ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಇದು ರಜನಿಕಾಂತ್ ಪಿಕ್ಚರ್ ಅನ್ನಿಸಿತು’ ಅಂದ್ರು ಜಟ್ಟ ಡೈರೆಕ್ಟರ್ ಗಿರಿರಾಜ್

ಸೀಮಾ

 

ಬೆಂಗಳೂರನಲ್ಲಿ ಅಂತರಾಷ್ಟ್ರೀಯ ಚಲನ ಚಿತ್ರೋತ್ಸಸವ ನಡೆಯುತ್ತಿದ್ದು ಇಂದಿಗೆ ಆರನೇ ದಿನ. ದೇಶ ವಿದೇಶಿ ಚಿತ್ರಗಳ ಪ್ರದರ್ಶಗಳ ಜೊತೆ ಜೊತೆಗೆ ಕೆಲ ವಿಚಾರ ಸಂಕೀರಣ, ಸಂವಾದಗಳನ್ನು ಏರ್ಪಡಿಸಲಾಗಿತ್ತು. ಹಾಗು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಚಿತ್ರಗಳ ನಿದೇರ್ಶಕರ ಜೊತೆಗೆ ಸಂವಾದ ಹಮ್ಮಿಕೊಳ್ಳಲಾಗಿತ್ತು. ವಾರ್ತಾ ಇಲಾಖೆಯ ನಿರ್ದೇಶಕರಾದ ವಿಶು ಕುಮಾರ್, ಚಿತ್ರೋತ್ಸವ ಮಂಡಳಯ ವಿದ್ಯಾಂಶಕರ್, ರಾಘವೇಂದ್ರ ಉಪಸ್ಥಿತರಿದ್ದರು. ವಾರ್ತಾಭವನದಲ್ಲಿ ಹಮ್ಮಿಕೊಂಡಿದ್ದ ಮೀಟ್ ದ ಡೈರೆಕ್ಟರ್ ಕಾರ್ಯಕ್ರಮದಲ್ಲಿ ‘ಲೂಸಿಯಾ’ ದ ಪವನ್ ಕುಮಾರ್, ‘ಜಟ್ಟ’ ಚಿತ್ರದ ಬಿಎಂ ಬಾಲಕೃಷ್ಣ, ‘ಮುನ್ಸಿಫ್’ ಚಿತ್ರದ ನಿದೇರ್ಶಕ ಉಮಾಶಂಕರ್ ಸ್ವಾಮಿ ಸಂವಾದದ ಮುಖ್ಯ ಅತಿಥಿಗಳಾಗಿದ್ದರು.
ಮೊದಲಿಗೆ ಮಾತನಾಡಿದ ‘ಲೂಸಿಯಾ’ ಖ್ಯಾತಿಯ ಪವನ್ ’ಜಗತ್ತಿನ ಸಿನಿಮೋತ್ಸವ ಖುಷಿ ಕೊಟ್ಟಿದೆ. ಒಂದು ಕಾಲದಲ್ಲಿ ಈ ಸಿನಿಮೋತ್ಸವಕ್ಕೆ ಬಂದು ಸಿನಿಮಾಗಳನ್ನು ನೋಡಲು ಕಾಸು ಇರುತ್ತಿರಲಿಲ್ಲ ಈಗ ಇದೇ ಚಿತ್ರೋತ್ಸವದಲ್ಲಿ ನನ್ನ ಚಿತ್ರ ಪ್ರದರ್ಶನವಾಗುತ್ತಿದ್ದು ನನಗೆ ಖುಷಿ ತಂದುಕೊಟ್ಟಿದೆ. ಲೂಸಿಯಾ ಚಿತ್ರ ನಿರ್ಮಾಣ ಮಾಡುವಲ್ಲಿ 50 ಲಕ್ಷ ಖರ್ಚಾಗಿದ್ದು, ಈಗ ಹಿಂದಿಯಲ್ಲಿ ರಿಮೇಕ್ ಮಾಡಲು 50 ಕೋಟಿ ನನಗೆ ಸಂದಾಯವಾಗುತ್ತಿದೆ. ಆದ್ರೆ ಇಷ್ಟು ದೊಡ್ಡ ಹಣ ಏನು ಮಾಡಲಿ ಅನ್ನೋದೇ ಗೊತ್ತಾಗುತ್ತಿಲ್ಲ’ ಎಂದರು.

ಮುನ್ಸೆಫ್ ಚಿತ್ರ ನಿರ್ದೇಶಕ ಉಮಾ ಶಂಕರ್ ತಮ್ಮ ಸಿನಿಮಾದ ಕಥೆ ಬದಲಾದ ಸ್ವರೂಪವನ್ನು ಹೇಳಿಕೊಂಡರು. ಈ 20 ರ್ವಗಳ ಹಿಂದೆ ಈ ಚಿತ್ರವನ್ನು ಮಾಡಿದ್ದರೆ ಇಷ್ಟರ ಮಟ್ಟಗಿನ ಯಶಸ್ಸನ್ನು ಕಾಣುತ್ತಿರಲಿಲ್ಲ, ಕಾಲದಿಂದ ಕಾಲಕ್ಕೆ ಸಿನಿಮಾದ ಕಥೆ ಅಪ್ಡೇಟ್ ಆಗಿದೆ ಎಂದರು.

ಇನ್ನು ಇಲ್ಲಿವರೆಗೂ ಆದ 6ನೇ ಚಿತ್ರೋದಲ್ಲಿ ಅತೀ ಹೆಸರು ಮಾಡಿಡ ಜಟ್ಟ ನಿದೇರ್ಶಕ ಮಾತನಾಡಿ ತಮ್ಮ ಚಿತ್ರ ಪ್ರದರ್ಶನ ವೇಳೆ ಜನಜಂಗುಳಿ ನೋಡಿ ಆ ಚಿತ್ರ ನನ್ನದೋ ಅಥವಾ ರಜನಿಕಾಂತ್ ರದ್ದೋ ಎಂದುಕೊಂಡೆ ಎಂದರು. ಅದು ನನ್ನ ಜೀವನದ ಮರೆಯಲಾರದ ದಿನ ಎಂದು ಸಂಭ್ರಮಿಸಿದರು. ಸಿನಿಮಾ ನಿರ್ಮಾಣದ ಹಿಂದಿನ ಕಥೆಯನ್ನು ಮೆಲುಕು ಹಾಕಿದರು. ಈ ಚಿತ್ರೋತ್ಸವದಲ್ಲಿ ನನಗೆ ಮತ್ತು ನನ್ನ ಚಿತ್ರಕ್ಕೆ ಅರ್ಹತೆಗೂ ಮೀರಿದ ಪ್ರಂಸಂಶೆ ಸಿಕ್ಕಿದೆ ಎಂದರು. ಇತಿಹಾಸ ಕಾಲದಿಂದಲೂ ಕ್ಲಾಸಿಕ್ ಚಿತ್ರಗಳು ಕಮರ್ಷಿಯಲಿ ಫ್ಲಾಪ್ ಆಗಿವೆ ಎಂದು ಅಭಿಪ್ರಾಯಪಟ್ಟರು. ಜಟ್ಟ ಚಿತ್ರ ಪ್ರಾರಂಭದಲ್ಲಿ ಸರಿಯಾಗಿ ಪ್ರಮೋಷನ್ ಮಾಡಿಲ್ಲವೆಂದು ಒಪ್ಪಿಕೊಂಡರು. ಸಿನಿಮಾ ಮಾಡೋದು ಸುಲಭ ಆದರೆ ಮಾರೋದು ತುಂಬಾ ಕಷ್ಟ ಎಂದರು.

ಜರ್ಮನಿಯ ಯುವ ನಿರ್ದೇಶಕಿ ಪೊಲೊ ಬೆಕ್ ಕೂಡ ಕಾರ್ಯಕ್ರಮದ ಅತಿಥಿಗಳಲ್ಲಿ ಒಬ್ಬರಾಗಿದ್ದರು. ಇವರ ‘ಬ್ರೇಕಿಂಗ್ ಹೊರೈಜನ್’ ಚಿತ್ರ ಈ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿರುವುದಕ್ಕೆ ಖುಷಿ ವ್ಯಕ್ತಪಡಿಸಿದರು. ಈ ಚಿತ್ರದಲ್ಲಿ ನನ್ನ ಜನರೇಷನ್ರ ಫೀಲಿಂಗ್ಗಳನ್ನು ತೋರಿಸಿದ್ದೇನೆ ಎಂದರು. ಜರ್ಮನಿಯಲ್ಲಿ ಸಿನಿಮಾಗಳನ್ನು ಒಂದು ಕಲೆಯಾಗಿ ನೋಡುತ್ತಾರೆ .ಆದ್ರೆ ಅಲ್ಲಿಯೂ ಒಳ್ಳೆಯ ಸಿನಿಮಾಗಳಿಗೆ ಥಿಯೇಟರ್ಗಳ ಕೊರತೆ ಇದೆ. ಹೆಚ್ಚು ದಿನ ಸಿನಿಮಾಗಳು ಚಿತ್ರ ಮಂದಿರದಲ್ಲಿ ಉಳಿಯುವುದಿಲ್ಲ ಎಂದರು.
ಇಲ್ಲಿವೆ ಮೀಟ್ ದ ಡೈರೆಕ್ಟರ್ ನ ಮಿಕ್ಕ ಚಿತ್ರಗಳು :

‍ಲೇಖಕರು G

1 January, 2014

1 Comment

  1. guru

    SUPERB

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading