ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವರು ಲಕ್ಕೂರು ಆನಂದ್: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ

ಕೇಂದ್ರ ಸಾಹಿತ್ಯ ಆಕಾಡೆಮಿ ಯುವ ಸಾಹಿತ್ಯ ಪುರಸ್ಕಾರಕ್ಕೆ ಲಕ್ಕೂರು ಸಿ ಆನಂದ್ ಅವರ ‘ಬಟವಾಡೆಯಾಗದ ರಸೀದಿ’ ಆಯ್ಕೆಯಾಗಿದೆ. ಈ ಕೃತಿಯನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ
ಕೋಲಾರ ಜಿಲ್ಲೆಯ ಕವಿ ಲಕ್ಕೂರು ಆನಂದ ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಹೊರತಂದಿದ್ದಾರೆ

‘ಈ ಸಂಕಲನಗಳು ಕನ್ನಡ ಕಾವ್ಯ ಲೋಕಕ್ಕೆ ಒಂದು ದಮನಿತ ದನಿಯನ್ನು ಬೆಸುಗೆ ಹಾಕಿದೆ’ ಎಂದು ವಿಮರ್ಶಕರಿಂದ ಪ್ರಶಂಸೆಗೆ ಒಳಗಾಗಿದೆ. ಊರಿಂದ ಊರಿಗೆ, ಇಪ್ಪತ್ತರ ಕಲ್ಲಿನ ಮೇಲೆ, ಬಟವಾಡೆಯಾಗದ ರಸೀತಿ, ಇತಿ ನಿನ್ನ ವಿಧೇಯನು, ಉರಿವ ಏಕಾಂತ ದೀಪ ಇವರ ಕವನ ಸಂಕಲನಗಳು
ಸ್ಮೃತಿ ಕಿಣಾನ್ತಂ, ಕೊನೆ ಬ್ರಾಹ್ಮಣ, ಆಕಾಶ ದೇವರ, ನಗ್ನ ಮುನಿಯ ಸಮಗ್ರ ಕಥೆಗಳು, ಅರುದ್ರ ಇವರ ಅನುವಾದಿತ ಕೃತಿಗಳು ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಆನಂದ ಆಳವಾದ ಅಧ್ಯಯನ ನಡೆಸಿದ್ದಾರೆ
ಆಂಧ್ರದ ಶ್ರೀ ಶ್ರೀ ಕಾವ್ಯ ಪುರಸ್ಕಾರ,  ದೆಹಲಿಯ ದಲಿತ ಸಾಹಿತ್ಯ ಪರಿಷತ್ತು ಪ್ರಶಸ್ತಿ, ದು ನಿಂ ಬೆಳಗಲಿ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ, ಡಾ ತಿಪ್ಪೇರುದ್ರ ಸ್ವಾಮಿ ಪ್ರಶಸ್ತಿ ಇವರಿಗೆ ಸಂದಿದೆ

‘ಒಂದು ರೀತಿಯ ನೋವಿನ ಖುಷಿ ಇದು’ ಎಂದು ಲಕ್ಕೂರು ಆನಂದ ತಮ್ಮ ನೋವನ್ನು ‘ಅವಧಿ’ಯೊಂದಿಗೆ ಬಿಚ್ಚಿಟ್ಟರು. ಪ್ರಶಸ್ತಿ ಬಂದ ಬಗ್ಗೆ ಮಾತನಾಡುತ್ತಾ ‘ದಮನಿತರ ದನಿಯನ್ನು ಒಂದಿಷ್ಟೂ ಮೇಲೆತ್ತಲಾಗದ ಈ ಕಾಲದಲ್ಲಿ ಪ್ರಶಸ್ತಿ ಸಿಕ್ಕಿದೆ. ಇದು ನನಗೆ ಸಂತಸ ಹಾಗೋ ನೋವು ಎರಡನ್ನೂ ತಂದಿದೆ’ ಎಂದರು.

‘ಭಾರತದಲ್ಲಿ ದಿನಕ್ಕೊಬ್ಬ ದಲಿತನ ಕೊಲೆಯಾಗುತ್ತಿದೆ. ಸಾವಿರಾರು ವರ್ಷಗಳಿಂದ ಎಷ್ಟೊಂದು ದಲಿತರ ಕೊಲೆಯಾಗಿರಬಹುದು ಇದು ನನ್ನ ಕರುಳನ್ನು ಸುಡುತ್ತಿದೆ’ ಎಂದರು

‍ಲೇಖಕರು G

23 August, 2013

34 Comments

  1. charitha

    ಲಕ್ಕೂರು ಆನಂದವರಿಗೆ ಅಭಿನಂದನೆಗಳು.

  2. nagarajhettur

    ‘ಭಾರತದಲ್ಲಿ ದಿನಕ್ಕೊಬ್ಬ ದಲಿತನ ಕೊಲೆಯಾಗುತ್ತಿದೆ. ಸಾವಿರಾರು ವರ್ಷಗಳಿಂದ ಎಷ್ಟೊಂದು ದಲಿತರ ಕೊಲೆಯಾಗಿರಬಹುದು ಇದು ನನ್ನ ಕರುಳನ್ನು ಸುಡುತ್ತಿದೆ’
    ಎಂಥ ಮಾತು…? ಆಲ್ ದ ಬೆಸ್ಟ್ ಲಕ್ಕೂರ್ ಆನಂದ್…

  3. g.n.nagaraj

    ಲಕ್ಕೂರು ಆನಂದರಿಗೆ ಪ್ರಶಸ್ತಿ ನಮಗೆಲ್ಲರಿಗೂ ಸಂತೋಷ ತಂದಿದೆ.ಅವರ ಮಾತು ” ದಮನಿತರ ದನಿಯನ್ನು ಒಂದಿಷ್ಟೂ ಮೇಲೆತ್ತಲಾಗದ ಕಾಲದಲ್ಲಿ ಈ ಪ್ರಶಸ್ತಿ ಸಿಕ್ಕಿರುವುದು ನೋವುಂಟುಮಾಡಿದೆ.ಭಾರತದಲ್ಲಿ ನಡೆಯುತ್ತಿರುವ ದಲಿತರ ಕೊಲೆಗಳು ನನ್ನ ಕರುಳನ್ನು ಸುಡುತ್ತಿದೆ ” ಒಬ್ಬ ಕವಿ,ಸಾಹಿತಿ ಜನ ಸಮುದಾಯದೊಂದಿಗೆ ಮಿಳಿತವಾಗುವುದು, ಅದರ ನೋವು ತನ್ನ ನೋವನ್ನಾಗಿ ‘ಭಾವಿಸುವುದು’ ಅಲ್ಲ ಅನುಭವಿಸುವುದು ಎಂದರೆ ಏನು ಎಂಬುದಕ್ಕೆ ಇದು ಅಪೂರ್ವ ಮಾದರಿಯಾಗಿದೆ. ಈ ಮಾತುಗಳು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದು ಎಷ್ಟು ಸೂಕ್ತ ಎಂಬುದನ್ನು ತೋರಿಸುತ್ತದೆ.
    ಅವರ ಬರಹಗಳು ದಲಿತರ ಎದೆಯ ದನಿಯಾಗಿ ನಾಡಿನ ಹೃದಯವನ್ನು ಮಿಡಿಯಲಿ,ಎಲ್ಲರಲ್ಲಿಯೂ ಮಾನವೀಯ ತುಡಿತವನ್ನು ವೃದ್ಧಿಸಲಿ ಎಂದು ಆಶಿಸುತ್ತೇನೆ. ಅವರ ನೋವು ಕೂಡ ನಮ್ಮೆಲ್ಲರ ನೋವಾಗಲಿ. ” ಜಾತಿ ಮತದ ಗುಹೆಗಳಿಂದ ಹೊರ ಬನ್ನಿರಿ ಬಯಲಿಗೆ,ಕೃತಕ ತಿಮಿರದಾಳದಿಂದ ವಿಸ್ತಾರದ ಬೆಳಕಿಗೆ ” ಎನ್ನುವುದು ಎಲ್ಲರ ಹಾಡಾಗಲಿ.ಅದಕ್ಕಾಗಿ ಅನುದಿನವೂ ಹೋರಾಟವನ್ನು ಚಿಮ್ಮಿಸುವ ಕೆಲಸದಲ್ಲಿ ನಿರತರಾಗೋಣ.

  4. Anonymous

    abinandanegalu

  5. manyapuragovindaraju

    abinandanegalu

  6. Anonymous

    abhinandanegalu,lakkur

  7. Parameshwara.K

    ಅಭಿನಂದನೆಗಳು ಗೆಳೆಯರಿಗೆ

  8. siraj bisaralli

    ಅಭಿನಂದನೆಗಳು

  9. mahantesh navalkal

    lakkuru avadhutananthaha huduga. aatana jote maatadidare nimage novaagabahudu adre adara aala anthakkaranadind tumbiruvadu. aatana bhavishya ujvalavaagali. avadhutaru yavagalu nera mulajillade heluvanthavaru
    mahantesh navalkal

  10. mmshaik

    hertly congrates..!

  11. ವೆಂಕಟಬಾಬು

    ಗೆಳೆಯ ಆನಂದ್ ಅವರಿಗೆ ಅಭಿನಂದನೆಗಳು. ಅವರ ಸಾಹಿತ್ಯಕ ಪ್ರತಿಭೆ ಇನ್ನಷ್ಟು ಪಕ್ವಗೊಂದು ಇನ್ನೂ ಅನೇಕ ಪ್ರಶಸ್ತಿಗಳಿಗೆ ಪಾತ್ರವಾಗಲಿ. ಆದರೆ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ “ಭಾರತದಲ್ಲಿ ದಿನಕ್ಕೊಬ್ಬ ದಲಿತನ ಕೊಲೆಯಾಗುತ್ತಿದೆ. ಸಾವಿರಾರು ವರ್ಷಗಳಿಂದ ಎಷ್ಟೊಂದು ದಲಿತರ ಕೊಲೆಯಾಗಿರಬಹುದು ಇದು ನನ್ನ ಕರುಳನ್ನು ಸುಡುತ್ತಿದೆ” ಅಂತ ಅವಸರದ ಹೇಳಿಕೆ ಕೊಟ್ಟಿದ್ದು ಸರಿ ಕಾಣಲಿಲ್ಲ. ಇದು ನೇತ್ಯಾತ್ಮಕ ಚಿಂತನೆ. ಭಾರತದಲ್ಲಿ ದಿನಕ್ಕೆ ಅದೆಷ್ಟೋ ಕೊಲೆಗಳಾಗುತ್ತಿವೆ. ಕೊಲೆಯಾದವರಲ್ಲಿ ದಲಿತರೂ ಸೇರಿದಂತೆ ಎಲ್ಲಾ ಜಾತಿ ಮತದವರೂ ಇದ್ದಾರೆ. ಜಾತಿಯ ಕಾರಣಕ್ಕೆ ಭಾರತದಲ್ಲಿ ಪ್ರತಿ ದಿನ ಒಬ್ಬ ದಲಿತ ಕೊಲೆಯಾಗುತ್ತಿದ್ದಾನೆಯೇ? ಕೊಲೆ ಎಂಬ ಕ್ರಿಮಿನಲ್ ವಿಕೃತಿಯನ್ನು ದಲಿತರ ಪರ ಹೋರಾಟಕ್ಕೆ ಬಳಸಿಕೊಳ್ಳುವುದು ಸರಿಯೇ? ಇವೆಲ್ಲ ಪ್ರಶ್ನೆಗಳು ನನ್ನಲ್ಲಷ್ಟೇ ಅಲ್ಲ ಆನಂದ್ ಅವರ ಮನಸ್ಸಿನಲ್ಲೂ ಮೂಡಬೇಕಿತ್ತಲ್ಲವೇ?

  12. Ramesh Aroli

    Congratulations Anand avare!!

  13. bmbasheer

    ಲಕ್ಕೂರಿಗೆ ಪ್ರಶಸ್ತಿ …ನಿಜಕ್ಕು ಖುಷಿಯಾಯಿತು. ಅಭಿನಂದನೆ

  14. armanikanth

    lakkuru aananda avarige abhinandanegalu

    • naveenkumar

      sir please send me your phone number

  15. kum.veerabhadrappa

    ಯುವ ಮಿತ್ರ ಲಕ್ಕೂರ ಆನಂದರ ಕವಿತೆಗಳನ್ನು ಆರಂಭದಿಂದ ಓದುತ್ತಿರುವೆ, ಮೆಚ್ಚಿರುವೆ, ಅವರ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ್ ಅಕಾಡೆಮಿಯ ಯುವ ಪ್ರಶಸ್ತಿ ಲಭಿಸಿರುವುದು ಸಂತೋಷದ ವಿಷಯ, ಆತಗೆ ನಮ್ಮೆಲ್ಲರ ಅಭಿನಂದನೆಗಳು
    ಕುಂವೀ

  16. KALAMARAHALLI

    ABHINADANEGALU

  17. arif raja

    lakkurge abhinadanegalu… kannada dalli matte yako kavigale vijrambhi suttidare anisutte…plz, haage odugaru ylliddare antha hudukalu idu sakaala….

  18. Anonymous

    HEARTY CONGRADULATIONS ANAND, U DESERVE IT,
    AM PROUD OF U – lalitha siddabasavaiah

  19. D.Ravivarma

    ‘ಒಂದು ರೀತಿಯ ನೋವಿನ ಖುಷಿ ಇದು’ ಎಂದು ಲಕ್ಕೂರು ಆನಂದ ತಮ್ಮ ನೋವನ್ನು ‘ಅವಧಿ’ಯೊಂದಿಗೆ ಬಿಚ್ಚಿಟ್ಟರು. ಪ್ರಶಸ್ತಿ ಬಂದ ಬಗ್ಗೆ ಮಾತನಾಡುತ್ತಾ ‘ದಮನಿತರ ದನಿಯನ್ನು ಒಂದಿಷ್ಟೂ ಮೇಲೆತ್ತಲಾಗದ ಈ ಕಾಲದಲ್ಲಿ ಪ್ರಶಸ್ತಿ ಸಿಕ್ಕಿದೆ. ಇದು ನನಗೆ ಸಂತಸ ಹಾಗೋ ನೋವು ಎರಡನ್ನೂ ತಂದಿದೆ’ ಎಂದರು.
    ‘ಭಾರತದಲ್ಲಿ ದಿನಕ್ಕೊಬ್ಬ ದಲಿತನ ಕೊಲೆಯಾಗುತ್ತಿದೆ. ಸಾವಿರಾರು ವರ್ಷಗಳಿಂದ ಎಷ್ಟೊಂದು ದಲಿತರ ಕೊಲೆಯಾಗಿರಬಹುದು ಇದು ನನ್ನ ಕರುಳನ್ನು ಸುಡುತ್ತಿದೆ’ ಎಂದru..
    heart touching….hrudayapurvaka abhinandanegalu…..

  20. dhanaraj patre

    LAKKUR SIR CONGRATULATION

  21. Anil

    Hearty Congratulations Sir..I wish you all the best..

  22. varadaraju

    nimmage abhinadanegalu nimma kavya innu munduvriyalli
    shoshithara dalithara elligege karanavagali
    dhanyavadagalu
    varadaraju
    bel,bangalore

  23. sarvesh

    hai anandanna cangargeuleshn nimma sarvesh

  24. sarvesh.L.V

    ಲಕ್ಕೂರು ಅನ್ನೊ ಹೆಸರನ್ನು ಇಡೀ ದೇಶಕ್ಕೆ ಪರಿಚಯಿಸಿದ ಕೀರ್ತಿ ನಮ್ಮ ಲಕ್ಕೂರು ಆನಂದ್ ರವರಿಗೆ ಸಲ್ಲುತದೆ.ಇಂತಿ ಸರ್ವೇಶ ಲಕ್ಕೂರು

  25. narayan k kyasamballi

    priya geleyanige abhinadanegalu…..

  26. chandrashekar

    sir i want ur phone number………….

    • Anonymous

      lakkur ananda 9972004748

  27. Vi.Vem.Shree

    sir modalu nimage abhinandanegalu,,,, prashathi nimma mathina thookavanna hechisuthe hage nivu heliruvante indu dalitha varga(nanna prakaara jaathi alli alla) da prathi bharathiyanu novanna anubavisutiddare adanna jaathi moolaka allade ottagi dudidu tholagisona sir… nd once again congrats….

  28. ಮೋಹನ.ಟಿ

    ಅಭಿನಂದನೆಗಳು,ಲಕ್ಕೂರು ಆನಂದರವರಿಗೆ,

  29. Manoj Reddy

    Ellidiri meshtre
    jaaaaaaasti misss agtidira

  30. ARASANAHALLY VENKATESH MURTHY

    AHINADANEGALU ANAND

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading