ಹತಾಶೆ ಆತಂಕಗಳ ದ್ಯೋತಕ
ನಾ ದಿವಾಕರ
ನಾನು ಬ್ರಾಹ್ಮಣ ದ್ವೇಷಿಯಲ್ಲ, ಬ್ರಾಹ್ಮಣರಿಂದಲೂ ಕಲಿಯಬೇಕಾದ್ದು ಬೇಕಾದಷ್ಟಿದೆ,,,,,,, ಇಕ್ರಲಾ ವದೀರ್ಲಾ ಎಂದು ಮತ್ತೊಮ್ಮೆ ಬರೆಯಲಾರೆ,,,,, ಆ ಆಕ್ರೋಶ ತನ್ನಲ್ಲಿ ಉಳಿದಿಲ್ಲ ,,,,, ಖ್ಯಾತ ದಲಿತ ಕವಿ ಸಿದ್ಧಲಿಂಗಯ್ಯನವರ ಈ ಹೇಳಿಕೆಗಳು ಕರ್ನಾಟಕದ ದಲಿತ ವಲಯಗಳಲ್ಲಿ ಸಂಚಲನ ಮೂಡಿಸದಿದ್ದರೂ ಒಂದು ಚರ್ಚೆಯನ್ನಂತೂ ಹುಟ್ಟುಹಾಕಿದೆ. ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದು ಸಿದ್ಧಲಿಂಗಯ್ಯನವರ ಸಮಜಾಯಿಷಿಯ ಮೂಲಕ ವಾದ ವಿವಾದಗಳು ಕೊನೆಗೊಂಡಿವೆ. ಒಂದು ರೀತಿಯಲ್ಲಿ ಸಿದ್ಧಲಿಂಗಯ್ಯನವರ ಮೂಲ ಹೇಳಿಕೆಗಿಂತಲೂ ಸಮಜಾಯಿಷಿ ಮತ್ತೂ ವಾದಗಳನ್ನು ಹುಟ್ಟುಹಾಕಬಹುದೇನೋ.
ಬಹುಶಃ ಹತ್ತು ವರ್ಷಗಳ ಹಿಂದೆ ಸಿದ್ಧಲಿಂಗಯ್ಯನವರು ಈ ಮಾತುಗಳನ್ನಾಡಿದ್ದರೆ ಒಂದು ರಾಜ್ಯ ಮಟ್ಟದ ವಿಚಾರ ಸಂಕಿರಣವೇ ನಡೆಯುತ್ತಿತ್ತೇನೋ. ಆದರೆ ಈಗ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳು ಎಲ್ಲೋ ಒಂದೆಡೆ ದಲಿತ ವಲಯಗಳಲ್ಲಿನ ನಿಷ್ಕ್ರಿಯತೆ, ನಿರ್ಲಕ್ಷ್ಯ ಮತ್ತು ಹತಾಶ ಮನೋಭಾವವನ್ನು ತೋರಿಸುತ್ತದೆ. ಈ ಅಂಶವೇ ಸಿದ್ಧಲಿಂಗಯ್ಯನವರ ಹತಾಶೆಯ ಮಾತುಗಳಿಗೆ ಕಾರಣವಾಗಿರಲೂಬಹುದು. ಎಪ್ಪತ್ತರ ದಶಕದಲ್ಲಿ ಬೆಂಕಿಯ ಕಿಡಿಯಂತಿದ್ದ ಕವಿ ಈಗ ತನ್ನಲ್ಲಿ ಆ ಆಕ್ರೋಶ ಉಳಿದಿಲ್ಲ ಎಂದು ಹೇಳಿರುವುದನ್ನು ದಲಿತ ಚಳುವಳಿಯ ಹಿಮ್ಮುಖ ಚಲನೆಯ ಸಂಕೇತವಾಗಿ ನೋಡಬೇಕೇ ಹೊರತು ಒಂದು ವ್ಯಕ್ತಿಗತ ಅಭಿವ್ಯಕ್ತಿಯಾಗಿ ಕಾಣಬಾರದು.
ದಲಿತ ಚಳುವಳಿಯ ಮೂಲ ಸಮಸ್ಯೆ ಎಂದರೆ ಎಪ್ಪತ್ತರ ದಶಕದಲ್ಲಿ ಕಂಡುಬಂದಂತಹ ಸಾಂಸ್ಕೃತಿಕ ನೆಲೆಗಟ್ಟಿನ ಅವಕಾಶಗಳನ್ನು ರಾಜಕೀಯ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ಒಂದು ಸೈದ್ಧಾಂತಿಕ ಬುನಾದಿಯನ್ನು ಹಾಕಿಕೊಳ್ಳದೆ ಹೋದದ್ದು. ಇಕ್ಕರ‍್ಲಾ ವದೀರ‍್ಲಾ ಎಂಬ ಸಿದ್ಧಲಿಂಗಯ್ಯನವರ ಕವನದ ಸಾಲುಗಳು, ನನ್ನ ಜನ ನನ್ನ ಜನ ಎಂಬ ಕ್ರಾಂತಿಯ ಕಿಡಿ ಹೊತ್ತಿಸಿದ ಸಾಲುಗಳು ಆ ಕಾಲದ ದಲಿತ ಸಮುದಾಯಗಳಲ್ಲಿನ ನೋವು, ಆಕ್ರಂದನ ಮತ್ತು ಅನಿವಾರ್ಯತೆಗಳ ಸಂಕೇತವಾಗಿ ಹೊರಹೊಮ್ಮಿದ್ದವು. ಈ ಸಾಲುಗಳನ್ನು ಸಿದ್ಧಲಿಂಗಯ್ಯ ಎಂಬ ವ್ಯಕ್ತಿಯೊಬ್ಬರ ಅಭಿವ್ಯಕ್ತಿ ಎಂದು ಭಾವಿಸಿದಲ್ಲಿ, ಮೇಲೆ ಉಲ್ಲೇಖಿಸಿರುವ ಸಾಲುಗಳನ್ನೂ ಹಾಗೆಯೇ ಭಾವಿಸಬೇಕಾಗುತ್ತದೆ. ಆದರೆ ವಾಸ್ತವ ಭಿನ್ನವಾಗಿದೆ. ಸಿದ್ಧಲಿಂಗಯ್ಯನವರ ಹತಾಶೆಯ ಸಾಲುಗಳು ದಲಿತ ಚಳುವಳಿಯ ಹತಾಶ ಪರಿಸ್ಥಿತಿಯನ್ನೇ ಪ್ರತಿಬಿಂಬಿಸುತ್ತದೆ. ಇಲ್ಲಿ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯಗಳ ವಿರುದ್ಧ ದಲಿತ ವರ್ಗಗಳ ಆಕ್ರೋಶಗಳನ್ನು ಮಾತ್ರ ಒರೆ ಹಚ್ಚಿ ನೋಡಿದಾಗ ಬಹುಶಃ ಕ್ರಾಂತಿಯ ಕಿಡಿ ಹೊತ್ತಿಸಿದ ಕವಿ ಬ್ರಾಹ್ಮಣಿಕೆಗೆ ಬಲಿಯಾಗಿದ್ದಾರೇನೋ ಎನಿಸಬಹುದು. ಆದರೆ ವಸ್ತುನಿಷ್ಠವಾಗಿ ನೋಡಿದಾಗ ಇಡೀ ದಲಿತ ಚಳುವಳಿಯೇ ಒಂದು ರೀತಿಯ ಬ್ರಾಹ್ಮಣಿಕೆಗೆ ಬಲಿಯಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಎಪ್ಪತ್ತರ ದಶಕದ ಮತ್ತು ಪ್ರಸ್ತುತ ಸನ್ನಿವೇಶದ ಬ್ರಾಹ್ಮಣ್ಯದ ನಡುವೆ ಗಂಭೀರವಾದ ವ್ಯತ್ಯಾಸಗಳೇನೂ ಕಾಣಲಾಗುವುದಿಲ್ಲವಾದರೂ ನವ ಬ್ರಾಹ್ಮಣ್ಯದ ಸ್ವರೂಪವನ್ನು ಸ್ಪಷ್ಟವಾಗಿ ಕಾಣಬಹುದು. ನವ ಉದಾರವಾದದ ನೆರಳಲ್ಲಿ ನಗರೀಕರಣ ಸಂಸ್ಕೃತಿ ಹೆಚ್ಚಾಗುತ್ತಿರುವಂತೆಲ್ಲಾ ಬ್ರಾಹ್ಮಣ ಸಮುದಾಯ ತನ್ನ ಹಳೆಯ ವಾಸನೆಗಳನ್ನು ಕಳೆದುಕೊಂಡು ನವ ನವೀನ ಮಾದರಿಗಳ ಶೋಷಣಾ ಅಸ್ತ್ರಗಳನ್ನು ಅಳವಡಿಸಿಕೊಳ್ಳುತ್ತಿದೆ. ಸೂಕ್ಷ್ಮ ತಂತುಗಳ ರೂಪದಲ್ಲಿ ಅಗ್ರಹಾರ ಸಂಸ್ಕೃತಿ ಪುನರ್ ಸ್ಥಾಪಿಸಿಕೊಳ್ಳುತ್ತಿದೆ. ಈ ಬೆಳವಣಿಗೆಯ ಅರಿವು ದಲಿತ ಸಮುದಾಯಗಳಿಗೆ ಇಲ್ಲವೆಂದಲ್ಲ. ಅಥವಾ ಇದು ದಲಿತರನ್ನು ಕಾಡುತ್ತಿಲ್ಲವೆಂತಲೂ ಅಲ್ಲ. ಆದರೆ ನಗರೀಕರಣ ಸಂಸ್ಕೃತಿಗೆ ಬ್ರಾಹ್ಮಣರಷ್ಟೇ ಪ್ರಮಾಣದಲ್ಲಿ ಬಲಿಯಾಗಿರುವ ದಲಿತ ಸಮುದಾಯಗಳು ಈ ಹೊಸ ವಿದ್ಯಮಾನವನ್ನು ಗ್ರಹಿಸುತ್ತಿರುವ ರೀತಿ ಮಾತ್ರ ತಪ್ಪಾಗಿದೆ. ಇದು ದಲಿತ ಚಳುವಳಿ ಎದುರಿಸುತ್ತಿರುವ ಸಮಸ್ಯೆಯೂ ಹೌದು, ಸವಾಲೂ ಹೌದು.
ರಾಜಕಾರಣ, ಸಾಂಸ್ಕೃತಿಕ ಕ್ಷೇತ್ರ, ಸಾಮಾಜಿಕ ವಲಯಗಳಲ್ಲಿ ದಲಿತ ವರ್ಗಗಳ ಅಸ್ಮಿತೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ದಲಿತ ಸಂಘಟನೆಗಳ ವೈಫಲ್ಯ ಇಲ್ಲಿ ಎದ್ದುಕಾಣುತ್ತದೆ. ಎಪ್ಪತ್ತರ ದಶಕದ ಬಂಡಾಯದ ದನಿಗಳು ಎಲ್ಲೋ ಕಳೆದುಹೋಗಿವೆ ಎನ್ನುವುದಕ್ಕಿಂತಲೂ ಹಲವು ಮಜಲುಗಳಲ್ಲಿ ಆಳುವ ವರ್ಗಗಳ, ಸಮಾಜದ ಪ್ರಬಲ ವರ್ಗಗಳ, ಆಳ್ವಿಕರು ನಿರ್ಮಿಸಿರುವ ಪ್ರಭಾವಿ ವಲಯಗಳ ಅಂತರ್ಜಾಲದಲ್ಲಿ ಸಿಲುಕಿ ತಮ್ಮ ಅಸ್ಮಿತೆಗಳನ್ನು, ಅಸ್ತಿತ್ವಗಳನ್ನೂ ಮರೆತುಹೋಗಿವೆ ಎನ್ನುವುದು ಸೂಕ್ತ. ದಲಿತ ಚಳುವಳಿಗಳನ್ನು ಮೀಸಲಾತಿ, ದೌರ್ಜನ್ಯ ಮತ್ತು ಅಂಬೇಡ್ಕರ್ ಅವರ ವ್ಯಕ್ತಿಗತ ವೈಭವೀಕರಣಕ್ಕೆ ಮಾತ್ರ ಸೀಮಿತಗೊಳಿಸಿರುವ ಪರಿಣಾಮವನ್ನು ಇಲ್ಲಿ ನೇರವಾಗಿ ಕಾಣಬಹುದು. ಈ ಪ್ರತಿಪಾದನೆ ಒಪ್ಪುವಂತಹುದಲ್ಲ ಎನ್ನುವುದಾದರೆ, ೪೦ ವರ್ಷಗಳ ಹೋರಾಟಗಳ ನಂತರವೂ ಕರ್ನಾಟಕದ ದಲಿತ ಚಳುವಳಿ ತನ್ನದೇ ಆದ ಒಂದು ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಪ್ರಭಾವಳಿಯನ್ನು ಏಕೆ ನಿರ್ಮಿಸಿಕೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲೇ ಬ್ರಾಹ್ಮಣ-ಬ್ರಾಹ್ಮಣ್ಯಗಳ ಪ್ರಶ್ನೆಯನ್ನು ವಿಶ್ಲೇಷಿಸಬೇಕಾಗುತ್ತದೆ. ಅಂಬೇಡ್ಕರ್ ಅವರು ೧೯೩೦-೪೦ರ ದಶಕದಲ್ಲಿ ಹೇಳಿದ ಸಾವಿರಾರು ಬ್ರಾಹ್ಮಣೇತರರನ್ನು ನಂಬಬಹುದು ಒಬ್ಬ ಬ್ರಾಹ್ಮಣನನ್ನು ನಂಬಲಾಗದು ಎಂಬ ಮಾತುಗಳನ್ನು ಸಮಕಾಲೀನ ಸಂದರ್ಭದಲ್ಲಿ ಉಲ್ಲೇಖಿಸುವಾಗ ಕಳೆದ ಎಂಟು ದಶಕಗಳಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳನ್ನೂ ಪರಿಗಣಿಸದಿದ್ದರೆ, ಘೋಷಣೆಗಳಲ್ಲಿ ಕಳೆದು ಹೋಗುವ ಸಂಭವವೇ ಹೆಚ್ಚು. ಬಹುಶಃ ದಲಿತ ಚಳುವಳಿಯ ನ್ಯೂನತೆಯೂ ಇದೇ ಆಗಿದೆ. ಜಾಗತೀಕರಣ, ನವ ಉದಾರವಾದ ಮತ್ತು ಗ್ರಾಹಕ ಸಂಸ್ಕೃತಿ ಭಾರತೀಯ ಸಮಾಜದಲ್ಲಿ ಹುಟ್ಟುಹಾಕಿರುವ ಹೊಸ ಆಯಾಮಗಳನ್ನು ವ್ಯಾಖ್ಯಾನಿಸುವ ನಿಟ್ಟಿನಲ್ಲಿ ಅಂಬೇಡ್ಕರ್‌ವಾದದ ಪುನರ್‌ವ್ಯಾಖ್ಯಾನವನ್ನೂ ಮಾಡದೆ ಹೋದರೆ ದಲಿತ ಚಳುವಳಿ ಸಿದ್ಧಲಿಂಗಯ್ಯನವರಷ್ಟೇ ಹತಾಶ ಸ್ಥಿತಿ ತಲುಪಬೇಕಾಗುತ್ತದೆ.
ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲ್ ಪಂಕ್ತಿಗೆ ತಲುಪಿ ತಮ್ಮದೇ ಆದ ಅಸ್ಮಿತೆಗಳನ್ನು ರೂಪಿಸಿಕೊಂಡಿರುವ ಮೊದಲ, ಎರಡನೆ ಪೀಳಿಗೆಯ ದಲಿತ ವರ್ಗಗಳು ಸಾಮುದಾಯಿಕ ಅನನ್ಯತೆಗಳಿಂದ ದೂರವಿದ್ದು, ಅನ್ಯತೆಯ ಪಾಶವೀ ಸಾಂಸ್ಕೃತಿಕ ವಿದ್ಯಮಾನಕ್ಕೆ ಬಲಿಯಾಗಿರುವುದು ಭಾರತೀಯ ಸಾಮಾಜಿಕ ಚಳುವಳಿಯ ದುರಂತ. ಹಾಗಾಗಿಯೇ ಬುದ್ಧ, ಬಸವ, ಅಂಬೇಡ್ಕರಾದಿಗಳ ಸಿದ್ಧಾಂತಗಳು ಪ್ರತಿಮೆಗಳಲ್ಲಿ, ಘೋಷಣೆಗಳಲ್ಲಿ, ಬ್ಯಾನರ್‌ಗಳಲ್ಲಿ ಹುದುಗಿ ಹೋಗುತ್ತಿದೆ. ಆದ್ದರಿಂದಲೇ ದಲಿತ ಸಮುದಾಯಗಳ ಮೂಲಭೂತ ಸಮಸ್ಯೆಗಳನ್ನು ಯಾವುದೇ ರೀತಿಯಲ್ಲೂ ಬಿಂಬಿಸಲಾಗುತ್ತಿಲ್ಲ. ಖೈರ್ಲಾಂಜಿ, ಕಂಬಾಲಪಲ್ಲಿ, ಖಾಪ್ ಪಂಚಾಯತ್, ತಲೆಯ ಮೇಲೆ ಮಲ ಹೊರುವ ವ್ಯವಸ್ಥೆ, ಜಾತಿ ಆಧಾರಿತ ಬಹಿಷ್ಕಾರ ಈ ಎಲ್ಲ ವಿದ್ಯಮಾನಗಳು ಎಷ್ಟರ ಮಟ್ಟಿಗೆ ಸಾಮಾಜಿಕ ತಲ್ಲಣಗಳನ್ನು ಸೃಷ್ಟಿಸಿವೆ ಎಂದು ನೋಡಿದಾಗ ದಲಿತ ಚಳುವಳಿಯ ಇತಿ ಮಿತಿಗಳು ಜಗಜ್ಜಾಹೀರಾಗುತ್ತವೆ.
ಒಂದೆಡೆ ಬುದ್ಧನೆಡೆಗೆ ನಡೆಯುತ್ತಿರುವ ದಲಿತ ವರ್ಗಗಳು ಮತ್ತೊಂದೆಡೆ ದಲಿತತ್ವದ ಪ್ರತಿಪಾದನೆ ಮಾಡುತ್ತಿವೆ. ಇವೆರಡೂ ವಿದ್ಯಮಾನಗಳ ನಡುವೆ ವಿದ್ಯಾವಂತ, ಸುಶಿಕ್ಷಿತ ಮಧ್ಯಮ ವರ್ಗಗಳ ದಲಿತರು ಕಂಡೂ ಕಾಣದಂತೆ ಬ್ರಾಹ್ಮಣತ್ವದೆಡೆಗೆ ಸಾಗುತ್ತಿದ್ದಾರೆ. ಆದರೆ ಭೂಮಿಯನ್ನೇ ನಂಬಿ ಬದುಕುವ, ಕಾಯಕವನ್ನೇ ಆಧರಿಸುವ, ಶ್ರಮಜೀವಿಗಳಾಗಿಯೇ ಜೀವನ ಸವೆಸುವ ಶೇ. ೮೦ಕ್ಕೂ ಹೆಚ್ಚು ದಲಿತರು ತಮ್ಮ ಆರ್ಥಿಕ ಸುಭದ್ರತೆಯನ್ನು ದೃಡಪಡಿಸಬಹುದಾದ ಸಾಧ್ಯತೆಗಳನ್ನು ಕುರಿತು ಯೋಚಿಸುತ್ತಲೇ ಇಲ್ಲ. ಈ ನಿಟ್ಟಿನಲ್ಲಿ ಯೋಚಿಸುವುದಕ್ಕೆ ಸೈದ್ಧಾಂತಿಕ ಮಡಿವಂತಿಕೆ, ಪೂರ್ವಾಗ್ರಹಗಳು ಅಡ್ಡಿಯಾಗುತ್ತಿರುವುದೂ ಅಷ್ಟೇ ಸತ್ಯ. ಸಮಾಜವಾದ, ಕಮ್ಯುನಿಸಂ, ಕ್ರಾಂತಿ ಇವುಗಳನ್ನು ಕುರಿತ ಪೂರ್ವಾಗ್ರಹಗಳು ದಲಿತ ಚಳುವಳಿಯನ್ನು ಇಂದಿಗೂ ಕಾಡುತ್ತಿರುವುದು ದುರದೃಷ್ಟಕರ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡಿದಾಗ ಬೆಂಕಿಯ ಕಿಡಿ ಹೊತ್ತಿಸಿದ ಸಿದ್ಧಲಿಂಗಯ್ಯನವರ ಹತಾಶೆಯ ಮಾತುಗಳು ಅಚ್ಚರಿಯನ್ನೇನೂ ಉಂಟುಮಾಡುವುದಿಲ್ಲ. ಮೊದಲೇ ಹೇಳಿದಂತೆ ಈ ಅಭಿಪ್ರಾಯ ದಲಿತ ಚಳುವಳಿಯ ಹತಾಶೆಯ ದ್ಯೋತಕವಾಗಿ ಕಾಣುವುದೇ ಹೊರತು, ವ್ಯಕ್ತಿಗತ ಚಿಂತನೆಯಾಗಿ ಕಾಣವುದಿಲ್ಲ. ಇದೇ ಅಭಿಪ್ರಾಯವನ್ನು ಮನದಾಳದಲ್ಲೇ ಹುದುಗಿಸಿಕೊಂಡು ತಮ್ಮ ಕಾಯಕ ಗಳನ್ನು ಮುಂದುವರೆಸುತ್ತಿರುವ ಅನೇಕ ದಲಿತ ಕ್ರಾಂತಿ ಕವಿಗಳು ಇದ್ದಾರೆ. ಸಿದ್ಧಲಿಂಗಯ್ಯ ತಮ್ಮ ನೇರನುಡಿಗಳನ್ನು ಜನತೆಯ ಮುಂದಿಟ್ಟಿದ್ದಾರೆ. ನವ ಉದಾರವಾದ, ಜಾಗತೀಕರಣ ಮತ್ತು ಬ್ರಾಹ್ಮಣ್ಯಗಳ ನಡುವಿನ ಸೂಕ್ಷ್ಮ ಸಂಬಂಧಗಳನ್ನು ಒರೆ ಹಚ್ಚಿ ನೋಡದೆ ಹೋದಲ್ಲಿ ಶುಷ್ಕ ವಾದ, ಸಂವಾದ, ವಿವಾದಗಳಲ್ಲೇ ಕೊನೆಗೊಳ್ಳಬೇಕಾಗುತ್ತದೆ. ವಸ್ತುನಿಷ್ಠ ಚರ್ಚೆ ನಡೆಯುವುದೇ ಆದರೆ ದಲಿತ ಚಳುವಳಿ ಮತ್ತು ಸಾಮುದಾಯಿಕ ಅಸ್ಮಿತೆಗಳ ಸುತ್ತ ನಡೆಯಬೇಕೇ ಹೊರತು, ವ್ಯಕ್ತಿಯ ಸುತ್ತ ಅಲ್ಲ. ಇದು ಸಿದ್ಧಲಿಂಗಯ್ಯನವರ ಆಶಯವೂ ಆಗಿರಬಹುದು.








ಈ ಕೆಳಗಿನ ಎರಡೂ ಹೇಳಿಕೆಗಳು ಅರ್ಥವಾಗಲಿಲ್ಲ.
“ನವ ಉದಾರವಾದದ ನೆರಳಲ್ಲಿ ನಗರೀಕರಣ ಸಂಸ್ಕೃತಿ ಹೆಚ್ಚಾಗುತ್ತಿರುವಂತೆಲ್ಲಾ ಬ್ರಾಹ್ಮಣ ಸಮುದಾಯ ತನ್ನ ಹಳೆಯ ವಾಸನೆಗಳನ್ನು ಕಳೆದುಕೊಂಡು ನವ ನವೀನ ಮಾದರಿಗಳ ಶೋಷಣಾ ಅಸ್ತ್ರಗಳನ್ನು ಅಳವಡಿಸಿಕೊಳ್ಳುತ್ತಿದೆ. ಸೂಕ್ಷ್ಮ ತಂತುಗಳ ರೂಪದಲ್ಲಿ ಅಗ್ರಹಾರ ಸಂಸ್ಕೃತಿ ಪುನರ್ ಸ್ಥಾಪಿಸಿಕೊಳ್ಳುತ್ತಿದೆ”
ಮತ್ತು
“ಸುಶಿಕ್ಷಿತ ಮಧ್ಯಮ ವರ್ಗಗಳ ದಲಿತರು ಕಂಡೂ ಕಾಣದಂತೆ ಬ್ರಾಹ್ಮಣತ್ವದೆಡೆಗೆ ಸಾಗುತ್ತಿದ್ದಾರೆ.”
ಇದು ಏನು ಎಂದು ವಿವರಿಸುವಿರಾ?
ನನಗೆ ನಿಮ್ಮ “ನವ ಉದಾರವಾದದ ನೆರಳಲ್ಲಿ ನಗರೀಕರಣ ಸಂಸ್ಕೃತಿ ಹೆಚ್ಚಾಗುತ್ತಿರುವಂತೆಲ್ಲಾ ಬ್ರಾಹ್ಮಣ ಸಮುದಾಯ ತನ್ನ ಹಳೆಯ ವಾಸನೆಗಳನ್ನು ಕಳೆದುಕೊಂಡು ನವ ನವೀನ ಮಾದರಿಗಳ ಶೋಷಣಾ ಅಸ್ತ್ರಗಳನ್ನು ಅಳವಡಿಸಿಕೊಳ್ಳುತ್ತಿದೆ.” ಮಾತಿನಿ ಅರ್ಥ ಸರಿಯಾಗಿ ಆಗಿಲ್ಲ. ದಲಿತ ಸಮಾಜದ ಅಭಿವೃದ್ಧಿಯಾಗದಿರುವುದಕ್ಕೆ, ಯಾವಾಲಗಲೂ ಬ್ರಾಹ್ಮಣ ಸಮಾಜವನ್ನು ದೂಷಿಸುತ್ತ ಹೋದರೆ ಕೇವಲ ಕೆಸರೆರಚುವ ಕೆಲಸ ಮಾತ್ರ ಆಗುವದಿಲ್ಲವೇ? ಇಂದಿನ ಬ್ರಾಹ್ಮಣ ಸಮಾಜ, ತಮ್ಮ ಹಿಂದಿನ ಪೀಳಿಗೆಯವರು ಮಾಡಿದ ತಪ್ಪುಗಳನ್ನು ತಿದ್ದಿಕೊಂಡು, ಬದುಕಲೆತ್ನಿಸುತ್ತಿರುವದನ್ನು, ನೀವು ಹೊಸ ರೀತಿಯ ಶೋಷಣೆ ಎಂದರೆ ಯಾವ ನ್ಯಾಯ? ಹಾಗದರೆ, ನಿಮ್ಮ ಪ್ರಕಾರ, ಬ್ರಾಹ್ಮಣರು ಹೇಗೆ ಬದುಕಬೇಕು? ಅಲ್ಲದೇ, ನೀವು ಮಾಡೀರುವ ಆಪಾದನೆಗೆ, ಯಾವ ಬಲವಾದ ಉದಹರಣೆಯನ್ನೂ ನೀವು ಇಲ್ಲಿ ಕೊಟ್ಟಿಲ್ಲ. ಯಾವುದೋ ಪೀಳಿಗೆಯ ಜನ ಮಾಡೀದ ತಪ್ಪುಗಳಿಗೆ, ಇಂದಿನವರನ್ನು ಬೈಯ್ಯುತ್ತ ಕುಳಿತರೆ, ಸಮಾಜದಲ್ಲಿ ಸಾಮರಸ್ಯ ಹ್ಯಾಗೆ ಬಂದೀತು?
ಈ ಪ್ರತಿಕ್ರಿಯೆಯನ್ನು ಒಬ್ಬ ಮುಂದುವರಿದವನ ಹೊಟ್ಟೆಕಿಚ್ಚು ಎಂದು, ನೀವು ಮರೆತು ಬಿಡಬಹುದು. ಅಥವ, ಒಬ್ಬ ನಿಶ್ಪಕ್ಷಪಾತಿಯ ದುಗುಡ ಎಂದು ಉತ್ತರಿಸಲೂ ಬಹುದು.
respected sir.
if the dalits who have reached good financial level are not participating in dalit movement means,
its the failure of the movement and not due to brahmins. plz dont spread the misconception among the readers. how could brahmins be responsible? clarify the point.
A single response to all the three. When I say brahmins it does not mean individuals but a community as a whole. Just go to any flat in BAngalore where there is brahmin domination Can any other caste person get an apartment. They have become agraharas. A new form of caste congregation. The urbanisation has not driven or annihilated caste system but has strenghthened it.It is not a diatribe but a social reality. It is in fact a long debate. Please read my book ದಲಿತರು ವಿಮೋಚನೆಯ ಹಾದಿ ಒಂದು ಅವಲೋಕನ published by Navakarnataka I have dealt with this aspect in detail. I have no regrets.I stand by my argument. Its a social phenomena that is to be accepted and weeded out. No use in self defence.
Divakar.
Ideally, Journalism should not indulge in speculation — especially the kind of speculation that can end up hurting (emotionally, economically or even physically) when and if such speculative theories are hijacked by vested interests using mobs.
Though the basic fact you state (that Brahmins are forming colonies in urban India) might be true (I don’t know if it *is* or if it *is not* – is it just an intuition or is there some survey upon which you base your assertion?), I don’t agree with your conclusion.
Such an outcome can come out of many mechanisms and the objective way (when you don’t start to find facts after having decided to tar a community) would be list them and study them seriously. For instance (and just purely as an example) – some mechanisms could be
1. that Brahmins have been more driven out of villages than other communities
2. that people congregate by similarity
3. that non-meat eaters (from birth) may not like the idea that someone may make meat based cooking in their kitchens.
Dear sir,
I dont understand how you describe the colonisation.
Today in this apartment era, in metro cities many people dont know who lives next to them.
And for your information, most of the real estate business is with non-brahmins if you observe properly.
And when a person is buying a flat by the builder, the builder look at the econimic and social status of that person rather than the cast.
I am not telling castism is not present. But it is deffinately not at the rate of hating others. Unfortunately Some people want to keep castism because they dont know anything else to write.
Your writing can create some more brahmin haters, which is not good for the society. Instead of that you can write about the persons who achieved success in life(if you want you can only write about dalit achievers. This will give emple of confidence among them. I read articles in Kannadaprabha of a great businessman, who was a Dalit.)
I feel positive articles can be more helpful for Dalits.