’ಒಂದು ಸೃಜನಶೀಲ ಕಥೆಯನ್ನು, ಕಾದಂಬರಿಯನ್ನು, ನಾಟಕವನ್ನು ಹೇಗೆ ಓದಿಕೊಳ್ಳುವುದು ಎಂಬುದೂ ಗೊತ್ತಿಲ್ಲದಷ್ಟು ಬೌದ್ಧಿಕ ದಾರಿದ್ರ್ಯ ಮತ್ತು ಅಸಹಿಷ್ಣುತೆ ಈ ಪ್ರಮಾಣದಲ್ಲಿ ಬೆಳೆಯಬೇಕಿತ್ತೆ? ಈ ತಿಂಗಳ `ಕರವೇ ನಲ್ನುಡಿ’ಯಲ್ಲಿ ಪ್ರಕಟಗೊಂಡ `ಪಂಚಾವರಂ ಎಂಬ ದಂಡಕಾರಣ್ಯದೊಳಗೆ ಮಕ್ಕಳ ಮಾರುಕಟ್ಟೆ’ ಎಂಬ ಮಹಂತೇಶ್ ನವಲಕಲ್ ಅವರ ಕಥೆಯನ್ನು ಗುರಿಯಾಗಿಟ್ಟುಕೊಂಡು ವಿವಾದವೊಂದನ್ನು ಸೃಷ್ಟಿಸಲಾಗಿದೆ.’ ಎಸ್ ಸಿ ದಿನೇಶ್ ಕುಮಾರ್.
ಈ ಬಗ್ಗೆ ಅವಧಿಯಲ್ಲಿ ಲೇಖನ ಪ್ರಕಟವಾಗಿತ್ತು. (ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ).
ಆ ಕಥೆಗಾಗಿ ಚಿತ್ರಗಳನ್ನು ಬರೆದ ಪುಂಡಲೀಕ ಕಲ್ಲಿಗನೂರು ತಮ್ಮ ಅನಿಸಿಕೆಗಳನ್ನು ಹೀಗೆ ಹಂಚಿಕೊಂಡಿದ್ದಾರೆ
ಪುಂಡಲೀಕ ಕಲ್ಲಿಗನೂರು

….ಆ ಕತೆಗೆ ಚಿತ್ರ ಬರೆದವನು ನಾನು. ಅದೊಂದು ಅದ್ಭುತ ಕತೆ. ಕರವೇಯಿಂದ ಆ ಕತೆಗೆ ಚಿತ್ರ ಬರೆಯಲು ಸೂಚಿಸಿ ಕತೆ ಕಳಿಸಿದ್ದರು. ನಾಲ್ಕಾರು ದಿನ ಕಳೆದಿರಬೇಕು…ನನ್ನ ಸ್ವಭಾವಜನ್ಯ ಸೋಮಾರಿತನದಿಂದಾಗಿ ಹೊತ್ತಲ್ಲದ ಹೊತ್ತಲ್ಲಿ ಕತೆ ಓದತೊಡಗಿದೆ. ಕತೆ ಮುಗಿಯುತ್ತಿದ್ದಂತೆ ಕಂಗಾಲಾಗಿ ಕುಳಿತೆ. ಕುಳಿತುಕೊಳ್ಳಲಾಗದೆ ಮಲಗಿದೆ. ಮಲಗಲಾಗದೆ ಎದ್ದೆ. ಕೂರಲಾಗದೆ ಮತ್ತೆ ಮಲಗಿದೆ. ಅದೊಂದು ತಳಮಳವನ್ನು ಕತೆ ನನ್ನಲ್ಲಿ ಹೂತುಹಾಕಿತ್ತು. ಮಾನವೀಯತೆಯ ಮಾರಣಹೋಮವದು. ಅಂಥ ಸತ್ಯವನ್ನು ಕತೆಯಾಗಿಸುವ ತಾಕತ್ತು ಸಾಮಾನ್ಯ ಕತೆಗಾರನಿಗೆ ಸಾಧ್ಯವಿಲ್ಲ. ಕತೆಗಾರ ಮಹಂತೇಶ್ ನವಲಕಲ್ಲರಿಗೆ ನಮೋ ನಮೋ… ಅಂಥ ಕತೆಗೆ ಒಳ್ಳೆಯ ಚಿತ್ರ ಬರೆದ ಸಂತೋಷ ನನ್ನಲ್ಲಿದೆ. ಅಂಥ ಕತೆಯನ್ನು ಆಯ್ಕೆ ಮಾಡಿದ ನಲ್ನುಡಿ ಬಳಗದ ಎದೆಗಾರಿಕೆಯನ್ನೂ ಇದೇ ಸಂದರ್ಭದಲ್ಲಿ ಮೆಚ್ಚುತ್ತಾ…






Nimma Sarthakatege namma bembala