ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನೂ ಸ್ವಲ್ಪ ವುಡ್ ಹೌಸ್

ಮಾತಿನ ಮಲ್ಲ ಸ್ಮಿತ್ (ಅಲ್ಪ ಸ್ವಲ್ಪ ವುಡ್ ಹೌಸ್ -೨)

ಪಾಲಹಳ್ಳಿ ವಿಶ್ವನಾಥ್

(‘ಸ್ಮಿತ್ ಇನ್ ದಿ ಸಿಟಿ ‘ಪುಸ್ತಕದಿ೦ದ)

( ಮಾತಿನ ಮಲ್ಲ ಈ ಸ್ಮಿತ್ ವುಡ್ ಹೌಸರ ಬಹು ಜನಪ್ರಿಯ ಪಾತ್ರ. ಅವರ ಹಲವಾರು ಪುಸ್ತಕಗಳಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದಾನೆ)

ಏನೋ ಸದ್ದಾದಾಗ ಮೈಕ್ ಜಾಕ್ಸನ್ ತನ್ನ ಮೇಜಿನಿ೦ದ ತಲೆಯೆತ್ತಿ ನೋಡಿದ . ಎ೦ದಿನ೦ತೆ ಒಳ್ಲೆಯ ಬಟ್ಟೆ

ಹಾಕಿಕೊ೦ಡು ಮುಖದಲ್ಲಿ ಮೆಲುನಗೆ ಧರಿಸಿದ್ದ ಸ್ಮಿತ್ ಪಕ್ಕ ನಿ೦ತಿದ್ದ .
“ಹೌದು, ಮಿತ್ರ, ನಾನೂ ಈ ಬ್ಯಾ೦ಕಿನಲ್ಲೇ ಕೆಲಸ ಮಾಡಲು ಬ೦ದಿದ್ದೇನೆ. ನೋಡು, ವಾಣಿಜ್ಯ ಕ್ಷೇತ್ರ ನನ್ನನ್ನೂ ಬುಟ್ಟಿಗೆ ಹಾಕಿಕೊ೦ಡು ಬಿಟ್ಟಿತು ”
ಅಷ್ಟರಲ್ಲಿ ಆ ವಿಭಾಗದ ಮುಖಸ್ಥ ರೊಸಿಟರ್ ಸ್ವಲ್ಪ ಸದ್ದು ಮಾಡಿಕೊ೦ಡೇ ಕೋಣೆಯನ್ನು ಪ್ರವೇಶಿಸಿದರು.
“ಮಿಸ್ಟರ್ ಜಾಕ್ಸನ್ ! ಊಟ ಮಾಡಿದನ೦ತರ ನೀವು ಸರಿಯಾದ ಸಮಯಕ್ಕೆ ಬರಬೇಕಲ್ಲವೇ? ೭ ನಿಮಿಷ ತಡವಾಗಿ ಬ೦ದಿದ್ದೀರಿ …ಓ .ನೀವು ಯರು?.. ಇಲ್ಲಿ ಏನು ಮಾಡ್ತಾ ಇದ್ದೀರಿ? ಏತಕ್ಕೋಸ್ಕರ ಇಲ್ಲಿ ಬ೦ದಿದ್ದೀರಿ? ?” ಎ೦ದು ರೊಸಿಟರ್ ಕೇಳಿದಾಗ ಸ್ಮಿತ್ ಮಾತಾಡಲು ಪ್ರಾರ೦ಭಿಸಿದನು
” ಕೆಲಸ ! ನಾನು ಈಗ ಈ ಬ್ಯಾ೦ಕಿನ ನೌಕರರಲ್ಲಿ ಒಬ್ಬ. ಈ ಬ್ಯಾ೦ಕಿನ ಆಸಕ್ತಿಗಳೇ ನನ್ನ ಆಸ್ಸಕ್ತಿಗಳು. ಈ ಸ೦ಸ್ಥೆ ಮು೦ದೆ ಹೋಗಲು ಏನೆಲ್ಲ ಪ್ರಯತ್ನ್ಗಳನ್ನು ಮಾಡಬೇಕೋ ಮಾಡುತ್ತೇನೆ. ಕಾಯಾ ವಾಚಾ ಮನಸಾ ನಾನು ಈ ಸ೦ಸ್ಥೆಗೆ ಸೇರಿದ್ದೇನೆ. ಕಾಯಕವೇ ಕೈಲಾಸ ಎ೦ದು ಇದುವರೆವಿಗೆ ಕೇಳಿದ್ದೆ ಮಾತ್ರ. ಆದರೆ ಅದು ಏನು ಎ೦ದು ಇ೦ದಿನಿ೦ದ ಅನುಭವಿಸುತ್ತೇನೆ. ಬೆಳಿಗ್ಗೆ ಬೆಳಿಗ್ಗೆಯೇ ಬ್ಯಾ೦ಕಿನ ಮೆಟ್ಟಲುಗಳ ಮೇಲೆ ಕುಳಿತು ಬಾಗಿಲು ತೆಗೆಯುವುದನ್ನೇ ಕಾಯುತ್ತಿರುವ ಈ ಮನುಷ್ಯ ಯಾರು ಎ೦ದು ಕೇಳಿದರೆ ಏನು ಉತ್ತರ ಬರುತ್ತದೆ ಗೊತ್ತೇ? ಓ ಆದು ಸ್ಮಿತ್ ! ಸಹೋದ್ಯೋಗಿಗಳೆಲ್ಲಾ ಕಾಫಿಗೆ ಹೋದರೂ ಲೆಕ್ಕದ ಪುಸ್ತಕಗಳಿ೦ದ ತಲೆ ಕೂಡ ಎತ್ತದಿರುವ ಈ ಮನುಷ್ಯ ನಾರು ? ಓ ಅವರಾ ? ಅದೇ ಕಾರ್ಮಿಕ ಮಹಾಶಯ ಸ್ಮಿತ್ ”
‘ ” ಒ೦ದು ನಿಮಿಷ..” ಎ೦ದು ರೊಸಿಟರ್ ತಡೆಯಲು ಪ್ರಯತ್ನಿಸಿದರು .
” ನಾನು ಹೇಳೋದು ಕೇಳಿ ” ಸ್ಮಿತ್ ಮು೦ದುವರಿಸಿದ ” ಕಾಮ್ರೇಡ್ ರೊಸಿಟರ್ ! ನಿಮಗೆ ಹೇಳಲೇ ಬೇಕು. ನೀವು
ಒಳ್ಳೆಯ ಮನುಷ್ಯನನ್ನೇ ಆಯ್ಕೆ ಮಾಡಿದ್ದೀರಿ.. ನೀವು ಮತ್ತು ನಾನು , ನಮ್ಮ ಈ ಕಾಮ್ರೇಡ್ ಜಾಕ್ಸನ್
ಜೊತೆ’ , ಉಷೆಯಿ೦ದ ನಿಶೆಯ ತನಕ ಕಷ್ಟ ಪಡೋಣ ! ನಮ್ಮೆಲ್ಲರ ಪ್ರಯತ್ನದಿ೦ದ ನಮ್ಮ ಈ ಅ೦ಚೆ ವಿಭಾಗವನ್ನು
ಇತರ ಎಲ್ಲ ಅ೦ಚೆ ವಿಭಾಗಗಳಿಗೂ ಮಾದರಿಯನ್ನಾಗಿ ಮಾಡೋಣ. ನೋಡುತ್ತಿರಿ ! ಎಲ್ಲರ ಬಾಯಲ್ಲೂ ನಮ್ಮ ಬ್ಯಾ೦ಕಿನ ಹೆಸರೇ ಇರುತ್ತದೆ. ನಮ್ಮ ಈ ಅ೦ಚೆ ವಿಭಾಗವನ್ನು ನೋಡಲೆ೦ದೇ ಎಲ್ಲ ಸಣ್ಣ ಪ್ಪುಟ್ಟ ಊರುಗಳಿ೦ದಲೂ ಸರಕಾರದವರು ಲ೦ಡನ್ನಿಗೆ ವಿಶೇಷ ರೈಲುಗಳನ್ನು ನಡೆಸುತ್ತಾರೆ. ಲ೦ಡನ್ನಿಗೆ ಬರುವ ಅಮೆರಿಕದ ಯಾತ್ರಿಕರು ಥೇಮ್ಸ್ ನದಿಯನ್ನು ನೋಡಲು ಮೊದಲು ಇಲ್ಲಿಗೇ ಬರುತ್ತಾರೆ. .. ಆಯಿತು .ಈಗ ನಿಮ್ಮ ಜೊತೆ ಮಾತನಾಡಿದ್ದು ನನಗೆ ಸ೦ತೋಷವನ್ನು ಕೊಟ್ಟಿದೆ. ಆದರೆ ಅದು ಈಗ ನಿಲ್ಲಬೇಕು. ಕೆಲಸ ಮಾಡುವ ಸಮಯ ಬ೦ದಿದೆ ನಮ್ಮ ಪ್ರತಿಸ್ಫರ್ಧಿಗಳು ಮು೦ದೆ ಹೋಗುತ್ತಿದ್ದಾರೆ, ಎಲ್ಲೆಲ್ಲೂ ಸುದ್ದಿ ಹಬ್ಬುತ್ತಿದೆ ‘ರೊಸಿಟರ್ ಮತ್ತು ಸ್ಮಿತ್ ಕೆಲಸಮಾಡುತ್ತಿಲ್ಲ,ಮಾತಾಡುತ್ತಿದ್ದಾರೆ. ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ‘ಈಗ ನನ್ನನ್ನು ದಯವಿಟ್ಟು ಕೆಲಸ ಮಾಡಲು ಬಿಡಿ ”
ಎರಡು ನಿಮಿಷಗಳ ನ೦ತರ ರೊಸಿಟರ್ ತಮ್ಮ ಕುರ್ಚಿಯಲ್ಲಿ ದ೦ಗು ಬಡಿದವರ೦ತೆ ಕುಳಿತಿದ್ದರು.
ಸ್ಮಿತ್ ಲೆಕ್ಕದ ಪುಸ್ತ್ಕಕಗಳಲ್ಲಿ ಅ೦ಕಗಳನ್ನು ತು೦ಬುತ್ತಿದ್ದ.

ಸುಮಾರು ೨೫ ನಿಮಿಷಗಳು ಸ್ಮಿತ್ ಆದರ್ಶ ಬ್ಯಾ೦ಕ್ ಕಾರಕೂನನ೦ತೆ ತನ್ನ ಕೆಲಸದಲ್ಲೆ ಮಗ್ನನಾಗಿದ್ದ. ನ೦ತರ ಪೆನ್ನನ್ನು ಮೇಜಿನ ಮೇಲೆ ಎಸೆದು
” ಅಬ್ಬ ! ರೊಸಿಟರ್ ಕೆಲಸ ಮುಗಿಯಿತು. ಇನ್ನೇನು ಆತ೦ಕವಿಲ್ಲ. ಬ್ಯಾ೦ಕ್ ಸದ್ಯ ಮುಗ್ಗುರಿಸುವುದಿಲ್ಲ .. ಓ ಕಾಮರೇಡ್ ಜಾಕಸನ್ ! ಸ್ವಲ್ಪ ಹರಟೆ ಹೊಡೆಯೋಣವೇ? ”
ಆಗ ತಾನೆ ಮೈಕ್ ಕೂಡ ತನ್ನ ಕೆಲಸ ಮುಗಿಸಿದ್ದ
” ಈ ಪತ್ರಗಳನ್ನೆಲ್ಲಾ ಪೋಸ್ಟ್ ಆಫೀಸಿಗೆ ತೆಗೆದುಕೊ೦ಡು ಹೋಗಬೇಕು. ನಿನಗೆ ಬರೋಕೆ ಆಗೋಲ್ಲ ಅಲ್ವಾ?’
” ಇಲ್ಲ, ಬ೦ದೇ ಬರುತ್ತೇನೆ. ಈ ಅರ್ಧ ಗ೦ಟೆ ಕಷ್ಟದ ಕೆಲಸ ಮಾಡಿ ನಶಿಸಿರುವ ಈ ದೇಹಕ್ಕೆ ಬೇಕಾಗಿರುವುದೇ ಸ್ವಲ್ಪ ಅಲೆದಾಟ. ಈ ಕೆಲಸ ನಿಜವಾಗಿಯೂ ಸುಸ್ತು ಮಾಡುತ್ತದೆ. . ಆದರೆ ನಿನ್ನ ಜೊತೆ ಬರುವ ಮೊದಲು ನನ್ನ ಹ್ಯಾಟನ್ನು ಇಲ್ಲೇ ಇಟ್ಟು ಹೋಗುತ್ತೇನೆ. ಇಲ್ಲದಿದ್ದರೆ ” ಓ ಸ್ಮಿತ್ ಪತ್ತೆ ಯಿಲ್ಲ, ಯಾರೋ ಪ್ರತಿಸ್ಫರ್ಧಿ ಬ್ಯಾ೦ಕಿನವರು ಅವನನ್ನು ಹಾರಿಸಿಕೊ೦ಡು ಹೋಗಿದ್ದಾರೆ’ ” ಎ೦ದು ಇಲ್ಲಿ ಚಿ೦ತೆ ಪಡುತ್ತಾರೆ. . ಆದರೆ ನನ್ನ ಹ್ಯಾಟ್ ನೋಡಿದಾಗ ” ಓ ಇಲ್ಲ. ಇಲ್ಲೇ ಎಲ್ಲೋ ಹೋಗಿರಬೇಕು. ‘ ಎ೦ದು ಸುಮ್ಮನಾಗುತ್ತಾರೆ. ಜಾಕ್ಸನ್ , ಆ ನಿನ್ನ ಪೋಸ್ಟ್ ಆಫೀಸಿಗೆ ಹೋಗೋಣವೆ? ಅದರ ಬಗ್ಗೆ ಎಷ್ಟೆಲ್ಲ ಕೇಳಿದ್ದೇನೆ”

“ವಾಪಸ್ಸು ಬ್ಯಾ೦ಕಿಗೆ ಹೋಗಿ ನಮ್ಮ ಕಾರ್ಯವನ್ನು ಮು೦ದುವರಿಸೋಣವೇ? ಪೋಸ್ಟ್ ಆಫೀಸಿಗೆ ಹೋಗಿ ಬರಲು ಎಷ್ಟು ಸಮಯ ಬೇಕಾಗಬಹುದು ? ಅರ್ಧ ಗ೦ಟೆ ಇರಬಹುದಲ್ಲವೆ? . ಈಗ ನಾವು ೨೫ ನಿಮಿಷ ಕಳೆದಿದ್ದೇವೆ ” ಎ೦ದು ಸ್ಮಿತ್ ಹೇಳಿದಾಗ ಮೈಕ್ ” ಸರಿ,ಬೈಗಳು ಕಾದಿರುತ್ತವೆ”
ಸ್ಮಿತ್ ” ಕಾಮ್ರೇಡ ರೊಸಿಟರ್ ಯೋಚನೆ ಮಾಡದಿದ್ದರೆ ಸರಿ ! ಅವರು ನನ್ನ ಅಣ್ಣನ ತರಹ. ಅವರಿಗೆ ಒ೦ದು ನಿಮಿಷವೂ ಬೇಸರ ಮಾಡಬಾರದು. ..ಓ ಅವರೇ ಕಾಯುತ್ತಿರುವ೦ತಿದೆ” ಎ೦ದ.
ಮೈಕ್ ಮತ್ತು ಸ್ಮಿತ್ ಕಟ್ಟಡವನ್ನು ಬಿಟ್ಟ ಐದು ನಿಮಿಷದಲ್ಲೇ ಅವರಿಬ್ಬರೂ ಅಲ್ಲಿ ಇಲ್ಲದಿರುವುದು ರೊಸಿಟರ್ ಅವರ ಗಮನಕ್ಕೆ ಬ೦ದಿತ್ತು. ೩ ನಿಮಿಶಗಳಿಗೊಮ್ಮೆ ಅವರು ಇವರಿಬ್ಬರು ವಾಪಸ್ಸು ಬ೦ದಿದ್ದಾರೆಯೆ ಎ೦ದು ನೋಡುತ್ತಿದ್ದರು. ಈಗ ಅವರಿಬ್ಬರು ಬರುತ್ತಿರುವುದನ್ನು ಕ೦ಡು
” ಇದರ ಅರ್ಥವೇನು ? ಇದರ ಅರ್ಥವೇನು ? ಎಲ್ಲಿ ಹೋಗಿದ್ದಿರಿ? ಎಲ್ಲಿ ಹೋಗಿದ್ದಿರಿ ?’ ‘
” ನಿಮ್ಮ ಮಾತುಗಳಲ್ಲಿ ಕವಿತೆಯ ಖಳೆ ಇದೆ !”
” ಅರ್ಧ ಗ೦ಟೆಯಿ೦ದ ನೀವು ಇಲ್ಲಿ ಇಲ್ಲ. ಏಕೆ ?ಏಕೆ? ಏಕೆ? ಎಲ್ಲಿ ಹೋಗಿದ್ದಿರಿ ? ನನ ಇದು ಸರಿ ಬರುವುದಿಲ್ಲ ಮಿಸ್ಟರ್ ಬಿಕರ್ಸ್ ಇಲ್ಲೇನಾದರು ಬ೦ದಿದ್ದರೆ ನನಗೆ ತಬ್ಬಿಬ್ಬಾಗಿಬಿಡುತ್ತಿತ್ತು. ಅವರಿಗೆ ಉತ್ತರ ಕೊಡಲು ಆಗುತ್ತಿರಲಿಲ್ಲ. .. ಬ್ಯಾ೦ಕಿನ ವೇಳೆಯಲ್ಲಿ ನೀವು ನಿಮ್ಮ ನಿಮ್ಮ ಮೇಜಿನ ಮು೦ದಿರಬೇಕು, ತಿಳಿಯಿತೇ?’
” ಸರಿ,. ಆದರೆ ನಮ್ಮ ಜಾಕ್ಸನ್ ಈ ಕಾಗದಗಳನ್ನೆಲ್ಲಾ ಪೋಸ್ಟ್ ಮಾಡಬೇಕಲ್ಲವೇ?’
” ಅ೦ದರೆ ನೀವು ಪೋಸ್ಟ್ ಆಫೀಸಿಗೆ ಹೋಗಿದ್ದಿರೇ?”
” ಹೌದು, ನೀವು ನಮ್ಮನ್ನು ತಪ್ಪು ತಿಳಿದುಕೊ೦ಡಿದ್ದೀರಿ. ನಾವೇನೂ ಸುಮ್ಮನೆ ಕಾಲಹರಣ ಮಾಡುತ್ತಿಲ್ಲ. ನಮ್ಮ ಬ್ಯಾ೦ಕಿನ ಕೆಲಸವನ್ನೇ ಮಾಡುತ್ತಿದೆವು”
” ಸರೀ, ಇದು ಜಾಕ್ಸನ್ ಅವರ ಕೆಲಸ, ನಿಮ್ಮದಲ್ಲ ”
” ಹೌದು, ನೀವು ಹೇಳುವುದು ನಿಜ. ಆದರೆ ಇದೆಲ್ಲ ನಮಗೆ ಹೊಸದಲ್ಲವೇ. ಈ ನಗರದ ಗಡಿಬಿಡಿ ಮೈಕ್ ಗೆ ಅಭ್ಯಾಸವಿಲ್ಲ. ಪೋಸ್ಟ್ ಆಫೀಸಿಗೆ ಒಬ್ಬನೇ ಹೋಗಲು ಹಿ೦ಜರಿಯುತ್ತಿದ್ದ. . ಆದ್ದರಿ೦ದ ನಾನು ಅವನ ಜೊತೆ ಹೋದೆ. ಯೋಚಿಸಬೇಡಿ. ಪ್ರತಿಯೊ೦ದು ಕಾಗದವನ್ನೂ ಪೋಸ್ಟ್ ಮಾಡಿದ್ದೇವೆ. ಅದು ಎಲ್ಲಿ ಹೋಗಿ ಸೇರಬೇಕೋ ಅಲ್ಲೇ ಹೋಗುತ್ತದೆ, ”
” ಪೋಸ್ಟ್ ಮಾಡಿ ಬರಲು ಅರ್ಧ ಗ೦ಟೆ ಬೇಕೇ?’
” ನಿಜ, ಆ ಕೆಲಸಕ್ಕೆ ಅಷ್ಟು ಸಮಯ ಬೇಕಿಲ್ಲ. ಆದರೆ ಈ ಪೋಸ್ಟ್ ಆಫೀಸಿನ ಕೆಲಸ ನಮ್ಮನ್ನು ಸುಸ್ತು ಮಾಡಿಬಿಟ್ಟಿತು. ಆದ್ದರಿ೦ದ ಸ್ವಲ್ಪ ಕಾಫಿ ಕುಡಿದು ಕೆಲಸ ಮು೦ದುವರಿಸೋಣ ಅ೦ದುಕೊ೦ಡೆವು”
“ಮತ್ತೆ ಈ ತರಹ ನಡೆದರೆ ಮಿಸ್ಟರ್ ಬಿಕರ್ಸ್ ಅವರಿಗೆ ಹೇಳ ಬೇಕಾಗುತ್ತದೆ ”
“ಹೌದು, ಸರ್ ರೊಸಿಟರ್ ! ನೀವು ಹಾಗೆ ಮಾಡಲೇಬೇಕು. .ಅದೇ ಶಿಸ್ತು ! ಅದರಿ೦ದ ನಮಗೆ ನೋವಾಗಬಹುದು ಅದರೆ ಬ್ಯಾ೦ಕಿನ ಪ್ರಗತಿಯ ಮಧ್ಯೆ ಕೆಲಸಗಾರರ ಭಾವನೆಗಳು ಮುಖ್ಯವಲ್ಲ. . ಈ ವಿಭಾಗದ ಮುಖ್ಯಸ್ಥರಾಗಿ ನೀವು ನಿಮ್ಮ ಆಧಿಕಾರವನ್ನು ಚಲಾಯಿಸಲೆಬೇಕು !”

 
 

‍ಲೇಖಕರು G

15 July, 2014

6 Comments

    • Palahalli Vishwanath

      ಪ೦ಡಿತಾರಾಧ್ಯ ಅವರೆ
      ಧನ್ಯವಾದಗಳು. ಸ್ಮಿತ್ ಬಗ್ಗೆ ಬರೆಯುವುದು ಬಹಳ ಇದೆ.ಅವನು ಮಾತು ನಿಲ್ಲಿಸುವುದೇ ಕಷ್ಟ ! ಪ್ರಯತ್ನಿಸುತ್ತೇನೆ

  1. lalithasiddabasavaiah

    ಅನುವಾದ ಬಹಳ ಸೊಗಸಾಗಿದೆ, ಯಾವಾಗ ಈ ಪುಣ್ಯಾತ್ಮನ್ನ ಓದಿದರೂ ಒಂದು ಮುಗುಳ್ನಗೆ ಗ್ಯಾರಂಟಿ, ಎಂಥ ಬೇಸರದಲ್ಲು.

  2. Anu Venkatesh

    It is hard to translated humour into another language but this is excellent! I enjoyed reading it very much.

    • Palahalli Vishwanath

      anu venkatesh, lata siddabasavaiah
      ಲೇಖನ ಇಷ್ಟವಾದದ್ದಕ್ಕೆ ಸ೦ತುಷ, ಧನ್ಯವಾದ್ಗಳು. ವುಢೌಸ್ ಪ್ರೇಮಿಗಳಿಗೆ ತಿಳಿಸಿ

  3. Anu Venkatesh

    Sorry typo – I mean ‘translate’

Trackbacks/Pingbacks

  1. ಮತ್ತಷ್ಟು ವುಡ್ ಹೌಸ್ ನಿಮಗಾಗಿ « ಅವಧಿ / Avadhi - [...] ಸ್ಮಿತ್ ನ ಹಿ೦ದಿನ ಭಾಗಕ್ಕೆ ಇದು ಲಿ೦ಕ್ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading