ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಜಗುಲಿಯಲ್ಲಿ ಸಂವಾದ ಜಾರಿಯಲ್ಲಿರಲಿ!

ಅವಧಿ ಹೊಂದಿರುವ ಪ್ರಮುಖ ಉದ್ದೇಶವೇ ಮಾತಿಗೆ ಜೊತೆಯಾಗೋಣ, ಚರ್ಚೆಗೆ ಜಗುಲಿ ಕಟ್ಟೋಣ ಅನ್ನೋದು. ನಿತ್ಯವೂ ಅವಧಿ ಅಪ್ ಡೇಟ್ ಆಗ್ತಿರೋದಕ್ಕೆ ಇರೋ ಕಾರಣವೇ ಅದು. ಅಷ್ಟೇ ಅಲ್ಲ, ಹಲವಾರು ಮಿತ್ರರಿಗೆ ನಾವು ನಿತ್ಯವೂ ಅಲರ್ಟ್ ಕಳುಹಿಸುವ ಉದ್ದೇಶ ಕೂಡ ಅದೇ. ಅಲ್ಲದೆ, ಅಪರಿಚಿತ ಮಿತ್ರರನ್ನೂ ಹುಡುಕಿಕೊಂಡು ಹೋಗುತ್ತೇವೆ. ಇದೆಲ್ಲವೂ ಅವಧಿಯ ಅಡಿಯಲ್ಲಿ ಸಂವಾದಕ್ಕೆ ವೇದಿಕೆ ತೆರೆಯಬೇಕು ಎಂಬುದಕ್ಕಾಗಿ. ಆದರೆ ಈ ಉತ್ಸಾಹದಲ್ಲಿ ನಾವು ಕೆಲವರನ್ನು ನಿತ್ಯವೂ ಡಿಸ್ಟರ್ಬ್ ಮಾಡುತ್ತಿದ್ದೇವೆಯೇ ಎಂಬ ಆತಂಕವೂ ಇತ್ತು. ಈ ಕಾರಣದಿಂದಲೇ ಆಸಕ್ತರನ್ನು ಮಾತ್ರ ಗುರುತಿಸಿಕೊಳ್ಳೋಣ ಎಂದು ನಿರ್ಧರಿಸಿದೆವು. ಆಗ ನಾವು ಕಂಡುಕೊಂಡಿದ್ದೇ “ಯಾಹೂ ಗ್ರೂಪ್” ಎಂಬ ಜಗುಲಿಯನ್ನು. ಇದು ಆಸಕ್ತರದೇ ಆದ ಒಂದು ಬಳಗವನ್ನು ಜೊತೆಗೂಡಿಸಲು ನೆರವಾಗುತ್ತದೆ.

ಈ ಗುಂಪಿನ ಮೂಲಕ ಅವಧಿಯಲ್ಲಿನ ಬರಹಗಳನ್ನೇ ಎತ್ತಿಕೊಂಡು, ಆ ನೆಪದಲ್ಲಿ ಚರ್ಚೆಯ ವಿಸ್ತಾರಕ್ಕೆ ನಡೆಯಬಹುದು. ಹೀಗೆ ನಡೆವ ದಾರಿಯಲ್ಲಿ ಎಲ್ಲರೂ ಜೊತೆಗಿರೋಣ. ಸಾಹಿತ್ಯ, ಸಂಸ್ಕೃತಿ ಕುರಿತ ಪ್ರೀತಿ ಮತ್ತು ಸಮಾಜಮುಖಿ ಧೋರಣೆಯ ಶಕ್ತಿಯೊಂದಿಗೆ ಸಂವಾದವನ್ನು ಸದಾ ಜಾರಿಯಲ್ಲಿಡೋಣ. 

ಅವಧಿಯ ಯಾಹೂ ಗ್ರೂಪ್ ಸೇರಲು ಉತ್ಸುಕರಾಗಿದ್ದಲ್ಲಿ ಅವಧಿಯ ಜಗುಲಿಗೆ ಬನ್ನಿ.

‍ಲೇಖಕರು avadhi

21 July, 2007

1 Comment

  1. Raghavendra Gowda

    hi.
    nanu yahoo arali katte seruva andukodiruve.yakendre nanagu
    mathadvu chata bahala ede nodi.

    Raghavendra gowda.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading