ಕನ್ನಡ ಚಿತ್ರಗಳ ಬರಗೆಟ್ಟ ಲಿರಿಕ್ಸ್ ಗಳು
ಕಾಶಸ್ ಮೈ೦ಡ್
ಇದಕ್ಕಿಂತ ಹೊಲಸು ಹಾಗೂ ಅಶ್ಲೀಲವಾದದ್ದನ್ನ ಬರೆಯಲು ಸಾಧ್ಯವೇ ಇಲ್ಲ.
ಉದಾ-1. ಊ ಲಾಲಾ ಊಲಾಲಾ ಇದು ಹಾಲು ಕೊಡೊ ಎಮ್ಮೆ, ಊ ಲಾಲಾ ಊಲಾಲಾ ಹಾಲ್ ಕರ್ಕೋ ನೀ ಸುಮ್ನೆ, ಮುಂದಿನಿಂದಲೂ ಹಿಂದಿನಿಂದಲೂ ಹಾಯೋ ಕೋಣ ಯಾಕೆ. (ಕಠಾರಿವೀರ ಸುರಸುಂದರಾಂಗಿ)
ಉದಾ-2. ಕಣ್ಮುಚ್ರೋ ಕಣ್ಮುಚ್ರಿ, ಪೈಲ್ವಾನ್ ಮಂದಿಯಲ್ಲಿ ವಿನಂತಿ, ಫಾರಿಲ್ ಹುಡುಗಿ ಬಂದ್ಲು ಕಣ್ಮುಚ್ರಿ.
ಈ ಹಾಡುಗಳಿಗೆ ಅತ್ಯಂತ ಕಡಿಮೆ ಬಟ್ಟೆಯನ್ನು ಹಾಕಿಕೊಂಡಿರುವ ನಟಿಯರು(?) ಅಸಹ್ಯವಾಗಿ ಕುಣಿದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಚಿತ್ರಗಳು, ಲಿರಿಕ್ಸ್ ಗಳು ನೋಡಿದರೆ, ಯಾವ ಮಟ್ಟದಲ್ಲಿ ಚಿತ್ರರಂಗ ಪರಿಕಲ್ಪನೆ ಹಾಗೂ ಪ್ರತಿಭೆಗಳ ಕೊರತೆಯಿಂದ ಬಳಲುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ. ಲಾಂಗು ಮಚ್ಚು ಆಧಾರಿತ ಚಿತ್ರಗಳು ಇನ್ನೂ ಬರುತ್ತಿರುವುದು, ಕ್ರಿಯೇಟಿವಿಟಿ ಹೆಸರಿನಲ್ಲಿ ಅಸಹ್ಯ ಹಾಗೂ ಮುಜುಗರವನ್ನುಂಟು ಮಾಡುವುದು ಸರಿಯಾ? ಮನೆಮಂದಿಯಲ್ಲಾ ಕುಳಿತು ನೋಡಬಹುದಾದ ಸಿನಿಮಾ ಇದು ಅಂತ, ಕೆಲ ನಿರ್ದೇಶಕರು, ನಿರ್ಮಾಪಕರು ಹೇಳುತ್ತಾರೆ. ಆದರೆ ಅವರು ನಿರ್ದೇಶಿಸಿದ ಚಿತ್ರಗಳನ್ನು ಮನೆಮಂದಿಯೆಲ್ಲ ಕುಳಿತು ನೋಡಿದರೆ, ನಿರ್ದೇಶಕನ ಮನೆಮಂದಿ ಎಂಥವರಿರಬಹುದು ಎಂದು ಆಶ್ಚರ್ಯವಾಗುತ್ತದೆ.
ಕಾಪಾಡು ದೇವರೆ!!
]]>
Like this:
Like Loading...
Related
ಸುಘೋಷ್ ನಿಗಳೆಯವರು ಬರೆದ ಸ್ಪಷ್ಟವಾದ ಮಾತುಗಳಿಗೆ ನನ್ನ ಕೃತಜ್ನತೆಗಳು.ಏನು ಬರೆದರೂ ಕಾವ್ಯವಾಗುತ್ತದೆ ಮತ್ತು ಕನ್ನಡದ ಪ್ರೇಕ್ಷಕರು ಏನು ಕೊಟ್ಟರೂ ಮಹಾಪ್ರಸಾದವೆಂದು ಸ್ವೀಕರಿಸುತ್ತಾರೆ ಎಂಬ ತಿಳುವಳಿಕೆಗೆ ನಮ್ಮ ನಿರ್ಮಾಪಕ ನಿರ್ದೇಶಕರುಗಳು ಬಂದು ದಶಕಗಳೇ ಕಳೆದಿವೆ…ಈಗ ಜನರು ಕನ್ನಡ ಸಿನಿಮಾ ನೋಡೋ ಹಾಗೆ ಮಾಡೋದು ಹೇಗೆ ಅಂತ ಸಂಶೋಧನೆ ಮಾಡೋ ಕಾಲ. ಈಗ ಇರೋ ಬೆರಳೆಣಿಕೆಯ ಪ್ರೇಕ್ಷಕರುಗಳನ್ನೂ ಬೇರೆ ಕಡೆ ವಲಸೆ ಕಳಿಸೋ ಕೊನೆಯ ಪ್ರಯತ್ನ.
ಎಸ್. ಸಂಗೀತಾ ಜಾನ್ಸನ್
ಸಾಲದ್ದಕ್ಕೆ, ‘ಮುತ್ತಿನಂಥ ಮಾತೊಂದು’ ಎಂಬ ಮುದ್ದಾದ ಹಾಡು ಈ ಕಠಾರಿ ವೀರರ ಪ್ರಹಾರಕ್ಕೆ ಗುರಿಯಾಗಿದೆ 🙁
Yes, ‘ಮುತ್ತಿನಂಥ ಮಾತೊಂದು’ ಎಂಬ ಮುದ್ದಾದ ಹಾಡು ಈ ಕಠಾರಿ ವೀರರ ಪ್ರಹಾರಕ್ಕೆ ಗುರಿಯಾಗಿದೆ
ಇತ್ತೀಚಿನ ಕನ್ನಡ ಸಿನಿಮಾ ನೋಡಿದ್ರೆ ಯಾಕಪ್ಪ ಈ ಗತಿ ಬಂತು ಅನ್ಸುತ್ತೆ.ಮೊನ್ನೆ ಮನೆಗೆ ನೆಂಟರು ಬಂದಿದ್ರು ಅಂತ ಕಾಮಿಡಿ ಸಿನಿಮಾ ಅಂತ ಹೋದ್ರೆ,ಮದ್ಯದಲ್ಲೇ ಓಡಿ ಬರುವ ಹಾಗಾಯ್ತು.ಕೀಳು ಅಭಿರುಚಿಯ ಹಾಸ್ಯ,ಕೆಟ್ಟ ಕತೆ…ಇತ್ಯಾದಿ.ಒಮ್ಮೆಲೆ ಮನಸ್ಸು ಡಾ.ರಾಜಕುಮಾರ್ ರವರ ಹಳೆ ಸಿನಿಮಾಗಳನ್ನ ಮೆಲುಕು ಹಾಕಿತು ಹಾಗು ಇನ್ನು ಸದ್ಯ ಕನ್ನಡ ಸಿನಿಮಾ ನೋದಬಾರದು ಅಂತ ತೀರ್ಮಾನ ಮಾಡಿದೆ.ಅಲ್ಲ,ಡಬ್ಬಿಂಗ್ ವಿರೋದಿಸುವವರು ಒಳ್ಳೆ ಸಿನಿಮಾ ಕೊಡ್ಬಾರ್ದ?
Hello,
The problem is if they make movie like paramathma, bhagirathi
people are not watching.