ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದೆ ನನ್ನಲ್ಲೂ ಉತ್ತರ…

ಶ್ರೀ ವಿ.ಎನ್.ಲಕ್ಷ್ಮಿ ನಾರಾಯಣರ ‘ಪನ್ ಟಾಸ್ಟಿಕ್’ ಪ್ರತಿಕ್ರಿಯೆಗೆ ಸಂಬಂಧಿಸಿ ಎರಡು ಮಾತು.
-ಸೂತ್ರಧಾರ ರಾಮಯ್ಯ.

——————————–


ಇದೆ ನನ್ನಲ್ಲೂ ಉತ್ತರ.
ಮಾನ್ಯ ಲಕ್ಷ್ಮೀನಾರಾಯಣ್ ಅವರೆ. ಎಲ್ಲ ಓದಲಿ ಅಂತ ಯಾರು ತಾನೆ ಬರೆಯುತ್ತಾರೆ? ಅದು ಬರೆವವರ ಕರ್ಮ. ಯಾರಾದರು ಕಣ್ಮುಚ್ಚಿದರೆ ( ಓದದೆ) ಅದಕ್ಕಾಗಿ ಚಿಂತಿಸಬೇಕಿಲ್ಲ ಅಂತಾ, ಹಿರಿಯ ಚೇತನ ಜಿ.ಎಸ್.ಎಸ್ ನಮ್ಮಂಥವರ ಬೆನ್ನಿಗಿರುತ್ತಾರೆ.
ಒಂದೊಂದು ಹಕ್ಕಿಗೂ ತನ್ನದೇ ಇಂಚರ ( idiosyncracy) ಇದೆಯಾಗಿ, ಕತ್ತಲ ಕಾವಳದಲ್ಲೂ ‘ಗುಗ್ಗೂ’ ಎಂದು ಕೂಗುವ ಗೂಬೆಯ ಧನಿಯೂ ನಿಗೂಢ ಅಂಧಕಾರದ ಅಂದವನ್ನು ಇಮ್ಮಡಿಗೊಳಿಸುತ್ತದೆ- ಪೂರ್ವಾಗ್ರಹಪೀಡಿತವಲ್ಲದ ಮನಸ್ಸುಗಳಿಗೆ. ಎಂದು
ತಮ್ಮ ವಿಶಾಲ ಹೃದಯದಲ್ಲಿ ಆ ನಿಶಾಚರ ಪಕ್ಷಿಗೂ ಸ್ಥಾನ ಕೊಡುತ್ತಾರೆ ರಾಷ್ಟ್ರಕವಿ. ಚರಿಪಾರಣ್ಯದ ಪಕ್ಷಿಗೊಂದು ತರು ಗೊಡ್ದಾಗಲ್ ಪಲಂ ತೀವಿದ ಮರಗಳ್ ಪುಟ್ಟವೇ? ಎಂದು ಕೇಳುತ್ತಾನೆ ಸೋಮೇಶ್ವರ. ಇನ್ನೊಬ್ಬರು ಇದೇ ಶೈಲಿಯಲ್ಲಿ ಬರೆಯಬೇಕು ಎಂದರೆ ಹೇಗೆ? ನಿಮಗೆ ಇಷ್ಟವಾಗದಿದ್ದರೆ ಓದದೆ ಪುಟ ತಿರುಗಿಸಿ. ಬೇಕಾ ಬಿಟ್ಟಿ ವಿಮರ್ಶೆ ಯಾಕೆ. ಕಾಲೆರಡು ನೆಟ್ಟಗಿದ್ದರೂ ಎಡವಿ ಬೀಳುತ್ತೇವೆ ಅಂದಾಗ, ದೊಂಬರಾಟ ಆಡುವುದು ಅಷ್ಟು ಸುಲಭವೇ?. ಇಷ್ಟಾಗಿ ನಾನೇನೋ ಘನ ಸಾಹಿತ್ಯ ಸೃಷ್ಟಿ ಮಾಡಿದ್ದೇನೆ ಅನ್ನೋ ಭ್ರಮೆ ನನಗಿಲ್ಲ. ಟಿ ಪಿ ಕಲ್ಲಾಗಿ ಜಸ್ಟ್ ಎ  ‘ಟೈಮ್ ಪಾಸ್ ಕಡ್ಲೇಕಾಯಿ’ ಅಂತಾ ಕಾಲಂ ಕುರಿತು  ಸಂಪಾದಕರು ಕರೆದಿರುವುದು ತಕ್ಕುದೆ ಎಂದುಕೊಂಡಿರುವೆ. ಆದರೆ, ದಶಕಗಳ ಹಿಂದೆ, ಪನ್ನು ಹಿಡಿದು ‘ಮೆಟ್ಟಿಲ ಮಹಿಮೆ’ ಕಾಲಂ  ಬರೆಯಲು ಶುರುಮಾಡಿದಂದಿನಿಂದ, ಬರಿ ಮೆಚ್ಚುಗೆಯೇ ನನ್ನ ಪಾಲಿಗೆ. ಕಾರಣಾಂತರದಿಂದ ನಾಟಕದಿಂದ ದೂರ ಇರುವುದರಿಂದ, ಒತ್ತಾಯವಿದ್ದರೂ ಈ ಮಾಸಕ್ಕೆ ಬರೆಯುತ್ತಿಲ್ಲ. ಒಂದು ವರ್ಷದಿಂದ ಅವಧಿಗೆ ಬರೆಯುತ್ತ ಬಂದಿದ್ದೇನೆ. ಅವಧಿಯಲ್ಲಿ ನನ್ನ ಬರಹ ಪ್ರಿಂಟ್ ಆಗುತ್ತಿದೆ; ಬಹಳಷ್ಟು word ಫೇಮಸ್  ಆಗಿದ್ದೇನೆ. ಆಗಾಗ ಸೂಕ್ಷ್ಮ ಮತಿಗಳಾದ ಓದುಗರಿಂದ ಮೆಚ್ಚುಗೆಯೂ ದೊರೆಯುತ್ತಿದೆ  ಅಷ್ಟು ಸಾಕು.ಸೃಷ್ಟಿಯಲ್ಲಿ ಹೊಸತೊಂದು ಹುಟ್ಟುವಾಗ ಅಸಹ್ಯವು ಅದರ  ಬಯ್   ಪ್ರಾಡಕ್ಟ್ ಆಗಿ ಇರುತ್ತದೆ. ಹಾಗಾಗಿ ಪೆನ್ನನ್ನು, ನನ್ನ ವೆಪನ್ ನನ್ನು ಬಳಸುತ್ತೇನೆ. ‘ನಿಮ್ಮoಥವರು'( ಯಾರು ಕಾಣಲಿಲ್ಲ ಇಲ್ಲಿ ತನಕ) ‘unbearable’ ಅಂದರೂ. ಯಾಕಂದರೆ,ಈ ಅವಧಿಯಲ್ಲಿ ಸಾವಿರಾರು ಓದುಗರು ಇದ್ದಾರಂತೆ-  ಹೂ ಕೆನ್ happily able to bear. ಟಾಲ್ ಇನಫ್ ಟು ಟಾಲರೇಟ್.

‍ಲೇಖಕರು G

21 October, 2011

3 Comments

  1. Gubbachchi Sathish

    ಹೌದು ಸರ್. ಧನ್ಯವಾದಗಳು.

  2. su,ra

    oh, gubbachhiya baliyu nanna paravada brahmaastra! thanq gubbi.ee khushiyalli ninageradu saalu:

    thank you sparrow; for shooting an arrow
    in support of me.

    Suthradhara Ramaiah.

  3. su,ra

    ಸೂತ್ರಧಾರ ರಾಮಯ್ಯ,

    ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading