
ಶಿವಕುಮಾರ್ ಮಾವಲಿ
ಆತ ಪರ್ವತದಷ್ಟು ಪ್ರೀತಿಸುತ್ತಾನೆ, ಆದರೆ ..
ಮದ್ದೂರು ಕಾಫಿ ಡೇ ಯಿಂದ ಕಾರ್ ನಲ್ಲಿ ಹೊರಬಿದ್ದ ‘ಮೋನಿಕಾ’ ಳನ್ನು ಅವಳ ಗೆಳತಿ ಕೇಳಿದಳು ” ಯಾಕೆ ಮನೋಜ್ ನಿಂದ ದೂರವಾಗಿಬಿಟ್ಟೆ.? ಆತ ತುಂಬಾ ಒಳ್ಳೆಯವನಂತೆಯೇ ಕಾಣಿಸ್ತಿದ್ನಲ್ಲ? ”
ಮೋನಿಕ ಹೇಳಿದಳು : ‘ ಆತ ಪರ್ವತದಷ್ಟು ಪ್ರೀತಿಸುತ್ತಾನೆ ಆದರೆ ಪುಡಿಗಾಸು ಸಂಪಾದಿಸುತ್ತಾನೆ’ ..
ಇತ್ತ ಮಂಡ್ಯದ ಕಡೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಕಿಟಕಿಯ ಪಕ್ಕ ಕೂತಿದ್ದ ಮನೋಜ್ ಅದೊಂದು ಪತ್ರ ಮಾತ್ರ ಅವಳಿಗೆ ಹಿಂತಿರುಗಿಸದೆ ತಂದಿದ್ದ.
ಅದರಲ್ಲಿನ ಈ ಎರಡು ಸಾಲುಗಳು ಅವನನ್ನು ಮತ್ತಷ್ಟು ಹಿಂಡಲಾರಂಭಿಸಿದವು : ‘ಪ್ರೀತಿಯಿಂದ ಪ್ರಾಣ ತಿನ್ನುವ ಈಡಿಯಟ್, ನಿನ್ನ ಕಣ್ಣ ಈಜುವ ಮೀನು ನಾನು ‘…
ಇನ್ನು ಈ ಪತ್ರಗಳು ಅವಶ್ಯವಿಲ್ಲ ಎಂದುಕೊಂಡವನೇ ಮೆಲ್ಲಗೆ ಆ ಪ್ರೇಮ ಪತ್ರವನ್ನು ಕಿಟಕಿಯಿಂದ ಹೊರಗೆಸೆದ. ಹಾಗೆಯೇ ತನ್ನ ಮನಸ್ಸಿನಿಂದ ಆ ಮೋನಿಕಾಳನ್ನೂ…
ಅತ್ತ ಕಾಫಿ ಡೇ ಯಲ್ಲಿ ” A lot can happen over a coffee ” ಎಂಬ ಟ್ಯಾಗ್ ಲೈನ್ ಹೊತ್ತ ಬೋರ್ಡ್ ಕಳಚಿಬಿತ್ತು…!
——————
‘ಕೊನೆಯ ಭೇಟಿ’ ಯಿಂದ





0 Comments