ್ರು ಗೌಡ್ರು.

ರಂಗಭೂಮಿಯ ಗೆಳೆತನವಿದ್ದರಿಂದ ನಾನು ಅವರಲ್ಲಿ ಹೋಗಿ ಹೀಗೀಗೆ ಅಂದೆ. ನಾಳೆ ತಿಳಸ್ತಿನಿ ಅಂದ್ರು. ಮಾರನೆ ದಿನ ಹೋದ್ರೆ ಆಗಲಿ ಅಂತ ಒಪ್ಪಿದರು. ಸಂಭಾವನೆ ವಿಚಾರ ಅಂದಾಗ. ಅದೆಲ್ಲ ಆಮೇಲೆ ನೋಡಣ. ಯಾವತ್ತಿಂದ ಚಿತ್ರೀಕರಣ? ಯಾಕಂದ್ರೆ ಅಷ್ಟೂ ದಿನ ರಜಾ ಹಾಕಕೆ ನಾನು ಇಲ್ಲಿ ಮುಂಚಿತವಾಗಿ ತಯಾರಿ ನಡಸಬೇಕು ಅಂದ್ರು. ಆಗ ಮುಖ್ಯ ಪಾತ್ರದ ಆಯ್ಕೆಯ ದೊಡ್ಡ ನಿರಾಳತೆ ನಮಗೆಲ್ಲ. ಕುಂದಾಪುರದಲ್ಲಿ 35 ದಿನಗಳ ಚಿತ್ರೀಕರಣವಾಯ್ತು. ಅಷ್ಟೂ ದಿವಸ ಅವರ ಪಾತ್ರದ ಚಿತ್ರೀಕರಣವಿರಲಿ ಇಲ್ಲದಿರಲಿ ಬೆಳಗ್ಗೆ ವಾಕಿಂಗ್‌ ಮುಗಿಸಿ 6 ಕ್ಕೆಲ್ಲ ಸಿಧ್ದರಾಗಿ ನಮ್ಮೊಟ್ಟಿಗೆ ಬಂದ್ಬಿಡೋರು.

ಒಂದು ದಿವಸಕ್ಕೂ ನನ್ನ ಶೂಟಿಂಗ್‌ ಮಾಡ್ಲಿಲ್ಲ ನೀವು… ನಂದ್ಯಾವಾಗಾಂತ ಕೇಳ್ಳಿಲ್ಲ. ಒಟ್ಟಾರೆ ಅವರ ಪಾತ್ರದ ಕೆಲಸವಾಗಿದ್ದು ಹತ್ತನ್ನೆರಡು ದಿನಗಳು. ಸಜ್ಜನತೆಯ ಮೂರ್ತಿಯಾಗಿದ್ದರು ಗೌಡ್ರು. ಉಪಸಂಹಾರ : ಆ ಚಿತ್ರಕ್ಕೆ ಅವರಿಗೆ ರಾಜ್ಯ ಪ್ರಶಸ್ತಿಯ ಪಟ್ಟಿಯಲ್ಲಿದ್ದರು. ಆದರೆ ಅದಾಗಲೆ ಅ ಚಿತ್ರಕ್ಕೆ ನಾಲ್ಕು ಪ್ರಶಸ್ತಿಗಳನ್ನು ನಿರ್ದರಿಸಲಾಗಿದೆ. ಮತ್ತೆ ಅವರಿಗೆ ಕೊಟ್ರೆ ವಶೀಲಿ ಅಂದ್ಕೋತರೆ ಅಂತ ಅವರಿಗೆ ಸಲ್ಲಬೇಕಿದ್ದ ಪ್ರಶಸ್ತಿಯನ್ನು ಕೈ ಬಿಟ್ರು. ಆದರೇನು… ಪ್ರತಿಭೆಗೆ ಯಾವತ್ತಿದ್ರೂ ಬೆಲೆ ಬಂದೆ ಬರತ್ತೆ. ಮುಂದೆ ಅವರಿಗೆ ಬೇರೆ ಚಿತ್ರದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಬಂತು. ಸಜ್ಜನಿಕೆಯ ಸೌಹಾರ್ದದ ಸಾಕಾರ ವ್ಯಕ್ತಿ…

ಕೃತಜ್ಞತೆಯ ನೆನಕೆ ಕೃಷ್ಣೇಗೌಡ್ರೆ….

‍ಲೇಖಕರು Avadhi

May 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: