ಮಾಂತು
ವೀರಣ್ಣ ಮಂಠಾಳಕರ್
ಮಾಂತು ಅಂದ್ರ ಎಲ್ಲರಿಗೂ ಬಹಳ ಪ್ರೀತಿ.ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದನು.ಸಾಹಿತ್ಯ, ಕಲೆ, ಸಾಂಸ್ಕೃತಿಕ ಲೋಕದಜನರ ಪರಿಚಯಚೆನ್ನಾಗಿಯೇ ಮಾಡಿಕೊಂಡಿದ್ದನು.ಕಿತ್ತುತಿನ್ನುವಂಥ ಬಡತನವಿತ್ತು. ಹೊಟ್ಟೆ ಪಾಡಿಗೆ ಕಂಪ್ಯೂಟರ್ಡಿಟಿಪಿ(ಅಕ್ಷರಜೋಡಣೆ) ಮಾಡಿಕೊಂಡಿದ್ದನು. ಬಡತನವೆಂಬ ದಾರಿದ್ರ್ಯಇವನಲ್ಲಿರುವ ಪ್ರತಿಭೆಗೆ ನುಂಗಿ ಬಿಟ್ಟಿತ್ತು.ಇವನಲ್ಲಿರುವ ಸ್ವಪ್ರಯತ್ನ ಸಾಮಥ್ರ್ಯ ಪ್ರದರ್ಶನಗೊಂಡರೂತಕ್ಕಪ್ರತಿಫಲ ಮಾತ್ರಕಾಣಲಿಲ್ಲ. ಪ್ರತಿಸಲ ಇವನಲ್ಲಿ ಬಂದು ಹೋಗುವ ಕಾಂತರಾಜು ಎಂಬ ಫಿಕ್ಸ್ಗಿರಾಕಿರಾಜ್ಯದ ನಂ.1 ಪ್ರತಿಭಾವಂತಕಥೆಗಾರನಾಗಿ ಬೆಳೆದುಬಿಟ್ಟಿದ್ದ. ಅವನ ಕಥೆಗಳಿಗೆ ಮಾಂತುವಿನ ಕೈ ಬೆರಳು ಸ್ಪರ್ಶಿಸಿಯೇ ನಂತರ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತಿದ್ದವು.ಅಕ್ಷರಗಳನ್ನು ತಿದ್ದಿತೀಡಿ ಪ್ರಿಂಟ್ತೆಗೆದುಕೊಟ್ಟು ಪ್ರತಿಯೊಂದು ಪುಟಕ್ಕೆಇಂತಿಷ್ಟುಅಂತ ಹಣತಗೊಂಡು ಕಳುಹಿಸುತಿದ್ದನು.ಇದರಲ್ಲೇ ಜೀವನ ನಡೆಸುತಿದ್ದನು.
ಹಲವರು ಇವನ ಬಳಿಗೆ ಬಂದು ಕೈ ಬರಹದಲ್ಲಿ ಬರೆದ ಕಚ್ಚಾ ವಸ್ತುಗಳನ್ನು ತಂದುಕೊಡುತಿದ್ದರು. ಇಂತಿಷ್ಟುರೇಟ್ಎಂದು ಫಿಕ್ಸ್ ಮಾಡಿ ಹೇಳುತಿದ್ದನು.ಅಂಕು ಡೊಂಕು, ನಾಯಿ ಬಾಲ, ಕೋಳಿ ಕಾಲಿನಂತಿರುತಿದ್ದವು.ಕೆಲವರ ಕೈ ಹಸ್ತಪ್ರತಿಗಳು.ತಪ್ಪುತಪ್ಪಾಗಿ, ಬಹುಭಾಗ ಅಕ್ಷರಗಳ ಕಾಗುಣಿತತುಂಬಾತಪ್ಪಾಗಿರುತಿದ್ದವು. ಅಂತಹ ಗೇರೆಗಳನ್ನು ನೋಡಿ ನೋಡಿಕಂಪ್ಯೂಟರ್ ಮಾನಿಟರ್ ಬೆಳಕಿನ, ಬಿಳಿ ಕಾಗದದ ಮೇಲೆ ಸರಿಪಡಿಸಿ ಕೀಲಿಮಣಿಒತ್ತುತಿದ್ದನು.ಒತ್ತಕ್ಷರ, ಧೀರ್ಘಾಕ್ಷರ ಸ್ಪಷ್ಟವಾಗಿ ಬರೆದು, ಪದಜೋಡಣೆ ಸರಿಯಾಗಿರದಿದ್ದರೆಅದಕ್ಕೊಂದು ಪರ್ಯಾಯ ಶಬ್ದ ಬರೆಯುವ ಆಲೋಚನೆ ಬರುತಿತ್ತು. ಹಾಗೆ ಹೇಳಿದವರ ಕಥೆ, ಲೇಖನಗಳು ಮಾಂತುನ ಕಲ್ಪನೆಯಲ್ಲಿ ಒಂದು ಅದ್ಭುತ ವಿಷಯ, ವಸ್ತುವಾಗಿ ಒಳಗೊಂಡು ರಚನೆಯಾದವು.
ಓದುಗರನ್ನುಒಂದುಕ್ಷಣ ಬೆರಗಾಗಿಸಿ ಸರಾಗವಾಗಿಓದು ಮುಗಿಸುವಂತೆ ಪ್ರೆರೇಪಿಸುತಿದ್ದವು.ಅಸ್ಪಷ್ಟವಾಗಿಇರುವ ಅಕ್ಷರಗಳು ಕೈ ಬೆರಳಿನ ಸಹಾಯದಿಂದದಾಖಲಿಸುತಿದ್ದನು.ಸುಂದರ ಮುದ್ರಣದಂತೆ ಅವು ರೂಪಗೊಳ್ಳುತಿದ್ದವು.ಇವನಿಂದಟೈಪ್ ಮಾಡಿಸಿಕೊಂಡು ಹೋದವರುಅದೇಷ್ಟೋ ಜನಗಳು.ಇದೀಗ ತಮ್ತಮ್ಮ ಸ್ವಪ್ರತಿಷ್ಠೆ ಎನ್ನುವಂತೆ ಸಮಾಜದಗಣ್ಯಾತಿಗಣ್ಯರ ವರ್ಗದಲ್ಲಿಡಿಟಿಪಿ ಮಾಡಿಸಿಕೊಂಡು ಹೋದವರು ಹೆಮ್ಮೆಯಿಂದ ಮೆರೆಯುತಿದ್ದರು.
ಆಯಾ ಲೇಖಕರ ಪುಸ್ತಕ ರೂಪದ ಮೊದಲ ಪುಟದಲ್ಲೆಅಕ್ಷರಜೋಡಣೆ ಎಂಬ ಒಕ್ಕಣಿ, ಮಾಂತು ಎಂಬ ಹೆಸರು ಬರೆದಿರುತಿತ್ತು.ಕೃತಿಯ ಮೊದಲ ಪುಟದ ಲೇಖಕರ ಹಕ್ಕು, ಸ್ವಾಮ್ಯ, ಮುಖ ಬೆಲೆ, ಮುದ್ರಣ, ವಿನ್ಯಾಸಇತ್ಯಾದಿಯಾಗಿ ಬರೆದಒಂದೇಒಂದು ಪುಟದಆವರಣದಲ್ಲಿ ಮಾಂತುವಿನ ಹೆಸರು ಕಾಣಿಸಿ ಕೊಳ್ಳಲಾರಂಭಿಸಿತು.ಕೃತಿಗಳನ್ನು ಓದಿದವರು ಮಾಂತುನ ಪರಿಚಯ ಮಾಡಿಕೊಳ್ಳಲು ಬಯಸಿದರು.ಇವನಲ್ಲಿರುವ ಸ್ಪಷ್ಟತೆ ಕೆಲವರಿಗೆ ಆಕರ್ಷಿಸಿದರೆ ಹಲವರಿಗೆಕಾಣಿಸದೇ ಉಳಿದು ಅಪರಿಚಿತನಾಗಿ ಉಳಿದ.
ಇದರಿಂದತನ್ನ ಹೆಸರನ್ನು ಸಾಹಿತ್ಯ ಸಾಧಕರ, ಕಲಾವಿದರಜೀವನಚರಿತ್ರೆ, ಕವಿಗಳ ಕಾವ್ಯ ಪುಟಗಳ ಮೊದಲ ಪುಟದತಿರುವಿನಲ್ಲಿ, ಹೀಗೆ ಮುಂತಾದವರ ಸ್ವಂತತ್ರ ಕೃತಿಗಳಲ್ಲಿ ಕಾಣಿಸಿಕೊಳ್ಳುತಿದ್ದನು.ಇದರಿಂದ ಹೇಳಿಕೊಳ್ಳುವಂಥ ಖುಷಿಯೇನುಆಗಿರಲಿಲ್ಲ. ಪುಸ್ತಕದಆಕಾರರೂಪಿಸುವ ಮಾಂತು ಮಾಡಿಕೊಡುವಅಕ್ಷರಜೋಡಣೆ ಹಲವರಿಗೆ ಪ್ರಯೋಜನೆಯಾಗಿತ್ತು.ಕೃತಿಯಾಕಾರದಲ್ಲಿ ಮುದ್ರಿತವಾಗಿಹೊರಬರುವ ಪುಸ್ತಕಗಳು ಸಾರ್ವಜನಿಕರ ಎದುರಿಗೆ ಒಂದಲ್ಲ ಒಂದಿನ ಅವು ಅನಾವರಣಗೊಳ್ಳುತಿದ್ದವು. ಅಕ್ಷರಗಳನ್ನು ತಿದ್ದಿತೀಡಿದಾಖಲೆಯಾಗಿ ಉಳಿಯುವ ಕಾರ್ಯದಲ್ಲಿ ಮಾಂತುವಿನ ಶ್ರಮ ಬಹಳಷ್ಟಿತ್ತು.ಅದೇಷ್ಟರ ಮಟ್ಟಿಗೆ ಶ್ರಮ ಸಾರ್ಥಕವಾಯಿತುಎಂಬುದುಯಾರಿಗೂಗೊತ್ತಿಲ್ಲ. ಆದರೆ ಮೂಲೆಗುಂಪಾಗಿ ಉಳಿದ ಅನೇಕರುಅದರ ಪ್ರತಿಫಲ ಉಂಡು ಬೀಗುತಿದ್ದರು.
ಈ ಸಾರ್ಥಕತೆಯ ಹೆಸರಿನಿಂದ ಹಲವರು ಸಮಾಜದಲ್ಲಿಗಣ್ಯ ಲೇಖಕರಾಗಿಯೋ, ಯುವ ಪ್ರತಿಭಾವಂತಕಥೆಗಾರರಾಗಿ, ಕಲಾವಿದರಾಗಿ, ಕವಿಗಳಾಗಿಯೋ ಬೆಳೆದಿದ್ದರು.ಡಾ. ಸಿದ್ಧಾರ್ಥ ಎಂಬ ಪ್ರಾಧ್ಯಾಪಕಕೂಡ ಮಾಂತುನಆತ್ಮೀಯರಲ್ಲಿಒಬ್ಬನಾಗಿದ್ದ.ಮಾಂತುಗೆ ಬೇಕಾಗುವ ಕೆಲಸಗಳನ್ನು ತಂದುಕೊಟ್ಟು ಸಹಕರಿಸುತಿದ್ದನು.ಹೀಗಾಗಿ ಇವನ ಜೀವನ ನಿಂತ ನೀರ ಮೇಲಿನ ಗುಳ್ಳೆಯಂತಾಗದಿದ್ದರೂ ನಿಧಾನದದೋಣಿಯಂತೆ ಸಾಗುತಿತ್ತು.
ಇದಿಷ್ಟೇ ಮಾಂತುವಿನಲ್ಲಿಕಂಡು ಬರುವ ವಿಶೇಷತೆಆಗಿದ್ದರೆಕತೆ ಬರೆಯುವ ಅನಿವಾರ್ಯತೆಇರಲಿಲ್ಲ. ಅವನೊಬ್ಬ ಪ್ರತಿಯೊಬ್ಬರಿಗೆಕಾಡುವ ವ್ಯಕ್ತಿಯಾಗಿ, ಜೊಳ್ಳು ಕೃತಿಗಳ ಲೇಖಕರಿಗೆಗಟ್ಟಿ ಕಾಳಾಗಿ ಹಲವರ ಶ್ರೇಯಸ್ಸಿಗೆ ಕಾರಣನಾಗಿದ್ದನು.ಅದಕ್ಕಾಗಿಎಲ್ಲರ ಮೆಚ್ಚಿನ ವ್ಯಕ್ತಿಯಾಗಿದ್ದ.ಮಾಂತುನ ಎದೆಯಂತರಾಳದಲ್ಲಿ ಎಂದೋ ಅರಳಿಕೊಂಡಿದ್ದ ಕವಿ ಮನಸಿನ ಕಲ್ಪನೆಯಿಂದ ಸಾಹಿತ್ಯಿಕ ವಲಯದಜನರೊಂದಿಗೆ ಒಂದಿಷ್ಟು ಪರಿಚಯಿಸಿಕೊಂಡಿದ್ದನು.ಇವನದ್ದುಕೂಡ ನಾಲ್ಕಾರು ಸ್ವಂತಂತ್ರ ಸಾಹಿತ್ಯ ಕೃತಿಗಳು ಪ್ರಕಟಗೊಂಡಿದ್ದವು.ಪ್ರಕಟವಾಗಿದ್ದ ಕೃತಿಗಳಿಂದ ಬದುಕು ಸಾಗಲಿಲ್ಲ. ತನ್ನೊಳಗಿನ ಪ್ರತಿಭೆ ಪ್ರದರ್ಶಿಸಲು ಹೋಗಿ ಇನ್ನಷ್ಟುಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಕೊಂಡಿದ್ದನು.
ಆರ್ಥಿಕ ಮುಗ್ಗಟ್ಟಿನಕುಟುಂಬದಲ್ಲಿ ಹುಟ್ಟಿ ಬೆಳೆದ ಮಾಂತು.ಎಳೆಯ ವಯಸ್ಸಿನಲ್ಲಿರುವಾಗಲೇ ತಂದೆಯಅಗಲಿಕೆಯಿಂದ ಮನೆಯಜವಾಬ್ದಾರಿ ಇವನ ಹೆಗಲೇರಿತು.ಮದುವೆಯಾಗಿ ಸಂಸಾರ ಹೂಡಿದ್ದನು.ಒಂಟಿತಾಯಿಗೆಆಶ್ರಯವಾಗಿ ಉಳಿದಿದ್ದನು. ಹೇಳಿಕೊಳ್ಳಲು ಒಬ್ಬಅಣ್ಣನಿದ್ದನು. ಒಂದಿನ ಅವನು ಕೂಡಕಿಡ್ನಿ ವೈಫಲ್ಯದಿಂದ ಅಕಾಲಿಕ ಮರಣಕ್ಕೆತುತ್ತಾದನು. ಬಂಧುಗಳಿಂದ ಯಾವರೀತಿಯಲ್ಲೂ ಸಹಕಾರ ಸಿಗಲಿಲ್ಲ. ಬದುಕಿನ ದುರಂತಗಳು ಕಂಡುಂಡು ಅನುಭವಿಸಿದ ಮಾಂತುನ ಒಳಾಂತರಂಗ ಯಾರೂಅರಿಯಲಿಲ್ಲ. ಒಂದೊಂದಾಗಿ ತೆರೆದುಕೊಳ್ಳುತಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತನ್ನನ್ನುತಾನೇ ನಾನ್ಯಾರು? ನನಗೆ ಬೇಕಾಗಿರುವುದೇನು ಎಂಬ ಚಿಂತನೆಯಲ್ಲಿ ಮುಳುಗಿರುತಿದ್ದನು.

ಇವನಲ್ಲಿದ್ದ ಆಸಕ್ತಿಗೆ ಬಡತನವೇದೊಡ್ಡ ಬಂಡೆಗಲ್ಲಾಗಿತ್ತು.ಕಾವ್ಯದ ಪ್ರತಿಮೆಗಳು ಒಮೊಮ್ಮೆ ಅರಳಿದವು.ಕೆಲವೊಮ್ಮೆ ಮಂಜಿನಂತೆಕರಗಿ ನೀರಾದವು.ಲೋಹದ ಸಲಾಕೆಯಂತಹಕಾವ್ಯರೂಪಕ, ಕತೆ, ಲೇಖನಗಳು ಬರೆದನು.ಕೃತಿ ಪ್ರಕಟಣೆಯ ಸಾಮಥ್ರ್ಯಕುಗ್ಗಿತು.ಮಾಂತುವಿನ ಸಮಕಾಲಿನ ಸ್ನೇಹಿತರಿಗೂ ಮತ್ತು ಹಿರಿಯರಿಗೆ ಮಾಂತ್ಯಆಗಿದ್ದ.ಮಾಂತುಕಂಪ್ಯೂಟರ್ ಲೋಕಕ್ಕೆ ಅಂಟಿಕೊಂಡು ನಿತ್ಯವೂ ಸಿಕ್ಕಷ್ಟು ಅಕ್ಷರಜೋಡಣೆಕಾರ್ಯ ಹಾಗೇ ಬದುಕಿಗಾಗಿ ಮುಂದೊರೆಸಿದ.
ಕಾಂತರಾಜು ಎಂಬ ನಂ.1 ಕಥೆಗಾರ ಸೇರಿದಂತೆ ಅನೇಕ ಗೆಳಯರು ಕೂಡಿ, ಸಮ ಮನಸ್ಕರ ಸಾಹಿತ್ಯಕೂಟ ಎಂಬ ಸಂಘಟನೆಯೊಂದುಕಟ್ಟಿದರು.ಅದರಡಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿಂತನೆ, ಹರಟೆ ಮುಂತಾದಚಟುವಟಿಕೆ ನಡೆಸಲು ತೀರ್ಮಾನಿಸಿ ಚರ್ಚಿಸಿದರು.ಮೊದ ಮೊದಲಿಗೆ ಕೆಲವರಿಂದ ಒಳಗೊಳಗೆ ಪಿಸುಗುಸು ಮಾತು ಶುರುವಾದರೆ, ಅನೇಕರಿಂದಉತ್ತಮಅಭಿಪ್ರಾಯ ವ್ಯಕ್ತವಾದವು.ಮೇಲಾಗಿ ಮಾಂತುವಿನಂಥ ಪ್ರತಿಭಾವಂತರು ಬೆಳೆಯಲು ಇದು ಸೂಕ್ತ ವೇದಿಕೆ ಎಂಬ ಮಾತು ಪ್ರಾಧ್ಯಾಪಕಡಾ.ಸಿದ್ಧಾರ್ಥ, ಮತ್ತು ಪ್ರೊ.ಗುರಪ್ಪ ಪ್ರಕಟಿಸಿದರು. ಅವರ ಉದ್ದೇಶ ಯಾರಿಗೂ ತಿಳಿಯಲೇ ಇಲ್ಲ.
ಇದಕ್ಕೆಲ್ಲ ಸಮ್ಮತಿಸಿ ನರೇಶ, ಮಹೇಂದರ, ಬಸವರಾಜ ಸೇರಿದಂತೆ ಮುಂತಾದಯುವಕರು ಹಾಗೂ ಆಗಷ್ಟೇ ಯುವ ಕವಿಗಳೆಂದು ಗುರುತಿಸಿಕೊಳ್ಳುತಿದ್ದ ಹಲವರು ಸೂಕ್ತವಾಗಿದೆಎಂದರು.ಪ್ರತಿ ಭಾನುವಾರದ ಸಂಜೆ ವೇಳೆಗೆ ಒಂದುಗೂಡಿ ಪ್ರಚಲಿತ ವಿಷಯದಿಂದ ಹಿಡಿದು, ಇತಿಹಾಸ, ವಿಜ್ಞಾನ, ಸುತ್ತಲಿನ ಆಗು ಹೋಗುಗಳಿಗೆ ಕಿವಿಯಾದರು. ಹೃದಯ ವಿಶಾಲತೆಗೆ ಸಾಕ್ಷಿಯಾಗಿ ಬೆಳೆಯುವ ಮತ್ತು ಬೆಳೆಸುವ ಮನೋಭಾವನೆಎಲ್ಲರಲ್ಲಿಇತ್ತು. ಎನ್ನುವಷ್ಟು ತಿಂಗಳಿಗೊಂದು ಸಭೆ, ಸಮಾರಂಭ, ಕವಿಗೋಷ್ಠಿ, ವ್ಯಕ್ತಿ ವಿಶೇಷ ಕುರಿತುಚಿಂತನ ಗೋಷ್ಠಿ ಕಾರ್ಯಕ್ರಮಗಳು ನಡೆದವು.
ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯಾಗಿಡಾ.ಸಿದ್ಧಾರ್ಥ, ಪ್ರೊ.ಗುರಪ್ಪ ವಹಿಸಿಕೊಂಡಿರುತಿದ್ದರು.ಸರ್ಕಾರಿ ಹುದ್ದೆ, ಉದ್ಯಮ, ವ್ಯಾಪಾರಿಗಳಾಗಿದ್ದವರು ಸಾಹಿತ್ಯಾಸಕ್ತಿ ಹೊಂದಿದವರಾಗಿದ್ದರು.ಕಾಂತರಾಜುಅಂಥವರುಅದಕ್ಕೆ ಬರುವಖಚರ್ು, ವೆಚ್ಚ ಮಾಡಲು ಧಾರಾಳತನ ಮೆರೆದರು.ಇದರಿಂದ ಮಾಂತುಗೆಕಾಯಕದಚಿಂತೆದೂರಾಗಿದುಡಿಮೆಯಆದಾಯ ಹೆಚ್ಚಿತು.ಬಡತನದಿಂದ ಪಾರಾಗಲುಅಕ್ಷರಜೋಡಣೆ ವೃತ್ತಿ ಸಹಕಾರಿಯಾಗಿತ್ತು.ಕೆಲವರುತಮ್ಮ ಸ್ವಾರ್ಥಕ್ಕಾಗಿ ಮಾಂತುಗೆ ಉಪಯೋಗಿಸಿಕೊಂಡರೆ ಒಂದಿಬ್ಬರು ಹಿತೈಷಿ ಚಿಂತಕರಾಗಿದ್ದವರು ಮಾಂತುವಿನಲ್ಲಿದ್ದ ಭೋಳೆತನಕ್ಕೆ ಎಚ್ಚರಿಸಿದರು.ಇದೆಲ್ಲ ಮಾಂತುನ ಗಮನಕ್ಕೆ ಬರಲೇಇಲ್ಲ.
ಎಲ್ಲಿವರೆಗೆಎಂದರೆ ಇವನು ಬರೆಯಬೇಕಿದ್ದ ಚಿಂತನೆಗಳು, ಕಾವ್ಯದ ಲಯ, ಭಾವನೆಗಳು, ಕಥೆ, ಲೇಖನಗಳ ಸ್ವರೂಪಎಲ್ಲ ವಿಚಾರಗಳು ಬೇರೆಯವರ ಪಾಲಾಗಿದ್ದವು.ತಡವಾಗಿಅರಿವಿಗೆ ಬಂದರೂ ಪ್ರಯೋಜನವಾಗಲಿಲ್ಲ. ಬರೆಯಲು ಹಚ್ಚಿದರೆಒಂದೂ ಸಾಲು ಬರೆಯಲು ಸಾಧ್ಯವಾಗವದರು ಶ್ರೇಷ್ಠ ಪ್ರಶಸ್ತಿ, ಬಹುಮಾನ, ಸನ್ಮಾನ ಪಡೆದುಗೌರವ ಸ್ಥಾನದಲ್ಲಿದ್ದರು. ಉನ್ನತ ಲೇಖಕರಾಗಿಜನಮನದಲ್ಲಿ ಹೆಸರಾಗಿದ್ದರು.ನಿಂತ ನೀರಲ್ಲಿಯೇದೋಣಿ ಚಲಿಸುತಿದ್ದ ಮಾಂತುಗೆ ಸಮುದ್ರದದಡ ಸೇರುವಅನುಭವ ಆಗಲೇ ಇಲ್ಲ. ಆಥರ್ಿಕ ಪರಿಸ್ಥಿತಿ ಸುಧಾರಿಸಿದಂತಿದ್ದರೂ ಏನೋ ಕಳೆದುಕೊಂಡ ಅನುಭವಆಯಿತು.ಅಷ್ಟೊತ್ತಿಗೆಕಾಂತರಾಜುದೂರದಧಾರವಾಡಕ್ಕೆ ವರ್ಗವಾಗಿದ್ದ.ಪತ್ರಿಕೆಗಳಲ್ಲಿ ಮಾತ್ರ ಅವನ ಹೆಸರು, ಮುಖ ನೋಡುವಂತಾಯಿತು.
ಡಾ. ಸಿದ್ಧಾರ್ಥ ಇನ್ನೂಅದೇಕಾಲೇಜಿನಲ್ಲಿ ಪ್ರಾಧ್ಯಾಪಕ ಹುದ್ದೆಯಿಂದ ಪ್ರಾಂಶುಪಾಲ ಹುದ್ದೆಗೇರಿದ.ಯುವ ಕವಿಗಳಾಗಿ ಗುರುತಿಸಿಕೊಂಡವರು ಪ್ರಾಧ್ಯಾಪಕನ ಸುತ್ತಲಿರುವ ಶಿಷ್ಯರು, ವಿದ್ಯಾಥರ್ಿಗಳಾಗಿದ್ದರು.ಅವರೆಲ್ಲ ಈಗ ಸಣ್ಣ ಪುಟ್ಟ ಲೇಖನ, ಕತೆಗಳನ್ನು ಬರೆದು ಪುಸ್ತಕಗಳನ್ನು ಸಹ ಪ್ರಕಟಿಸಿದ್ದರು.ಜನರಿಂದ ಪಡೆಯುವಗೌರವಕ್ಕೂ, ಶ್ರೇಯಸ್ಸಿಗೆ ಪಾತ್ರರಾಗಿದ್ದರು. ಕನ್ನಡಪರ ಸಂಘಟನೆಯವರು, ಮಾಧ್ಯಮದವರು, ಜನಸಾಮಾನ್ಯರೆಲ್ಲಅವರನ್ನು ಸಾಹಿತಿಗಳೆಂದೇ ಸಂಭೋಧಿಸುತಿದ್ದರು.ಪ್ರೊ.ಗುರಪ್ಪ ಆಗಾಗ ಮಾಂತುವಿನ ಬಳಿ ಬಂದು ಹೋಗುತಿದ್ದನು.
ಅನೇಕ ಸಲ ಗುರಪ್ಪನ ವಿಚಾರದಲ್ಲಿ ಬಂದಿದ್ದೆಲ್ಲ ಹೇಳಿ ಬರೆಸಿಕೊಂಡು ಏ ಬಾರ್ಲ ಮಾಂತ್ಯ, ನನಗೊಂದು ಈ ವಿಷಯದ ಮ್ಯಾಲ ಭಾಷಣ ಬರೆಯೋದದ, ಪ್ರಬಂಧ ಬರ್ದಾಂಗ್ ಬರಿಬೇಕು ನೋಡು.ನಿನ್ನ ವಿಚಾರಕ್ಕ ತಿಳ್ದಂಗ ಟೈಪ್ ಮಾಡಿಕೊಡು.ಎನ್ನುತಿದ್ದನು.ಆಗಾಗ ಹೊಸ ಹೊಸ ವಿಷಯಗಳನ್ನು ತಂದು ಮಾಂತುನ ಮುಂದಿಡುತಿದ್ದಾಗಲೆಲ್ಲ ಮಾಂತುಯಥಾಪ್ರಕಾರಆಜ್ಞೆ ಪಾಲಿಸಿಕೊಡುತಿದ್ದ.ಸಿಕ್ಕಷ್ಟು ಸಾಕು ಎಂಬ ಮನೋಭಾವ ತಾಳಿದನು.ಗುರಪ್ಪ ಹೇಳುವ ಕೆಲಸವನ್ನೂ ಒಪ್ಪಿಕೊಳ್ಳುವ ಅನಿವಾರ್ಯತೆ ಮಾಂತುಗಿತ್ತು.ಕಷ್ಟಕಾಲ ದೂರಾಗಲೆಂಬ ಚಿಂತೆ ಬಿಟ್ಟರೆ ಬೇರೇನುಇರಲಿಲ್ಲ.
ಪ್ರೊ.ಗುರಪ್ಪ: ಗೊತ್ತೇನ್ಲ ಮಾಂತ್ಯ, ಇದುಎಂಎಲ್ಎ ಸಾಹೇಬರದ್ದು ಪರಿಚಯಅದಾ ನೋಡು. ಅವರ ಬಗ್ಗೆ ಒಂದು ಲೇಖನ ಮಾಡ್ಬೇಕಾಗ್ಯದ.ನೀನು ಬರ್ದಿಅಂದ್ರ ನಿನ್ ಹೆಸರಿನ್ಯಾಗ್ ನಮ್, ಲೋಕಲ್ ಪತ್ರಿಕೆಯಲ್ಲಿ ಪ್ರಿಂಟ್ ಮಾಡರ್ರಿ, ನಮ್ತಾಲೂಕಿನ ಶಾಸಕರ ಬಗ್ಗೆ ನೀ ಬರ್ದಿದ್ದಿಅಂದ್ರಅವ್ರು ಭಾಳ ಖುಷ್ಆಗ್ತರಲೆ, ಒಂದ್ಸಲ ಬರ್ದುತೋರ್ಸಿದಂದ್ರಅವರ ಹತ್ರ ಭಾಳ ಕೆಲಸ ಸಿಗ್ತಾವ ಮತ್ತ.ನಿನ್ಹಂಗ್ಯಾರು ಬರಿತಾರ್ ಬಿಡೋ, ಭಾಳ ಶಾಣ್ಯ ಮನಷ್ಯ ಇದ್ದಿ ನೀ. ನಿನ್ ಪ್ರತಿಭೆತೋರ್ಸ್ಬೇಕಂದ್ರಇಂಥದ್ದೆಲ್ಲ ಮಾಡಿದ್ರಷ್ಟೆಎಲ್ಲರೂಗೊತ್ತ್ ಹಿಡಿತಾರಲ್ಲಎಂದು ಹೇಳಿ ಉತ್ತೇಜಿಸುತಿದ್ದನು.ಪ್ರೊ.ಗುರಪ್ಪನ ಒಳ ಮರ್ಮ ಮಾಂತುಗೆ ತಿಳಿಯಲೇ ಇಲ್ಲ. ಹೀಗೆ ಎಲ್ಲ ಸಂದರ್ಭಗಳಲ್ಲಿಯೂ ಮಾಂತುವಿಗೆ ಮಂಕು ಬೂದಿ ಎರಚಿದ್ದು ಬುದ್ಧಿ ಜೀವಿಗಳೆನಿಸಿಕೊಂಡ ಪ್ರೊ.ಗುರಪ್ಪನಂಥವರೇ ಹೆಚ್ಚು.
ಈಗಾಗಲೇ ಜಾನವಾರ್ಕುಲದ ಪ್ರೊ.ಗುರಪ್ಪಎಂದೇ ಮಾಂತುನ ಹಿತೈಷಿಗಳ ಮಾತಿನಲ್ಲಿ ನೆನಪಾಗುತಿದ್ದನು. ಒಂದು ಸಾಲು ಬರೆಯುವುದಕ್ಕೆ ಹೆಣಗಾಡುತಿದ್ದಗುರಪ್ಪ ಜೊಳ್ಳು ಪ್ರತಿಭೆಯಾಗಿದ್ದನು.ಆದರೂ ಕೆಲ ರಾಜಕೀಯ ವ್ಯಕ್ತಿಗಳ ಲೆಕ್ಕದಲ್ಲಿ ಶ್ರೇಷ್ಠ ಸಾಹಿತಿ ಎನಿಸಿಕೊಂಡಿದ್ದನು.ಜಿಲ್ಲಾ ಮಟ್ಟದರಾಜೋತ್ಸವ ಪ್ರಶಸ್ತಿಯೂ ಬಾಚಿಕೊಂಡಿದ್ದನು.ರಾಜಕೀಯ, ಸ್ವಂತಂತ್ರ ಹೋರಾಟಗಾರರ, ಚಿತ್ರಕಲಾವಿದರ, ಏನೂ ಇಲ್ಲದವರ ಬಗ್ಗೆಯೂಜೀವನಚರಿತ್ರೆ ಬರೆದು ಹೆಸರು ಪಡೆದಿದ್ದನು. ಉದ್ಯಮಿ, ವ್ಯಾಪಾರಿಗಳ, ಶಿಕ್ಷಣ ವಲಯ, ಸರಕಾರಿ ಅಧಿಕಾರಿಗಳ ದೃಷ್ಠಿಯಲ್ಲಿ ಪ್ರಶಂಸೆಗೆ ಒಳಗಾಗಿದ್ದನು.ರಾಜಕೀಯ ಸಮಾವೇಶಗಳು ಎಲ್ಲಿ ನಡೆದರು ಪ್ರೊ. ಗುರಪ್ಪನನ್ನೇ ಸಂಚಾಲಕನಾಗಿ ಕರೆಯುತಿದ್ದರು.ವೇದಿಕೆಯಲ್ಲಿ ಅವನದೇ ಭಾಷಣ. ನಿರೂಪಣೆಯಲ್ಲಿ ರಾಜಕೀಯ ಜನರನ್ನು ಅಟ್ಟಕ್ಕೇರಿಸಿ, ಅವರ ಗುಣಗಾನ ಮಾಡುತ್ತ, ಒಂದು ವರ್ಗದ ಜನರ ಅಭಿಮಾನವನ್ನೆ ಗಳಿಸಿದ್ದನು.ಅವರೆಲ್ಲರ ಪ್ರೀತಿ, ಗೌರವಕ್ಕೆ ಪಾತ್ರನಾಗಿ ಬೆಳೆದು ನಿಂತನು.
ಕಾಂತರಾಜು ಇವತ್ತು ಶ್ರೇಷ್ಠ ಕತೆಗಾರ ಅಷ್ಟೇ ಅಲ್ಲರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತನು ಹೌದು.ಡಾ. ಸಿದ್ಧಾರ್ಥ ಇದೀಗ ಪಿಎಚ್ಡಿ ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕನಾಗಿದ್ದಾನೆ. ತನ್ನ ಶಿಷ್ಯರ ಎಂಫಿಲ್, ಥೀಸಸ್ನಂಥ ಪ್ರಬಂಧ ಪುಸ್ತಕಗಳು ತಯ್ಯಾರಿಸಿ ಕೊಡುವುದಕ್ಕೆ ಹಾತೊರೆಯುತಿದ್ದಾನೆ. ಅಕ್ಷರಜೋಡಣೆ ಕೆಲಸ ನೀಟಾಗಿ ಮಾಡಿಸಬೇಕಿದೆ.ಮಾಂತುಎಂದರೆ ಅವನಿಗೆ ಬಹಳ ಪ್ರೀತಿಎನ್ನುವಂತೆ ಮಾತಿನಕಲೆಯಿಂದಎಂಥವರನ್ನಾದರೂ ಸರಿ.ತನ್ನ ಪರ ಮಾಡಿಕೊಳ್ಳುತಿದ್ದನು. ಹೊಟ್ಟೆಯಲ್ಲಿರುವಕಲ್ಲುಕೂಡಕರಗುವಂತೆ ಮಾತಾಡುವ ಸ್ವಭಾವ ಸಿದ್ಧಾರ್ಥನಲ್ಲಿತ್ತು.
ಒಂದಿನ ಡಾ.ಸಿದ್ಧಾರ್ಥ ಮತ್ತೆ ಮಾಂತುಗೆ ಫೋನ್ ಮಾಡಿಯೇ ಬಿಟ್ಟಕಥೆ, ಲೇಖನದ ಪುಸ್ತಕ ಪ್ರಿಂಟ್ ಮಾಡೋದಿದ್ರ ಹೇಳಪ್ಪ ಮಾಂತು.ಈಗ ನನ್ನ ಸಂಪಾದಕತ್ವದಲ್ಲೇ ಪ್ರಕಾಶಕರೊಬ್ಬರು ವಾರ್ಷಿಕೋತ್ಸವಕ್ಕೆ ನೂರು ಪುಸ್ತಕ ಮಾಡ್ಸೋವರಿದ್ದಾರ್. ನಿನ್ನದೊಂದುಕಥಾ ಸಂಕಲನ ರೆಡಿಅದಾಅಂದಿದ್ಯೆಲ್ಲ. ಮತ್ತ,…..ಅದ್ಯಾವುದೋ ಲೇಖನ ಸಂಕಲನ ಪ್ರಿಂಟ್ ಮಾಡೋದಿದ್ರ ಹೇಳು ಅಂದಿದೆಲ್ಲ. ಎಲ್ಲಾರೆಡಿ ಮಾಡಿತಂದ್ಕೊಡು.ಪ್ರಿಂಟ್ಆಯ್ತಂದ್ರಅದಕ್ಕ ಸಂಭಾವನೆಜೊತಿಗ್ ನೂರು ಪುಸ್ತಕ ಕೊಡ್ತಾರ್.ಹಾಂಗೆ ನಿನ್ಗೊಂದಿಷ್ಟು ಡಿಟಿಪಿ ಕೆಲಸಾನೂ ಸಿಕ್ಕಾಂಗ್ ಆಗ್ತದಲ್ಲೋಎಂದು ಹೇಳಿ ಬಲೆಯನ್ನು ಹೆಣೆಯಲೆತ್ನಿಸಿದನು.
ಮಾಂತು ವಿಚಾರದಲ್ಲಿ ಮುಳುಗಿದನು.ಅಷ್ಟರಲ್ಲಿಏನ್ರೀ… ಸ್ವಲ್ಪ ಈ ಕಡೆ ಬರ್ತಿರಾ.?ಎಂಬ ಧ್ವನಿ ಮಾಂತುನ ಹೆಂಡತಿಯದ್ದು.ಕಂಪ್ಯೂಟರ್ ಮೌಸ್ ತಿರುಗಿಸಿ, ಮಾನಿಟರ್ ಮೇಲಿನ ಫಂಕ್ಷನ್ಸ್, ಎಲ್ಲ ಮಿನಿಮೈಜ್ ಮಾಡಿ ತಡವರಿಸಿ ಕುರ್ಚಿಯಿಂದ ಮೇಲೆದ್ದನು. ಹೆಂಡತಿಯ ಬೆಡ್ರೂಮಿಗೆ ಹೋಗಿ ಇಣುಕಿ ಏನು? ಎನ್ನುವಂತೆ ಕೇಳಿದನು.’ಯಾಕೋ ಹೊಟ್ಟಿ ಭಾಳ ನೋಯಿಸ್ತಿದೇರ್ರೀ, ದವಾಖಾನಿಗಿ ಹೋಗೋಣ ಬನ್ರಿ. ದಿನಗಳು ಭರ್ತಿ ಆಗ್ಯಾವ. ಎಲ್ಲ ಮುಗದು ಒಂಬತ್ರಾಗದ.ತಡ ಮಾಡ್ಬ್ಯಾಡ್ರಿ. ನಮ್ಮವ್ವಗ್ ಹ್ಯಾಂಗಾರ್ ಮಾಡಿಕರ್ಸಿ.’ಅಂದಿದ್ದೇತಡ.ಮನೆಯಿಂದ ಹೊರಗೆ ಬಂದ ಮಾಂತು.ಮೊಬೈಲ್ಕೈಯಲ್ಲಿ ಹಿಡಿದುಕೊಂಡುಆಟೋ ಹುಡುಕಲುರಸ್ತೆಗೆ ಬಂದನು.
ಹಾಗೇ ಕೈಯಲ್ಲಿ ಹಿಡಿದುಕೊಂಡಿದ್ದ ಮೊಬೈಲ್ನಿಂದಡಾ.ಸಿದ್ಧಾರ್ಥನಿಗೆ ಫೋನ್ಕಾಲ್ ಮಾಡಿದನು.ಹಲೋ, ಸರ್ ನಾನು.ಡಿಟಿಪಿ ವರ್ಕಇದ್ರೆತಂದುಕೊಡಿಸರ್.ಹಾಗೆ, ನೀವು ಪ್ರಿಂಟ್ ಮಾಡ್ಸೋದುಗ್ಯಾರಂಟಿಅಂತಂದ್ರ ನಂದೊಂದು ಸಂಕಲನ ರೆಡಿ ಮಾಡಿಕೊಡ್ತಿನಿಎಂದು ಹೇಳಿದನು.ಆಟೋವೊಂದನ್ನುತಡೆದು ಮನೆಗೆ ಹೋದ.ಮನೆಯಿಂದಆಸ್ಪತ್ರೆಗೆ ಹೋದ ಮಾಂತು. ಹೋಗುವ ದಾರಿಗುಂಟ ವಿಚಾರಕ್ಕೆ ಹತ್ತಿದ ಮಾಂತುಗೆತನ್ನ ಹೆಂಡತಿಯ ಹೇರಿಗೆ ಸುಸೂತ್ರಆದರೆ ಸಾಕು ಎಂಬ ಆಶಯದಿಂದದೇವರಲ್ಲಿ ಪ್ರಾರ್ಥಿಸಿದನು.
ಅಸಹಾಯಕತೆಯಲ್ಲಿ ನರಳುತಿದ್ದ ಮಾಂತುನ ವಿಚಾರವೆಂಬ ದೋಣಿ ಮುಂದೆ ಸಾಗಲೇ ಇಲ್ಲ. ಕಾಲ ಸರಿದು ಹೋದಂತೆಲ್ಲ ಅವನಿಗೆ ಹಾಗೆ ಅನ್ನಿಸತೊಡಗಿತ್ತು.ಪರಿಸ್ಥಿತಿಯ ಒತ್ತಡಕ್ಕೆ ನನ್ನನ್ನು ನಾನು ಮಾರಿಕೊಂಡೆನೇನು?ಎಂದು.ಆದರೆ ಸಮಯ ಬಹಳ ಮುಂದೂಡಿಕೊಂಡು ಸಾಗಿತ್ತು.ಸಂಜೆ ಹೊತ್ತಿನ ಸೂರ್ಯ ಮುಳುಗಿದಂತೆ ಮಾಂತುಕತ್ತಲಲ್ಲಿ ಮರೆಯಾದ.






0 Comments