ಇಂದು ಬೆಂಗಳೂರಿನಲ್ಲಿ ನಡೆದ ೬ ನೇ ಅಂತರ್ರಾಷ್ಟ್ರೀಯ ಚಿತ್ರೋತ್ಸವ ಸಮಾರೋಪಗೊಳ್ಳಲಿದೆ. ಚಿತ್ರ ರಸಿಕರು ಈ ಆರು ದಿನಗಳಲ್ಲಿ ಹಲವಾರು ಅತ್ಯುತ್ತಮ ಚಿತ್ರಗಳನ್ನು ನೋಡಿದ್ದಾರೆ, ಮೆಚ್ಚಿದ್ದಾರೆ, ಮನಸ್ಸಿನಲ್ಲಿ ಜಾಗ ಕೊಟ್ಟಿದ್ದಾರೆ.
ಈ ಆರು ದಿನಗಳಲ್ಲಿ ಪ್ರದರ್ಶನಗೊಂಡ ಚಿತ್ರಗಳ ಸಂಖ್ಯೆ 152. ಅವೆಲ್ಲಾ ಒಳ್ಳೆಯ ಚಿತ್ರಗಳೆ, ಆ ಬಗ್ಗೆ ಎರಡು ಮಾತಿಲ್ಲ. ಆದರೆ ಪ್ರತಿ ದಿನ ಸುಮಾರು ೩೫ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ, ಅವುಗಳಲ್ಲಿ ಯಾವುದನ್ನು ನೋಡುವುದು, ಯಾವುದನ್ನು ಬಿಡುವುದು?
ಆಗ ಅನ್ನಿಸಿದ್ದು ಈ ಬಗ್ಗೆ ಚಿತ್ರಗಳ ಬಗ್ಗೆ ಆಳವಾಗಿ ತಿಳಿದವರೊಬ್ಬರನ್ನು ಈ ಬಗ್ಗೆ ಕೇಳಿದರೆ ಹೇಗೆ ಅಂತ. ಆಗ ನಾವು ಫೋನು ಮಾಡಿದ್ದು ಕನ್ನಡದ ಹೆಮ್ಮೆಯ ನಿರ್ದೇಶಕರಲ್ಲೊಬ್ಬರಾದ ಗಿರೀಶ್ ಕಾಸರವಳ್ಳಿಯವರಿಗೆ. ಕಾಸರವಳ್ಳಿಯವರು ಆ ಕೆಲಸವನ್ನು ಸಂತೋಷದಿಂದ ಒಪ್ಪಿಕೊಂಡಿದ್ದಷ್ಟೇ ಅಲ್ಲ, ಪ್ರತಿ ದಿನ ನಮ್ಮ ಅನೇಕಾನೇಕಾ, ಕಾಲ-ಅಕಾಲಗಳ ಫೋನ್ ಕರೆಗಳನ್ನು ಸಹಿಸಿದ್ದಾರೆ, ಚಿತ್ರಗಳನ್ನು ಸೂಚಿಸಿದ್ದಾರೆ. ಅವರಿಗೆ ’ಅವಧಿ’ಯ ಮತ್ತು ’ಅವಧಿ’ಯ ಓದುಗರ ಧನ್ಯವಾದಗಳು.
ಇಂದು ಚಿತ್ರೋತ್ಸವದ ಕಡೆಯ ದಿನ. ಕಾಸರವಳ್ಳಿಯವರ ಇಂದಿನ ಆಯ್ಕೆ :
Wadjda
Fun Cinema : 3.30 pm
***
The Past
Fun Cinema : 6.15
***
Fandry
Lido : 10.15
***





0 Comments