ಇಂದಿನ ‘ಅಮ್ಮ’…

ಇಂದು ಕಲಬುರ್ಗಿಯ ಸೇಡಂ ನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಡೆಯುತ್ತಿದೆ.

ಗೌರವ ಪ್ರಶಸ್ತಿ ಹಾಗೂ ಪುಸ್ತಕಗಳಿಗೆ ಬಹುಮಾನ ನೀಡಲಾಗುತ್ತಿದೆ.

ಈ ಗೌರವ ಪ್ರಶಸ್ತಿ ವಿಜೇತರಲ್ಲೊಬ್ಬರಾದ ರೇಖಾ ಅವರ ಬಗೆಗಿನ ಕಥನ ಇಲ್ಲಿದೆ-

ಅಶ್ವಿನಿ ಕೃಷ್ಣೇಗೌಡ

ಅಮ್ಮ… ತಾಯಿ.. ಅವ್ವ.. ಮಮ್ಮಿ.. ಹೀಗೆ ಎಷ್ಟೇ ರೀತಿಯಲ್ಲಿ ಕರೆದ್ರೂ.. ಸಹನೆಯ ಸಹನೆ ಮೀರಿಸುವ ಸಹನಾ ಮೂರ್ತಿ ಅಮ್ಮ. ಆದಿ ಅಂತ್ಯಗಳೆಂಬ ಸೀಮೆಗಳಿಲ್ಲದ ಪ್ರೇಮ ಸಾಗರ ಅಮ್ಮ. ಇಂಥ ಅಮ್ಮ ತನಗೆ ಏನಾದ್ರೂ ಸರಿ ನನ್ನ ಮಕ್ಕಳು ಸಂತೋಷವಾಗಿ ಇಡಬೇಕು ಅಂತ ಪ್ರತಿಕ್ಷಣವೂ ಬಯಸುತ್ತಾಳೆ. ತನ್ನ ಜೀವನವನ್ನೇ ತನ್ನ ಮಕ್ಕಳಿಗಾಗಿ ಮುಡಿಪಾಗಿ ಇಟ್ಟಿರುತ್ತಾಳೆ.

ಅಲ್ಲದೆ ತನ್ನ ಮಕ್ಕಳ ಕನಸನ್ನು ಈಡೇರಿಸಲು ತನ್ನ ಕನಸೆಲ್ಲವನು ಬದಿಗಿಟ್ಟು ಶ್ರಮಿಸಿರುತ್ತಾಳೆ. ಆದ್ರೆ, ಕೆಲವೊಮ್ಮೆ ಈ ತಾಯಿಯ ಮಮತೆ, ಕನಸಿಗೆ ವಿಧಿಯಂಬ ಕ್ರೂರಿ ತಾಯಿಯ ಶ್ರಮ, ಕನಸೆಲ್ಲವನು ಛಿದ್ರ ಮಾಡಿ ಬಿಡ್ತಾನೆ. ಹೀಗಿದ್ರು ಸಹ ವಿಧಿಯ ಅಟ್ಟಹಾಸವನ್ನು ಮೀರಿ ತನ್ನ ಮಕ್ಕಳನ್ನು ಉಳಿಸಿಕೊಳ್ಳಲು ತಾಯಿ ಪ್ರಯತ್ನಿಸುತ್ತಾಳೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕಲ್ಬುರ್ಗಿ ನಿವಾಸಿ ರೇಖಾ. ಹೌದು ರೇಖಾ ಅವರದ್ದು ಮೂರು ಗಂಡು ಮಕ್ಕಳಿರುವ ಸುಂದರ ಕುಟುಂಬ.

ರೇಖಾ ಪತಿ ಪೀರಪ್ಪ ಪೊಲೀಸ್ ಪೇದೆ. ಹೀಗಾಗಿ ರೇಖಾ ಅವರ ಕುಟುಂಬ ಕಳೆದ ವರ್ಷದವರೆಗೂ ಯಾವುದೇ ಚಿಂತೆಯಿಲ್ಲದೆ ಸುಖವಾಗಿಯೇ ಇತ್ತು. ಆದರೆ ಇದ್ದಕ್ಕಿದ್ದಂತೆ ಯಾರ ಕಣ್ಣು, ರೇಖಾ ಅವರ ಸುಂದರ ಕುಟುಂಬದ ಮೇಲೆ ಬಿತ್ತೋ ಏನೋ, ಇದ್ದಕ್ಕಿದ್ದಂತೆ ರೇಖಾ ಅವರ ಕಿರಿಯ ಮಗ ಪಲಾಶ್, ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಬಿಡ್ತಾನೆ. ಇದರಿಂದ ಈ ಸುಂದರ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿ ಬಿಡುತ್ತೆ.

ಇನ್ನು ಚಿಕ್ಕವಯಸ್ಸಿನಿಂದಲೂ ಅತ್ಯಂತ ಪ್ರತಿಭಾನ್ವಿತ ಹುಡುಗನಾದ ಪಲಾಶ್, ಓದಿನಲ್ಲಿ ಮುಂದಿದ್ದ. ಹೀಗಾಗಿಯೇ ಕರ್ನಾಟಕದಲ್ಲಿ ಅತ್ಯಂತ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಆದ, ಪಿಡಿಎ ಕಾಲೇಜಿನಲ್ಲಿ ಬಿಇ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಇನ್ನೇನು ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ, ತನ್ನ ದುಡಿಮೆಯಲ್ಲಿ ಬದುಕಬೇಕು ಎಂದು ಕನಸು ಕಾಣುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಆಘಾತ ಎದುರಾಗಿತ್ತು.

ಹೌದು ಪಲಾಶ್ ನ 2 ಕಿಡ್ನಿಗಳು ವೈಫಲ್ಯವಾಗಿದ್ವು.. ಹೀಗಾಗಿ ಇದರಿಂದ ಧೃತಿಗೆಡದ ಪಲಾಶ್ ನ ಕುಟುಂಬದವರು ಕಿಡ್ನಿ ದಾನ ಮಾಡುವವರಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದ್ರೆ ಎಲ್ಲಿಯೂ ಪಲಾಶ್ ನ ಜೀವ ಉಳಿಸುವವರು ಸಿಗದೇ ಇದ್ದ ಕಾರಣ, ರೇಖಾ, ಕಿಂಚಿತ್ತು ಹಿಂದೆ-ಮುಂದೆ ಯೋಚಿಸದೆ ತನ್ನ ಒಂದು ಕಿಡ್ನಿಯನ್ನು ನೀಡಿ ಪಲಾಶ್ ಗೆ ಮರು ಜನ್ಮವನ್ನು ನೀಡಿದ್ರು. ಸದ್ಯ ರೇಖಾರವರ ತ್ಯಾಗದಿಂದ ಪಲಾಶ್ 2ನೇ ಜನ್ಮ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾನೆ.

ಈ‌ ಅಂತಃಕರಣದ ತ್ಯಾಗಿ ತಾಯಿಯ ಮಾತೃ ಹೃದಯಕ್ಕೆ ‘ಸೇಡಂನ ಅಮ್ಮ ಗೌರವ ಪುರಸ್ಕಾರ’ ಲಭಿಸಿದ್ದು ಸೋಜಿಗ. ಹಲವು ಮಗ್ಗಲುಗಳಲ್ಲಿ ಅಮ್ಮ ಪ್ರಶಸ್ತಿ ಮತ್ತು ಗೌರವ ಪುರಸ್ಕಾರ ವ್ಯಕ್ತಿ ಗೌರವ ಹಾಗೂ ಅವರ ಕಾಯಕಕ್ಕೆ ನೀಡುತ್ತಾ ಬಂದಿರುವ ಅಮ್ಮ‌ ಪ್ರಶಸ್ತಿ ಈ ಭಾರಿ 20 ನೇ ವರ್ಷದ ಸಂಭ್ರಮದಲ್ಲಿ ತ್ಯಾಗಿ ಜೀವ ಎಂದೇ ಅನಿಸಿಕೊಂಡ ರೇಖಾ ಅವರನ್ನು ಗುರುತಿಸಿ ಅವರಿಗೆ ಅಮ್ಮ ಗೌರವ ಪುರಸ್ಕಾರ ನೀಡಿದ್ದಾರೆ. ‌ಇದು ಅಮ್ಮ ಪ್ರಶಸ್ತಿ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಆಯ್ಕೆಯಾಗಿದೆ.

‍ಲೇಖಕರು Avadhi

November 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: