
ಉಗಮ ಶ್ರೀನಿವಾಸ
ಈ ದುರಿತ ಕಾಲದಲ್ಲಿ ಗೆಳೆಯ ಆಲೂರು ದೊಡ್ಡನಿಂಗಪ್ಪ ಹೊಸ ಕಾದಂಬರಿ ಹೊರ ತಂದಿದ್ದಾನೆ. ಈಗಾಗಲೇ ನೇಕಾರ, ಮುಟ್ಟು, ಎದೆಯೊಳಗೆ ಸೂರ್ಯಕಾಂತಿ ಹೂ ಪುಸ್ತಕ ತಂದಿರುವ ದೊಡ್ಡನಿಂಗಪ್ಪ ಎರಡು ವರ್ಷಗಳಿಂದ ಬರೆಯುತ್ತಿದ್ದ ಕಾದಂಬರಿ ಈಗ ಹೊರಬಂದಿದೆ. ನಮ್ಮಿಬ್ಬರ ಸ್ನೇಹ 28 ವರ್ಷಕ್ಕೂ ಹಳೆಯದ್ದು.
ಒಂದು ಪಂಚೆ, ಶರ್ಟು, ಹೆಗಲಿಗೊಂದು ಟವಲ್ ಹಾಕಿಕೊಂಡು ಆಲೂರಿನಿಂದ ತಿಪಟೂರು ಪಕ್ಕದ ಹಳೇಪಾಳ್ಯಕ್ಕೆ ಮಗ್ಗದ ಕೆಲಸಕ್ಕೆ ಬರುತ್ತಿದ್ದೆ. ಕಾವ್ಯದ ಬಲದಿಂದಲೇ ಮೈಸೂರಿನ ರಂಗಾಯಣದಲ್ಲಿ ಕೆಲಸ ಪಡೆದ ದೊಡ್ಡನಿಂಗಪ್ಪ ಬರೆಹ, ಕೆಲಸದ ಜೊತೆ ಸಿನಿಮಾದಲ್ಲಿ ನಟನೆ, ಚಲನಚಿತ್ರಗಳಿಗೆ ಸಂಭಾಷಣೆ ಕೂಡ ಬರೆಯುತ್ತಾನೆ. ಸದಾ ತನ್ನನ್ನು ಕ್ರಿಯಾಶೀಲವಾಗಿಟ್ಟು ಕೊಂಡಿರುವ ದೊಡ್ಡನಿಂಗಪ್ಪನ ಹೊಸ ಕಾದಂಬರಿ ಓದುವುದಕ್ಕಾಗಿ ಕಾಯುತ್ತಿದ್ದೇನೆ.

ನಾವು ಗೆಳೆಯರು ತಿಪಟೂರಿನಲ್ಲಿ ಸೇರಿಕೊಂಡಾಗ ಆಲೂರಿಗೆ ಹೋಗಿ ಊಟ ಮಾಡದೇ ಹೋಗದ ಉದಾಹರಣೆಯಿಲ್ಲ. ದೊಡ್ಡಪ್ಪ ನಮ್ಮ ಮಧ್ಯೆ ಇದ್ದನೆಂದರೆ ಅಲ್ಲೊಂದು vibration ಇದ್ದೇ ಇರುತ್ತೆ. ಅವನ ಬದುಕಿನ ಪಯಣವೇ ದೊಡ್ಡ ಹೋರಾಟ. ಆಲೂರಿನಿಂದ ಮೈಸೂರಿನ ರಂಗಾಯಣಕ್ಕೆ ಹೋಗುವಾಗ ಆತ ಓದಿದ್ದು ಕೇವಲ ಮೂರನೇ ತರಗತಿ. ಕಾವ್ಯದ ಮೂಲಕವೇ ಸರ್ಕಾರಿ ಕೆಲಸ ಪಡೆದ, ಬಳಿಕ ಪದವಿಯನ್ನು ಪಡೆದ ದೊಡ್ಡಪ್ಪ ಸದಾ ಇಷ್ಟವಾಗುವ ಮುಖ.






0 Comments