ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಉಡುಗೊರೆ 'ಬೆಳಕಿಗಿಂತ ಬೆಳ್ಳಗೆ'

akshata hunchadakatte

ಅಕ್ಷತಾ ಹುಂಚದಕಟ್ಟೆ 

belakiginta bellagebelakiginta bellage2ಬೆಳಕಿಗಿಂತ ಬೆಳ್ಳಗೆ
ನನಗಿಂದು ದಕ್ಕಿದ ಅತ್ಯುತ್ಕೃಷ್ಟ ಉಡುಗೊರೆ..
ಪುರುಷ ಅನುಭಾವಿಗಳ ಪಾಲಿಗೆ ಹೊನ್ನು, ಮಣ್ಣಿನಂತೆ ಹೆಣ್ಣೊಂದು ಮಾಯೆ.. ಹೊನ್ನು ಮತ್ತು ಮಣ್ಣಿನ ಮೋಹದಿಂದ ಕಳಚಿಕೊಳ್ಳುವಂತೆ ಹೆಣ್ಣಿನ ಮೋಹದಿಂದಲೂ ಕಳಚಿಕೊಳ್ಳುವುದರತ್ತ ಅವರೆಲ್ಲ ಪ್ರಯತ್ನ ಸದಾ ಜಾರಿಯಲ್ಲಿರುತ್ತದೆ..
ಅದೇ ಮಧ್ಯಯುಗೀನ ಮತ್ತು ವಚನಕಾಲದ ಮಹಿಳಾ ಅನುಭಾವಿಗಳಾದ ಮೀರಾ, ಲಲ್ಲಾ , ಆಂಡಾಳ್, ಅಕ್ಕಮಹಾದೇವಿ ಮತ್ತೆ ಬಹುತೇಕ ವಚನಕಾರ್ತಿಯರು ಇದಕ್ಕೆ ಭಿನ್ನವಾಗಿ ಹೇಗೆ ತಮ್ಮ ದೇಹಶೋಧದ ಮೂಲಕ , ದೇಹ ಸಂಭ್ರಮದ ಘಳಿಗೆಗಗಳಿಗೆ ತುಡಿಯುವ ಮೂಲಕ, ದೇಹಾಭಿವ್ಯಕ್ತಿಯ ಹವಣಿಕೆಯನ್ನು ಜೀವನ್ಮರಣದ ತೀವ್ರತೆಯಲ್ಲಿ ಪೂರೈಸುವ ಪ್ರಯತ್ನವಾಗಿ ಇವರೆಲ್ಲರ ಕಾವ್ಯದ ಅಭಿವ್ಯಕ್ತಿಯ ನೆಲೆ ಹೇಗೆ ರೂಪುಗೊಂಡಿದೆ ಎಂಬುದನ್ನು ವಚನ , ಕಾವ್ಯದ ಉದಾಹರಣೆಗಳೊಂದಿಗೆ ಆಶಾದೇವಿ `ಬೆಳಕಿಗಿಂತ ಬೆಳ್ಳಗೆ ‘ ಕೃತಿಯಲ್ಲಿ ನಮ್ಮೆದುರು ತೆರೆದಿಡುತ್ತಾರೆ.
ಅಖಂಡ ಹಲವು ವರುಷಗಳ ಆಶಾದೇವಿಯವರ ಅಧ್ಯಯನ ತಪಸ್ಸಿನ ಫಲವಾದ ಈ ಕೃತಿಯನ್ನು ಓದುತ್ತಿದ್ದರೆ ಮಹಿಳಾ ಅನುಭಾವಿಗಳು ತಮ್ಮ ಕಾವ್ಯದಲ್ಲಿ ಕಟ್ಟಿಕೊಟ್ಟ ಹೆಣ್ಣಿನ ಅಪೂರ್ವ ಲೋಕ ನಮ್ಮನ್ನು ದಂಗುಬಡಿಸುತ್ತದೆ ಅಷ್ಟೇ ಅಲ್ಲ ಬೆಳಕಿನ ಕಿರಣವಾಗಿಯೂ ಗೋಚರಿಸುತ್ತದೆ.. ಈ ಕೃತಿ ಕಟ್ಟೋಣದ ಹಲವು ಹಂತದಲ್ಲಿ ನಾನು ಮೇಡಂ ಜೊತೆಗಿದ್ದೆ ಎಂಬುದೇ ನನಗೆ ಹೆಮ್ಮೆಯ ವಿಷಯ..
ಒಬ್ಬ ಗುರು ಒಬ್ಬ ಶಿಷ್ಯೆಗೆ ಇದಕ್ಕಿಂತ ಉತ್ಕೃಷ್ಟ ಹುಟ್ಟುಹಬ್ಬದ ಉಡುಗೊರೆ ಕೊಡಲು ಸಾಧ್ಯವೇ ಇಲ್ಲ..
‘ಬೆಳಕಿಗಿಂತ ಬೆಳ್ಳಗೆ’ ನನಗಿಂದು ದಕ್ಕಿದ ಅತ್ಯುತ್ಕೃಷ್ಟ ಉಡುಗೊರೆ.

‍ಲೇಖಕರು Avadhi

22 August, 2016

1 Comment

  1. ಹೇಮಾ

    ಹೌದು ಬಹಳ ಒಳ್ಳೆಯ ಪುಸ್ತಕ. ಮಧ್ಯಕಾಲೀನ ಯುಗದ ಕವಿಯಿತ್ರಿಯರ ಅಧ್ಯಯನದ ಮರುಜವಣಿಯ ಹುಡುಕಾಟ ನಮ್ಮೊಳಗಿನ ಹುಡುಕಾಟವಾಗಿಯೂ ಕಾಡುತ್ತದೆ. ಪುಸ್ತಕ ಓದಿ ಮುಗಿಸಿದ ನಂತರವೂ ಕಾಡುವ ಗುಣ ಪುಸ್ತಕಕ್ಕಿದೆ.
    Thank You Asha Madam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading