ತಂಗಾಳಿ ಸಾಲು
–ಮಹಾಮನೆ
1
ದೇವಮಾನವ ಹೇಳಿದ..
ಯಾರಾದರೂ
ನಿಮ್ಮ ಒಂದು
ಕೆನ್ನೆಗೆ ಹೊಡೆದರೆ
ಮತ್ತೊಂದು ಕೆನ್ನೆಯನ್ನು
ಹೊಡೆಯಲು ಕೊಡಿ
ಹೀಗೇ..
ನಾನು
ಅವಳ ಒಂದು
ಕೆನ್ನೆಗೆ ಮುತ್ತು ಕೊಟ್ಟೆ
ನಂತರ
ಅವಳಿಗೆ
ದೇವಮಾನವನ
ವಾಣಿ ನೆನಪಿಸಿದೆ
ಮಾಯ್ಕಾರ ಎಂದು
ನಸುನಗುತ್ತಾ
ಅವಳು
ನನ್ನ ಕೆನ್ನೆಯನ್ನೇ
ಕಚ್ಚುಬಿಡಬೇಕೆ..
ಆಹಾ…!!!!
2
ಏಕಾಂತ
ಮೌನದಲಿ ಮುಳುಗಿದ್ದೆ
ತೇಲಿ ಬಂತು
ತಿಳಿಗಾಳಿ
ಮನೆ ಮುಂದಲ
ಹೂ ಬಳ್ಳಿಗಳು
ನಗೆ ಚಲ್ಲುತ್ತಿದ್ದವು
ಕೋಗಿಲೆಯೊಂದು
ಹಾಡುತ್ತಿತ್ತು
ಅತ್ತ ತಿರುಗಿದೆ
ದೂರದಲಿ
ಸವಿ
ನಡೆದು ಬರುತ್ತಿದ್ದಳು
3
ಬಿಳೆ ಎಸಳಿನಂತವಳೆ
ಎಳೆ ಬಿಸಲಂತೆ ನಗುವವಳೆ
ಕೆಳ ತುಟಿಯ
ತಳದಲಿ
ಪಳಗುಡುವ
ಕರಿ ಮಚ್ಚೆ
ಸೆಳೆದು ಎನ್ನ
ಹುಚ್ಚು ಹಿಡಿಸಿದೆಯಲ್ಲೇ
ಇಳಿ ಸಂಜೆಗೆ ಬಾರೆ
ಊರಾಚೆ ಬೋರೆಯ
ಹುಳಿ ಮಾವ ತೋಪಲಿ
ಕಾಯುತಿರುವೆ..






0 Comments