ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಅಂಧ ಬಾಲಕ..

  1. ಆ ಅಂಧ ಬಾಲಕ (THE BLIND BOY)

ಮೂಲ – ಕೋಲೆ ಸಿಬ್ಬರ್ (Colley Cibber)
ಕನ್ನಡಕ್ಕೆ – ಕುಸುಮ ಪಟೇಲ್

ಓ ಬೆಳಕೆಂದರೆ ಏನು?
ಅದು ಅನುಭವಿಸಲಾಗದ್ದು ನಾನು
ದೃಷ್ಟಿ ಏನು? ಅದರ ಅನುಭವವೇನು?
ಪಾಪದ ನಿನ್ನ ಅಂಧ ಬಾಲಕನಿಗೆ ಹೇಳು ನೀನು!

ಹೇಳುವೆ ನೀ ಕಂಡ ಅಚ್ಚರಿಗಳ
ಸೂರ್ಯ ಹೊಳೆಯುವ ನಿನಗೆ
ಬಿಸುಪು ನೀಡುವ ನನಗೆ, ಹೇಳು
ಹೇಗೆ ಮಾಡುವನವನು ಹಗಲು,ಇರುಳು?

ನನ್ನ ದಿನ ರಾತ್ರಿಗಳು ನನ್ನ ಸೃಷ್ಟಿ
ಆಡಿದರೆ ಹಗಲು, ಮಲಗಿದರೆ ರಾತ್ರಿ
ಎಚ್ಚರವಿದ್ದರೆ, ಇದ್ದಷ್ಟೂ
ಹಗಲೇ ಹಗಲು

ನನ್ನ ನಿಡುಸುಯ್ಲು, ಈ
ದುರ್ದೈವಿಯ ಉಮ್ಮಳಿಸುವ ಅಳಲು
ಎಲ್ಲ ಸಹಿಸುವೆ ಸಮಾಧಾನದಲೆ
ನಾ ಅರಿಯಲಾರದ ಆ ನಷ್ಟವನು

ಹಾಗಿದ್ದರೆ ನಾ ಹೊಂದಲಾರದ್ದು
ಮನದ ಶಾಂತಿ ಕದಡದಿರಲಿ
ನಾ ಒಬ್ಬಅಂಧ ಹುಡುಗ – ಆದರೂ
ನಾ ಈಗ ಹೀಗೆ ಹಾಡಿದರೆ ನನಗೆ ನಾನೇ ದೊರೆ….

2. ಬೆಂಬಿಡದೆ ಕಾದವನೆ

ಮೂಲ – ತಮಿಳು ಸಂತ ಕವಿ ಮನಿಕ್ ವಾಚಕರ್
ಕನ್ನಡಕ್ಕೆ – ಕುಸುಮ ಪಟೇಲ್

ತಾಯಿ ಪ್ರೀತಿಗಿಂತ ಮಿಗಿಲು, ನಿನ್ನ ಪ್ರೀತಿ ದೇವನೆ
ಕಂದನುಸುರದ ಬೇಕು, ಬೇಡವೆಲ್ಲ
ಅರಿತು ಪೊರೆವನೆ
ತನು ಕರಗಿಸಿ, ಮನವರಳಿಸಿ
ಅಗಣಿತ ಸಂತಸದ ಮಧುವ ತುಂಬಿ
ಬೆಂಬಿಡದೆ ಕಾದವನೆ
ಅರಿತೆ ನಿನ್ನ
ಅಧಿಪ ಶಿವನೇ ಅಮೂಲ್ಯನೇ
ನೆಚ್ಚಿ ಹಿಡಿದೆ ನಿನ್ನ ಪಾದ
ಹೋಗಲಾರೆ ಬಿಟ್ಟು ನೀ, ನನ್ನನೆಂದೂ.



‍ಲೇಖಕರು Admin

24 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading