ಸೋಮಾರಿ ಕೂತವಳ ಜಿಜ್ಞಾಸೆ …
ಬಿ.ವಿ.ಭಾರತಿ
ಅಮ್ಮ ನಾನು ಸಣ್ಣವಳಿರುವಾಗ ಏನೇನೋ ಹೇಳ್ಕೊಟ್ಳು …
‘ಏಳುವಾಗ ಬಲ್ಗಡೆ ತಿರುಗಿ ಏಳೇ’
‘ಹೊರಗೆ ಹೊರಟಾಗ ಎಲ್ಲಿಗೆ ಅಂತ ಕೇಳ್ಬೇಡ್ವೇ’
‘ಚೌತಿ ಚಂದ್ರನ್ನ ನೋಡ್ಬೇಡ್ವೇ .. ಸ್ಯಮಂತಕೋಪಾಖ್ಯಾನ ಹೇಳ್ತೀನಿ ಕೂತ್ಕೋ ಬಾ’
‘ರಾತ್ರಿ ಮಲ್ಗುವಾಗ ರಾಮಸ್ಕಂದಮ್ ಹೇಳ್ಕೋ .. ಕೆಟ್ಟ ಕನಸು ಬೀಳಲ್ಲ’ …… ನಾನು ಎಲ್ಲ ಮಾಡಿದೆ. ಅದೆಲ್ಲ ಮಾಡ್ದಿದ್ರೆ ಒಳ್ಳೆದಾಗ್ತಿತ್ತೋ, ಕೆಟ್ಟದಾಗ್ತಿತ್ತೋ ಯಾರಿಗ್ಗೊತ್ತು?
ಆಮೇಲೆ ಒಂದಿಷ್ಟು ವಯಸ್ಸಾದ್ಮೇಲೆ ಶುರುವಾಯ್ತು ನೋಡಪ್ಪಾ ತಾಕಲಾಟ .. ಇವೆಲ್ಲ ಸುಳ್ಳು ಅಂತ ಎಲ್ಲ ನಿರಾಕರಿಸಿದ್ದಾಯ್ತು. ಆದ್ರೆ ದೇವರ ಅಸ್ತಿತ್ವ ಮಾತ್ರ ನಿರಾಕರಿಸಕ್ಕೆ ಆಗ್ಲೇ ಇಲ್ಲ. ಅಮ್ಮ ಅದ್ನ ಬಿತ್ತಿ-ಬೆಳೆಸಿ ಬಿಟ್ಟಿದ್ಳು. ಅವನಿಲ್ಲ ಅಂದ್ಕೊಂಡ್ರೆ ‘ಅಯ್ಯೋ ನಮ್ಮ ಕೈ ಮೀರಿದ ಕಷ್ಟ ಬಂದಾಗ ಯಾರ ಹತ್ರಾನಪ್ಪಾ ಹೇಳ್ಕೊಳ್ಳೋದು’ ಅನ್ನೋ ಜಿಜ್ಞಾಸೆ! ಹಾಗಾಗಿ ಅವ್ನಿದ್ದಾನೆ ಅಂತ ಅಂದ್ಕೊಂಡು ಸುಮ್ಮನಾಗ್ಬಿಟ್ಟೆ.
ಆಮೇಲೆ ಇನ್ನೂ ಒಂದಿಷ್ಟು ವಯ್ಸಾಯ್ತು. ನನಗೊಬ್ಬ ಮಗ ಹುಟ್ಟಿದ. ನಾನು ಅವನಿಗೆ ಏನಂದ್ರೆ ಏನೋ ಹೇಳಿ ಕೊಡ್ಲಿಲ್ಲ. No ರಾಮಸ್ಕಂದಮ್, no ಚೌತಿ ಚಂದ್ರ ! ಯಾವ್ದೋ ಒಂದು ಮಗ್ಲಲ್ಲಿ ಏಳಪ್ಪಾ .. ಒಟ್ಟು ಸ್ಕೂಲ್ಗೆ ಎದ್ದು ರೆಡಿಯಾಗು ಅಷ್ಟೇ ಅಂದ್ಬಿಟ್ಟೆ. ಅವನು ಅವನ ಪಾಡ್ಗೆ ಅವನೇ ಬೆಳ್ಕೊಂಡ. ಏನೋ ಓದ್ಕೊಂಡ. ದೇವ್ರಿಲ್ಲ ಅಂದ. ಕಷ್ಟ ಬಂದಾಗ ಯಾವ ದೇವ್ರಿಗೂ ಕೈ ಮುಗೀದೇ ನನ್ನ ಪಕ್ಕ ಕೂತ. ಕೇಳಿದ್ದು ಮಾಡ್ದ. ನನ್ನ ಜೊತೆ ಕೂತ ದೇವರ ಹಾಗೆ!
ಆ ಕಡೆ ಅಮ್ಮ – ಅಪ್ಪ ದೇವ್ರ ಮೇಲೆ ಪೂರ್ತಿ ಎಲ್ಲ ಭಾರ ಹೊರೆಸಿ ಫುಲ್ ಆರಾಮ್!
ಈ ಕಡೆ ದೇವ್ರಿಲ್ಲ ಅಂತ ಮಗ ಕರ್ತವ್ಯ ಮಾಡ್ಕೊಂಡು ಫುಲ್ ಆರಾಮ್!
ನಾನು?! ಎಲ್ಲೂ ಸಲ್ಲದವ್ಳಾಗಿಬಿಟ್ನಲ್ಲಾ ದೇವ್ರೇ ….]]>






olleya baraha…good
ನಮ್ಮ ಜನರೇಶನ್ ನವರ ಪಾಡು ಅದು.ಹಿರಿಯರು ಹೇಳಿದ್ದನ್ನು ಭಯ ಭಕ್ತಿಯಿಂದ ಪಾಲಿಸಿದೆವು,ಈಗ ಮಕ್ಕಳಿಗಂಜಿ ನಡೆಯುತ್ತಿದ್ದೇವೆ.
naanu anji nadeyuttilla .. aa avna nirdharavanna.. nambikeyanna appreciate madteeni
ನನ್ನ ಮಗನಿಗೂ ನನಗೆ ಹೇಳಿಕೊಟ್ಟಿದ್ದನ್ನ ಹೇಳಿದ್ದೇನೆ..ಅದಕ್ಕೆ ನನಗೆ ಪದೇ ಪದೇ ಚಿತ್ರ ಗುಪ್ತ ನೋಡ್ತಿದಾನೆ ಅಂದು ಹೆದರಿಸ್ತಾನೆ..ಭಾರತಿ ನಿಮ್ಮ ಬರಹ ತುಂಬಾ ಆಪ್ತ ಅನಿಸಿತು..
)))
ನಂಬದಿರ್ದನು ತಂದೆ ,ನಂಬಿದನು ಪ್ರಹ್ಲಾದ , ಕಂಬದಿನೊ ಬಿಂಬದಿನೊ ಪ್ರತ್ಯಕ್ಷಮವರಿಗಾಯ್ತು, ನಂಬಿಯೂ ನಂಬದಿಹ ಸಿಂಬಳದಿ ನೊಣ ನೀನು ಮಂಕುತಿಮ್ಮ …….
houdu khandithavagiyoo … ))
‘ ನಂಬಿ ಕೆಟ್ಟವರಿಲ್ಲ…’ ನಂಬಿಕೆ ಒಂದು ರೀತಿಯಲ್ಲಿ ಕಷ್ಟ ಎದುರಿಸೋ ..ಧೈರ್ಯ ಕೊಡುತ್ತೆ…..ಅದು ದೇವರ ಮೇಲಿನ ನಂಬಿಕೆಯೇ ಆಗಬೇಕೆಂದಿಲ್ಲ …ಪ್ರೀತಿ ವಿಶ್ವಾಸದ ಮೇಲಿನ ನಂಬಿಕೆ ..ವ್ಯಕ್ತಿಯ ಮೇಲೆ ..ನಮ್ಮ ಮೇಲಿರುವ ನಂಬಿಕೆ……:)
Nannadu ade padu Bharatiakka. Ondu kade appa amma mattondu kade magana badalu ganda ashte vyatyasa