ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗಲೇ ಮೈಲ್ ಬರಲಿ…

pencil.gif

ಟಾಪ್ ಟೆನ್ ಪ್ರವೃತ್ತಿ ಈಗ ಎಲ್ಲೆಡೆ… ಯಾವುದು ಟಾಪ್ ಟೆನ್?

ಪುಸ್ತಕ ಮಾರುವ ಅಂಗಡಿಯವರದ್ದೋ ಅಥವಾ ವಿಮರ್ಶಕರು ಕೊಡುವ ಪಟ್ಟಿಯೋ..?

ನಮ್ಮ ಪ್ರಕಾರ ನಮ್ಮ ನಮ್ಮ ಟಾಪ್ ಟೆನ್ ನಿರ್ಧಾರ ಮಾಡುವವರು ನಾವೇ. ನಮಗೆ ಇಷ್ಟವಾಗುವುದನ್ನು ಬೇರೆ ಯಾರೋ ಅಳೆಯುತ್ತಾರೆ ಎಂಬ ಭ್ರಮೆ ನಮಗಿಲ್ಲ. ಎಂದೋ ಕೇಳಿದ ಹಾಡು ಇಂದು ನಮ್ಮನು ಮೀಟಿ..ಎಂಬ ಹಾಡಿನಂತೆ ಎಂದೋ ಕಾಡಿದ ಪುಸ್ತಕ ಇಂದೂ ನಮ್ಮನ್ನು ಮೀಟುತ್ತಿರಲು ಸಾಧ್ಯ ಅಲ್ಲವೇ? ಇದನ್ನು ಯಾರು ತಮ್ಮ ಟಾಪ್ ಟೆನ್ ನಲ್ಲಿ ಕೊಡಲು ಸಾಧ್ಯ. ನಾವಲ್ಲದೆ?

ಹಾಗಾಗಿ ಅವಧಿಗೆ ಯಾರಿಗೆ ಯಾವ ಪುಸ್ತಕ ಇಷ್ಟ ಎಂದು ತಿಳಿಯುವ ಕುತೂಹಲ. ಉದ್ದೇಶ ಇಷ್ಟೇ. ಯಾರು ಏನು ಓದಿದರು. ಅದರಲ್ಲಿ ಅವರಿಗೆ ಇಷ್ಟವಾದದ್ದು ಯಾವುದು ಎಂದು ಗೊತ್ತಾದರೆ ಬೇರೆಯವರೂ ಆ ಪುಸ್ತಕದ ಬೆನ್ನತ್ತಬಹುದು ಎಂಬ ಆಸೆ.

ನೀವು ಮಾಡಬೇಕಾದದ್ದು ಇಷ್ಟೇ. ನಿಮಗೆ ಇಷ್ಟವಾದ ೧೦ ಪುಸ್ತಕಗಳ ಪಟ್ಟಿ ಮಾಡಿ. ನಮಗೆ ಮೈಲ್ ಮಾಡಿ. ನಿಮಗೆ ಓ ಕೆ ಎಂದಾದರೆ ನಿಮ್ಮ ಫೋಟೋ ಸ್ಕ್ಯಾನ್ ಮಾಡಿ ಕಳಿಸಿ. ಎಲ್ಲರ ಟಾಪ್ ೧೦ ನಿಮ್ಮ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆಮೇಲೆ ಆ ಪುಸ್ತಕಗಳನ್ನು ನಾವೂ ನೀವೂ ಪುಸ್ತಕದ ಅಂಗಡಿಗಲ್ಲಿ ಬೇಟೆಯಡೋಣ. ಇನ್ನೇಕೆ ತಡ ಈಗಲೇ ಮೈಲ್ ಬರಲಿ…
ನೀವು ಮೈಲ್ ಮಾಡಬೇಕಾದದ್ದು ಇಲ್ಲಿಗೆ: avadhi.pusthaka@gmail.com

‍ಲೇಖಕರು avadhi

22 December, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading