ಕೊಡೇಕಲ್ಲು ಬಸವಣ್ಣನ ಜಾತ್ರೆ

ಲಕ್ಷ್ಮಣ್ ಕೆ ಪಿ
ಎಲ್ಲ ಧರ್ಮಗಳು ನಾ ಮುಂದು ತಾ ಮುಂದು ಎಂದು ದೇಶಭಕ್ತಿ, ಧರ್ಮಶ್ರದ್ಧೆಯ ರೋಷ, ಆವೇಶದ ಸ್ಲೋಗನ್ನಗಳ ಇಕ್ಕುಳಗಳಲ್ಲಿ ಸಿಕ್ಕಿಕೊಂಡು ಸಾಯುತ್ತಿರುವ ಹೊತ್ತಲ್ಲಿ ,ಕೊಡೇಕಲ್ಲು ಬಸವಣ್ಣನ ಜಾತ್ರೆ ಇಡೀ ಇಂಡಿಯಾಗೆ ಬೇಕಿಗಿರುವ ಜೀವಂತ ರೂಪಕವಾಗಿ ಕಾಣುತ್ತದೆ. ಧರ್ಮಗಳ ಅಂತಃಕರಣದ ಹಾಡಾಗಿ ಕಾಣುತ್ತದೆ.
“ದರ್ಗದನ್ತಿರುವ ದೇವಾಲಯದಲ್ಲಿ ಕೊಡೇಕಲ್ಲು ಬಸವಣ್ಣ ಪಲ್ಲಕ್ಕಿ ಮುಸ್ಲಿಮಾನರ ಗೊರಿಯಂತೆ ಸಿಂಗಾರಗೊಂಡು ಪೂಜಿತವಾಗುತ್ತಿದೆ , ಪಲ್ಲಕಿಯ ದೇವರಿಗೆ ಇಬ್ಬರು ಚಾಮರ ಬೀಸುತ್ತಿದ್ದಾರೆ, ಇಬ್ಬರೂ ಬೇರೆಬೇರೆ ಧರ್ಮದವರು” ಇದು ಅಲ್ಲಿ ಕಾಲಿಡುತ್ತಿದ್ದಂತೆ ನಾ ಕಂಡ ಮೊದಲ ದರ್ಶನ… ಜನ ಗುಂಪು ಗುಂಪಾಗಿ ಹಾಡುತ್ತಿರುತ್ತಿರುತ್ತಾರೆ ,ಕುಣಿಯುತ್ತಿರುತ್ತಾರೆ, … ಒಂದೇ ದೇಗುಲದ ಅಂಗಳದಲ್ಲಿ ಶರಣ” ವಚನ “ಓದುತ್ತಾನೆ ಮುಸಲ್ಮಾನ” ಪತ್ಹೇಹಿ.”…
ಇತ್ತ ಹಿಂದುವೂ ಅಲ್ಲದ, ಇಸ್ಲಾಮೂ ಅಲ್ಲದ ಧರ್ಮವೊಂದು ಅಲ್ಲಿ ಜೀವ ಪಡೆದಿದೆ . ಬಹುಶ ಎಲ್ಲ ಜಾತಿಯ ಧರ್ಮದ ಮೂಲ ಗುತ್ತಿಗೆದಾರರು ಹೊಸ ಹುಟ್ಟುಗಳ ಬಗೆಗೆ ಅವರಿಗಿರುವ ಭಯವನ್ನ ಬಿಟ್ಟು ಚೂರು ತೆವವನ್ನು ತಮ್ಮಎದೆಗಳಿಗೆ ತಂದು ಕೊಂಡರೆ ಎಲ್ಲರೂ ಬದುಕಬಹುದಾದ ಮಡಿಲೊಂದು ರೂಪುಗೊಳ್ಳಬಹುದು.
ಇಂಡಿಯಾದ ಅಂತಸತ್ವವೇ ಆಧ್ಯಾತ್ಮಎನ್ನುವುದಾದರೆ ಅದು ರೂಪುಗೊಳ್ಳಲು ಇಲ್ಲಿ ನೆಲದಂತೆ ಬದುಕಿ ಹೋದ ಸಂತರ, ಸಿದ್ಧರ,ದಾಸರ,… ಕಣ್ಣಿಗೆ ಬೀಳದೆ ಬದುಕಿಹೋದ ಹಲವರ ಕರುಣೆಯ ಪಾಲು ದೊಡ್ಡದಿದೆ.
ಸಾಧ್ಯವಾದರೆ ಕೊಡೇಕಲ್ಲಿ ಒಮ್ಮೆ ಹೋಗಿಬನ್ನಿ… ಉತ್ತರಕರ್ನಾಟಕ ನಿಜಕ್ಕೂಸಂತರ ನಾಡು..







0 Comments