ಪ್ರಜ್ಞಾ ಶಾಸ್ತ್ರಿ

ತೇಜಸ್ವಿ ಮೂಡಿಗೆರೆಯ ಬೀದಿಯಲ್ಲಿ ಸ್ಕೂಟರ್ ಮೇಲೆ ಹೋಗ್ತಿದಾರೆ. ಮೊದಲೇ ಹೆಂಡತಿ ಊರಿಗೆ ಹೋದ ಹೊತ್ತಿನಲ್ಲಿ ಅಡುಗೆಯ ಅವಾಂತರ ಮಾಡಿಕೊಂಡು ಸ್ವಲ್ಪ ರಾಂಗ್ ಆಗಿದಾರೆ. ಅದರ ಮೇಲೆ ಹಿಂದಿಂದ ಒಂದಿಷ್ಟ ಜನ ಹುಯಿಲೆಬ್ಬಿಸ್ತಾರೆ. ಒಬ್ಬನು ಇವರ ಸ್ಕೂಟರ್ ನಿಲ್ಲಿಸಿ ಏನೋ ಮಹಾ ಉಪಕಾರ ಮಾಡುವವನ ಥರ ’ಸರ್ ಹೆಡಲೈಟ್ ಆನ್ ಇದೆ’ ಅಂತ ಹೇಳ್ತಾನೆ. ಇವರಿಗೆ ರೇಗ್ತದೆ:
” ತಾಲ್ಲೂಕು ಆಫೀಸಿನ ಎದುರು ನಿಲ್ಲಿಸಿದಾಗ ಅದಕ್ಕೆ ವಾಲಿಕೊಂಡು ನಿಂತು ಮಾತಾಡುತ್ತಿದ್ದ ಯಾರೋ ಸ್ವಿಚ್ ಆನ್ ಮಾಡಿರಬೇಕು. ಕೈಗೆ ಸಿಕ್ಕ ಏನನ್ನಾದರೂ ತಿರುವುತ್ತಾ ಚಿವುಟುತ್ತಾ ಮಾತಾಡುವುದು ಮೂಡಿಗೆರೆಯ ನಾಗರಿಕರ ಹವ್ಯಾಸ. ಕೈಗೆ ಏನೂ ಸಿಗದಿದ್ದರೆ ಎದುರು ಮಾತಾಡುತ್ತಿರುವವನ ಕೋಟಿನ ಗುಂಡಿಯನ್ನೇ ತಿರುಪಿ ಕೀಳುತ್ತಾ ಮಾತಾಡುತ್ತಾರೆ. ಅವರ ಮಾತು ಮುಗಿಯುವ ಹೊತ್ತಿಗೆ ಸುತ್ತಲಿದ್ದ ಏನಾದರೂ ಒಂದು ಜಖಂ ಆಗಿದ್ದರೇ ಅವರಿಗೆ ಸಮಾಧಾನ” ಅಂತ ಬರೀತಾರೆ!
ಮಧ್ಯಾಹ್ನ ಲೈಟಿರಲಿಲ್ಲ. ತೇಜಸ್ವಿಯವರ ಪಾಕಕ್ರಾಂತಿ ಹಿಡಕೊಂಡು ಕೂತಿದ್ದೆ. ಮೇಲಿನದನ್ನು ಓದುವ ಹೊತ್ತಿಗೆ ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದೆ!! ಈಗ ಮತ್ತೆ ನೆನಪಾಗಿ ಮುಸಿ ಮುಸಿ ನಗುತ್ತಿದ್ದೇನೆ!






ha ha a pusthaka naanu halavu bari odiddene….. nangge nimma baraha nodi ella nenpagthide….. mugulnagtiddini…….i misss thejaswi…..