ಪರಮೇಶ್ವರ ಗುರುಸ್ವಾಮಿ ಕಾಲಂ
ನೆಗೆಟಿವ್ ಲೋಕ
ಸರಿ ನೋಡೇಬಿಡೋಣ ಅಂತ ಹೊರಟೆ..
ಬೆಳ್ಳಂಬೆಳಗ್ಗೆ ನನ್ನ ನೆಗೆಟಿವ್ ಬಂಡಲ್ ಗಳ ರಾಶಿಯ ಮುಂದೆ ಕುಳಿತಿದ್ದೆ
ಆಗ್ಬ ಸಿಕ್ಕಿತು ನೋಡಿ ಈ ಫೋಟೋ
೧೯೮೫ ನವೆಂಬರ್ ೧೧ರಂದು ಎಂ ಜಿ ರೋಡ್ ನಲ್ಲಿ ಅಡ್ಡಾಡುತ್ತ ಇದ್ದಾಗ ಥಟ್ ಅಂತ ಅದು ಕಣ್ಣಿಗೆ ಬಿದ್ದಿತ್ತು
ಕಣ್ಣಿಗೆ ಥಟ್ ಅಂತ ಬೀಳಲು ನಾನೇನೂ ಶ್ರಮ ಪಡಬೇಕಿರಲಿಲ್ಲ
ಯಾಕೆಂದರೆ ಆಗ ಇದ್ದದ್ದು ಇದೊಂದೇ
ಬೆಂಗಳೂರಿನ ಕುತುಬ್ ಮಿನಾರ್ ಅಂತ ಕರೆದರೆ ಒಳ್ಳೆಯದೇನೋ ಹಾಗಿತ್ತು
ಆಕಾಶಕ್ಕೆ ಮುತ್ತಿಡುವ ಹಾಗೆ
ಅದರ ಹೆಸರೇ ಯುಟಿಲಿಟಿ ಬಿಲ್ಡಿಂಗ್
ಅಷ್ಟು ದೊಡ್ಡ ಬಿಲ್ಡಿಂಗ್ ಇದೆಯಂತೆ ಅಂತ ಅದನ್ನು ನೋಡಲೆಂದೇ ಎಷ್ಟೋ ಜನ ಬರುತ್ತಿದ್ದರು
ಆ ಎತ್ತರೆತ್ತರದ ಯುಟಿಲಿಟಿ ಬಿಲ್ಡಿಂಗ್ ನ ತುತ್ತ ತುದಿಯಲ್ಲೊಂದು ಕೆಫೆ ಶಾಪ್
ಆಹಾ.. ಆಕಾಶದಲ್ಲಿ ಕೂತು ಕಾಫಿ ಕುಡಿದ ಅನುಭವ
ಅದರಲ್ಲಿ ಇನ್ನೂ ಒಂದು ವಿಶೇಷ ಇತ್ತು. ಆ ಕೆಫೆ ಗಬ್ಬರ್ ಸಿಂಗ್ ದು. ‘ಶೋಲೆ’ ಚಿತ್ರದ ಗಬ್ಬರ್ ಸಿಂಗ್ ಅಮ್ಜದ್ ಖಾನ್ ದು
ಸರಿ ಆ ಫೋಟೋ ನೋಡಿದವನೇ ಬೆಂಗಳೂರಿನ ಮೋಹಕ್ಕೂ, ಫೋಟೋ ಮೋಹಕ್ಕೂ ಒಂದೇ ಕಾಲಕ್ಕೆ ಬಿದ್ದೆ
ಸರಿ ಮೋಹಕ್ಕೆ ಬಿದ್ದ ಮೇಲೆ ಬೆನ್ನಟ್ಟಿ ಹೋಗಲೆಬೇಕಲ್ಲವೇ
೩೦+ ವರ್ಷದಷ್ಟು ಹಳೆಯ ಫೋಟೋವನ್ನು ಮೊಬೈಲ್ ಗೆ ಸೇರಿಸಿ ಅದೇ ಜಾಗಕ್ಕೆ ಹೋದೆ
ನಾನು ಎಲ್ಲಿ ನಿಂತು, ಆ ಫೋಟೋ ಹೇಗೆ ತೆಗೆದೆ ಎನ್ನುವುದು ಕೇವಲ ಮೂರು ದಿನದ ಹಿಂದಷ್ಟೇ ತೆಗೆದೆನೇನೋ ಎನ್ನುವಂತೆ ನೆನಪಿತ್ತು
ಹಾಗಾಗಿ ಅದೇ ಜಾಗದಲ್ಲಿ ನಿಂತು ಹಾಗೇ ಬಗ್ಗಿ ಕ್ಲಿಕ್ ಅನ್ನಿಸಿದೆ
ಆ ಬೆಂಗಳೂರು ಈಗ ಎಲ್ಲಿದೆ??
ಎತ್ತರದ ಆಗಸಕ್ಕೂ, ಆಳ ಕಡಲಿಗೂ ಈಗ ನೂರೆಂಟು ಗೋಡೆಗಳು
ಹಾಗಾಗಿ ಕಾಂಕ್ರೀಟ್ ನಗರಿಯಲ್ಲಿ ನಾನು ಕಾಂಕ್ರೀಟ್ ಕ್ಲಿಕ್ ಮಾಡಿದ್ದಷ್ಟೇ ಬಂತು
ಇಲ್ಲಿದೆ ನೋಡಿ









manasige maguvada
kanasige kannada
naguvige doorada
aluvige jotheyada
navirada jeevakke hosa
bhava thandu hesarada
ನಾನು ಸಹ 1996 ರಲ್ಲಿ ಬೆಂಗಳೂರಿಗೆ ಹೋದಾಗ ಇದೇ ಯುಟಿಲಿಟಿ ಬಿಲ್ಡಿಂಗ್ ನ್ನು ನಿಂತು ನೋಡಿದ್ದೆ. ಮತ್ತು ಅದನ್ನು ಕೊನೆಯ ಮಹಡಿತನಕ ಹತ್ತಿ ಖುಷಿ ಪಟ್ಟಿದ್ದೆ. ನೀವು 1985 , ನವ್ಹೆಂಬರ್ ನಲ್ಲಿ ಕ್ಲಿಕ್ಕಿಸಿದ ಪೋಟೋ ಇಟ್ಟುಕೊಂಡಿದ್ದೀರಲ್ಲ , ತುಂಬಾ ಸಂತೋಷ ಸರ್. ಸಿಹಿ ನೆನಪು . ಮತ್ತು ಕಾಲದ ಜೊತೆ ಈ ರಸ್ತೆಗಳು, ಕಟ್ಟಡಗಳು ಸಹ ಹೆಜ್ಜೆ ಹಾಕುತ್ತವಲ್ಲ, ಅದೇ ಸೋಜಿಗ .
ಎಲ್ಲವೂ ಜಂಗಮ ಸ್ವಾಮಿ. ಬಸವ ಹೆಳ್ಲಿಲ್ವಾ ಸ್ಥಾವರಕ್ಕೆ ಅಳಿವು. ಇರುವ ಎಲ್ಲವೂ ಜಂಗಮವೇ. ಕಲ್ಲು ಕಟ್ಟಡ ಕೂಢ ಬೇಕಾಗುತ್ತೆ. ನೀವು ಅದನ್ನು ಸಾಕ್ಷಿಕರಿಸಿದ್ದಿರಿ.
ಹಳೇ ನೆನಪುಗಳು ,ಹೊಸ ಅನುಭವಗಳು ನಿಜಕ್ಕೂ ಒಂದು ಅದ್ಭುತ ಅನುಭವ. .
ನಾನು 1988 ರಲ್ಲಿ ಮುದುವೆಯಾದ ಹುಮ್ಮಸ್ಸಿನಲ್ಲಿ ಹೆಂಡತಿ ಮತ್ತು ಅತ್ತೆಯ ಮನೆಯವರೊಡನೆ ಭೆಟ್ಟಿ ಕೊಟ್ಟಿದ್ದೆ.
ಅದು ರೋಮಾಂಚನ .ಈಗ ನೋಡಿದರೆ ಕರುಳು ಕಮರಿಹೋಗುತ್ತೆ.
ಎತ್ತರದ ಆಗಸಕ್ಕೂ ಆಳ ಕಡಲಿಗೂ ಈಗ ನೂರೆಂಟು ಗೋಡೆಗಳು <3