ಇದೊ೦ದು ರೇಖೆ – ರವಿ ಮೂರ್ನಾಡು ಕವಿತೆ

ಎ೦ ಎಸ್ ಮೂರ್ತಿಯವರ ರೇಖಾ-ಕಾವ್ಯವನ್ನು ಪ್ರಕಟಿಸಿದ್ದೆವು.  (ಅದನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ).  ಅದರ ಒ೦ದು ಚಿತ್ರ ರವಿ ಮೂರ್ನಾಡು ಅವರ ಮನದಲ್ಲಿ ಕವಿತೆಯಾಗಿದ್ದು ಹೀಗೆ :

ಇದೊ೦ದು ರೇಖೆ

  – ರವಿ ಮೂರ್ನಾಡು, ಕ್ಯಾಮರೂನ್   ಏನನ್ನೋ ಹುಡುಕಿ ಬಾಡಿವೆ ಕಂಗಳು ಅನುಭವಕ್ಕೆ ಸಿಕ್ಕ ಸುಕ್ಕುಗಳಲಿ ಕೆದರಿ ಸೋತಿವೆ ಬಿಳಿ ಕೂದಲು   ತಬ್ಬಿಕೊಂಡ ಜೋಡಿ ಬೈತಲೆ ಮೈಗಳು ಆಗಾಗ್ಗೆ ಬೆದರಿ ನೋಡುತ್ತಿವೆ ಹಿಂಬದಿ ತಬ್ಬಿದ ನೆರಳುಗಳು ಬೆತ್ತಲೆ ಬೆನ್ನಿನ ಹುಟ್ಟು ನರಗಳಲಿ ಮೆಟ್ಟಿಲ ಹುಡುಕಿವೆ ಜಡೆಗಳು   ಇದೀಗ ಮೂರ್ತವಾಯಿತು ಮಲಗಿ ಸಪೂರ ಬೆಟ್ಟದೆಗಲಿಗೆ ಚಾಚಿ ಎಡೆಮುರಿ ಕಟ್ಟಿ ಕೈಕಾಲು ಇದೊಂದು ರೇಖೆ ಮೂರಡಿಗೆ ಅಳೆದ ಕೋಲು ಬಿಳಿಗೂದಲು-ಬೆತ್ತಲೆ ಮೈ ಸಾವಾಧಾನಕೆ ಕುಳಿತಿದೆ ಕುಳಿತಂತಿದೆ.. ಇನ್ನೇನು ಎತ್ತೋಯ್ಯುವರು.  ]]>

‍ಲೇಖಕರು G

June 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Badarinath Palavalli

    ತೀವ್ರ ಭಾವಗಳ ನೇರ ನುಡಿಗಳಲ್ಲಿ ಬರೆಯುವ ರವಿ ಮೂರ್ನಾಡರು ನನಗೆ ಎಂದೂ ಆದರ್ಶ. ಬೆಂಗಳೂರಿಗರೇ ಕನ್ನಡವನ್ನು ಮರೆತು ಎನ್ನಡ ಎಕ್ಕಡ ಅಂತ ಓಡಾಡುತ್ತಿರುವ ಈ ವಿಷಮ ಕಾಲದಲ್ಲಿ ದೂರದ ಆಫ್ರಿಕಾದಿಂದ ಮೊರೆವ ಅವರ ಕನ್ನಡ ಕಂಠ ನಮಗೆಲ್ಲ ಅನುಕರಣೀಯ.
    ಈ ಕವನವು ಯಾಕೋ ನನ್ನ ವೃದ್ಧಾಪ್ಯದ ಘೋರ ಭವಿಷ್ಯವನ್ನು ಬರೆದಿಟ್ಟಿರೇನೋ ಅನಿಸಿತು. ಯಾವ ಗಳಿಗೆಯಲ್ಲಿ ಯಾವುದು ಸತ್ಯವೋ ಅದೇ ಮೂರ್ತ ಅಂತಿಟ್ಟುಕೊಂಡರೆ ಈ ಪರಿಯ ಪ್ರೇಮದ ಅಮೂರ್ತತೆಯೂ ಬಲು ಕಾಡುತ್ತದೆ.
    ನನ್ನನ್ನು ತೀವ್ರ ಚಿಂತನೆಗೆ ಹೊತ್ತೊಯ್ಯುವ ನಿಮ್ಮ ಬರಹ ಮತ್ತು ಕವನಗಳಿಗೆ ನನ್ನ ಶರಣು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: