ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ರಾಷ್ಟ್ರೀಯ ಬೀದಿ ನಾಟಕ ದಿನ…

ಏಪ್ರಿಲ್ 12 .2023.
ಇವತ್ತು ರಾಷ್ಟ್ರೀಯ ಬೀದಿ ನಾಟಕ ದಿನ. ಬೀದಿ ನಾಟಕ ಚಳುವಳಿಗೆ ಗಟ್ಟಿ ಅಡಿಪಾಯ ಹಾಕಿಕೊಟ್ಟ ಸಫ್ದರ್ ಹಶ್ಮಿ ಅವರ ಜನುಮದಿನ.
1989ರ ಜನವರಿ ಒಂದರಂದು ಬೀದಿ ನಾಟಕ ಪ್ರದರ್ಶನ ಮಾಡುತ್ತಿದ್ದಾಗಲೇ ರಾಜಕೀಯ ಗೂಂಡಾಗಳ ದಾಳಿಗೊಳಗಾಗಿ ಕೊಲೆಯಾದ ಸಫ್ದರ್ ಹಶ್ಮಿಯವರ ಜನ್ಮದಿನವನ್ನು ಅಂದರೆ ಎಪ್ರಿಲ್ 12ನ್ನುರಾಷ್ಟ್ರೀಯ ಬೀದಿನಾಟಕ ದಿನವಾಗಿ ಆಚರಿಸಲಾಗುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಆ ಬಳಿಕ ಕೂಡ ಕಲಾವಿದರ ಸ್ವಾತಂತ್ರ್ಯದ ಕುರಿತಾಗಿ, ಪ್ರತಿಭಟನೆ, ಪ್ರತಿರೋಧದ ಅಂಗವಾಗಿ ಪ್ರಾರಂಭವಾದ ಬೀದಿ ನಾಟಕ ಸ್ವರೂಪ ಈಗ ನಾನಾ ರೂಪವನ್ನು ಪಡೆದುಕೊಂಡಿದೆ.

ದೇಶದ ಆಡಳಿತವನ್ನು ನಡೆಸುವ ಆಡಳಿತಾರೂಢಪಕ್ಷಗಳ ಲೋಪ ದೋಷಗಳನ್ನು ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಜನ ಸಾಮಾನ್ಯರಿಗೂ ಅರ್ಥವಾಗುವಂತೆ ನಿರೂಪಿಸುವ ಬೀದಿ ನಾಟಕ ಚಳುವಳಿ ಯಾವತ್ತೂ ಜನಪರವಾಗಿಯೇ ರಂಗಭೂಮಿಯನ್ನು ನಿರ್ವಹಿಸಬೇಕಾಗುತ್ತದೆ .

ಆದರೆ ಇತ್ತೀಚಿಗಿನ ದಿನಗಳಲ್ಲಿ ಕನ್ನಡ ರಂಗಭೂಮಿಗೆ ಸಂಬಂಧಿಸಿದ ಹಾಗೆ ಬೀದಿನಾಟಕ ಸರಕಾರಿ ಸವಲತ್ತುಗಳ ಪ್ರಚಾರ ನಾಟಕವಾಗಿಯೋ…

ಖಾಸಗಿ ಕಂಪೆನಿಗಳ ವಸ್ತು ಮಾರಾಟದ ಸರಕುಗಳಾಗಿಯೋ…
ಕಾಲೇಜ್ ವಿದ್ಯಾರ್ಥಿಗಳ ಬೀದಿನಾಟಕ ಸ್ಪರ್ಧೆಯ ಭಾಗವಾಗಿಯೋ…
ಚುನಾವಣಾ ಪ್ರಚಾರದ ಸಾಮಗ್ರಿಗಳಾಗಿಯೋ…
ಅಥವಾ ರಂಗ ತರಬೇತಿ ನೀಡುವವರು ತಮ್ಮ ಸಿಲೆಬಸ್ ನ ಒಂದು ಭಾಗವಾಗಿ ಅಭ್ಯಾಸ ಮಾಡುವುದಕ್ಕಾಗಿ ಮಾತ್ರ ಬಳಕೆ ಆಗುತ್ತಿದೆ.

ನಾವಿಂದು ಸಾವಿರಾರು ಸಮಸ್ಯೆಗಳು ಜಂಜಾಟಗಳಿಂದ ತಲ್ಲಣಗೊಳ್ಳುತ್ತಿರುವ ಈ ದಿನಗಳಲ್ಲಿ ಅಪರೂಪಕ್ಕೆ ಅಲ್ಲೋ ಇಲ್ಲೋ ಒಂದು ಪ್ರತಿರೋಧ ದ ನಾಟಕಗಳನ್ನುಕಾಣಬಹುದೇ ಹೊರತು ಕನ್ನಡ ರಂಗಭೂಮಿಯಲ್ಲಿ ಹೊಸತೇನನ್ನೂ ಕಾಣಲಾಗದ ಪರಿಸ್ಥಿತಿ ಉಂಟಾಗಿದೆ.

50 ವರ್ಷಗಳ ಹಿಂದೆ ಸರಳತೆಯ ಹೆಸರಿನಲ್ಲಿ ಆರಂಭಿಸಿದ ವೇಷ ಭೂಷಣಗಳ ಶೈಲಿಯನ್ನು ಬದಲಾಯಿಸಲು ಬೀದಿ ನಾಟಕ ಕಲಾವಿದರು ಸಿದ್ದರಿಲ್ಲವೇನೋ ಎಂಬಂತಾಗಿದೆ.

ರಸ್ತೆಯಲ್ಲಿಯೇ ನಾಟಕ ಮಾಡಬೇಕು.ಧ್ವನಿವರ್ಧಕ ಬಳಕೆಮಾಡದೆ ನಟ ನಟಿಯರೇ ತಮ್ಮ ಧ್ವನಿಗಳನ್ನು ನಿರೂಪಿಸಬೇಕು ಎನ್ನುವ ತಂಡದವರು ಗಟ್ಟಿಯಾಗಿ ದನಿಎತ್ತಿ ಮಾತನಾಡಲಾರರು. ಆಧುನಿಕ ತಂತ್ರಜ್ಞಾನದ ಧ್ವನಿವ್ಯವಸ್ಥೆಯನ್ನು ಬಳಸಿಕೊಳ್ಳಲಾರರು.

(ಇತ್ತೀಚೆಗೆ ನಾನು ನೋಡಿದ ಬೀದಿನಾಟಕ ಪ್ರದರ್ಶನವೊಂದರಲ್ಲಿ ನಟ ನಟಿಯರು ಒಂದೇ ಒಂದು ಕಾರ್ಡ್ ಲೆಸ್ ಹ್ಯಾಂಡ್ ಮೈಕನ್ನು ಎಷ್ಟು ಚೆನ್ನಾಗಿ ಕೈ ಬದಲಾಯಿಸುತ್ತಿದ್ದರು ಎಂದರೆ ಅದರ ಉದ್ದೇಶ ಇನ್ನೊಬ್ಬರಿಗೆ ಹ್ಯಾಂಡ್ ಮೈಕನ್ನು ತಲುಪಿಸುವುದು ಮಾತ್ರವಾಗಿತ್ತು ,ಹೊರತು ಹೇಳಬೇಕಾದ ಮಾತುಗಳನ್ನು ಧ್ವನಿ ಪೂರ್ಣವಾಗಿ ಹೇಳುವುದಕ್ಕೆ ಅಲ್ಲವೇನೋ ಎಂಬಂತೆ ಕಾಣುತ್ತಿತ್ತು.)

ರಂಗಭೂಮಿಗೆ ಮಾರ್ಗಸೂಚಿಯಾಗಬೇಕಾದ, ಮಾರ್ಗದರ್ಶಿ ಆಗಬೇಕಾದ ಬೀದಿ ನಾಟಕ ಕೇವಲ ಬೀದಿ ಬದಿಯಲ್ಲಿ ಮಾಡುವ ನಾಟಕ ಮಾತ್ರ ಆಗಬಾರದು ಅದು ತನ್ನ ಜವಾಬ್ದಾರಿಯನ್ನು ಎಲ್ಲರಿಗೂ ತಲುಪುವಂತೆ, ಎಲ್ಲರಿಗೂ ಕೇಳುವಂತೆ ಆಗಬೇಕು ಎನ್ನುವುದು ನನ್ನ ಅಪೇಕ್ಷೆ.

(ಇಲ್ಲಿ ಎರಡು ವಿಡಿಯೋ ಲಿಂಕ್ ಗಳನ್ನು ಹಂಚಿಕೊಂಡಿದ್ದೇನೆ.
1. ಬೀದಿ ನಾಟಕ ಚಳುವಳಿಯನ್ನು ನಾಡಿನಾದ್ಯಂತ ಪಸರಿಸಿದ ಸಫ್ದರ್ ಹಶ್ಮಿ ಕುರಿತಾದ ಕಿರು ಸಾಕ್ಷ್ಯಚಿತ್ರ.
https://fb.watch/jPdmMvwdwK/?mibextid=2Rb1fB
(ಹಿಂದಿ ಭಾಷೆಯಲ್ಲಿದೆ.
ಅವಧಿ :ಆರು ನಿಮಿಷಗಳು)

2. ವಿಶ್ವ ರಂಗಭೂಮಿ ದಿನದ ಸಂದರ್ಭದಲ್ಲಿ (2023 ಮಾರ್ಚ್ 27) ಕೇರಳದ
ಪೇಟೆಯೊಂದರಲ್ಲಿ ಅಭಿನಯಿಸಿದ ಬೀದಿನಾಟಕದ ವಿಡಿಯೋ.
വാക്ക്/ തെരുവ് നാടകം/
march 27, ലോക നാടക ദിനം/Directed by, Dr. Pradeepan Muraleedharan/Song by Kannan Siddarth & Resa

ലോക നാടക ദിനത്തിൽ അവതരിപ്പിച്ച തെരുവ് നാടകം #വാക്ക്

നന്ദഗോപൻ വെള്ളത്താടി
(ಮಲಯಾಳಂ ಭಾಷೆಯಲ್ಲಿದೆ ಅವಧಿ :5 ನಿಮಿಷಗಳು.)

‍ಲೇಖಕರು avadhi

12 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading