ಇದನ್ನು ನಾನು ಹೇಳಲೇಬೇಕು..

ಕುಸುಮಾ ಪಟೇಲ್

ಆ ಹುಡುಗಿ, ಪುಟ್ಟ ಪೋರಿಯ ಬಗ್ಗೆ ನಾನು ಹೇಳಲೇಬೇಕು. ಇದು ನಡೆದದ್ದು ಯಶವಂತಪುರದ ವೃತ್ತದ ಬಳಿ. ಟ್ರಾಫಿಕ್‍ನಲ್ಲಿ ಆಟೋ ನಿಲ್ಲಿಸಿದಾಗ, ಸುಮಾರು ೬ ಅಥವಾ ೭ ವರ್ಷದ ಆ ಪುಟ್ಟ ಹುಡುಗಿ ಬಲೂನ್‍ಗಳನ್ನು ಹಿಡಿದು ಆಟೋದ ಬಳಿ ಬಂದು ಕೊಳ್ಳುವಂತೆ ಕೇಳುತ್ತಿದ್ದಳು.

ಮನೆಯಲ್ಲಿ ಸಣ್ಣ ಮಕ್ಕಳೇ ಇಲ್ಲವಲ್ಲೋ ಏನ್ ಮಾಡ್ಲಿ ಬೇಡ ಎಂದು ಹೇಳುತ್ತಾ ಅವಳನ್ನು ಸಾಗ ಹಾಕಲು ನೋಡುತ್ತಿದ್ದೆ. ಆದರೆ ಆ ಹುಡುಗಿ ಅಲ್ಲೇ ನಿಂತಿದ್ದಳು. ಟ್ರಾಫಿಕ್ ಸಿಗ್ನಲ್ ಬದಲಾಗುವುದು ಕೊಂಚ ಹೆಚ್ಚೇ ತಡವಾಯಿತು.

 

ನನ್ನ ಗಂಡ ೨೦ ರ ನೋಟು ತೆಗೆದು ಆಕೆಗೆ ಕೊಟ್ಟು ಹೇಳಿದರು, ಬಲೂನ್ ಬೇಡ ಇದನ್ನ ಇಟ್ಟುಕೋ’ ಆ ಹುಡುಗಿ ಒಂದು ಕ್ಷಣ ನಮ್ಮನ್ನೇ ನೋಡುತ್ತಿದ್ದಳು. ಮತ್ತೊಂದು ಕ್ಷಣದಲ್ಲಿ ಅಲ್ಲಿಂದ ಮಾಯವಾದಳು. ಆದರೆ ಅಷ್ಟರಲ್ಲೇ ಒಂದು ಬಲೂನನ್ನು ಆಟೋ ಒಳಗೆ ತಳ್ಳಿ ಹೋಗಿದ್ದಳು. ನಮಗೆ ಇದು ನಿಜಕ್ಕೂ ಆಶ್ಟರ್ಯ ಉಂಟು ಮಾಡಿತ್ತು.

ಸಿಕ್ಕ ಸಿಕ್ಕದ್ದನ್ನು ಬಕಾಸುರರ ಹಾಗೆ ತಿನ್ನುವ ಕಾಲದಲ್ಲಿ ಆ ಪುಟ್ಟ ಹುಡುಗಿ ಮನದಾಳಕ್ಕೆ ಇಳಿದಿದ್ದಾಳೆ. She has touched all of us. ಬೀದಿಯಲ್ಲಿ ಬೇಡುವ ಮಾರುವ ಮಕ್ಕಳು ಕಂಡಾಗೆಲ್ಲಾ ಅಸಹನೀಯ ನೋವಾಗುತ್ತದೆ, ನಿದ್ದೆ ಮಾಯವಾಗುತ್ತದೆ. ಆ ಹುಡುಗಿಯ ಸ್ವಾಭಿಮಾನ ಮಾದರಿಯಾಗಲಿ ಎನ್ನವ ಆಸೆಯಿಂದ ಇದನ್ನು ಬರೆಯುತ್ತಿದ್ದೇನೆ.

‍ಲೇಖಕರು avadhi

September 11, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Amba

    It’s a moving story. Somehow we always make assumptions, under estimate or over estimate people. We should learn to look at things with open mind.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: