ರಾಜಾರಾಂ ತಲ್ಲೂರು
ನಿನ್ನೆ ಜಾಗತಿಕ ಇಡ್ಲಿ ದಿನವನ್ನು ಆಚರಿಸಿ, ಅಲ್ಲಿ ವಡೆಯನ್ನು ನಿರ್ಲಕ್ಷಿಸುವ ಮೂಲಕ ಇಡ್ಲಿ ವಡಾಗಳನ್ನು ಪ್ರತ್ಯೇಕಿಸಿರುವುದನ್ನು ಪ್ರತಿಭಟಿಸಲು ರಾಜ್ಯ ವಡಾ ಸಮಿತಿ ನಿರ್ಧರಿಸಿದೆ.
ಈ ಪ್ರತಿಭಟನೆಗೆ ಮದ್ದೂರು ವಡಾ, ದೂರದ ಮಹಾರಾಷ್ಟ್ರದ ವಡಾಪಾವ್ ಮತ್ತಿತರ ಸಂಘಟನೆಗಳೂ ಬೆಂಬಲ ಸೂಚಿಸಿದ್ದು, ಇದು ರಾಜಕೀಯ ಪ್ರೇರಿತ ಒಡೆದಾಳುವ ನೀತಿ ಎಂದು ಹೇಳಿವೆ.







ಹೌದು ಮತ್ತೆ… ಸ್ವತಂತ್ರ ಭವ್ಯ ಮೇರಾ ಭಾರತ್ ಮಹಾನ್ ರಾಷ್ಟ್ರದಲ್ಲಿ ಹಿಂಗೆಲ್ಲ ‘ವಡೆ’-‘ದಾಳು’ವ ನೀತಿಗೆ ನಮ್ಮನ್ನು ದಾಳ ಮಾಡಬೇಡಿ ಎಂದು ಎಲ್ಲ ವಡೆ-ವಡಾ ಬಣಗಳು ರೊಚ್ಚಿಗೆದ್ದಿದ್ದು, ಇಡ್ಲಿಯ ಪಕ್ಕದಲ್ಲಿ ಒಂದೇ ತಟ್ಟೆಯಲ್ಲಿ ಕೂಡೆವು ನಾವಿನ್ನು ಎಂದು ಉದ್ದಿನೊಡೆ “ಟೂ” ಬಿಟ್ಟಿದೆಯಂತೆ!