ಇಲ್ಲೊಂದು ಪ್ರಶ್ನೆ: ಪ್ರಧಾನಿ ಅಭ್ಯರ್ಥಿ ಆಯ್ಕೆ ಸರಿಯೇ?

ಪ್ರವೀಣ್ ಕೆ

ಮಾಲ್ಡೀವ್ಸ್ ನಿಂದ

ನರೇಂದ್ರ ಮೋದಿಯ ಪರ ಹಾಗೂ ವಿರೋಧ ನಡೆಯುತ್ತಿರುವ ಚರ್ಚೆಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ. ಇಂದಿನ ಮತದಾರ ಮೊದಲೇ ತುಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾನೆ. ಅವನ ಗೊಂದಲವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನಗಳನ್ನು ರಾಜಕೀಯ ಪಕ್ಷಗಳು ನಿರಂತರವಾಗಿ ಶೋಧಿಸುತ್ತ ಹೊರಟಿವೆ. ಇಂದಿನ ಮಾರುಕಟ್ಟೆ ಜಗತ್ತು ರಾಜಕಾರಣಿಗಳಿಗೆ ಹೊಸ ಹೊಸ ಐಡಿಯಾಗಳನ್ನು ಕೊಡುತ್ತಿದೆ.
ಗ್ರಾಹಕರಿಗೆ ಅನೇಕ ಆಯ್ಕೆಗಳು ಇದ್ದರೆ ಅವರು ತಮಗೆ ಅತ್ಯಂತ ಇಷ್ಟವಾದುದನ್ನು ಒಳ್ಳೆಯ ಗುಣಮಟ್ಟದ್ದನ್ನು ಆದಷ್ಟು ಕಡಿಮೆ ಬೆಲೆಯಲ್ಲಿ ಕೊಳ್ಳಬಹುದು. ಆದರೆ ತಮ್ಮ ಸರಕನ್ನು ಹೆಚ್ಚು ಮಾರುವುದಕ್ಕೆ ಉದ್ಯಮಗಳು ತರಾವರಿ ಯೋಜನೆಗಳನ್ನು, ಹೊಸ ಹೊಸ ವಿಧಾನಗಳನ್ನು, ತಂತ್ರಗಳನ್ನು ಹೂಡುತ್ತವೆ. ಅವುಗಳಿಗೆ ಅಮಾಯಕ ಗ್ರಾಹಕ ಬಲಿ ಬೀಳುತ್ತಾನೆ. ಅಂಥವುಗಳಲ್ಲಿ ಒಂದು ಗ್ರಾಹಕನ ಮುಂದಿರುವ ಆಯ್ಕೆಗಳನ್ನು ಕಡಿಮೆ ಮಾಡುತ್ತ ಹೋಗುವುದು. ತಮ್ಮ ಸರಕಿಗೆ ಒಂದು ವಿಶಿಷ್ಟತೆಯನ್ನು ನೀಡಿ ಅದು ಬೇರಾವುದೇ ಬ್ರಾಂಡಿನಲ್ಲಿ ಲಭ್ಯವಿಲ್ಲ ಎಂದು ತೋರಿಸಿ ಗ್ರಾಹಕರಿಗೆ ಆಮಿಷ ತೋರಿಸುವುದು. ಹಾಗೆ ತೋರಿಸುವುದರ ಮೂಲಕ ಅದರ ಗುಣಮಟ್ಟ ಹಾಗೂ ಉಪಯುಕ್ತತೆಯ ಬಗೆಗೆ ಗ್ರಾಹಕ ಯೋಚಿಸಲು ಅವಕಾಶವಿಲ್ಲದಂತೆ ಮಾಡುವುದು.

ಈ ತಂತ್ರವನ್ನು ನಾವು ಇಂದು ಪ್ರಧಾನ ಮಂತ್ರಿಯನ್ನು ಮೊದಲೇ ಘೋಷಿಸುವುದರಲ್ಲಿ ಉಪಯೋಗಿಸುತ್ತಿರುವುದನ್ನು ಕಾಣಬಹುದು. ಈ ಪ್ರಧಾನಿ ಅಭ್ಯರ್ಥಿಯ ಘೋಷಣೆ ಆದಾಗಿನಿಂದ ಲಾಗಾಯ್ತು ಆ ಒಬ್ಬ ವ್ಯಕ್ತಿಯ ಬಗೆಗೆ ಗಂಭೀರವಾದಂಥ ಚರ್ಚೆಗಳು ಆಗುತ್ತಿವೆಯೇ ಹೊರತು ನಿಜವಾದ ಅರ್ಥದಲ್ಲಿ ಚುನಾವಣೆಯೊಂದು ಎದುರಿಗಿದ್ದಾಗ ಆಗಬೇಕಾದ ಚಚರ್ೆಗಳು ಮಾಯವಾಗಿವೆ. ಈ ಪ್ರಧಾನಿಯನ್ನು ಮೊದಲಿಗೇ ಒಂದು ಪಕ್ಷ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿಯೇ ದೋಷವಿದೆ.
ಮೊದಲನೆಯದಾಗಿ, ಪ್ರಧಾನಿಯನ್ನು ಆಯ್ಕೆ ಮಾಡಲು ಅಧಿಕಾರವಿರುವುದು ಮತದಾರರು ಆರಿಸಿ ಕಳಿಸಿರುವ ತಂತಮ್ಮ ಕ್ಷೇತ್ರದ ಪ್ರತಿನಿಧಿಗಳಿಗೆ ಮಾತ್ರ. ಆದರೆ ಆ ಹಕ್ಕನ್ನು ರಾಜಕೀಯ ಪಕ್ಷಗಳು ಕಬಳಿಸಿಕೊಂಡು ಬಿಟ್ಟಿವೆ. ಹೀಗೆ ಪ್ರಧಾನಿ ಅಭ್ಯರ್ಥಿಯನ್ನು ಮೊದಲೇ ಆರಿಸುವ ಅವಕಾಶ ಸಂವಿಧಾನ ಕಲ್ಪಿಸುವುದಿಲ್ಲ. ಹಾಗೆ ಅವಕಾಶ ಕಲ್ಪಿಸಿದ ಪಕ್ಷದಲ್ಲಿ ಅದು ಪಾರ್ಲಿಮೆಂಟರಿ ಪ್ರಜಾಪ್ರಭುತ್ವವಾಗದೇ ಅಮೇರಿಕಾದಲ್ಲಿರುವಂತ ಅಧ್ಯಕ್ಷೀಯ ಪ್ರಜಾಪ್ರಭುತ್ವವಾಗುತ್ತದೆ. ಅದು ಭಾರತಕ್ಕೆ ಸರಿ ಹೊಂದುವುದಿಲ್ಲ ಎಂಬುದನ್ನು ಮನಗಂಡೇ ಸಂವಿಧಾನದ ಕರ್ತೃಗಳು ಪಾರ್ಲಿಮೆಂಟರಿ ಪ್ರಜಾಪ್ರಭುತ್ವವನ್ನು ಆರಿಸಿಕೊಂಡರು.
ಭಾರತದಂಥ ವಿಶಾಲ ದೇಶದಲ್ಲಿ ಪ್ರತಿಯೊಂದು ಪ್ರದೇಶಕ್ಕೆ ತನ್ನದೇ ಆದ ಸಮಸ್ಯೆಗಳಿವೆ, ತನ್ನದೇ ಆದ ವಿಶಿಷ್ಟತೆಗಳಿವೆ, ಅನೇಕ ಧರ್ಮ, ಜಾತಿಗಳು, ಜನಾಂಗಗಳು, ಭಾಷೆ, ಸಂಸ್ಕೃತಿ, ಪ್ರಾದೇಶಿಕ ಭಿನ್ನತೆಗಳಿವೆ. ಹಾಗಾಗಿ ಆಯಾ ಪ್ರದೇಶದಿಂದ ಒಳ್ಳೆಯ ಪ್ರತಿನಿಧಿಯನ್ನು ಆರಿಸಿ ತಂದು ಆಯಾ ಸಮಸ್ಯೆಗಳನ್ನು ಅರಿತಂಥ ಪ್ರತಿನಿಧಿಗಳು ಅವುಗಳನ್ನು ಸರಕಾರದ ಮುಂದೆ ಇಟ್ಟು ಅವುಗಳಿಗೆ ಸರಿಯಾದ ಪರಿಹಾರವನ್ನು ಒದಗಿಸಿಕೊಡುವ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇಡೀ ದೇಶದ ಸಮಸ್ಯೆಗಳನ್ನು ಗ್ರಹಿಸಿ ಅವುಗಳಿಗೆ ಪರಿಹಾರವನ್ನು ಒದಗಿಸುವುದಕ್ಕಾಗಿಯೇ ಕೇಂದ್ರ ಸರಕಾರದ ಆಯ್ಕೆ ನಡೆಯುತ್ತಿದೆಯಾದರೂ ಅದು ಎಲ್ಲ ಪ್ರತ್ಯೇಕತೆಗಳನ್ನು ಒಂದುಗೂಡಿಸಿ ಆಗಬೇಕಾದ ಸರಕಾರವೇ ಹೊರತು, ಒಂದು ಅಧಿಕಾರ ಕೇಂದ್ರದಿಂದ ಕೆಳಗೆ ಹರಿಯುವ ಅಧಿಕಾರ ಮಾರ್ಗವಲ್ಲ.
ಈ ಮೈಕ್ರೋ – ವಿಕೇಂದ್ರಿಕೃತ ಆಡಳಿತ ವಿಧಾನವನ್ನು ಬುಡಮೇಲು ಮಾಡುವ ಯೋಜನೆ ಈ ಪ್ರಧಾನಿ ಅಭ್ಯರ್ಥಿಯ ಘೋಷಣೆ. ಇದರಿಂದ ಪ್ರದೇಶ, ಪಕ್ಷ, ಆ ಪಕ್ಷದ ತತ್ವಗಳಿಗಿಂತ ವ್ಯಕ್ತಿ ಮಹತ್ವದವನಾಗಿ ಬಿಡುತ್ತಾನೆ. ಇದು ಒಂದು ರೀತಿ ಸಾಮ್ರಾಜ್ಯಶಾಹಿಯ ಪುನರುತ್ಥಾನದಂತೆ ಕಾಣುತ್ತದೆ. ಈ ಒಂದು ಯೋಜನೆಯಿಂದಾಗಿ ಇವತ್ತು ದೇಶದ ಮುಂದಿರುವ ಸಮಸ್ಯೆಗಳು, ಆಯಾ ಪಕ್ಷದ ತತ್ವಪ್ರಣಾಳಿಕೆಗಳು, ಸರಕಾರವೆಂಬ ಸಾಮೂಹಿಕ ಪ್ರಜ್ಞೆಯ ಬಗೆಗಿನ ಚರ್ಚೆ ಪೂರ್ತಿಯಾಗಿ ಮಾಯವಾಗಿ ಮುಂದೆ ಪ್ರಧಾನಿಯಾಗುವವನ ಅರ್ಹತೆ ಹಾಗು ಅವನ ಚರಿತ್ರೆ ಮುಂತಾದವುಗಳ ಚರ್ಚೆ ಮಂಚೂಣಿಗೆ ಬರುತ್ತಿದೆ. ಇದರಿಂದಾಗಿ ಭಾರತವನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳು ಮತದಾರರ ಅರಿವಿನಿಂದ ಮಾಯವಾಗಿ ಬರೀ ವ್ಯಕ್ತಿಯೊಬ್ಬನ ಆರಾಧನೆ, ದ್ವೇಷ ಮುಖ್ಯವಾಗಿ ಬಿಟ್ಟಿದೆ.
ಪ್ರಧಾನಿಯ ಆಯ್ಕೆಯನ್ನು ಪಕ್ಷಗಳು ಮುಂಚಿತವಾಗಿ ಮಾಡಿ ಆತನನ್ನು ತಮ್ಮ ಟ್ರಂಪಕಾರ್ಡ ಆಗಿ ಚುನಾವಣೆಯನ್ನು ಎದುರಿಸಲು ತಯಾರಿ ನಡೆಸುವುದರಿಂದ ಪ್ರಜಾಪ್ರಭುತ್ವದ ಅನೇಕ ತತ್ವಗಳನ್ನು ಗಾಳಿಗೆ ತೂರಿದಂತಾಗುತ್ತದೆ. ಆಯಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತ ಸ್ಪರ್ಧೆ ಎಂಥವನೇ ಇರಲಿ ಅವನಿಗೆ ಮತ ಹಾಕುವುದರಿಂದ ನೀವು ಈ ಪ್ರಧಾನಿ ಅಭ್ಯರ್ಥಿಗೆ ಮತ ಹಾಕುತ್ತಿದ್ದೀರಿ ಎಂದು ಬಿಂಬಿಸಿ ಪ್ರಚಾರ ಮಾಡುವುದರಿಂದ ನಾವು ಎಂಥ ಪ್ರತಿನಿಧಿಗಳನ್ನು ಕೇಂದ್ರ ಸರಕಾರಕ್ಕಾಗಿ ಆರಿಸುತ್ತಿದ್ದೇವೆ ಎಂಬುದನ್ನು ಅಲಕ್ಷ್ಯ ಮಾಡುವ ಪರಿಸ್ಥಿತಿ ಎದುರಾಗುತ್ತದೆ.
ಇದು ಮತದಾರನ ಕಣ್ಣಿಗೆ ಹೊಸ ಬಣ್ಣದ ಪಟ್ಟಿಯನ್ನು ಕಟ್ಟಿ ಮತ ಹಾಕಲು ಒತ್ತಾಯಿಸಿದಂತಾಗುತ್ತದೆ. ಮತದಾರನನ್ನು ದಾರಿ ತಪ್ಪಿಸಲು ಇದೊಂದು ಸುಮಧುರವಾದ ಮಾರ್ಗ. ಪ್ರಾಮಾಣಿಕನಾದ ಒಬ್ಬ ಮನುಷ್ಯನನ್ನು ತೋರಿಸಿ ಉಳಿದ ಭ್ರಷ್ಟಾಚಾರಿಗಳನ್ನು ರಕ್ಷಿಸುವ ಮಾರ್ಗವಾಗಿದೆ. ಒಂದು ರಾಜ್ಯದಲ್ಲಿ ಮಾಡಿದನು ಎನ್ನಲಾದ ಅನೇಕ ಅಭಿವೃದ್ಧಿ ಕಾರ್ಯಗಳನ್ನೇ ಮಾನದಂಡವನ್ನಾಗಿ ಒಪ್ಪಿಕೊಂಡು ಉಳಿದ 200ಕ್ಕೂ ಹೆಚ್ಚಿನ ಜನರ ವ್ಯಕ್ತಿತ್ವ, ಹಿನ್ನೆಲೆಗಳನ್ನು ರಕ್ಷಿಸುವ ಸುಲಭದ ದಾರಿಯಾಗುತ್ತದೆ.
ಸರಕಾರ ನಡೆಸುವುದು ಒಂದು ಟೀಮ್ ವರ್ಕ ಎನ್ನುವ ಪರಿಕಲ್ಪನೆಯನ್ನು ಧ್ವಂಸಗೊಳಿಸಿ, ಅದೊಂದು ಏಕಚಕ್ರಾಧಿಪತ್ಯ ಎಂಬಂತೆ ಬಿಂಬಿಸಲಾಗುತ್ತದೆ. ಹಾಗೆ ಒಬ್ಬನ ಹೆಸರಿನ ಮೇಲೆ ಆರಿಸಿ ಬಂದ ಸರಕಾರದ ಚುಕ್ಕಾಣಿ ಆ ವ್ಯಕ್ತಿಯ ಕೈಗೆ ಸಿಕ್ಕು ಉಳಿದವರ ಯಾವುದೇ ಅಭಿಪ್ರಾಯಗಳಿಗೆ ಬೆಲೆಯೇ ಇಲ್ಲದಂತೆ ಆಗುತ್ತದೆ. ಸರಿ ತಪ್ಪುಗಳ ಚರ್ಚೆಗೆ ಅವಕಾ  ಇಲ್ಲದಂತೆ ಒಬ್ಬ ವ್ಯಕ್ತಿಗೆ ಮನಸೋ ಇಚ್ಛೆ ದೇಶವನ್ನು ಆಳಲು ಅಪರಿಮಿತ ಅಧಿಕಾರ ನೀಡಿದಂತಾಗುತ್ತದೆ. ಎಷ್ಟೇ ನಿಷ್ಕಳಂಕ, ದೂರಗಾಮಿ, ಮಹಾತ್ಮನಂಥ ಮನುಷ್ಯನ ಕೈಯಲ್ಲಿ ಕೂಡ ಇಂಥ ಅಧಿಕಾರ ಕೊಟ್ಟಾಗ ಆತ ಎಷ್ಟೇ ಒಳ್ಳೆಯ ರೀತಿಯಲ್ಲಿ ಆಡಳಿತ ನೀಡಿದಾಗಲೂ ಕೂಡ ಕೆಲ ಸಮಯದ ನಂತರ ಆ ಅಪರಿಮಿತ ಅಧಿಕಾರವೇ ದುರಾಡಳಿತಕ್ಕೆ ಎಡೆ ಮಾಡಿ ಕೊಡುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.
ಈ ಎಲ್ಲ ಮತ್ತು ಇನ್ನೂ ಅನೇಕ ದುಷ್ಪರಿಣಾಮಗಳನ್ನು ಮುಂಚಿತವಾಗಿ ಗ್ರಹಿಸಿಕೊಂಡೇ ಭಾರತವನ್ನು ಅಧ್ಯಕ್ಷೀಯ ಪ್ರಜಾಪ್ರಭುತ್ವವನ್ನಾಗಿಸದೇ ಪಾರ್ಲಿಮೆಂಟರಿ ಪ್ರಜಾಪ್ರಭುತ್ವವನ್ನಾಗಿ ನಮ್ಮ ಸಂವಿಧಾನದ ನಿರ್ಮಾತೃಗಳು ನಿರ್ಧರಿಸಿರಬೇಕು. ಇಂದು ಆ ಪರಿಕಲ್ಪನೆಯನ್ನೇ ಬುಡಮೇಲು ಮಾಡುವ ತಂತ್ರವೇ ಈ ಪ್ರಧಾನಿ ಅಭ್ಯರ್ಥಿಯನ್ನು ಮುಂಚಿತವಾಗಿ ಆಯಾ ಪಕ್ಷ ನಿರ್ಧರಿಸುವ ಹೊಸ ಮಾರ್ಗ. ಈ ಹಿನ್ನೆಲೆಯಲ್ಲಿಯೇ ಇಂದು ಪ್ರಧಾನಿ ಅಭ್ಯರ್ಥಿಯ ಬಗೆಗಿನ ಪರ ವಿರೋಧ ಚರ್ಚೆಗಳಿಗಿಂತ ರಾಜಕೀಯ ಪಕ್ಷಗಳ ಈ ಅಸಂವೈಧಾನಿಕ ತಂತ್ರವನ್ನು ಪ್ರಶ್ನಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎನಿಸುತ್ತದೆ.

‍ಲೇಖಕರು G

September 17, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Ananda Prasad

    ಇದೊಂದು ಪ್ರಬುದ್ಧ ಚಿಂತನೆ ಹಾಗೂ ಸಂಪೂರ್ಣ ಒಪ್ಪತಕ್ಕ ವಿಶ್ಲೇಷಣೆ. ಇಂಥ ಚಿಂತನೆಯನ್ನು ದೇಶವ್ಯಾಪಿ ಜನಜಾಗೃತಿಗಾಗಿ ಬಳಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಎಲ್ಲರೂ ಮುಂದಾಗಬೇಕಿದೆ. ಇದು ಎಲ್ಲ ವಿದ್ಯಾವಂತ ನಾಗರಿಕರ ಜವಾಬ್ದಾರಿಯೂ ಹೌದು. ಭಾರತದಲ್ಲಿ ಅಧ್ಯಕ್ಷೀಯ ಪದ್ಧತಿಯ ಪ್ರಜಾಪ್ರಭುತ್ವ ಇದ್ದಿದ್ದರೆ ಯಾವಾಗಲೋ ಪ್ರಜಾಪ್ರಭುತ್ವ ನಾಶವಾಗಿಬಿಡುತ್ತಿತ್ತು. ಅಧ್ಯಕ್ಷೀಯ ಪ್ರಜಾಪ್ರಭುತ್ವ ಪದ್ಧತಿಯಲ್ಲಿರುವ ದೊಡ್ಡ ಅಪಾಯ ಎಂದರೆ ಆಯ್ಕೆಯಾಗುವ ವ್ಯಕ್ತಿ ಸರ್ವಾಧಿಕಾರ ಮನೋಭಾವದ ವ್ಯಕ್ತಿಯಾಗಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಲಭದಲ್ಲಿ ನಾಶ ಮಾಡಿಬಿಡಬಹುದು. ಅಪ್ರಬುದ್ಧರೂ, ಸ್ವಾರ್ಥಿಗಳೂ, ಚಿಂತನೆಯ ಲವಲೇಶ ಇಲ್ಲದ ರಾಜಕಾರಣಿಗಳೇ ಹೆಚ್ಚಾಗಿರುವ ಭಾರತದಲ್ಲಿ ಅಧ್ಯಕ್ಷೀಯ ಪದ್ಧತಿ ಸರ್ವಾಧಿಕಾರಕ್ಕೆ ಸುಲಭದ ದಾರಿಯಾದೀತು. ಹೀಗಾಗಿ ಚುನಾವಣೆಗೂ ಮೊದಲೇ ಪ್ರಧಾನಿ ಅಭ್ಯರ್ಥಿಯ ಘೋಷಣೆ ಮಾಡುವುದು ಸಂಸದೀಯ ಪ್ರಜಾಸತ್ತೆಗೆ ಮಾಡುವ ಅಪಚಾರ. ಇಂಥ ಕೆಟ್ಟ ಪರಂಪರೆಯನ್ನು ಹುಟ್ಟು ಹಾಕಿರುವ ಬಿಜೆಪಿಯ ಧೋರಣೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಇದರ ವಿರುದ್ಧ ಜನ ಜಾಗೃತಿ ಮಾಡಬೇಕಾದ ಅಗತ್ಯ ಇದೆ. ದೇಶದ ಎಲ್ಲಾ ಭಾಷೆಗಳ ಜ್ಞಾನಪೀಠ ಪುರಸ್ಕೃತ ಸಾಹಿತಿಗಳು, ಖ್ಯಾತ ಚಿಂತಕರು, ವಿಜ್ಞಾನಿಗಳು, ಸಾಮಾಜಿಕ ಹೋರಾಟಗಾರರು ಈ ಬಗ್ಗೆ ದೇಶದಲ್ಲಿ ಧ್ವನಿ ಎತ್ತಬೇಕಾದ ಅಗತ್ಯ ಇದೆ. ಇದು ಯು. ಆರ್. ಅನಂತಮೂರ್ತಿಯವರಿಗೆ ಮಾತ್ರ ಸಂಬಂಧಿಸಿದ ವಿಚಾರವಲ್ಲ. ಈ ನಿಟ್ಟಿನಲ್ಲಿ ದೇಶದ ಎಲ್ಲ ಪ್ರಜ್ಞಾವಂತರೂ, ಬುದ್ಧಿ ಜೀವಿಗಳೂ ಧ್ವನಿ ಎತ್ತಬೇಕಾಗಿದೆ.

    ಪ್ರತಿಕ್ರಿಯೆ
  2. ಪ್ರಮೋದ್

    ನಾನು ಟೈಟಲ್ ಓದಿಕೊ೦ಡು, ಇದೊ೦ದು ಬುದ್ದಿ ಜೀವಿಗಳನ್ನು ಆಕರ್ಷಿಸುವ ಇನ್ನೊ೦ದು ರಾಜಕೀಯ ಪ್ರೇರೇಪಿತ (ದೇಶ ಬಿಡುವ ಲೇಖನ) ಲೇಖನ ಇರಬಹುದು ಅ೦ದುಕೊ೦ಡೆ. ಸದ್ಯ ಹಾಗಾಗಲಿಲ್ಲ.. 🙂
    ಸಿದ್ದು, ಮೋದಿ ಹೊಗಳಿಕೆ ಬೇಡ, ತೆಗೆಳಿಕೆಯೂ ಬೇಡ. ಇ೦ತಹ ವಿಷಯಗಳ ಮೇಲೆ ಹತ್ತು ವರ್ಷ ಡಿಬೇಟ್ ಮಾಡಿದರೂ ನಮ್ಮ ಬಾಯಿ/ಕೈ ಸವೆಯುವುದು ಮಾತ್ರ. ಕೇಳುವವರ ಮೆದುಳು ಜಾಸ್ತಿ ಎ೦ಟ್ರೋಪಿಯನ್ನು ಅಟ್ರಾಕ್ಟ್ ಮಾಡುತ್ತದೆ ಅಷ್ಟೇ. ಅವಧಿಯನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಲಿ ತೆಗೆದುಕೊಳ್ಳಬಾರದು.
    “ಚೆನ್ನೈ ಎಕ್ಸ್ ಪ್ರೆಸ್” ಅ೦ತಹ ಚಿತ್ರ 200 ಕೋಟಿ ವ್ಯವಹಾರ ಮಾಡಿದ ಮೇಲೆ ಈ ದೇಶದ ಭವಿಷ್ಯ ಬಗ್ಗೆ ಜಾಸ್ತಿ ಮಾತಾನಾಡದೆ ಸುಮ್ಮನಿದ್ದರೆ ಒಳ್ಳೆಯದು. 😀

    ಪ್ರತಿಕ್ರಿಯೆ
  3. malini guruprasanna

    U R R8. MODIYA BAGGE GAMANA HARISUTTA NAMMA NAMMA KSHETRADA ABHYARTHIGALANNU KADEGANISALU SAADHYAVE..?

    ಪ್ರತಿಕ್ರಿಯೆ
  4. deepaG

    sir tamma lekhana hechchu prastutavagide adare kevala hattaru odugar barahagarar chintanegint lakshantar matadararu e nittinalli yochisuv hagu nirdar kaigolluv avashyakate ide adare sada hanh hendakke bayibidavu namma prabhudhdh prajegal gaman e kadege harisuvudu tusu kashtave sari….

    ಪ್ರತಿಕ್ರಿಯೆ
  5. Anonymous

    ಪ್ರಧಾನಿ , ಮುಖ್ಯಮಂತ್ರಿ.. ಇವರೆಲ್ಲರನ್ನೂ ಆಯ್ಕೆ ಮಾಡಿ ಮಾಡಿ ಸೋತು ಸುಣ್ಣವಾಗಿಬಿಟ್ಟೀದ್ದಾರೆ ನಮ್ಮ ಜನಗಳು ..ಯಾ ರನ್ನು ಆಯ್ಕೆ ಮಾಡಿದರೂ ಒಂದೇ ಹಣೆಬರಹ…. ನಾವ್ ನೆಮ್ಮದಿಯಿಂದ ಜೀವನ ಮಾಡೋ ಹಾಗಿದ್ರೆ ಸಾಕು.. ಎಲ್ಲೂ ಗಲಾಟೆ ಹಿಂಸಾತ್ಮಕ ಘಟನೆ ನಡೆಯದೆ ನಮ್ಮಷ್ಟಕ್ಕೆ ನಮ್ಮನ್ನು ಇರ ಬಿಟ್ರೆ ಅದುವೇ ದೊಡ್ದ ಉಪಕಾರ. . ನಾಯಕರು ಬೇಕು ಅನ್ನೋ ಕಾರಣಕ್ಕೆ ಮಾತ್ರ ಆಯ್ಕೆ … ನಮಗೆ ಬೆಲೆ ಏರಿಕೆಯ ಒತ್ತಡ ಹಾಕಿ ಹಾಕಿ ನಮ್ಮನ್ನು ಬೀದಿಗೆ ತಂದು ಅವರ ಖಜಾನೆ ತುಂಬಿಸಿ ಇಟ್ಕೊಂಡ್ರು ಪರವಾಗಿಲ್ಲ ಆದರೆ ಸ್ವಚ್ಚಂದವಾಗಿ , ಸ್ವತಂತ್ರವಾಗಿ ದುಡಿದು ತಿನ್ನಲು ಬಿಡಿ. ..ಈಗ ಈಗ ಬೆಲೆ ಏರಿಕೆಯ ಬಿಸಿಯ ತಾಪ ಬಹಳ ತಟ್ಟಿದೆ .. ಹೀಗಾದರೆ ದಿನ ಕೂಲಿ ಮಾಡಿ ಒಂದು ಹೊತ್ತಿನ ಅನ್ನ ತಿನ್ನೋದಕ್ಕೂ ನಾವ್ ಯೋಚನೆ ಮಾಡಬೇಕಾಗಿದೆ …

    ಪ್ರತಿಕ್ರಿಯೆ
  6. Anonymous

    Nobody selected a Prime Minister. They just put forth the name of the Prime Minister candidate from their party. Obviously the Prime Minister would be elected as per a valid electoral process. This is just to boost the party image using the image of an individual. In this case, the BJP is trying to woo the voters by telling, if you want Modi to become PM, then you need to elect BJP candidate everywhere, irrespective of the individual candidates ability, so they get the majority to form a Government. There is no rule against projecting a person’s image to the people as the face of the party. Even in history you can see that people have favored a party based on an individual person’s image within the party. ex: Atal Bihari Wajpayee and Indira Gandhi.

    ಪ್ರತಿಕ್ರಿಯೆ
  7. Raj

    Everybody is thinking from the author’s point of view, so this is in a way his success!
    But, you need to always consider the counter argument to judge an opinion, just consider for a moment what has happened in our unfortunate country so far. In the current system until well after the elections people will have no clue who is their leader! This is kind of blindfolding people, they won’t know what kind of leader they are going to get after all the electoral exercise, there is a very good chance and it has already happened many time as everyone knows, they might get an utterly incompetent, puppet, spineless and impotent leader like Dr/Mr/Prof. Singh!
    So, it is better and even advisable to tell people in advance like: “See, if our party wins the election, this is the leader you are getting for next 5 years” instead of “just blindly vote for us, we will then decide among ourselves who will be the face of the government while anyone from behind might be pulling the strings”!
    Now, think, you want to keep the tried and failed experiment that our system is using now or a bold step which might either be success or failure in future, but at least can’t get any worse than it is already.
    Come on guys, if we as a country want to be respected in international stages we need bold and decisive leaders, and not drama artists as our foot licking leaders.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: