ಇದು ಅವಧಿ-ಆಲೆಮನೆ, ಹಾಗಾಗಿ ‘ನುಡಿನಮನ’

ಗದಗದ ಸಾಹಿತ್ಯ ಸಮ್ಮೇಳನದ ಯಶಸ್ವಿ ಪಯಣದ ನಂತರ ಮತ್ತೆ ‘ಅ’ ಮತ್ತು ‘ಆ’ ಜೊತೆಗೂಡಿ ಸನ್ನದ್ಧವಾಗಿದೆ. ಕನ್ನಡದ ಈ ಮೊದಲ್ನುಡಿ, ತೊದಲ್ನುಡಿ ಇಲ್ಲದೆ ಮಾತು ಇಲ್ಲವಲ್ಲ.. ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಒಂದು ಮೊದಲ ನುಡಿ ಬರೆಯಲು ಈ ಅಕ್ಷರಗಳು ಸಜ್ಜಾಗಿವೆ.

ಅವಧಿ ಮತ್ತು ಆಲೆಮನೆ ಎರಡೂ ಜೋಡಿಯಾದ ಪರಿಣಾಮವೇ ‘ನುಡಿ ನಮನ’.

ಎಲೆಕ್ಟ್ರಾನಿಕ್ ಮೀಡಿಯಾ ವಿದ್ಯಾರ್ಥಿಗಳು ಹಾಗೂ ಸಿನೆಮೆಟೋಗ್ರಫಿ  ಕಲಿಯುತ್ತಿರುವ ಉತ್ಸಾಹಿಗಳು ದಂಡು ಕಟ್ಟಿಕೊಂಡು ಅದನ್ನು ‘ಇರುವೆ ಬಳಗ’ ಎಂದು ಬಣ್ಣಿ ಸಿಕೊಂಡಿದೆ. ಹೊಸ ದಿಕ್ಕಿನತ್ತ ಕೈಚಾಚುವ ಉತ್ಸಾಹ ಇರುವ ಈ ದಂಡಿಗೆ ಶುಭ ಹಾರೈಸುತ್ತಾ ಅವಧಿ ‘ಆಲ್ ದಿ ಬೆಸ್ಟ್’ ಹೇಳುತ್ತಿದ್ದೇವೆ.

77ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗುತ್ತಿರುವ ಬೆಂಗಳೂರನ್ನು ಆಲೆಮನೆಯ ಇರುವೆಗಳು ಸುತ್ತು ವರಿದು ಕ್ಷಣ-ಕ್ಷಣದ ಮಾಹಿತಿಯನ್ನು ಹೊತ್ತು ತರಲಿವೆ

‘ಆಲೆಮನೆ’ ಬಳಗ ಎಂದರೇನು??

ಹಗಲಿರುಳು ದುಡಿಯೋ ಮನಸ್ಸು ಮಾಡಿರುವ ಬಲಿಷ್ಠ ಯುವ ಇರುವೆಗಳ ಗುಂಪಿದು. ಸಿಕ್ಕಿದ್ದೆಲ್ಲವನೂ ಓದೋ ಹವ್ಯಾಸ, ಬರದಿದ್ದರೂ ತೋಚಿದ್ದೆಲ್ಲವನೂ ಬರೆಯೋ ಚಟ, ನಾಟಕದ ಹುಚ್ಚು, ಸಿನಿಮಾದೆಡಗೆ ಒಂದು ಬೆರಗುಗಣ್ಣು, ಕಲಾತ್ಮಕತೆಯ ಗೀಳು, ಛಾಯಾಗ್ರಹಣದ ಚತುರತೆಗಳನ್ನು ತನ್ನೊಡಲಲ್ಲಿ ಅವಿತಿಟ್ಟುಕೊಂಡಿರುವ ಆಲೆಮನೆಯು ಕನ್ನಡ ನಾಡಿನ ಸಾಂಸ್ಕೃತಿಕ ಜಗತ್ತಿನ ಬೆಲ್ಲದ ಸವಿಯನ್ನು ಸಾಗರದಾಚೆಗೂ ಸಿಂಪಡಿಸುವ ಹಂಬಲದಿಂದ ಚಿಗುರೊಡೆದು, ಇಡೀ ಪ್ರಪಂಚದ ಕನ್ನಡಿಗರೆದೆಯ ಕದ ತಟ್ಟಲು ಸನ್ನದ್ಧವಾಗಿದೆ.

ನಮ್ಮ ಈ ಯುವಕರ ಗುಂಪು ಅಭಿವ್ಯಕ್ತಿಗಾಗಿ ಆರಿಸಿಕೊಂಡದ್ದು ಆಧುನಿಕ ನೆಟ್ಲೋಕದ ವೇದಿಕೆಯನ್ನು. ಪ್ರಸ್ತುತ ನಮ್ಮ ಬಳಗದ ಮೊದಲ ಕೊಡುಗೆ `ನುಡಿನಮನ’ ತಮ್ಮ ಮಡಿಲಲ್ಲಿದೆ. ಈ `ಸಂವೇದನಾಶೀಲ’ ಇರುವೆಗಳ ಗುಂಪು ಇನ್ನೂ ಅನೇಕ `ತಲೆಕೆಟ್ಟ’ ಸಾಹಸಗಳಿಗೆ ಕೈ ಹಾಕಲಿದೆಯೆಂಬ ಆಶ್ವಾಸನೆ ನಮ್ಮ ಕಡೆಯಿಂದ.

http://aalemanebalaga.blogspot.com

‍ಲೇಖಕರು avadhi

February 3, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗವಿಸಿದ್ಧ ಹೊಸಮನಿ, ಹುಬ್ಬಳ್ಳಿ

    ಇರುವೆ ಬಳಗದ ಕಾರ್ಯ ಯಶಶ್ವಿಯಾಗಲಿ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: