ಇನ್ನೊಬ್ಬರ ಹೆಸರಲ್ಲಿ ಪ್ರಕಟವಾಗಿತ್ತು. .!

ಪ್ರಿಯ ಸ್ನೇಹಿತರೆ,

ನಾನು ಮಂಡ್ಯ ಎಂಬ ದೊಡ್ಡ ಹಳ್ಳಿಯ ಹೆಣ್ಮಗಳು. .!! ಅಷ್ಟೇನು ಹೆಸರುವಾಸಿಯಲ್ಲದ, ತೋಚಿದ್ದನ್ನು ಗೀಚುವ ಹವ್ಯಾಸವಿರುವ, ನಿರೂಪಣೆಯೆಂಬ ಕಲೆಯನ್ನು ಅರ್ಜಿಸಿ ಪ್ರೀತಿಸುವ ..ನೋವು, ಅವಮಾನ, ಅಸಹಾಯಕತೆಯನ್ನೆ ಬೆನ್ನಿಗೆ ಕಟ್ಟಿಕೊಂಡ , ಆಡಿಕೊಂಡವರ ಮಧ್ಯೆ ಛಲದಿಂದ ಬದುಕಬೇಕೆಂದು ಹಪಹಪಿಸಿ ಬದುಕುತ್ತಿರುವವಳು. ನೋವು ಸಾಗರದಷ್ಟಿದ್ದರೂ ನಗುವಿನ ಮುಖವಾಡವನ್ನೇ ಹೆಚ್ಚು ಪ್ರೀತಿಸುವವಳು. .!

mandya bhavani5ಅಂಥ ಅದೆಷ್ಟೋ ನೋವಿನ ಘಳಿಗೆಗಳೇ ಸಾಲುಗಳಾಗಿ, ಅವಮಾನಗಳೇ ಪದಗಳಾಗಿ ಜನಿಸಿದ ಕಥೆಗಳಿವೆ. ಪದಪದ್ಯಗಳಿವೆ…!! ಸಾಲುಗಳಿಗೆ ಸಾವಿಲ್ಲ ಎಂಬ ನಂಬಿಕೆಯಲ್ಲಿ ಹುಟ್ಟಿಕೊಂಡ ಈ ನನ್ನ ಸಾಲುಗಳನ್ನು ಅದೊಂದು ದಿನ ಎಫ್ ಬಿ ಯಲ್ಲಿ ಗಮನಿಸಿ ಪ್ರೋತ್ಸಾಹಿಸಿದ ನನ್ನ ನೆಚ್ಚಿನ ಕವಿರತ್ನ ಚಿತ್ರಸಾಹಿತಿ ಡಾ. ನಾಗೇಂದ್ರ ಪ್ರಸಾದ್ ರವರು ತಾವೇ ಗೌರವ ಸಂಪಾದಕರಾಗಿ ಹೊರತಂದ ‘ಕನ್ನಡ ಮಾಣಿಕ್ಯ’ ಪತ್ರಿಕೆಯಲ್ಲಿ ಪ್ರಕಟಿಸಿದರು. .

ಅದಾದ ನಂತರದ ಬೆಳವಣಿಗೆಯೇ ಬೇರೆ. .! ಅವರ ಆಶೀರ್ವಾದದಿಂದ ಈ ಸಾಲುಗಳು ವಾಟ್ಸಾಪಿನ ಗ್ರೂಪುಗಳಲ್ಲಿ, ಪೋಸ್ಟರು, ಬ್ಯಾನರು, ಪತ್ರಿಕೆಗಳಲ್ಲಿ ಓಡಾಡಿಬಿಟ್ಟಿತು. ಆದರೆ ಅವೆಲ್ಲ ಬೇರೆ ಬೇರೆ ರೂಪದಲ್ಲಿ ಬೇರೆ ಬೇರೆ ಹೆಸರುಗಳಲ್ಲಿ. ..! ಇರಲಿ. …!

ಹಿಂದೊಮ್ಮೆ ಪತ್ರಿಕೆಗೆ ಕಳಿಸಿದ್ದ ನನ್ನದೇ ಪದ್ಯ ಅದೆಲ್ಲೋ ಇನ್ನೊಬ್ಬರ ಹೆಸರಲ್ಲಿ ಪ್ರಕಟವಾಗಿತ್ತು. .! ಮತ್ತೊಂದೆಡೆ ನಾನೇ ಕಾಪಿ ಮಾಡಿದ್ದೇನೆ ಎಂಬಂತೆ ಮಾತಾಡಿದ್ದರಿಂದ ಈ ಕ್ಲಾರಿಫಿಕೇಷನ್ ಇಲ್ಲಿ ಕೊಡಬೇಕಾಯಿತು. .

ಬಳಸಿಕೊಂಡವರ ವಾಲ್ ಗಳಲ್ಲಿ ಸಾವಿರಕ್ಕೂ ಮಿಕ್ಕಿ ಲೈಕುಗಳು, ನೂರಾರು ಷೇರುಗಳಾದಾಗ ಇಲ್ಲಿ ಹೇಳಬೇಕಾಯಿತು. .!

ಹೆಸರು ಮಾಡಬೇಕೆಂಬ ಉದ್ದೇಶದಿಂದ ನಾನೆಂದೂ ಬರೆವುದಿಲ್ಲವಾದರೂ ಬಳಸಿಕೊಂಡ ನನ್ನದೇ ಸಾಲುಗಳ ಕೆಳಗೆ ನನ್ನ ಹೆಸರಿರಲಿ ಅಂತ ಬಯಸುವುದು ಅತ್ಯಂತ ಸಾಮಾನ್ಯ ಮನುಷ್ಯ ಸಹಜ ಗುಣವಷ್ಟೇ. ..!

ಕೆಲವರು ಸ್ವಾಮೀಜಿಗಳ ಹೆಸರಲ್ಲೂ …ಕೆಲವರು ಬೇರೆ ಬೇರೆಯವರ ಹೆಸರಲ್ಲೂ ಪ್ರಕಟಿಸಿದರು..!

ಈ ಬಗ್ಗೆ ಸ್ನೇಹಿತೆರೊಂದಿಗೆ ಆತ್ಮೀಯರೊಂದಿಗೆ ಹೇಳಿಕೊಂಡಾಗ ಈ ಸಲಹೆ ನೀಡಿದರು. .! ಅದಕ್ಕಾಗಿ ನಿಮ್ಮೊಂದಿಗೆ ಹೇಳಿಕೊಂಡೆ…ಆ ಬಗೆಯ ಪ್ರೀತಿ ಪಡೆದ ಸಾಲುಗಳು ಈ ಕೆಳಗಿವೆ…ಒಪ್ಪಿಸಿಕೊಳ್ಳಿ.

mandya bhavani1

mandya bhavani2

 

mandya bhavani4

‍ಲೇಖಕರು admin

March 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಪಾರ್ವತಿ

    ಹೆಣ್ಣಿನ ದನಿಗೆ ಗಂಡಿನ ಮುಖ!!
    ಆಹಾ ಎಂಥ ರೋಮಾಂಚಕ!

    ಇಲ್ಲೂ ಕೂಡ ಅವರ ಒಳಗಣ್ಣಿಗೆ ಕೆಲಸವಿಲ್ಲ
    ತಂಮೆದೆಯ ಗೂಡಲ್ಲಿ ಬುಧ್ದನಿಗೂ ತಾವಿಲ್ಲ!

    ಇವರು ಈಗಲಾದರೂ ತಮ್ಮ “ಮಹಾಮೌನ”ವನ್ನು ಮುರಿಯಬಹುದೇ?
    ತಪ್ಪು ಒಪ್ಪಿಕೊಳ್ಳಬಹುದೇ?

    ಇರಲಿ,
    ಅವರ ಅಂತರಂಗದ ದನಿಗೆ ಉತ್ತರವಾದರೂ ದೊರಕಲಿ

    ಪ್ರತಿಕ್ರಿಯೆ
  2. S.p.vijaya Lakshmi

    Oh my god…!
    At last you revealed it.
    You deserve justice…
    Lines are super…..

    ಪ್ರತಿಕ್ರಿಯೆ
  3. nalina

    sathya hange bhavani, satharu eddu nilluthe sathya. good lines… keep in touch…

    ಪ್ರತಿಕ್ರಿಯೆ
  4. bhavanilokesh

    ಧನ್ಯವಾದ ಅವಧಿಗೆ ಮತ್ತು ನಿಮ್ಮೆಲ್ಲರ ಪ್ರೀತಿಗೆ…!! ಇದು ಹೊಸತಲ್ಲ ನಂಗೆ .. ಮಂಡ್ಯದ ಮಹಿಳಾ ಕಾಲೇಜಿನ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ನಾನು ಬರೆದುಕೊಟ್ಟ ಆಶಯ ಗೀತೆಯನ್ನು ಓರ್ವ ಮಹಾನುಭಾವರು ಯಥಾವತ್ತಾಗಿ ಭಟ್ಟಿ ಇಳಿಸಿ ಅವರ ಹೆಸರಿನೊಂದಿಗೆ ಪ್ರಕಟಿಸಿದ್ದರು.. ಅವರು ‘ಶಿಕ್ಷಕರು’ ಅನ್ನುವುದು ವಿಶೇಷ. ತೀರಾ ಸಾಮಾನ್ಯರ ಬಳಿ ಪದ್ಯ ಕದಿಯುವುದು ಕೆಲವರ ಅಭ್ಯಾಸ. ಕೊನೆಗೆ ನಾವೇ ಕಳ್ಳರೆನಿಸಿಕೊಂಡಾಗ ಬೇಸರವಾಗುತ್ತದೆ. ಅಷ್ಟೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: