ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ಸೆಸ್ಟ್ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ

ಅಗಮ್ಯ ಗಮನ ಸಂಬಂಧ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ

-ಡಾ.ಎಸ್.ಬಿ.ಜೋಗುರ

ಅಗಮ್ಯಗಮನ ಸಂಬಂಧ [incest] ಎನ್ನುವದು ತಂದೆ-ಮಗಳು, ತಾಯಿ-ಮಗ, ಸಹೋದರ-ಸಹೋದರಿ ಮುಂತಾದ ಸಂಬಂಧಗಳಲ್ಲಿ ನಡೆಯುಬಹುದಾದ ಲೈಂಗಿಕ ಕ್ರಿಯೆಗಳಿಗೆ ಸಂಬಂಧಿಸಿದೆ. ಈ ಬಗೆಯ ಸಂಬಂಧಗಳು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ತೀರಾ ಪ್ರಾಚೀನ ಕಾಲದಲ್ಲಿ, ಪುರಾಣ ಮಹಾಕಾವ್ಯಗಳ ಕಾಲದಲ್ಲಿ ಸ್ವೀಕೃತ ಎನ್ನುವಂತೆ ಇರಬಹುದಾದ ಉದಾಹರಣೆಗಳೂ ಇಲ್ಲದಿಲ್ಲ. ಬ್ರಹ್ಮ ತನ್ನ ಮಗಳೊಂದಿಗೆ ಹೊಂದಿರುವ ಸಂಬಂಧ, ಯಮ ತನ್ನ ಸಹೋದರಿ ಯಮಿಯೊಂದಿಗೆ ಹೊಂದಿರುವ ಸಂಬಂಧಗಳು ಈ ಪ್ರಕಾರದ್ದಾಗಿವೆ. ಮಧ್ಯ ಅಮೇರಿಕೆಯಲ್ಲಿ ರೆಡ್ ಇಂಡಿಯನ್ನರು ತಮ್ಮ ಮಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಬಗ್ಗೆ ಉಲ್ಲೇಖಗಳಿವೆ. ಹಾಗೆಯೇ ಕೆಲವು ಪ್ರಾಚೀನ ರಾಜಮನೆತನಗಳಲ್ಲಿಯೂ ಈ ಬಗೆಯ ಆಚರಣೆಗಳಿದ್ದವು. ತಮ್ಮದು ಪರಿಶುದ್ಧ ರಕ್ತ ಅದರ ಸಂರಕ್ಷಣೆಯು ತಮ್ಮ ಪರಮಕರ್ತವ್ಯ ಎನ್ನುವ ಹಿನ್ನೆಲೆಯಲ್ಲಿ ಈ ಬಗೆಯ ಸಂಬಂಧಗಳು ಆಗ ಅನಿವಾರ್ಯವಾಗಿದ್ದವು. ಪ್ರಾಚೀನ ಈಜಿಪ್ತ ಮತ್ತು ಇರಾನಗಳಲ್ಲಿ ಸಹೋದರಿಯರನ್ನು ವಿವಾಹವಾಗುವ ಕ್ರಮವಿತ್ತು. ಕ್ಲೀಯೋಪಾತ್ರಾ ತನ್ನ ಸಹೋದರ ಟಾಲೆಮಿಯನ್ನೇ ವಿವಾಹವಾದ ಪ್ರಸ್ತಾಪವಿದೆ. ಪ್ರಾಚೀನ ಕಾಲದ ರೋಮನ್ನರಲ್ಲಿಯೂ ಈ ಬಗೆಯ ಅಗಮ್ಯಗಮನ ವಿವಾಹಕ್ಕೆ ಸಮ್ಮತಿಯಿತ್ತು. ಮುಂಗೋಲಿಯನ್, ರಷ್ಯನ್, ಕೊಶರ್ಕನ್ಸ್, ಐರಿಷ್, ಮೀಡ್ಸ್, ಕಾಂಬೊಡಿಯುನ್ಸ್, ಅಮೇರಿಕಾದ ರೆಡ್ ಇಂಡಿಯುನ್ಸ್, ಎಸ್ಕಿಮೋಗಳು, ಟಿಟೀನ್ಸ್ ಮುಂತಾದ ಜನಾಂಗಗಳಲ್ಲಿ ಈ ಬಗೆಯ  ಅಗಮ್ಯಗಮನ ಸಂಬಂಧ ಪ್ರಚಲಿತದಲ್ಲಿತ್ತು. ಖ್ಯಾತ ಚಿಂತಕ ಬರ್ಟಂಡ್ ರಸಲ್ ಅವರು ತಮ ‘ಮ್ಯಾರೇಜ್ ಆಂಡ್ ಮಾರಲ್ಸ್’ ಎನ್ನುವ ಕೃತಿಯಲ್ಲಿ ಈ ಅಗಮ್ಯಗಮನ ಸಂಬಂಧಗಳ ಅಸ್ಥಿತ್ವದ ಬಗ್ಗೆ ಪ್ರಸ್ತಾಪಿಸಿರುವದಿದೆ.

ಹ್ಯಾವಲಾಕ್ ಎಲ್ಲಿಸ್ ಎನ್ನುವ ಮನ:ಶಾಸ್ತ್ರಜ್ಞ ತನ್ನ ಕೃತಿ ‘ಸ್ಟಡೀಸ್ ಆಫ  ದಿ ಸೈಕಾಲಾಜಿ ಆಫ ಸೆಕ್ಸ್’ ಎನ್ನುವದರಲ್ಲಿ ‘ಕೌಟುಂಬಿಕ ಪರಿಸರದಲ್ಲಿ ತಂದೆ-ತಾಯಿ, ಮಕ್ಕಳು ಸಹೋದರ ಸಹೋದರಿಯರು ಬೆಳೆದು ಬರುವ ರೀತಿಯ ಮಧ್ಯೆ ತಪ್ಪಿಯೂ ಈ ಅಗಮ್ಯಗಮನ ಸಂಬಂಧಕ್ಕೆ ಆಸ್ಪದವೇ ಇಲ್ಲ’ ಎಂದಿದ್ದಾರೆ. ಆದಾಗ್ಯೂ ಡಯಾನಾ ರಸಲ್ರವರು ಸುಮಾರು 4.5 ಪ್ರತಿಶತ ಸಂಬಂಧಗಳು ತಂದೆ -ಮಗಳ ನಡುವಿನ ಅಗಮ್ಯಗಮನ ಸಂಬಂಧಗಳಾಗಿರುವ ಬಗ್ಗೆ ಅವರು ಸ್ಯಾನಫ಼್ರಾನ್ಸಿಸ್ಕೋದಲ್ಲಿ ಮಾಡಲಾದ ಅಧ್ಯಯನದ ಮೂಲಕ ಗುರುತಿಸಿರುವದಿದೆ. ಹಿಂದೊಮ್ಮೆ ಬ್ರಿಟಿಷ ಮೂಲದ ನ್ಯಾಯಾಧೀಶ ಮೆಕಾಟರ್ ಎನ್ನುವವರು ತಂದೆ ಮಗಳನ್ನು ಬಲತ್ಕರಿಸಿದ, ಸಹೋದರ ತನ್ನ ಮಂದಬುದ್ಧಿಯ ಸಹೋದರಿಯನ್ನು ಕೆಡಿಸಿದ ಅನೇಕ ಉದಾಹರಣೆಗಳು ನ್ಯಾಯಾಲಯದಲ್ಲಿ ದಾಖಲಾಗಿವೆ ಎಂದಿದ್ದರು. ಈ ಬಗೆಯ ಅಗಮ್ಯಗಮನ ಸಂಬಂಧಗಳನ್ನು ಯೋಚಿಸಲು ಸಾಧ್ಯವೇ ಇಲ್ಲ ಎನ್ನಬಹುದಾದ ನಮ್ಮ ನೆಲದಲ್ಲಿಯೇ ಇಂಥಾ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತವೆ. ಇನ್ನು ಕತ್ತಲಲ್ಲಿಯೇ ಉಳಿಯುವ ಪ್ರಮಾಣಗಳೆಷ್ಟೋ..?

ಮುಗ್ದ ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವವರ ಪೈಕಿ ಸಂಬಂಧಿಗಳು, ಪರಿಚಿತರು, ಸ್ನೇಹಿತರ ವಲ0ುದಲ್ಲಿರುವವರೇ ಹೆಚ್ಚು ಎನ್ನುವದನ್ನು ಅನೇಕ ಅಧ್ಯಯನಗಳು ತೋರಿಸಿವೆ. ಮಕ್ಕಳ ಪಾಲಿಗಂತೂ ಈ ಬಗೆಯ ಸಂಬಂಧಗಳು ಬಿಸಿ ತುಪ್ಪದಂತೆ ಇತ್ತ ಹೇಳುವಂತೆಯೂ ಇಲ್ಲ, ಹೇಳದೇ ಇರುವಂತೆಯೂ ಇಲ್ಲ. ಅನೇಕ ಸಂದರ್ಭಗಳಲ್ಲಿ ತಮ್ಮ ತಂದೆ-ತಾಯಿಗಳು ‘ಆ ಅಂಕಲ್ ತುಂಬಾ ಒಳ್ಳೆಯವರು’ ಎಂದು ಪರಿಚಯ ಮಾಡಿಸಿದ ಮೇಲೆಯೂ ಆ ಅಂಕಲ್ ಎಂಬುವಾತ ಆ ಮಗುವನ್ನು ಲೈಂಗಿಕವಾಗಿ ಶೋಷಿಸಿದಾಗ ಆ ಮಗುವಿಗೆ ಪಾಲಕರ ಮುಂದೆ ಹೇಳಲಾಗುವದಿಲ್ಲ. ಅವನ ಹೆಸರು ರಾಕೇಶ ಆತ ಒಬ್ಬಳು ವಿಧವೆ ಹೆಣ್ಣಿನ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿರುವದಿತ್ತು. ಅದು ಯಾವ ಬಗೆಯ ಸಂಬಂಧ ಎನ್ನುವದು ಆ ವಿಧವೆಯ ಹನ್ನೊಂದು ವರ್ಷದ ಮಗಳು ಅರ್ಪಿತಾಗೆ ತಿಳಿದಿರಲಿಲ್ಲ. ತಾಯಿಯಾದವಳು ಮತ್ತೆ ಮತ್ತೆ ಅರ್ಪಿತಾಗೆ ಅವರು ತುಂಬಾ ಒಳ್ಳೆಯವರು ಎಂದೇ ಬಿಂಬಿಸುತ್ತಾ ಬಂದಿರುವದಿತ್ತು. ಅದೇ ನಂಬುಗೆಯಲ್ಲಿ ಮಗಳು ಅರ್ಪಿತಾ ಬೆಳೆಯುತ್ತಿರುವಾಗಲೇ ಒಂದು ದಿನ ತನ್ನ ಮಗಳ ಸ್ಥಾನದಲ್ಲಿರುವ ಅರ್ಪಿತಾಳ ಮೇಲೆಯೇ ಈ ಧೂರ್ತ ರಾಕೇಶ ಕೈ ಹಾಕಿದ. ಅರ್ಪಿತಾಳಲ್ಲಿ ತಾಯಿ ಆತನ ಬಗ್ಗೆ ಹೇಳಿದ ಅಭಿಪ್ರಾಯಗಳು ಹಾಗೇ ಗಟ್ಟಿಯಾಗಿಯೇ ಉಳಿದಿದ್ದವು. ಅದನ್ನು ಬಳಸಿಕೊಂಡೇ ಆತ ಅರ್ಪಿತಾಳನ್ನು ನಿರಂತರವಾಗಿ ಲೈಂಗಿಕವಾಗಿ ಶೋಷಿಸತೊಡಗಿದ.

ಇತ್ತೀಚಿಗೆ ಪ್ರೆಂಚ್ ಮೂಲದ ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಮಗಳನ್ನು ಲೈಂಗಿಕವಾಗಿ ಶೋಷಣೆ ಮಾಡಿದ ಬಗ್ಗೆ ರಾಜ್ಯದ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಾಗಿರುವದಿದೆ. ಮೊನ್ನೆಯಷ್ಟೇ ‘ಹಿಂದುಸ್ಥಾನ್ ಟೈಮ್ಸ್ ಪತ್ರಿಕೆ'[9-10-2012] ಗಾಜಿಯಾಬಾದ್ ನಲ್ಲಿ 17 ವರ್ಷದ ಬಾಲಕಿಯೊಬ್ಬಳು ತನ್ನ ತಂದೆಯೇ ತನ್ನನ್ನು ಲೈಂಗಿಕವಾಗಿ ಮತ್ತೆ ಮತ್ತೆ ಶೋಷಣೆ ಮಾಡುತ್ತಿದ್ದಾನೆ ತಾನು ಸ್ನಾನ ಮಾಡುವಾಗ ತನ್ನ ಬಟ್ಟೆಗಳನ್ನು ಕದ್ದೊಯ್ಯುವದು, ತನ್ನ ಜನಾಂಗಗಳನ್ನು ಸ್ಪರ್ಷಿಸುವದು ಮಗಳೆಂಬ ಸಂಬಂಧವನ್ನು ಮರೆತು ಅಶ್ಲೀಲವಾದ ಮ್ಯಾಸೇಜ್ ಕಳುಹಿಸುವದನ್ನು ಮಾಡುವ ಬಗ್ಗೆ ಫೊಲಿಸರಿಗೆ ನೀಡಿದ ಕಂಪ್ಲೇಂಟ್ ಒಂದರಲ್ಲಿ ಆ ಬಾಲಕಿ ದೂರಿದ್ದಾಳೆ. ಡಯಾನಾ ರಸಲ್ ಎನ್ನುವವರು 80 ರ ದಶಕದಲ್ಲಿ ಸುಮಾರು 930 ರಷ್ಟು ಮಾದರಿಗಳನ್ನು [ಮಹಿಳೆ0ುರು]  ಮಾಡಿ ಅವರಿಗೆ ಬಾಲ್ಯದಲ್ಲಿ ಅಗಿರಬಹುದಾದ ಅಗಮ್ಯಗಮನ ಸಂಬಂಧಗಳಲ್ಲಿಯ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದಳು. ಈ 930 ಮಹಿಳೆ0ುರಲ್ಲಿ ಸುಮಾರು 16 ಪ್ರತಿಶತದಷ್ಟು ಮಹಿಳೆಯರು ತಮ್ಮ 18 ವರ್ಷ ವಯೋಮಿತಿ ತಲುಪುವದರೊಳಗಾಗಿ ಒಂದಿಲ್ಲಾ ಒಂದು ಬಗೆಯ ಅಗಮ್ಯಗಮನ ಸಂಬಂಧದಲ್ಲಿಯ ಲೈಂಗಿಕ ಶೋಷಣೆಯ ಬಗ್ಗೆ ಮಾತನಾಡಿರುವದಿದೆ. ಹಾಗೆಯೇ 152 ಮಹಿಳೆಯರು ತಮಗೆ ಸಂಬಂಧಗಳಲ್ಲಿಯೇ ಉಂಟಾದ 186 ಬಗೆಯ ಲೈಂಗಿಕ ಶೋಷಣೆಯ ಅನುಭವವನ್ನು ಡಯಾನಾ ರಸಲ್ ಎದುರು ಹಂಚಿಕೊಂಡಿರುವದಿದೆ.  ಇದರಲ್ಲಿ ಸುಮಾರು 12 ಪ್ರತಿಶತ ಮಹಿಳೆ0ುರು ಅವರಿನ್ನೂ 14 ವರ್ಷ ತಲುಪುವದರೊಳಗೆ ತಮ್ಮ ಸಂಬಂಧಿಗಳಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಗ್ಗೆ ಮಾಹಿತಿ ನೀಡಿರುವದಿದೆ. ರಸಲ್ ಸ್ಯಾನ್ ಫé್ರಾನ್ಸಿಸ್ಕೋದಲ್ಲಿ ತನ್ನ ಅಧ್ಯಯನ ಮಾಡಿರುವರಾದರೂ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ಬಗೆಯ ಅಗಮ್ಯಗಮನ ಸಂಬಂಧಗಳ ಹಾವಳಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಇದ್ದೇ ಇದೆ. ನಿನ್ನೆ ಮೊನ್ನೆಯಷ್ಟೇ ದೆಹಲಿಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದ 12 ವರ್ಷದ ಬಾಲಕಿಯ ಮೇಲೆ ಆಕೆಯನ್ನು ಪ್ರತಿನಿತ್ಯ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವ್ಯಾನ್ ಡ್ರೈವರೇ ಅತ್ಯಾಚಾರವೆಸಗಿದ ಬಗ್ಗೆ ವರದಿಯಾಗಿದೆ.

ಡಯಾನಾ ರಸಲ್ ಬೇಬಿ ಸಿಟರ್ ಒಬ್ಬನಿಂದ, ತಂದೆಯಿಂದ, ಸಹೋದರನಿಂದ, ನೆರೆಯವನಿಂದ, ಚಿಕ್ಕಪ್ಪನಿಂದ ಹೀಗೆ ಅನೇಕ ಹತ್ತಿರದ ಸಂಬಂಧಿಗಳಿಂದಲೇ ಲೈಂಗಿಕ ದೊರ್ಜನ್ಯಕ್ಕೊಳಗಾದ ವಸ್ತು ಸ್ಥಿತಿ ಅಧ್ಯಯನಗಳನ್ನು ಆಕೆ ತನ್ನ ಕೃತಿಯಲ್ಲಿ ಮಾಹಿತಿ ನೀಡಿರುವದಿದೆ. ರಾಶೆಲಾ ಎನ್ನುವ ಬಾಲಕಿ 10 ವರ್ಷದವಳಿದ್ದಾಗ ಆಕೆ ಇದ್ದ ವಸತಿಶಾಲೆಯ ವಾರ್ಡನ್ ಆಕೆಯನ್ನು ಬೆತ್ತಲು ಮಾಡಿ ತನ್ನ ಜನನಾಂಗಗಳನ್ನು ಮುಟ್ಟುವಂತೆ ಪ್ರಚೋದಿಸಿದ ಬಗ್ಗೆ ಆಕೆ ಸಂಶೋಧಕಿ ಡಯಾನಾ ರಸಲ್ ಎದುರು ಹೇಳಿಕೊಂಡಿರುವದಿದೆ. ಇದು ಕೆವಲ ಒಂದು ಬಾರಿಯಲ್ಲ, ಸುಮಾರು ಹತ್ತಾರು ಬಾರಿ ಎನ್ನುವದನ್ನು ರಾಶೆಲಾ ಹೇಳಿರುವದಿದೆ.  ಡಯಾನಾ ರಸೆಲ್ ತನ್ನ ಅಧ್ಯಯನದಲ್ಲಿ ಕಂಡುಕೊಂಡ ಸಂಗತಿಗಳೆಂದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಹತ್ತಿರದ ಸಂಬಂಧಿಗಳು, ಸ್ನೇಹಿತರು, ಮಲತಂದೆ ಇಲ್ಲವೆ ಮಲತಾಯಿ, ವಸತಿಶಾಲೆಗಳಲ್ಲಿ ಈ ಬಗೆಯ ಲೈಂಗಿಕ ದೌರ್ಜನ್ಯಗಳು ಹೆಚ್ಚು ಎನ್ನುವದನ್ನು ತಮ್ಮ ಅಧ್ಯಯನದ ಮೂಲಕ ತೊರಿಸಿರುವದಿದೆ. ತಂದೆ ಮಗಳನ್ನು ಲೈಂಗಿಕವಾಗಿ ಶೋಷಿಸುವ ಅಗಮ್ಯಗಮನ ಸಂಬಂಧದ ಪ್ರಮಾಣವನ್ನು ಸ್ಯಾನ್ ಫé್ರಾನ್ಸಿಸ್ಕೊ ನಗರದಲ್ಲಿ 4.5 ಪ್ರತಿಶದಷ್ಟಿರುವ ಬಗ್ಗೆಯೂ ಆಕೆ ತನ್ನ ಅಧ್ಯಯನದಲ್ಲಿ ತಿಳಿಸಿರುವದಿದೆ. ಬಾಲಕ ಇಲ್ಲವೇ ಬಾಲಕಿ ಒಟ್ಟಾರೆ ನಿರಾಕರಿಸಲಾಗದ ಸ್ಥಿತಿಯಲ್ಲಿಯೇ ಈ ಬಗೆಯ ಲೈಂಗಿಕ ದೌರ್ಜನ್ಯಗಳು ಜರುಗುವ ರೀತಿಯನ್ನು ಆಕೆ ಕೆಲ ಸ್ಥಿತಿ ಅಧ್ಯಯನಗಳಲ್ಲಿ ಚಿತ್ರಿಸಿರುವದಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎನ್ನುವದು 18 ವರ್ಷದೊಳಗಿನ ಬಾಲಕ ಇಲ್ಲವೇ ಬಾಲಕಿಯ ಜೊತೆಗಿನ ಲೈಂಗಿಕ ಕ್ರಿಯೆ ಎಂದಾಗುತ್ತದೆ. ಡಯಾನಾ ಮಾತ್ರ ಈ ಲೈಂಗಿಕ ಕ್ರಿಯೆ ಇಲ್ಲವೇ ದೌರ್ಜನ್ಯ ಎನ್ನುವದನ್ನು ಕೇವಲ ಅವರೊಂದಿಗೆ ಭೌತಿಕ ಸಂಪರ್ಕ ಹೊಂದುವದಕ್ಕೆ ಮಾತ್ರ ಸೀಮಿತಗೊಳಿಸದೇ ಅವರನ್ನು ಮುಟ್ಟುವದು, ಅವರ ಜನನಾಂಗಗಳನ್ನು ಸ್ಪರ್ಷಿಸುವದು, ಅಶ್ಲೀಲವಾದ ಚಿತ್ರಗಳನ್ನು ತೋರಿಸುವದು ಮುಂತಾದ ಅಂಶಗಳನ್ನೊಳಗೊಂಡು ಈ ಲೈಂಗಿಕ ದೌರ್ಜನ್ಯ ಎನ್ನುವ ಪದವನ್ನು ಅವರು ಬಳಿಸಿರುವದಿದೆ.

ಈ ಬಗೆಯ ಅಗಮ್ಯಗಮನ ಸಂಬಂಧಗಳಲ್ಲಿಯ ಲೈಂಗಿಕ ದೌರ್ಜನ್ಯಕ್ಕೆ ಕಾರಣಗಳು

ಪುರುಷ ಪ್ರಾಧಾನ್ಯತೆ

ತಂದೆ-ತಾಯಿ ಇಲ್ಲದಿರುವದು

ತಾಯಿ ಮಾತ್ರ ಇರುವದು

ದುರ್ಬಲವಾಗಿರುವ ತಂದೆ ತಾಯಿಗಳು

ಹೆಚ್ಚು ಜನ ಒಂದೇ ಕಡೆ ಮಲಗುವ ಕುಟುಂಬ

ಮನೆಯಿಂದ ದೂರ ಉಳಿಯುವದು

ಇನ್ನೊಬ್ಬರ ಮನೆಯಲ್ಲಿ ಉಳಿಯುವದು ಇಲ್ಲವೆ ವಸತಿಗೃಹದಲ್ಲಿ ಉಳಿಯುವದು

ಮಗುವಿನ ಮುಗ್ದತೆ ಮತ್ತು ಅಸಹಾಯಕತೆ

ಪರಿಣಾಮಗಳು

ನಿದ್ರಾ ಹೀನತೆ, ರಾತ್ರಿಯ ಭಯ, ಮನೋ ವಿಕಾರಗಳು

ಬಾಲ್ಯದಲ್ಲಿಯೇ ಗರ್ಭಧಾರಣೆ

ಕೀಳರಿಮೆ,ತಪ್ಪಿತಸ್ಥ ಪ್ರಜ್ಞೆ

ಲೈಂಗಿಕ ಅನಾಸಕ್ತಿ

ಸಂಬಂಧಗಳ ಬಗ್ಗೆ ಹೇಸಿಕೆ

ಅನಾರೋಗ್ಯ, ಮಾನಸಿಕ ಖಿನ್ನತೆ

ಆತ್ಮಹತ್ಯೆ

ಲೈಂಗಿಕ ರೊಗಗಳಿಗೆ ಸಿಲುಕುವದು

ನಿಯಂತ್ರಣ

ಫéಿಂಕ್ಲರ್ ಎನ್ನುವ ಚಿಂತಕರು ಹೇಳುವ ಹಾಗೆ ಮಕ್ಕಳಿಗೆ ಮನೆಯಲ್ಲಿ ಈ ಬಗೆಯ ಕೃತ್ಯಗಳನ್ನು ಪ್ರತಿರೋಧಿಸುವ ಬಗ್ಗೆ ತಿಳುವಳಿಕೆ ಮತ್ತು ಶಿಕ್ಷಣವನ್ನು ನೀಡಬೇಕು ಕೆಲಬಾರಿ ಒತ್ತಡದಿಂದ ಈ ಬಗೆಯ ಲೈಂಗಿಕ ದೌರ್ಜನ್ಯಗಳು ಜರುಗುವ ಬಗೆಯನ್ನು ಅವರು ಡಯಾನಾ ರಸಲ್ ರ ಒಂದು ಸ್ಥಿತಿ ಅಧ್ಯಯನವನ್ನು ಆಧರಿಸಿ ಅವರು ಮಾತನಾಡಿರುವದಿದೆ. ಆತ ಆ ಮಗುವಿನ ಮಲತಂದೆ. ಆಕೆ ಮಲಗುವ ಕೋಣೆಗೆ ನುಗ್ಗಿದ ಚೀರಿದರೆ ತಲೆದಿಂಬನ್ನು ಬಾಯಿಗೆ ಹಿಡಿದು ಸಾಯಿಸುವದಾಗಿ ಹೇಳಿದ. ಆ ಬಾಲಕಿಯ ಮೇಲೆ ರಾಕ್ಷಸನಂತೆ ಎರಗಿದ. ಆ ಬಾಲಕಿಗೆ ದಿಕ್ಕೇ ತೋಚಲಿಲ್ಲ ತಕ್ಷಣವೇ ಕೈಗೆ ಸಿಕ್ಕ ಹ್ಯಾಮರ್ ಒಂದರಿಂದ ಆತನ ತಲೆಗೆ ಹೊಡೆದು ಓಡಿ ಹೋದಳು ಎನ್ನುವದನ್ನು ಹೇಳುತ್ತಾ ಇದು ಎಲ್ಲ ಬಾಲಕಿಯರಿಗೆ ಸಾಧ್ಯವಾಗುವದಿಲ್ಲ ಎನ್ನುವ ವಾಸ್ತವವನ್ನೂ ಅವರು ಚರ್ಚಿಸಿದ್ದಾರೆ. ಒಟ್ಟಾರೆ ಮೇಲೆ ಹೇಳಲಾದ ಕಾರಣಗಳಿಂದ ಅವಳನ್ನು ಬಿಡುಗಡೆಗೊಳಿಸಿದರೆ ತಕ್ಕ ಮಟ್ಟಿಗೆ ಈ ಬಗೆ0ು ದೌರ್ಜನ್ಯದಿಂದ ಅವಳನ್ನು ಪಾರು ಮಾಡಬಹುದು. ಆ ದಿಶೆಯಲ್ಲಿ ಮಕ್ಕಳಿಗೆ ಸೂಕ್ತ ಶಿಕ್ಷಣ ಮತ್ತು ತರಬೇತಿಯ ಅವಶ್ಯಕತೆಯೂ ಇದೆ. ಪಾಲಕರು ಈ ಬಗೆಯ ಅಗಮ್ಯಗಮನ ಸಂಬಂಧಗಳ ಬಗ್ಗೆ ತುಂಬಾ ಹುಷಾರಾಗಿರಬೇಕು.ನಿಮ್ಮ ಮಕ್ಕಳನ್ನು ಮಾನಸಿಕವಾಗಿ ರಿಪೇರಿ ಮಾಡಲಾಗದ ರೀತಿಯ ಅಡ್ಡ ಪರಿಣಾಮಗಳಿಗೆ ಈ ಬಗೆಯ ಲೈಂಗಿಕ ಸಂಬಂಧಗಳು ಕಾರಣವಾಗುವದಿದೆ.

 

‍ಲೇಖಕರು G

23 October, 2012

1 Comment

  1. Samvartha 'Sahil'

    Thanks for the article Dr.

    Some clarifications required. Does ‘INCEST’ differ from sexual assault and rape? I ask because to the best of my limited understanding and knowledge INCEST means sexual intercourse between two partners who are too closely related to marry each other like- father and daughter, mother and son, brother and sister, grandparents and grandchildren. Here there is no ‘forceful’ act but a willful act on both parties. So the issue of incest, it appears to me, differs majorly different from sexual violence which you speak of in this article. How do we address incest and how do we view it? If i am not wrong Freud mentions about the ‘attraction’ that a son will have for his mother and the attraction that daughter will have for her father. What if this attraction gets translated into action. Now this is no sexual violence as we understand sexual violence where the act is against the will of one of the parties involved. Incest is based on conscience and hence needs to be viewed differently and understood differently, i feel. A walk through some pornographic sites will open our eyes to the fact that there are plenty of ‘incest stories’ that get penned and read in those sites. The readership itself indicates that in the deepest fantasies of many there is a desire for incest. Let us not shy away from it but accept it. Now how do we understand this desire and the act of sexual intercourse between people closely related to marry, without being too moral about it? How do we locate it in the history of sexuality? These are some of the questions that i feel like asking being curious to know the answers. Kindly throw some light on them. Else the issue of sexual violence though needs to be discussed needs no dialogue for there can be no doubt in the fact that sexual violence- if done by close blood relatives or unknown persons- is wrong.

    Thank you.

    Samvartha ‘Sahil’

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading