ಡಾ ಜಗದೀಶ್ ಕೊಪ್ಪ ಧಾರವಾಡ
ಇತ್ತೀಚೆಗೆ ನಾನು ಕಥೆ, ಕಾವ್ಯ ಮತ್ತು ಕಾದಂಬರಿಗಳ ಮೇಲಿನ ಆಸಕ್ತಿ ಕಳೆದುಕೊಂಡಿದ್ದೇನೆ.
20012ರಲ್ಲಿ ನಾನು ಓದಿದ ಸುಮಾರು ಅರವತ್ತಕ್ಕೂ ಹೆಚ್ಚಿನ ಕೃತಿಗಳಲ್ಲಿ ಇಂಗ್ಲೀಷ್ ಭಾಷೆಯ ಕೃತಿಗಳು ಹೆಚ್ಚಾಗಿದ್ದವು. ಅವುಗಳಲ್ಲಿ ಆತ್ಮ ಕಥನದ ಪ್ರಕಾರಗಳೇ ಅಧಿಕ. ಕನ್ನಡದಲ್ಲಿ ನಾನು ಓದಿದ ಎಂಟತ್ತು ಕೃತಿಗಳಲ್ಲಿ ನೆನಪಿನಲ್ಲಿ ಉಳಿದದ್ದು ಎರಡು ಕೃತಿಗಳು ಮಾತ್ರ. ಅವುಗಳಲ್ಲಿ
ಎ.ಕೆ. ರಾಮಾನುಜನ್ ಅವರ ” ಆಯ್ದ ಪ್ರಬಂಧಗಳು’

ಕೆ. ಸತ್ಯನಾರಾಯಣರ “ಹೆಗ್ಗುರುತು’ ಕಥಾ ಸಂಕಲನ.
ಇಂಗ್ಲೀಷ್ ಭಾಷೆಯಲ್ಲಿ ಐವತ್ತಕ್ಕು ಹೆಚ್ಚು ಕೃತಿಗಳನ್ನು ಓದಿದ್ದರೂ ಕೂಡ ನನ್ನ ಮೇಲೆ ಪರಿಣಾಮ ಬೀರಿದ ಕೃತಿಗಳು ಈ ಕೆಳಗಿನಂತಿವೆ
ಖ್ಯಾತ ರೂಪದರ್ಶಿ ವಾರಿಸ್ ಡಿರಿಸ್ ಳ ” Desert Flower’ ಆತ್ಮ ಕಥನ
ಗ್ರಾಮೀಣ ಬ್ಯಾಂಕ್ ಸಂಸ್ಥಾಪಕ ಮಹಮ್ಮದ್ ಯೂನಸ್ ಅವರ” Banker to The poor” ಆತ್ಮ ಕಥನ
ಅಮುಲ್ ಸಂಸ್ಥಾಪಕ ಡಾ. ಕುರಿಯನ್ ಅವರ” I too had a Dreams” ಆತ್ಮ ಕಥನ
ಆಂಧ್ರದ ದಲಿತ ಲೇಖಕ ವೈ.ಬಿ. ಸತ್ಯನಾರಾಯಣರ ‘ My father Baliaya” ಆತ್ಮ ಕಥನ
ಸಿತಾರ್ ವಾದಕ ಪಂಡಿತ್ ರವಿಶಂಕರ್ ರವರ ಮೊದಲ ಪತ್ನಿ ಅನ್ನಪೂರ್ಣ ದೇವಿಯವರ “An unheard Melody” ಆತ್ಮ ಕಥನ
ಬಂಗಾಳಿ ಭಾಷೆಯ ದಲಿತ ಕಥಾ ಸಂಕಲನ ” Survival And Others Stories’
ಖ್ಯಾತ ಇತಿಹಾಸ ತಜ್ಞ ಕೆ.ಎನ್. ಅಯ್ಯಪ್ಪ ಪಣಿಕ್ಕರ್ ಅವರ” Colonialism, Culture, And Resistance” ಪ್ರಬಂಧಗಳು
ಅಂತರಾಷ್ಟ್ರೀಯ ಮಟ್ಟಸ ಅಂಕಣಕಾರ ಪಂಕಜ್ ಮಿಶ್ರ ಬರೆದ “From The Ruins of Empire” ( The Revolt Against The west And The Remaking Asia)
ಮತ್ತು ಆರ್ಥಿಕ ತಜ್ಞ ಅಮಿತ್ ಬಾಧುರಿಯವರ ” The Face You Were Afraid To See” ಭಾರತದ ಅಸಮತೋಲನ ಅಭಿವೃದ್ಧಿ ಕುರಿತ ಪ್ರಬಂಧಗಳು.





‘Desert Flower’ ಸಿನಿಮಾ ಸಹ ತುಂಬಾ ಚೆನ್ನಾಗಿದೆ.
nice ii hosa pustikegala bagge nanage gotte iralilla sir… olle odu..ondistu books rarisikolluve…