ಆಕಾಶ ನೋಡುತ್ತಾ ಚುಕ್ಕಿ ಜಾರಿಬಿತ್ತ…
ಚೈತ್ರ ಭವಾನಿ
ಅಮ್ಮ ನಿಂಗೆ ಗೊತ್ತ ನೀನು ಹೋದಾಗಿಂದ ನಾನು ಎಷ್ಟು ಬದಲಾಗಿದ್ದಿನಿ ಅಂತ. ಬೆಡ್ ಕಾಪ್ಫೀಗೂ ನೀನೆ ಬೇಕು ಅಂತಿದ್ದ ನಾನು ಈಗ ನಾನೇ ಗ್ಯಾಸ್ ಹಚ್ಚುತ್ತಿನಿ… ಮೂರು ಹೊತ್ತು ಟಿವಿಯಾ ಧಾರಾವಾಹಿಗೆ ಕಿವಿಯಾಗುತಿದ್ದ ಮನಕ್ಕೆ ಕುಕ್ಕರ್ ಸದ್ದಿನಲ್ಲಿ ನಿನ್ನ ನೆನಪು ಕಾಡುತ್ತಿದೆ.. ಇರುಳ್ಳಿ ಹೆಚ್ಚುವಾಗ ಕಣ್ಣಿರು ಸ್ವಲ್ಪ ಹೆಚ್ಚೇ ಬರುತ್ತೆ ನಿನ್ನ ನೆನಪೇ ಅದಕ್ಕೆ ಕಾರಣ ಅಂದ್ರೆ ನೀನು ಏನು ಅಂದುಕೊಳಲ್ಲ ಅಂತ ಗೊತ್ತು. ಅಮ್ಮ ನಿಂಗೆ ಗೊತ್ತ ಮೆಟ್ಟಿಲಿಳಿದು ಹೋಗುವಾಗ ಮನೆಯ ಬಾಗಿಲ ಬಳಿ ನಿಂತು ನನ್ನ ಕ್ಷೇಮದ ಹಿಂದಿರುವಿಕೆಗೆ ಪ್ರಾರ್ಥಿಸಿದ್ದು. ಮನೆಯ ಬಾಗಿಲಿಗೆ ಬೀಗ ಹಾಕುವಾಗ ಬಾಗಿಲಿಗೂ ನನ್ನ ಮೇಲೆ ಮುನಿಸು.. ಅಮ್ಮ ನೀನು ಯಾಕಮ್ಮ ಕನ್ನಮುಚ್ಚೆಗೆ ಬರಲಿಲ್ಲ …ಅಮ್ಮ ನನಗೆ ಗೊತ್ತು ನಾನೇ ಔಟ್…

ಅಮ್ಮ ಸಾಂಬಾರು ಪೌಡರ್ ಮುಗಿದಿದೆ ಅಮ್ಮ… ರಾತ್ರಿ ಹೊತ್ತು ನಿನ್ನೊಟ್ಟಿಗೆ ಜಗಳ ಆಡೋಕೆ ಆಗ್ತಿಲ್ಲ ಅಮ್ಮ… ಅಮ್ಮ ಚುಕ್ಕಿ ನಕ್ಷತ್ರಗಳಲ್ಲೂ ನಿನ್ನ ಕೈ ತುತ್ತು ಕಾಣಿಸುತ್ತಿದೆ ಅಮ್ಮ. ಅಮ್ಮ ನಂಗೆ ಭಯ ಆಗ್ತಿದೆ ಅಮ್ಮ… ಅಮ್ಮ ನಿಂಗೆ ಹೇಳಬೇಕು ಅಮ್ಮ… ಹೇಳಿದ್ರು ನಿನಗೆ ಅರ್ಥ ಆಗಲ್ಲ ಅಮ್ಮ… ನಕ್ಬಿಡ್ತಿಯ… ಅಮ್ಮ ಈ ದಿನಗಳಲ್ಲಿ ನಂಗೆ ಭಯ ಆಗ್ತಿದೆ ಅಮ್ಮ… ನೀನು ಯಾಕಿರಬಾರದು ನನ್ ಜೊತೆ… ಅಮ್ಮ ಗೊಗ್ಗಯ್ಯ ಬರ್ತಿದಾನೆ ಅಮ್ಮ… ಬೇಗ ಊಟ ಮಾಡಿಸು ಬಾಮ್ಮ…. ಅಮ್ಮ ತುಂಬಾ ಕತ್ತಲು ಪ್ಲೀಸ್ ನೀನು ಕೈ ಕೊಡಮ್ಮ … ಅಮ್ಮ ತುಂಬಾ ಚಳಿ ಆಗ್ತಿದೆ.. ಬೆಡ್ ಶೀಟ್ ಕೊಡಮ್ಮ… ಅಮ್ಮ ನಂಗೆ ಯಾರು ಬೇಡಮ್ಮ ಅಮ್ಮ… ನಂಗೆ ಭಯ ಆಗ್ತಿದೆ ಮತ್ತೆ ನನ್ನ ನಿನ್ನ ಗರ್ಭದೊಳಗೆ ಯಾರಿಗೂ ಕಾಣದಂತೆ ಬಚಿಟ್ಟಿಕೋ ನನ್ನ ಅಮ್ಮ. ಅಮ್ಮ ನೀನು ಮಾತಾಡಮ್ಮ ನಂಗೆ ಭೀಮ ಬಲ ಬರುತ್ತಮ್ಮ… ಅಮ್ಮ ನನ್ನ ಸೆಕ್ಯೂರ್ ಮಾಡ್ಕೋ ಅಮ್ಮ. ಅಪ್ಪನಿಗೂ ಹೇಳಮ್ಮ ನಾನು ಹೀಗೆ ಹೇಳ್ತಿದ್ದೀನಿ ಅಂತ… ಅಮ್ಮ ನನ್ನ ನೋಟ್ ಬುಕ್ ನಲ್ಲಿ ನೀನ್ ಬಗೆ ಕೇಳಿದ್ದರೆ ಏನು ಹೇಳಮ್ಮ… ಅಮ್ಮ ಅವಳ ಮದುವೆ.. ಇವಳ ಸೀಮಂತ.. ಅವನ ನಾಮಕರಣ.. ಇವಳಿಗೆ ಹೆರಿಗೆ ಎಲ್ಲರು ನಿನ್ನೆ ಕೆಳ್ತಾರಮ್ಮ… ಅಮ್ಮ ಪ್ಲೀಸ್ ಬರ್ತೀಯ ಒಂದು ಸಲ ನನ್ನ ಮಾತಾಡಿಸಿ ಧೈರ್ಯ ಹೇಳ್ತಿಯ.. “ಭೂತ”ದಿಂದ ನನ್ನ ಕಾಪಾಡ್ತಿಯ… ಅಮ್ಮ ಪ್ಲೀಸ್ ಬಾ ಒಮ್ಮೆ ಲಾಲಿ ಹಾಡಮ್ಮ…
“ಅಲ್ಲೆಲ್ಲೋ ಅನಾಥಲಯಾದಲ್ಲಿ ಪುಟ್ಟಿಯ ಸ್ವಗತ ಹೀಗಿರಬಹುದ… ಇನ್ನೆಲ್ಲೋ ಹೊಸ ಮಧು ಮಗಳ ತೊಳಲಾಟ ಹೀಗಿರಬಹುದ… ಮತ್ತೆಲ್ಲೋ ಕೆಲಸಕ್ಕೆ ಬಂದ ತನ್ನುರಿನ ಹುಡುಗಿ ಹೀಗೆ ಹೇಳಿದ್ಲ…. ಇನ್ನೆಲ್ಲೋ ಚೊಚ್ಚಲ ಕಂದನ ನೀರಿಕ್ಷೆಯಲ್ಲಿರುವ ಹೆಣ್ಣಿನ ಅಂತಾರಳನ.. “ಮತ್ತೆಲ್ಲೋ ಆಶ್ರಯ ಕಾಣದೆ ಪ್ರವಾಹದ ನಡುವೆ ಸಿಲುಕಿರುವ ಒಬ್ಬ ಹೆಣ್ಣು ಮಗಳ ಮನ ಹೀಗೆ ಮಿಡಿಯುತ್ತಿರಬಹುದೇ..”






nanna manavu midiyitu