ಇವತ್ತು ಹಾಗೇ ದೇವರ ವಿಷಯ ಬಂತು..

renuka nidagundi2
ರೇಣುಕಾ ನಿಡಗುಂದಿ 
ಇವತ್ತು ಹಾಗೇ ದೇವರ ವಿಷಯ ಬಂತು….
ಬಹಳ ದಿನಗಳ ನಂತರ ದೇವರನ್ನು ತೊಳೆದು ಇಟ್ಟೆ (ಧೂಳಾಗಿದ್ದವು), ಯಾಕೋ ಮೊದಲಿನಂತೆ ಯಾವ ಪೂಜೆ ಪುನಸ್ಕಾರವನ್ನೂ ಮಾಡುವುದಿಲ್ಲ. ಮಾಡಬೇಕೆಂದೂ ಅನಿಸುವುದಿಲ್ಲ.. ಮಾಡುವುದರಿಂದ ವಿಶೇಷವಾದದ್ದೇನೂ ಬದುಕಿನಲ್ಲಿ ಘಟಿಸಿಲ್ಲ, ಮಾಡದೇ ಇದ್ದುದರಿಂದಲೂ ಆಗಬಾರದ್ದೇನೂ ಆಗಿಲ್ಲ.
devaru bookಎಲ್ಲವೂ ಎಲ್ಲರ ಬದುಕಿನಂತೆ, ಪ್ರಕೃತಿಯ ನಿಯಮದಂತೆಯೇ ಯಾವಾಗ ಏನೇನು ಹೇಗಹೇಗೆ ನಡೀಬೇಕೊ ಹಾಗೇ ನಡೆಯುತ್ತಿದೆ ಎಂದೆಲ್ಲ ಯೋಚಿಸುತ್ತಿದ್ದಾಗ ನಾನು ಅರ್ಧಂಬರ್ಧ ಓದಿಟ್ಟ ‘ದೇವರು ‘ ನೆನಪಾಯಿತು. ಹಾಗೇ ಮತ್ತೊಮ್ಮೆ ಕೈಗೆತ್ತಿಕೊಂಡೆ….
ಪ್ರತಿಸಾಲೂ ಮೈ ನವಿರೇಳಿಸುತ್ತದೆ, ಕಿವಿಹಿಂಡಿ ಆಚೆ ಕೂರಿಸುತ್ತವೆ., ಸಾಕ್ರೆಟಿಸ್ ನಿಂದ ಡಿವಿಜಿ ವರೆಗೆ. ಪ್ಲೇಟೊನ ಐಡಿಯಾಗಳ ಪ್ರಪಂಚದಿಂದ ಗೀತೆಯವರೆಗಿನ ದೇವರು.. ಇಹಲೋಕ- ಪರಲೋಕ. ಮುಕ್ತಿ, ಭಕ್ತಿ, ಪರಮಪ್ರಜ್ಞೆ, ಸಾಮಾಜಿಕಪ್ರಜ್ಞೆ,. ಮಾನವಕುಲದ ನೋವು ನಂಬಿಕೆಗಳು… ಬೂಟಾಟಿಕೆಗಳು. ಆಷಾಢಭೂತಿತನ. ಧರ್ಮಶ್ರದ್ಧೆ ಅಂಧಶ್ರದ್ಧೆಯಾಗುವ ಅಪಾಯಗಳು.
ಸದ್ಯಕ್ಕೆ ಮನುಕುಲವನ್ನು ಪಿಡುಗಾಗಿ ಕಾಡುತ್ತಿರುವ ಜಾತಿವಾದ. ಮತ ಧರ್ಮದ ಹೆಸರನ್ನು ಬಳಸಿಕೊಂಡು ರಾಜಕೀಯ ಸ್ವಾರ್ಥಸಾಧನೆಗಾಗಿ, ವೋಟು ಗಳಿಕೆಗಾಗಿ ಜನರ ಮನಸ್ಸನ್ನು ಕಲಕಿ ಅಶಾಂತಿಯನ್ನೇ ಹುಟ್ಟುಹಾಕುತ್ತಿರುವ ಈ ಕಾಲದಲ್ಲಿ ಎ.ಎನ್ ಮೂರ್ತಿರಾವ್ ಅವರ ”ದೇವರು ‘ ಪುಸ್ತಕವನ್ನು ಈಗಿನ ಪ್ರತಿಯೊಬ್ಬ ಯುವಪೀಳಿಗೆಯವರು ಓದಲೇಬೆಕಾದ ಅಗತ್ಯವಿದೆ ಎನಿಸುತ್ತದೆ….
ಪುಸ್ತಕದಲ್ಲಿನ ಕೆಲವು ಸಾಲುಗಳನ್ನು ಮತ್ತೊಮ್ಮೆ ಇಲ್ಲಿ ಕೊಟ್ಟಿದ್ದೇನೆ. ಅವೆಲ್ಲ ಓದದೇ ಇರುವವರಿಗೂ ಸ್ಪೂರ್ತಿಯಾಗಲೆಂದು ಬಯಸುವೆ.

”ದೇವರು ಇದ್ದರೆ ಅವನಿಗೆ ನಮ್ಮ ಸೇವೆ ಬೇಕಿಲ್ಲ. ಸೇವೆ ಬೇಕಿರುವುದು -ಮಾನವನಿಗೆ ಇದನ್ನು ಎಷ್ಟುಸಾರಿ ಒತ್ತಿಹೇಳಿದರೂ ಸಾಲದು. ನಾವು ಮರೆಯುತ್ತಿರುವುದು ಈ ಸತ್ಯವನ್ನು! ಪ್ರತಿವರ್ಷವೂ ಚಳಿಗಾಲದಲ್ಲಿ ಬೆಚ್ಚನೆಯ ಬಟ್ಟೆಯಿಲ್ಲದೇ, ತಲೆಯ ಮೇಲೊಂದು ಚಾವಣಿಯಿಲ್ಲದೇ, ಚಳಿಯಿಂದ ರಕ್ಷಣೆ a n murthyraoದೊರೆಯದೇ ಎಷ್ಟೋ ಜನ ಸಾಯುತ್ತಾರೆ- ಇದನ್ನು ನಾವೆಲ್ಲ ವೃತ್ತಪತ್ರಿಕೆಗಳಲ್ಲಿ ಓದಿದ್ದೇವೆ. ಆದರೆ ನಾವು ಆಲಯಗಳನ್ನು, ಮಂದಿರಗಳನ್ನು ಕಟ್ಟಿಸುವುದು ದೇವರಿಗೆ! ಪೀತಾಂಬರ ಅರ್ಪಿಸುವುದು ದೇವರಿಗೆ!

ಏಕೈಶ್ವರ್ಯೆ ಸ್ಥಿತ ಎಂದು ನಾವು ಕಲ್ಪಿಸಿಕೊಂಡಿರುವ ದೇವರಿಗೆ ಕಿರೀಟ ಮಾಡಿಸುತ್ತೇವೆ. ಚಿನ್ನದ ರಥ ಮಾಡಿಸುತ್ತೇವೆ, ಹೊಟ್ಟೆಗಿಲ್ಲದೇ ಕದಿರುಕಡ್ಡಿಯಾಗಿ ನರಳುತ್ತಿರುವವರು ನಮ್ಮೆದುರಿಗಿರುವಾಗ ಯಜ್ಞಗಳನ್ನು ಮಾಡಿ ಟನ್ ಗಟ್ಟಲೇ ಅನ್ನತುಪ್ಪಗಳನ್ನು ಬೆಂಕಿಗೆ ಆಹುತಿ ಕೊಡುತ್ತೇವೆ – ದೇವತೆಗಳಿಗೆ ತೃಪ್ತಿಯಾಗಲೆಂದು…,

ದೇವರು ಪರಲೋಕ ಇತ್ಯಾದಿಗಳನ್ನು ಕುರಿತ ನಾವು ಪರಿಶೀಲಿಸುವ ನಂಬಿಕೆಗಳಿಗೆ ಬದಲಾಗಿ ನಾವು ತಂದುಕೊಳ್ಳುವ ನಂಬಿಕೆ ಇಹಲೋಕವನ್ನು ಕುರಿತದ್ದೆ ಆಗಬೇಕು. ಇಲ್ಲಿಯ ಬದುಕನ್ನು ಕುರಿತದ್ದೇ ಆಗಬೇಕು..,ತಾಯಿ ತಂದೆಯರು, ಹೆಂಡತಿ ಮಕ್ಕಳು. ಬಂಧುಗಳು. -ಸಹಮಾನವರು ಇವರೆಲ್ಲರನ್ನೂ ಮತ್ತು ಅವರ ಬದುಕನ್ನೂ ಕುರಿತದ್ದೇ ಆಗಬೇಕು. ಬದುಕಿಗೆ ಉದ್ದೇಶವನ್ನೂ ಸಾರ್ಥಕಯವನ್ನೂ ಕೊಟ್ಟು ಅದನ್ನು ನಿಂತು ನಡೆಸುವ ಈ ಮತದಲ್ಲೂ ಸೇವೆಗೆ ಮುಖ್ಯ ಸ್ಥಾನವುಂಟು. ಆದರೆ ಇದು ಮಾನವಕುಲದ ಸೇವೆ. ಈ ಮತವನ್ನು – ಶೈವಮತ, ವೈಷ್ಣವಮತ, ಇತ್ಯಾದಿಗಳಿಗೆ ಬದಲಾಗಿ ನಾವು ತಂದುಕೊಂಡಿರುವ ಮತವನ್ನು – ಮಾನವಮತ ಎಂದು ಕರೆಯೋಣ..

‍ಲೇಖಕರು Admin

May 7, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. nethra

    vicharagalannu muttisuva mulaka, e tarahada pustakagalannu odisuva mulaka navu manujaragi etararannu manujaragi madabahudagide. e tarahada vicharagalannu muttisutiruva avadhige danyavadagalu.

    ಪ್ರತಿಕ್ರಿಯೆ
  2. chi.na. halli kirana

    Nimma e lekhana oodida nantara manasinalli vichara sangarshagala ale gaĺu mudibaraudantu khare madam! abinadanegalu ,
    Chi na halli kirana

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: