
ಶ್ರೀಪ್ರಕಾಶ್
ಇವತ್ತು ಊಟ ಮಾಡುವಾಗ ಚಿಕ್ಕಿ ನೆನಪಾದರು .
ಇಷ್ಟೆಲ್ಲಾ ಬ್ರಾಂಡ್ ಉಪ್ಪಿನ ಕಾಯಿಗಳಿದ್ರೂ ಒಂದೊಂದು ಸರ್ತಿ ಯಾವುದೂ ಚೆನ್ನಾಗಿಲ್ಲ ಅನ್ನಿಸಿಬಿಡುತ್ತದೆ. ನನಗಿನ್ನೂ ನೆನಪಿದೆ. .ಶಾಲೆಯಿಂದ ಬಂದಾಗ ಗೊಜ್ಜನ್ನನೋ, ಉಪ್ಪಿನಕಾಯಿ ಕಲಸಿದ ಅನ್ನವನ್ನೋ ಮುದ್ದೆ ಕಟ್ಟಿ ತಿನ್ನುತ್ತಿದ್ದೆವು . ಮನೆಯಲ್ಲೇ ಉಪ್ಪಿನಕಾಯಿ ಮಾಡಿ ದೊಡ್ಡ ದೊಡ್ಡ ಭರಣಿಗಳಲ್ಲಿ ಕಟ್ಟಿ ಇಡುತ್ತಿದ್ದರು. ವರ್ಷಗಟ್ಟಲೆ ರುಚಿಕೆಡದೆ ಇರುತ್ತಿತ್ತು.
ಅದರಲ್ಲೂ ನಮ್ಮ ಚಿಕ್ಕಿ ಗದ್ಗೋಡು ಸಾವಿತ್ರಮ್ಮ ಮಾಡುವ ಮಾವಿನ ಕಾಯಿ ಉಪ್ಪಿನ ಕಾಯಿ ರುಚಿ ಅದ್ಭುತ ! ಈಗ ಚಿಕ್ಕಿಗೆ ವಯಸ್ಸಾಗಿದೆ . ಎಷ್ಟೋ ಬಾರಿ ಅನ್ನಿಸುತ್ತದೆ ನಮ್ಮ ಹಿರಿಯರು ನಮ್ಮ ಬಗ್ಗೆ ತೋರಿದ ಪ್ರೀತಿ ಆಸ್ಥೆಗೆ ಪ್ರತಿಯಾಗಿ ನಾವು ಏನನ್ನೂ ಮಾದುತ್ತಿಲ್ಲವ್ವಲ್ಲ ಅಂತ !
ನಮ್ಮ ಅಜ್ಜನ ಮನೆ ಕೊಗ್ರೆ ಗೆ ಹತ್ತಿರದಲ್ಲೇ ಗದ್ಗೋಡು. ಅಲ್ಲಿದ್ದ ದೊಡ್ಡ ದೊಡ್ಡ ಬಂಡೆಗಳಿಂದ ಕೂಡಿದ ಭಾರೀ ಸದ್ದು ಮಾಡುವ ಹಳ್ಳದಲ್ಲಿ ಬಂಡೆಯಿಂದ ಬಂಡೆಗೆ ನೆಗೆಯುತ್ತಿದ್ದೆವು. ಏನೋ.. ನಮ್ಮ ಆಯಸ್ಸು ಗಟ್ಟಿ ಇತ್ತು ಆಗೇನೂ ಆಗಲಿಲ್ಲ ಅಂತ ಈಗ ನೆನೆಸಿದರೆ ಅನ್ನಿಸುತ್ತದೆ.
ಅಲ್ಲೆಲ್ಲಾ ಹೋದಾಗ ನಮಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ, ಸಂಜೆ ರುಚಿ ರುಚಿಯಾದ ಅಪ್ಪಚ್ಚಿ ತಿನ್ನಲು ಕೊಟ್ಟು ಉಪಚರಿಸುತ್ತಿದ್ದ ಬಗೆ ನೆನೆದರೆ ಆ ಹಿರಿಯರ ತಾಳ್ಮೆ ಪ್ರೀತಿಗೆ ಮನಸ್ಸು ತುಂಬಿ ಬಂದು ಶಿರ ಬಾಗುತ್ತದೆ





0 Comments