ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದೊಂದು ಗಂಭೀರ ಬೆಳವಣಿಗೆ!

ರಾಜಾರಾಂ ತಲ್ಲೂರು 

ಕೇಂದ್ರ ಸರಕಾರವು ಜಾಯಿಂಟ್ ಸೆಕ್ರೆಟರಿ ಅಂತಹ ಉನ್ನತ ಸ್ಥಾನಕ್ಕೆ ಸಾಂಪ್ರದಾಯಿಕ ಸಿವಿಲ್ ಸರ್ವೀಸ್ ಹಾದಿಯನ್ನು ಬಿಟ್ಟು ಖಾಸಗಿ ಸಂಸ್ಥೆಗಳು, ಬಹುರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕವಾಗಿ ನೇರ ನೇಮಕಾತಿ ಮಾಡುವ ಬಗ್ಗೆ ಪ್ರಕಟಿಸಿದ್ದು, ಜಾಹೀರಾತುಗಳು ಪ್ರಕಟವಾಗಿವೆ.

Revenue, Financial Services, Economic Affairs, Agriculture, Road Transport & Highways, Shipping, Environment & Forests, New & Renewable Energy, Civil Aviation and Commerce ಇಲಾಖೆಗಳಿಗೆ ಈ ನೇಮಕಾತಿ ನಡೆಯಲಿದೆಯಂತೆ.

ಸಾರ್ವಜನಿಕ ಬದುಕು ತೀರಾ ಕಲುಷಿತ ಆಗಿರುವ ಈ ದಿನಗಳಲ್ಲಿ, ಬಹಿರಂಗ ಚರ್ಚೆ ಆಗದೆ, ಇದೆಷ್ಟು ಪಾರದರ್ಶಕ ಎಂಬ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸದೆ ನೇರವಾಗಿ ” ವಾಂಟೆಡ್” ಜಾಹೀರಾತು ಹೊರಬಿದ್ದಿದೆ. ( https://lateral.nic.in/ )
ನಾವು ಎತ್ತ ಹೋಗುತಿದ್ದೇವೆ?!!!

‍ಲೇಖಕರು avadhi

11 June, 2018

3 Comments

  1. ಶ್ರೀರಂಗ ಯಲಹಂಕ

    ಇದು ಸಾಂಪ್ರದಾಯಿಕ ಆಚರಣೆಗಳನ್ನು ವಿರೋಧಿಸುವ ಪ್ರಗತಿಪರರೆಲ್ಲರೂ ಸ್ವಾಗತಿಸಬೇಕಾದ ಸಂಗತಿ.

  2. ಶ್ರೀರಂಗ ಯಲಹಂಕ

    ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಹತ್ತು ಹದಿನೈದು ಇಪ್ಪತ್ತು ವರ್ಷಗಳ ಹಿಂದೆ IAS ಮಾಡಿರುವವರು ಎಷ್ಟರ ಮಟ್ಟಿಗೆ update ಆಗಿರುತ್ತಾರೆ? ಅದರ ಬದಲು ಆಯಾ ಕ್ಷೇತ್ರಗಳಲ್ಲಿ ಅನುಭವ ಇರುವ ಹೊಸಬರು ಆ ಹುದ್ದೆಗೆ ಬಂದರೆ ತಪ್ಪಾಗಿ ಭಾವಿಸಬಾರದು. ಹಿಂದೆ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದವರು Sampritoda ಅವರಲ್ಲವೆ? ಅವರು ಭಾರತೀಯ ಅಧಿಕಾರ ವರ್ಗದ top officer ಆಗಿದ್ದವರೆ? ಅವರು ಬರುವ ಮೊದಲು ಭಾರತದ ಟೆಲಿಫೋನ್ ಗಳಲ್ಲಿ ಮಾತಾಡುವುದು ಎಂದರೆ ಹಾಸ್ಯದ ವಸ್ತುವಾಗಿತ್ತು. ರಿಸರ್ವ್ ಬ್ಯಾಂಕ್ ನ ಹಿಂದಿನ ಗವರ್ನರ್ ಆಗಿದ್ದ ರಘುರಾಮ ರಾಜನ್ ‘ಸಾಂಪ್ರದಾಯಿಕ’ ಐಎಎಸ್ ಕ್ಷೇತ್ರದವರೆ? ಆಗಿಲ್ಲದ ವಿರೋಧ ಈಗೇಕೆ?

  3. ಶ್ರೀರಂಗ ಯಲಹಂಕ

    ಆಧಾರ್ ಕಾರ್ಡನ ರೂವಾರಿ infosysನಲ್ಲಿ ಇದ್ದು ಕೇಂದ್ರ ಸರ್ಕಾರದ ಆಹ್ವಾನದ ಮೇಲೆ ಬಂದ ನಂದನ್ ನೀಲಕೇಣಿ ಅವರಲ್ಲವೆ? ಈಗ ವಿವಾದದ ನಡುವೆ ಮರೆತ ಅಥವಾ ಲೇಖಕರು ‘ ಮರೆಮಾಚಿರುವ’ ಸಂಗತಿ ಯೆಂದರೆ, ಎಂಎನ್ ಸಿ ಕಂಪನಿಗಳಿಂದ ಕೆಲಸಕ್ಕೆ ತೆಗೆದುಕೊಳ್ಳುವವರ ಕೆಲಸದ ಅವಧಿ ಮೂರು ವರ್ಷಗಳ contractಗೆ ಮಾತ್ರ. ಆ ಮೂರು ವರ್ಷಗಳಲ್ಲಿ ಅವರ ಕೆಲಸ ತೃಪ್ತಿಕರವಾಗಿಯಿರದಿದ್ದರೆ ಯಾವಾಗ ಬೇಕಾದರೂ ಅವರ contractಅನ್ನು ಬೇಡ ಎನ್ನುವ ಅಧಿಕಾರ ಕೇಂದ್ರ ಸರ್ಕಾರದ ಬಳಿಯೇ ಇದೆ. ಕೆಲಸ ತೃಪ್ತಿಕರವಾಗಿಯಿದ್ದರೆ ಇನ್ನು ಎರಡು ವರ್ಷಗಳ ಕಾಲ ಮುಂದುವರಿಸಬಹುದಂತೆ. ಆನಂತರ ಬೇರೆಯವರು ಬರುತ್ತಾರೆ. ಜಡ್ಡು ಕಟ್ಟಿ ಹೋಗಿರುವ ನಮ್ಮ ಅಧಿಕಾರಶಾಹಿಗೆ ಚುರುಕು ಮುಟ್ಟಿಸುವ ಇಂಥ ಹೊಸ ಆಲೋಚನೆಗಳು ಬಂದಾಗ ಸ್ವಾಗತಿಸಬೇಕು.ಕೇವಲ ವಿರೋಧಕ್ಕಾಗಿ ವಿರೋಧ ಸರಿಯಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading