ಇಂದಿನ ನಾಟಕ …

ನಾಟಕ ಬೆಂಗ್ಳೂರು 2010 ಉತ್ಸವದಲ್ಲಿ

ಬೆನಕ ಶೈಲೂಷರು ಅಭಿನಯಿಸುವ

‘ಮಂದಿಗಾಗದಿರು ಬಲಿ’

30-11-2010

ಮೂಲ : ನೀಲ್ ಸೈಮನ್ನರ .ದ ವರ್ಲ್ಡ್  ಆಫ್ ಚೆಕಾಫ್. ನಾಟಕ
ಕನ್ನಡ ರೂಪ,

ವಿನ್ಯಾಸ, ನಿರ್ದೇಶನ : ಎಂ.ಸಿ. ಆನಂದ್

ನಾಟಕವನ್ನು ಕುರಿತು

ಖ್ಯಾತ ರಷ್ಯನ್ ಲೇಖಕ, ನಾಟಕಕಾರ ಆಂತೋನ್ ಚೆಕಾವ್ ರ ಆರು ಸಣ್ಣ ಕಥೆಗಳನ್ನು ಆಯ್ದುಕೊಂಡು ಅದಕ್ಕೆ ರಂಗರೂಪಕೊಟ್ಟು ಖ್ಯಾತ ಅಮೆರಿಕನ್ ನಾಟಕಕಾರ ನೀಲ್ ಸೈಮನ್ ದ ವರ್ಲ್ಡ್  ಆಫ್ ಚೆಕಾಫ್.  ಎಂಬ ನಾಟಕ ಗುಚ್ಚದ ಮೂಲಕ ರಷ್ಯನ್ ಸಾಹಿತ್ಯ ಶ್ರೇಷ್ಠನಿಗೆ ತಮ್ಮ ಗೌರವಾರ್ಪಣೆ ಮಾಡಿದ್ದಾರೆ. ಮಾನವ ಸಂಬಂಧಗಳ ವಿವಿಧ ಮುಖಗಳನ್ನು ಬಿಂಬಿಸುವ ಚೆಕಾವರ ಕಥೆಗಳಿಗೆ ತಮ್ಮದೇ ಆದ ಮೊನಚು ಹಾಸ್ಯ, ವಿಡಂಬನೆಗಳ ಮೂಲಕ ನಾಟಕಗಳನ್ನು ರಚಿಸಿದ್ದಾರೆ. ನೀಲ್ ಸೈಮನ್. ಇದರಲ್ಲಿ ನಾವು ಈ ಸಂದರ್ಭಕ್ಕೆ ಆಯ್ದುಕೊಂಡ ನಾಲ್ಕು ನಾಟಕಗಳನ್ನು ಎಂ.ಸಿ. ಆನಂದ್ ಅವರು ರೂಪಾಂತರಿಸಿದ್ದರೆ. ಅಲ್ಪಸ್ವಲ್ಪ ಬದಲಾವಣೆಗಳಿಂದ ಇವುಗಳನ್ನು ನಮ್ಮ ಸಮಾಜದ್ಲಲಿ ಪ್ರಸ್ತುತವಾಗುವಂತೆ ಅಳವಡಿಸುವ ಪ್ರಯತ್ನ ಇಲ್ಲಿದೆ. ಅಂತೆಯೇ ನಮ್ಮಲ್ಲಿರುವ ಅಧಿಕಾರ ದುರುಪಯೋಗ, ಭ್ರಷ್ಟ ವ್ಯವಸ್ಥೆ, ಮಾನವನ ಸಣ್ಣತನಗಳು, ಸರಳ, ಅಮಾಯಕ ಜನರಿಗೆ ದಕ್ಕದ ಕನಿಷ್ಟ ಸವಲತ್ತುಗಳು – ಇವುಗಳ ಬಗ್ಗೆ ವಿಡಂಬನಾತ್ಮಕ ನೋಟ ಬೀರುವುದು ನಮ್ಮ ಆಶಯ.

ತಂಡವನ್ನು ಕುರಿತು
ಹವ್ಯಾಸಿ ರಂಗಭೂಮಿಯ ಪ್ರಮುಖ ತಂಡಗಳಲ್ಲಿ ಒಂದಾದ ಬೆನಕ ಶೈಲೂಷರು ನಾಟಕವನ್ನು ಚಾಲನೆ ಮಾಡಲು ಹಾಗೂ ಕ್ರಿಯಾಶೀಲವಾಗಿಡಲು ಯುವ ಹಾಗೂ ಹಿರಿಯ ರಂಗಕರ್ಮಿಗಳ ಭಾಗವಹಿಸುವಿಕೆಯಿಂದ ಆರ್. ನಾಗೇಶ್ ನಿರ್ದೇಶನದಲ್ಲಿ ಗೋಗಲ್ ನ.ಸಾಹೇಬರು ಬರುತ್ತಾರೆ., ಶ್ರೀರಂಗರ .ಕತ್ತಲೆಬೆಳಕು., ಡಿ.ಟಿ. ಚನ್ನಕೇಶವಮೂರ್ತಿ ನಿರ್ದೇಶನದಲ್ಲಿ, ಹಾಗೂ ಯುವಕ ಆ.ನ. ರಾವ್ ನಿರ್ದೇಶನದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಪರಿಸರದ ಕಥೆ ಮತ್ತು ಈಗ ನಾಟಕ ಬೆಂಗ್ಳೂರು ಉತ್ಸವಕ್ಕೆ ಹಿರಿಯ ರಂಗಕರ್ಮಿ ಎಂ.ಸಿ. ಆನಂದ್ ಅವರ ನಿರ್ದೇಶನದಲ್ಲಿ ಚೆಕಾಫ್/ನೀಲ್ ಸೈಮನ್ ಅವರ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿ ಪ್ರದರ್ಶಿಸುತ್ತಿದೆ. ನಾಟಕ ಪ್ರದರ್ಶನಗಳಲ್ಲದೆ ನಾಟಕಕ್ಕೆ ಸಂಬಂಧಪಟ್ಟ ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ ಸಮಾರಂಭಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಅಲ್ಲದೆ ನಾಟಕ ರಂಗಕ್ಕೆ ಅನ್ಯಾಯವಾದಾಗ ಬೆನಕ ಶೈಲೂಷರು ಧ್ವನಿಯನ್ನು ಎತ್ತಿ ರಂಗಭೂಮಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ನಿರ್ದೇಶಕರನ್ನು ಕುರಿತು
ವೃತ್ತಿಯಲ್ಲಿ ಎಂಜಿನೀಯರ್ ಆಗಿ ನಿವೃತ್ತಿ ಹೊಂದಿದ ಆನಂದ್ ಅವರು ಸುಮಾರು 45 ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ನಟ, ನಿರ್ದೇಶಕ, ವಿನ್ಯಾಸಕ, ನಾಟಕಕಾರರಾಗಿ ತೊಡಗಿಸಿಕೊಂಡಿದ್ದಾರೆ. ಬಿ.ವಿ. ಕಾರಂತ, ಪ್ರಸನ್ನ, ಎಂ.ಎಸ್. ಸತ್ಯು,ಟಿ.ಎನ್. ನರಸಿಂಹನ್, ಸುರೇಶ್ ಆನಗಳ್ಳಿ ಮುಂತಾದವರ ನಿರ್ದೇಶನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ .ಕತ್ತಲೆ ದಾರಿದೂರ., .ದಂಗೆಯ ಮುಂಚಿನ ದಿನಗಳು., .ಕುರಿ., .ಕೊನೆ ಇಲ್ಲ. ಮುಂತಾದ ನಾಟಕಗಳಲ್ಲಿನ ಇವರ ಅಭಿನಯ ಇಂದಿಗೂ ಜನರ ಮನದಲ್ಲಿ ಉಳಿದಿವೆ. .ಲಕ್ಷಾಪತಿ ರಾಜನ ಕತೆ., .ಚಿತ್ರಪಟ ರಾಮಾಯಣ., .ಭ್ರೂಣ. ಮುಂತಾದ ನಾಟಕಗಳ ವಿನ್ಯಾಸ ಇವರದ್ದು.  ರಂಗಭೂಮಿಯಲ್ಲಿ ಇವರ ಸೇವೆಯನ್ನು ಗುರುತಿಸಿ 1999ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು ಇವರನ್ನು ಪುರಸ್ಕರಿಸಿದೆ. 1972 ರಲ್ಲಿ ಕಲಾವಿಲಾಸೀ ಕಿರು ಚಲನಚಿತ್ರಗಳ ನಿರ್ಮಾಣ ಮಾಡಿದರು. .ಪ್ಯಾರಸೈಟ್. ಮತ್ತು .ಹೆತ್ತವರು. ಕಿರು ಚಿತ್ರಗಳಿಗೆ ರಾಷ್ಟ್ರೀಯ ಮಟ್ಟದ ಕಿರು ಚಿತ್ರೋತ್ಸವಗಳಲ್ಲಿ ಪುರಸ್ಕಾರಗಳು ದೊರೆತಿವೆ. ಮುಯ್ಯಿ, ಸಿಂಹಾಸನ, ಅವಸ್ಥೆ ಚಲನಚಿತ್ರಗಳಲ್ಲಿ ಅಭಿನಯಸಿದ್ದಾರೆ. ಶಂಕರ್ನಾಗ್ ಅವರು ನಿರ್ದೇಶಿಸಿದ .ಮಾಲ್ಗುಡಿ ಡೇಸ್. ಟಿ.ವಿ. ಸರಣಿಯಲ್ಲಿ ಅಭಿನಯಿಸಿದ್ದಾರೆ, ಇತ್ತೀಚೆಗೆ .ಋತುಮಾನ.. .ಇಲ್ಲಿರುವುದು ಸುಮ್ಮನೆ., .ಮುಗಿಲು. .ಮುತ್ತಿನ ತೋರಣ., .ನಗು ನಗುತಾ ನಲಿ., .ಸುಕನ್ಯ., ಟಿ.ವಿ. ಸರಣಿಗಳಲ್ಲಿ ಅಭಿನಯಿಸಿದ್ದಾರೆ. ಈಗ ಜೆ.ಪಿ. ನಗರದಲ್ಲಿ ನಿರ್ಮಿಸಿ ಕೊಂಡಿರುವ ಸ್ವಗೃಹದಲ್ಲಿರುವ .ಸಿಂಚನ. ಆಪ್ತರಂಗ ಭೂಮಿಯಲ್ಲಿ 2004 ರಿಂದ ಸತತವಾಗಿ ಬಡಾವಣಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ

‍ಲೇಖಕರು avadhi

November 30, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: