ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಷ್ಟ ಬಂದಂತೆ ಬದುಕುವುದು ಅಷ್ಟು ಸುಲಭವಲ್ಲ – ಮಾನಸ

ಆದರೂ ಫೇಸ್ಬುಕ್ ಮುಂದೆ ನನ್ಗನಿಸಿದ್ದನ್ನೆಲ್ಲ ಒದರುತ್ತಲೇ ಇರುತ್ತೇನೆ…

ಮಾನಸ


ಇಷ್ಟ ಬಂದಂತೆ ಬದುಕುವುದು ಅಷ್ಟು ಸುಲಭವಲ್ಲ. ಬದುಕಿನ ಬೇಕು-ಬೇಡಗಳನ್ನೆಲ್ಲಾ ಪರಿಗಣಿಸಿ ಸಮತೋಲಿತ ಸರ್ವೇ ಸಾಮಾನ್ಯ ಜೀವನ ನಡೆಸುವುದು ಒಂದು ಕಲೆ.
ಹೊಸ ಲ್ಯಾಬ್ ನಲ್ಲಿ ಸಮಯ ದಾಟಿದರೂ ಮುಗಿಯದ experiment ಗಳು, ಮುಗಿದರೂ ಮುಗ್ಗರಿಸುವ results ಗಳು, ಬಾಸ್ ಮುಂದೆ ಆಗೋ ಅಭಾಸಗಳು, ಬತ್ತಿ ಹೋದ grantನ ಒತ್ತಡಗಳು ಎಲ್ಲವೂ ತಲೆಯೊಳಗೆ ಜಮೆಯಾಗಿ ಮನೆ ತಲುಪುವ ಮುನ್ನಾ ಮರೆಯುವ ಹುನ್ನಾರ. ಇನ್ನು ಮನೆ ತಲುಪಿದ ಮೇಲೆ ಮತ್ತೊಂದು ಪ್ರಪಂಚ. ಮನೆ ತಲುಪಿದರೂ ಮರೆಯದೇ ಕಾಡುವ ಅರ್ಧಕ್ಕೇ ನಿಂತ manuscript ಗಳು, ಭಾರತದಲಿ ನೆಲೆ ನಿಲ್ಲಲು ಅವಕಾಶಗಳ ಹುಡುಕಾಟಗಳು, “ಬೆಲೆಯೇರುವ ಮುಂಚೆ ಸೈಟ್ ತಗೋ, ಮನೆ ತಗೋ” ಎಂಬ ದಿನಂಪ್ರತಿ ಪಂಚ್ ಗಳು. ಬಂದ ತಕ್ಷಣ ಕಂಪ್ಯೂಟರ್ ಮುಂದೆ ಕೂರಬೇಡಿ ಎಂಬ ದೂರುಗಳು… ಇಷ್ಟೆಲ್ಲವನ್ನು ಬದಿಗೊತ್ತಿ ಮಡದಿಗೊಂದು ವೀಕೆಂಡ್ ಶಾಪಿಂಗ್, ಮಗನಿಗೊಂದು monthly ಪಿಕ್ನಿಕ್. ನನಗೊಂದು cricket. ಹೀಗೆ ಎಲ್ಲರನ್ನು ಅಲ್ಪ ಸ್ವಲ್ಪ ಖುಷಿಯಾಗಿಡಲು ಪ್ರಯತ್ನಿಸುತ್ತಾ ಹಾಗೇ ನಾನೂ ಹರುಶದಿಂದಿರಲು ಹವಣಿಸುತ್ತಲೇ ಇರುವೆ.
ಮನದಲ್ಲಿ, ಮನೆಯಲ್ಲಿ ಅದೆಷ್ಟೇ ಜಂಜಾಟಗಳಿದ್ದರು ಅವನ್ನೆಲ್ಲ ಮೂಟೆಕಟ್ಟಿ ಅಟ್ಟದ ಮೇಲೆಸೆದು ಜಗದ ಮುಂದೆ ಖುಷಿಯ ಸೆಲೆ ಹರಡಲು ಫೇಸ್ಬುಕ್ ಮುಂದೆ ಕೂರುವೆ.
ಎಲ್ಲರಿಗೂ ಸಾಮಾನ್ಯ ಸಾಧಾರಣ ಅನಿಸುವ ಕೆಲವು ಸಣ್ಣ ಪುಟ್ಟ ಕೆಲಸಗಳು ಅದೆಷ್ಟು ಸಮಯ ಕೇಳುತ್ತವೋ ಅದು ಮಾಡುವಾಗಲೇ ತಿಳಿಯುವುದು. ಉದಾಹರಣೆಗೆ ಫೇಸ್ಬುಕ್ ಗೆ ಒಂದು ಫೋಟೋ upload ಮಾಡಲು, ನೂರು ಫೋಟೋಗಳ ನಡುವೆ best one ಸೆಲೆಕ್ಟ್ ಮಾಡಿ, ಟ್ರಿಮ್ ಮಾಡಿ, edit ಮಾಡಿ, ಒಂದು ಕ್ಯಾಪ್ಶನ್ ಕೊಟ್ಟು publish ಎಂದು ಕ್ಲಿಕ್ ಮಾಡಲು ಹಿಡಿಸುವ ಸಮಯ???
ಆದರೂ ಫೇಸ್ಬುಕ್ ಮುಂದೆ ನನ್ಗನಿಸಿದ್ದನ್ನೆಲ್ಲ ಒದರುತ್ತಲೇ ಇರುತ್ತೇನೆ, ಫೇಸ್ಬುಕ್ ಮುಂದೆ ಯಾಕಷ್ಟು ಸಮಯ ಎಂಬ ಕುಹಕಕ್ಕೆ ಇಲ್ಲಿದೆ ನನ್ನ ಉತ್ತರ.
ಫೇಸ್ಬುಕ್ ಒಂದು entertainment ಸೈಟ್ ಅಷ್ಟೇ ಅಲ್ಲ. ಲ್ಯಾಬ್ ಕ್ಯೂಬಿಕಲ್ ನಿಂದ ಹೊರಬಂದು ಸಮಾಜಮುಖಿಯಗಲು ಅನುವು ಮಾಡಿಕೊಡೋ ಕಿಟಕಿ ಅದು. ದಿನಪತ್ರಿಕೆಗಿಂತ ಮೊದಲೇ ತಿಳಿಸೋ newsbox, ಅಲ್ಲೆಲ್ಲೋ ಮರೆತು ಹೋದ ಮುಖ, ಜನ್ಮ ದಿನ, ವಾರ್ಷಿಕೋತ್ಸವ ಹಬ್ಬ ಹರಿದಿನಗಳನೆಲ್ಲಾ ಎತ್ತಿ ತಂದು ಮುಂದಿರಿಸೋ memory booster. ಎಲ್ಲಕಿಂತ ಮಿಗಿಲಾಗಿ ನಮ್ಮ ದುಖ ಕಿರಿಕಿರಿಗಳನೆಲ್ಲ ಮರೆಸಿ ಖುಷಿಯ ನೆನಪುಗಳನ್ನು ಚಿತ್ರ ಸಹಿತ ದಾಖಲಿಸಿ ಪ್ರಪಂಚಕ್ಕೆ ನಾನೊಬ್ಬ ಸುಖಜೀವಿ ಎಂದು ಬಿಂಬಿಸೋ ಅಧ್ಬುತ ವೇದಿಕೆಯದು.
ನಮ್ಮ ಖುಷಿಗಳನ್ನಳೆಯುವ ನಿಜವಾದ ಸಾಧನವೆಂದೊದ್ದಿದ್ದರೆ ಅದು ಮತ್ತೊಬ್ಬರ ಮೆಚ್ಚುಗೆ. ಎಷ್ಟು ಜನ ನಮ್ಮನ್ನು ಮೆಚ್ಚುತ್ತಾರೋ, ಹೊಗಳುತ್ತಾರೋ, ಅನುಸರಿಸುತ್ತಾರೊ ಅಷ್ಟು ಸಂತೋಷ ನಮ್ಮ ಮನವನ್ನಳಾತೊಡಗುತ್ತದೆ. ಅಂತೆಯೇ ನಾನು ಖುಷಿಯಾಗಿದ್ದೀನೋ ಇಲ್ಲವೋ ಎಂಬುದು ಕನ್ನಡಿ ಮುಂದೆ ನಿಂತರೆ ತಿಳಿಯುವ ಸಂಗತಿಯಲ್ಲ. ನಾವದೆಷ್ಟೇ ದುಖದಲ್ಲಿದ್ದರೂ ಜಗಕೆ ನಗುಮುಖವ ತೋರಿಸಿ. ಜಗವೆಂಬ ಕನ್ನಡಿ ನಮ್ಮ ನೋಡಿ Wow how lucky you are ..! ಅಂತಲೋ ಕಡೆ ಪಕ್ಷ he is just posing ಅಂತಾದರೂ ಅನ್ನಬೇಕು. ನಮ್ಮ ಖುಷಿಯ ಕಂಡು ಜನ ಮೆಚ್ಚದಿದ್ದರೂ atleast ಸ್ವಲ್ಪ ಕರುಬುವಂತಾದರೂ ಇರಬೇಕು. ನಮ್ಮ ಹತ್ತಿರದವರು ಮೆಚ್ಚಿದಷ್ಟು ಖುಷಿ ಹೆಚ್ಚುತ್ತದೆ ನಿಜ ಆದರೆ ಅಂತೆಯೇ ಮೆಚ್ಚಿದಂತೆ ನಟಿಸಿ ಮುಚ್ಚು ಮರೆಯಲಿ ಕರುಬಿದರೆ ನಾವೇನು ಕಮ್ಮಿ ನಾವೂ ಮತ್ತಷ್ಟು ಉತ್ತೇಜಿತರಾಗಿ ಉಬ್ಬುತ್ತೇವೆ. ಈಗ ನಾನು (ನಾವು) ಫೇಸ್ಬುಕ್ ನಲ್ಲಿ ಮಾಡುತ್ತಿರೋದು ಅದನ್ನೇ ತಾನೇ.
We always wear a mask but Select the mask which one you want to wear on that day.
ಸುಳ್ಳೋ ನಿಜವೋ, ಸುಳ್ಳಾದರೂ ಸರಿ ನಗುವ ತೋರಿ ಜಗಕೆ. Practice makes man perfect ಎಂಬಂತೆ ಖುಷಿಯು ಅಭ್ಯಾಸವಾಗಿ ಒಂದಲ್ಲಾ ಒಂದು ದಿನ ಬೇಸರದಲ್ಲೂ ನಗೆಯ ಬುಗ್ಗೆ ಹರಿಯಬಹುದು.
 

‍ಲೇಖಕರು avadhi

25 July, 2013

1 Comment

  1. Pramod

    😀

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading